IPL 2025: ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ – ಗುಜರಾತ್ ಟೈಟನ್ಸ್ (GT) ವಿರುದ್ಧ ಪಂಜಾಬ್ ಕಿಂಗ್ಸ್(PBKS)ಗೆ ರೋಚಕ ಗೆಲುವು ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ
ಐಪಿಎಲ್ 2025ನಲ್ಲಿ ಪಂಜಾಬ್ ಕಿಂಗ್ಸ್ (PBKS) vs ಗುಜರಾತ್ ಟೈಟನ್ಸ್ (GT) ನಡುವೆ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಪಂಜಾಬ್ ಬೌಲರ್‌ಗಳ ಅದ್ಭುತ ಪ್ರದರ್ಶನ ತಂಡಕ್ಕೆ ಜಯ ತಂದುಕೊಟ್ಟಿತು.
ಪಂಜಾಬ್ ಕಿಂಗ್ಸ್ (PBKS) ತಂಡದ ಅದ್ಭುತ ಬ್ಯಾಟಿಂಗ್:
ಪಂಜಾಬ್ ಕಿಂಗ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 243/5 ರನ್‌ಗಳನ್ನು ಗಳಿಸಿತು. ತಂಡದ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ 42 ಎಸೆತಗಳಲ್ಲಿ 97* ರನ್ ಗಳಿಸಿದರು, ಇದರಲ್ಲಿ 5 ಬೌಂಡರಿ ಹಾಗೂ 9 ಸಿಕ್ಸರ್‌ಗಳಿದ್ದವು.
ಪ್ರಿಯಾಂಶ್ ಆರ್ಯ 23 ಎಸೆತಗಳಲ್ಲಿ 47 ರನ್ ಮತ್ತು ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 44* ರನ್ ಗಳಿಸಿ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 243/5 ರನ್‌ಗಳನ್ನು ಗಳಿಸಿ ಬೃಹತ್ ಮೊತ್ತವನ್ನು ಪೆರಿಸಿದರು.
ಗುಜರಾತ್ ಪರ ಸಾಯಿ ಕಿಶೋರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದು ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದರು.

ಗುಜರಾತ್ ಟೈಟನ್ಸ್ (GT) 244 ರನ್‌ಗಳ ಗುರಿ:
ಗುಜರಾತ್ ಟೈಟನ್ಸ್ 244 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಉತ್ತಮ ಆರಂಭವನ್ನು ಪಡೆದುಕೊಂಡಿತು. ಸಾಯಿ ಸುಧರ್ಶನ್ 41 ಎಸೆತಗಳಲ್ಲಿ 74 ರನ್ ಬಾರಿಸಿ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡೊಯ್ದರು. ಜೊತೆಗೆ, ಜೋಸ್ ಬಟ್ಲರ್ 54 ರನ್ ಮತ್ತು ಶೆರ್ಫೇನ್ ರುಥರ್‌ಫರ್ಡ್ 46 ರನ್ ಗಳಿಸಿ ತಂಡದ ಆಶಯಗಳನ್ನು ಉಳಿಸಿದರು. ಆದರೆ, ಪಂಜಾಬ್ ಕಿಂಗ್ಸ್ ಬೌಲರ್‌ಗಳ ಒತ್ತಡದ ಬೌಲಿಂಗ್ ಅವರ ಗೆಲುವಿನ ಕನಸು ಕಿತ್ತುಕೊಂಡಿತು.
ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 36 ರನ್ ನೀಡಿ 2 ವಿಕೆಟ್ ಕಬಳಿಸಿದರು, ಮತ್ತು ಮಾರ್ಕೋ ಜಾನ್ಸೆನ್ 44 ರನ್ ನೀಡಿ 1 ವಿಕೆಟ್ ಪಡೆದು ತಂಡಕ್ಕೆ ಜಯ ದಾಖಲಿಸಲು ನೆರವಾದರು.
Punjab Kings hold their nerves in the end to clinch a splendid win against Gujarat Titans
— IndianPremierLeague (@IPL) March 25, 2025
Scorecardhttps://t.co/PYWUriwSzY#TATAIPL | #GTvPBKS | @PunjabKingsIPL pic.twitter.com/0wy29ODStQ
ಪಂದ್ಯದ ನಿರ್ಣಾಯಕ ಕ್ಷಣಗಳು:
ಪಂದ್ಯದ ನಿರ್ಣಾಯಕ ಕ್ಷಣಗಳಲ್ಲಿ ಶ್ರೇಯಸ್ ಅಯ್ಯರ್ ಅವರ ಪ್ರಭಾವಿ ಬ್ಯಾಟಿಂಗ್ ಮತ್ತು ಮ್ಯಾಕ್ಸ್‌ವೆಲ್ ಅವರ ಪ್ರಮುಖ ಬೌಲಿಂಗ್ ಪ್ರಮುಖ ಪಾತ್ರ ವಹಿಸಿತು. ಕೊನೆಯ ಓವರ್‌ನಲ್ಲಿ ಸಿರಾಜ್ ವಿರುದ್ಧ 23 ರನ್ ಬಾರಿಸಿದರು.ಮ್ಯಾಕ್ಸ್‌ವೆಲ್ ಗುಜರಾತ್ ನಾಯಕ ಶುಭ್‌ಮನ್ ಗಿಲ್ ವಿಕೆಟ್ ತೆಗೆದು ಪಂದ್ಯವನ್ನು ಪಂಜಾಬ್ ಪರ ತಿರುಗಿಸಿದರು.
ಅರ್ಷದೀಪ್ ಸಿಂಗ್ ಚಮತ್ಕಾರ ಬೌಲಿಂಗ್, GT ಯ ಸಾಯಿ ಸುಧರ್ಶನ್ ಅವರನ್ನು ನಿಯಂತ್ರಿಸಿದರು.
ಗುಜರಾತ್ ಟೈಟನ್ಸ್ 15-17 ಓವರ್‌ಗಳಲ್ಲಿ ಬಾರಿ ಕುಸಿತ ಅನುಭವಿಸಿತು, ಕೇವಲ 5, 8, 5 ರನ್ ಮಾತ್ರ ಇನ್ನುಳಿದಂತೆ, ಗುಜರಾತ್ ತಂಡವು 15ನೇ ಓವರ್‌ನಿಂದ 17ನೇ ಓವರ್‌ಗಳ ನಡುವೆ ಕೇವಲ 18 ರನ್‌ಗಳನ್ನು ಮಾತ್ರ ಗಳಿಸಿತು, ಇದರಿಂದ ಪಂಜಾಬ್ ಗೆಲುವಿನತ್ತ ಮತ್ತಷ್ಟು ಸಮೀಪಿಸಲಾಯಿತು.ಗಳಿಸಿತು.ವೈಶಾಕ್ ಶ್ರೇಷ್ಠ ಯಾರ್ಕರ್‌ಗಳ ಮೂಲಕ PBKS ಗೆಲುವಿನ ಹಾದಿ ಸುಗಮಗೊಳಿಸಿದರು.
ಮ್ಯಾಚ್‌ನ ಬೆಸ್ಟ್ ಪ್ಲೇಯರ್ (PoTM):

ಈ ಪಂದ್ಯದಲ್ಲಿ ಅತ್ಯುತ್ತಮ ಆಟಗಾರ (PoTM) ಪ್ರಶಸ್ತಿಯನ್ನು ಶ್ರೇಯಸ್ ಅಯ್ಯರ್ ತಮ್ಮ ಅದ್ಭುತ ಬ್ಯಾಟಿಂಗ್‌ಗಾಗಿ ಪಡೆದರು. ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಇಬ್ಬರೂ ತಂಡಗಳು ತೀವ್ರ ಪೈಪೋಟಿ ನೀಡಿದರೂ, ಪಂಜಾಬ್ ಕಿಂಗ್ಸ್ ಕೊನೆ ಕ್ಷಣಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಜಯಭೇರಿ ಬಾರಿಸಿದೆ
Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ.
IPL 2025: ಇಶಾನ್ ಕಿಶನ್ ಶತಕ – SRH ಭರ್ಜರಿ ಬ್ಯಾಟಿಂಗ್, ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ 44 ರನ್ ಜಯ!
ಕೊನೆಗೆ IPL 2025: ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ – ಗುಜರಾತ್ ಟೈಟನ್ಸ್ (GT) ವಿರುದ್ಧ ಪಂಜಾಬ್ ಕಿಂಗ್ಸ್(PBKS)ಗೆ ರೋಚಕ ಗೆಲುವು
𝙄.𝘾.𝙔.𝙈.𝙄
— IndianPremierLeague (@IPL) March 25, 2025
Enjoy glimpses of a Shreyas Iyer Special in Ahmedabad as he remained unbeaten on 97*(42)
Updateshttps://t.co/PYWUriwSzY#TATAIPL | #GTvPBKS | @PunjabKingsIPL | @ShreyasIyer15 pic.twitter.com/6Iez7wJ2r6
ನಮ್ಮ quicknewztoday.com ನಲ್ಲಿ ಪ್ರತಿದಿನದ ಲೈವ್ ಅಪ್ಡೇಟ್ಸ್, ಪಾಯಿಂಟ್ ಟೇಬಲ್, ಮತ್ತು ಪಂದ್ಯ ವಿಶ್ಲೇಷಣೆಗಳನ್ನು ಪಡೆಯಿರಿ!ನಿಮ್ಮ ನೆಚ್ಚಿನ ತಂಡ ಯಾವದು? ಕಾಮೆಂಟ್ ಮಾಡಿ
One thought on “IPL 2025: ಶ್ರೇಯಸ್ ಅಯ್ಯರ್ ಅದ್ಭುತ ಪ್ರದರ್ಶನ – ಗುಜರಾತ್ ಟೈಟನ್ಸ್ (GT) ವಿರುದ್ಧ ಪಂಜಾಬ್ ಕಿಂಗ್ಸ್(PBKS)ಗೆ ರೋಚಕ ಗೆಲುವು”