IPL 2025: RR vs CSK ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ರನ್‌ಗಳ ಅಂತರದಿಂದ ಸೋಲು! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ರಾಜಸ್ಥಾನ್ ರಾಯಲ್ಸ್ (RR) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯ ರೋಚಕವಾಗಿ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ರನ್‌ಗಳ ಗೆಲುವು ಸಾಧಿಸಿದೆ. ಗೈಕ್ವಾಡ್ ಅವರ ಅತ್ಯುತ್ತಮ ಬ್ಯಾಟಿಂಗ್ ಚೆನ್ನೈಗೆ ಗೆಲುವು ತಂದುಕೊಡಲಿಲ್ಲ, ಕೊನೆಯ ಓವರ್‌ನ ರೋಚಕ ಕ್ಷಣಗಳಲ್ಲಿ ತಂಡ ಸೋಲು ಕಂಡಿತು.
ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ 11ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದ ಅಂತಿಮ ಕ್ಷಣಗಳು ತೀವ್ರ ರೋಮಾಂಚನ ಹುಟ್ಟಿಸುವಂತಿದ್ದವು, ಆದರೆ ರಾಜಸ್ಥಾನ್ ತಂಡದ ಬೌಲರ್‌ಗಳು ಅಂತಿಮ ಓವರ್‌ನಲ್ಲಿ ತಾಳ್ಮೆಯುಳ್ಳ ಪ್ರದರ್ಶನ ನೀಡುವ ಮೂಲಕ ಗೆಲುವು ತಮ್ಮದಾಗಿಸಿಕೊಂಡರು.

ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಪ್ರದರ್ಶನ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ ಆದರೆ ನಿತೀಶ್ ರಾಣ 81 ರನ್ ಗಳಿಸಿ ತಂಡಕ್ಕೆ ಭರ್ಜರಿ ಆರಂಭ ನೀಡಿದರು, ಕ್ಯಾಪ್ಟನ್ ಪರಾಗ್: 37 ರನ್ ಬಾರಿಸಿದರೆ, ಸಂಜು ಸ್ಯಾಮ್ಸನ್ ರವರ 20 ರನ್ ರನ್ ತಂಡದ ಮೊತ್ತವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. RR ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 182/9 ರನ್ ಗಳಿಸಿತು.

ಚೆನ್ನೈ ಬೌಲರ್‌ಗಳ ಪ್ರದರ್ಶನ:
- ಖಲೀಲ್ ಅಹ್ಮದ್: 38 ರನ್‌ಗೆ 2 ವಿಕೆಟ್
- ನೂರ್ ಅಹ್ಮದ್: 28 ರನ್‌ಗೆ 2 ವಿಕೆಟ್
- ಮಥೀಶ್ ಪತಿರಾನ: 28 ರನ್‌ಗೆ 2 ವಿಕೆಟ್
- ಅಶ್ವಿನ್ ಮತ್ತು ರವೀಂದ್ರ ಜಡೇಜಾ: ತಲಾ 1 ವಿಕೆಟ್
ಚೆನ್ನೈ ಸೂಪರ್ ಕಿಂಗ್ಸ್ ಚೇಸಿಂಗ್:
183 ರನ್ ಗಳ ಅಚ್ಚುಕಟ್ಟಾದ ಗುರಿಯನ್ನು ಚೆಸ್ ಮಾಡಲು ಬಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರಂಭಿಕ ಸ್ಪೋಟಕ ಆರಂಭದ ಅಗತ್ಯವಿತ್ತು. ನಾಯಕ ರುತುರಾಜ್ ಗೈಕ್ವಾಡ್ 44 ಎಸೆತಗಳಲ್ಲಿ 63 ರನ್ ಗಳಿಸಿದರು. ಇನ್ನೊಂದೆಡೆ, ರಾಹುಲ್ ತ್ರಿಪಾಠಿ: 23 ರನ್, ಶಿವಂ ದುಬೆ: 18 ರನ್ ಪೆರೆಸಿದರು ಸತತವಾಗಿ ವಿಕೆಟ್‌ಗಳು ಕುಸಿಯುತ್ತಾ ಹೋದವು, ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ತಂಡವನ್ನು ಕೊನೆಯ ಹಂತದಲ್ಲಿ ಮುನ್ನಡೆಸುವ ಪ್ರಯತ್ನ ಮಾಡಿದರು. 19ನೇ ಓವರ್‌ನೊಳಗೆ ಧೋನಿ ಕೇವಲ 16 ರನ್ ಗಳಿಸಿ ಔಟ್ ಆದರು, ಆದರೆ ಕೊನೆಯ ಓವರ್‌ನಲ್ಲಿ ತಂಡಕ್ಕೆ 20 ರನ್ ಅಗತ್ಯವಿತ್ತು. ಕೊನೆಯಲ್ಲಿ ರವೀಂದ್ರ ಜಡೇಜಾ 32* ರನ್ ಹೊಡೆದು ಅವರ ಜೊತೆಯಲ್ಲಿ ಜೇಮೀ ಕ್ರೀಸ್ನ ನಲ್ಲಿದ್ದರು ಬೌಲರ್ ಸಂದೀಪ್ ಶರ್ಮಾ ಒಳ್ಳೆಯ ಕಡಿವಾಣ ಹಾಕಿದ್ದರಿಂದ CSK ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ರಾಜಸ್ಥಾನ್ ಬೌಲರ್‌ಗಳ ಪ್ರದರ್ಶನ:

ಜೋಫ್ರಾ ಆರ್ಚರ್: 1 ವಿಕೆಟ್
ವನಿಂದು ಹಸರಂಗ: 4 ವಿಕೆಟ್
Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ
IPL 2025: DC VS SRH ಡೆಲ್ಲಿಗೆ ಸನ್‌ರೈಸರ್ಸ್ ವಿರುದ್ಧ ಭರ್ಜರಿ ಜಯ! ಸ್ಟಾರ್ಕ್ ಮತ್ತು ಡು ಪ್ಲೆಸಿಸ್ ಭರ್ಜರಿ ಪ್ರದರ್ಶನ
ಗೆಲುವಿನೊಂದಿಗೆ, ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ 2025ರಲ್ಲಿ ತಮ್ಮ ಮೊದಲ ಜಯವನ್ನು ದಾಖಲಿಸಿದೆ, ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿರಂತರವಾಗಿ ಎರಡನೇ ಸೋಲು ಕಂಡಿದೆ.
ಪಂದ್ಯದ ಪ್ರಮುಖ ಕ್ಷಣಗಳಲ್ಲಿ, ನಿತೀಶ್ ರಾಣಾ ಅವರ ಆಕ್ರಾಮಕ ಬ್ಯಾಟಿಂಗ್ ಮತ್ತು ವನಿಂದು ಹಸರಂಗ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನ ರಾಜಸ್ಥಾನ್ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ.
ಈ ಗೆಲುವಿನೊಂದಿಗೆ, ರಾಜಸ್ಥಾನ್ ರಾಯಲ್ಸ್ ತಂಡವು ಪಾಯಿಂಟ್ ಟೇಬಲ್‌ನಲ್ಲಿ ಮೇಲಕ್ಕೆ ಏರಿದ್ದು, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಉತ್ಸುಕವಾಗಿದೆ.
ಪಂದ್ಯದ ಹೆಚ್ಚಿನ ವಿವರಗಳು ಮತ್ತು ಬೇರೆ ಯಾವುದೇ ಮಾಹಿತಿಗಾಗಿ quicknewztoday.com ಅನ್ನು ಭೇಟಿ ಮಾಡಬಹುದು.
3 thoughts on “IPL 2025: RR vs CSK ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ರನ್‌ಗಳ ಅಂತರದಿಂದ ಸೋಲು!”