Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಪೋಷಕರೇ ಗಮನಿಸಿ! 2027-28ನೇ ಸಾಲಿನ ಜವಾಹರ್ ನವೋದಯ ಶಾಲೆ 6ನೇ ತರಗತಿ ಉಚಿತ ಪ್ರವೇಶಾತಿ ಆರಂಭ! ಇಂದೇ ಅರ್ಜಿ ಹಾಕಿ!

  • Picture of Gundijalu Shwetha By Gundijalu Shwetha
  • Published On: July 9, 2026
JNVST 2027: ಪೋಷಕರೇ ಗಮನಿಸಿ: 2027-28ನೇ ಸಾಲಿನ ಜವಾಹರ್ ನವೋದಯ ಶಾಲೆ 6ನೇ ತರಗತಿ ಉಚಿತ ಪ್ರವೇಶಾತಿ ಆರಂಭ! ಇಂದೇ ಅರ್ಜಿ ಹಾಕಿ!

ನವೋದಯ ವಿದ್ಯಾಲಯ ಸಮಿತಿಯು (NVS) 2027-28ನೇ ಸಾಲಿನ 6ನೇ ತರಗತಿ ಉಚಿತ ಪ್ರವೇಶಾತಿಗಾಗಿ JNVST 2027 ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಪರೀಕ್ಷಾ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಷಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ: ನವೋದಯ ಶಾಲೆಗಳ 6ನೇ ತರಗತಿ ಉಚಿತ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ, ಕಂಪ್ಲೀಟ್ ವಿವರ ಇಲ್ಲಿದೆ!

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕು, ಅದೂ ಒಂದು ರೂಪಾಯಿ ಖರ್ಚಿಲ್ಲದೆ ವಸತಿ ಮತ್ತು ಊಟದ ಸೌಲಭ್ಯವಿರುವ ಶಾಲೆಯಲ್ಲಿ ಓದಿಸಬೇಕು ಎನ್ನುವುದು ಪ್ರತಿಯೊಬ್ಬ ಪೋಷಕರ ದೊಡ್ಡ ಕನಸಾಗಿರುತ್ತದೆ. ಈ ಕನಸನ್ನು ನನಸು ಮಾಡಲು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ‘ನವೋದಯ ವಿದ್ಯಾಲಯ ಸಮಿತಿ’ (Navodaya Vidyalaya Samiti – NVS) ಭರ್ಜರಿ ಅವಕಾಶವೊಂದನ್ನು ಹೊತ್ತು ತಂದಿದೆ. ದೇಶಾದ್ಯಂತ ಇರುವ ಪ್ರಸಿದ್ಧ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (JNV) 2027-28ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಉಚಿತ ಪ್ರವೇಶಕ್ಕಾಗಿ ಅಧಿಕೃತವಾಗಿ Jawahar Navodaya Vidyalaya admission 2027 ಪ್ರಕ್ರಿಯೆ ಆರಂಭಗೊಂಡಿದೆ.

WhatsApp Channel
Join Now
Telegram Channel
Join Now

ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟಕ್ಕೆ ಬೆಳೆಸುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದೆ. ಪ್ರಸ್ತುತ ದೇಶದ 27 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 665 ನವೋದಯ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲೂ 31 ಶಾಲೆಗಳು ಭರ್ಜರಿಯಾಗಿ ನಡೆಯುತ್ತಿವೆ. ನೀವು ಇಂಟರ್ನೆಟ್‌ನಲ್ಲಿ ಸದ್ಯಕ್ಕೆ Navodaya Vidyalaya class 6 prospectus download ಬಗ್ಗೆ ಹುಡುಕಾಡುತ್ತಿದ್ದರೆ, ನಿಮಗಾಗಿ ಸಿಕ್ಕಿರುವ ಅತ್ಯಂತ ಮಹತ್ವದ ಮಾಹಿತಿ ಇದಾಗಿದೆ. ಈ ಉಚಿತ ಪ್ರವೇಶಾತಿ ಪರೀಕ್ಷೆಗೆ ಯಾರೆಲ್ಲಾ ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಪರೀಕ್ಷಾ ನಮೂನೆ ಹೇಗಿರುತ್ತದೆ ಎಂಬ ಕಂಪ್ಲೀಟ್ ವಿವರವನ್ನು ಕೆಳಗೆ ಸರಳವಾಗಿ ನೀಡಲಾಗಿದೆ.

Jawahar Navodaya Vidyalaya admission 2027: JNVST 2027: ಪೋಷಕರೇ ಗಮನಿಸಿ: 2027-28ನೇ ಸಾಲಿನ ಜವಾಹರ್ ನವೋದಯ ಶಾಲೆ 6ನೇ ತರಗತಿ ಉಚಿತ ಪ್ರವೇಶಾತಿ ಆರಂಭ! ಇಂದೇ ಅರ್ಜಿ ಹಾಕಿ!

Navodaya Vidyalaya class 6 prospectus download

Final_Prospectus_2027Download
  •  Click here for Registration for Class VI JNVST (2027-28) 
  •  Click Here to Print Registration Form
  •  Click Here to Find Your Registration No.
  •  Click here to View Prospectus
  •  Click Here to View Previous Year Question Booklet
  •  Click Here to View Block Details of Andhra Pradesh
  •  Click Here to View Districts of UT Delhi
  •  Click Here to View Block Details of Telangana
  •  Click Here to View Block Details of districts having two (02) JNVs

ನವೋದಯ ಶಾಲೆಯ ಪ್ರಮುಖ ಸೌಲಭ್ಯಗಳು ಮತ್ತು ವಿಶೇಷತೆಗಳು

ನವೋದಯ ವಿದ್ಯಾಲಯಗಳು ಸಂಪೂರ್ಣವಾಗಿ ಉಚಿತ ವಸತಿ (Residential) ಶಾಲೆಗಳಾಗಿದ್ದು, ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಈ ಕೆಳಗಿನ ಸೌಲಭ್ಯಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ:

  • 6ನೇ ತರಗತಿಯಿಂದ 12ನೇ ತರಗತಿಯವರೆಗೆ ಸಂಪೂರ್ಣ ಉಚಿತ ಆಧುನಿಕ ಶಿಕ್ಷಣ.
  • ಉಚಿತ ಬೋರ್ಡಿಂಗ್, ವಸತಿ (Separate Hostels for Boys & Girls) ಮತ್ತು ಪೌಷ್ಟಿಕ ಆಹಾರದ ವ್ಯವಸ್ಥೆ.
  • ಉಚಿತ ಶಾಲಾ ಸಮವಸ್ತ್ರ (Uniforms), ಪಠ್ಯಪುಸ್ತಕಗಳು ಮತ್ತು ಸ್ಟೇಷನರಿ ಸಾಮಗ್ರಿಗಳು.
  • ಕ್ರೀಡೆ, ಎನ್‌ಸಿಸಿ (NCC), ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಿಗೆ ವಿಶೇಷ ಪ್ರೋತ್ಸಾಹ.
👉Click here for Registration for Class VI JNVST (2027-28) 👉ONLINE APPLICATION FOR ADMISSION TO CLASS VI JNVST (2027-28)

ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು? (Eligibility Criteria for Jawahar Navodaya Vidyalaya admission 2027)

ನವೋದಯ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮುನ್ನ ಪೋಷಕರು ಈ ಕೆಳಗಿನ ಕಟ್ಟುನಿಟ್ಟಿನ ನಿಯಮಗಳನ್ನು ಗಮನಿಸಬೇಕು:

  • ಜಿಲ್ಲಾ ನಿವಾಸಿ ನಿಯಮ: ವಿದ್ಯಾರ್ಥಿಯು ಪ್ರಸ್ತುತ ಯಾವ ಜಿಲ್ಲೆಯಲ್ಲಿ 5ನೇ ತರಗತಿ ಓದುತ್ತಿದ್ದಾನೋ ಅದೇ ಜಿಲ್ಲೆಯ ನವೋದಯ ಶಾಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹನಾಗಿರುತ್ತಾನೆ.
  • ಪ್ರಸ್ತುತ ತರಗತಿ ವ್ಯಾಸಂಗ: ಅಭ್ಯರ್ಥಿಯು ಪ್ರಸಕ್ತ 2026-27ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಶಾಲೆಗಳಲ್ಲಿ ಕಡ್ಡಾಯವಾಗಿ 5ನೇ ತರಗತಿಯಲ್ಲಿ ಪೂರ್ಣಾವಧಿ ವ್ಯಾಸಂಗ ಮಾಡುತ್ತಿರಬೇಕು.
  • ಹಿಂದಿನ ತರಗತಿಗಳ ನಿಯಮ: ವಿದ್ಯಾರ್ಥಿಯು ತರಗತಿ 3 ಮತ್ತು 4ನ್ನು ಯಾವುದೇ ಗ್ಯಾಪ್ ಇಲ್ಲದೆ ಪೂರ್ತಿಯಾಗಿ ಓದಿ ಪಾಸ್ ಆಗಿರಬೇಕು. ಯಾವುದೇ ತರಗತಿಯನ್ನು ರಿಪೀಟ್ ಮಾಡಿರಬಾರದು.
  • ನಿಗದಿತ ಜನ್ಮ ದಿನಾಂಕ (Date of Birth): ಮಗುವು 01-05-2015 ಮತ್ತು 31-07-2017ರ ನಡುವೆ ಜನಿಸಿರಬೇಕು (ಈ ಎರಡೂ ದಿನಾಂಕಗಳು ಒಳಗೊಂಡಂತೆ). ಇದು ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿದಂತೆ ಎಲ್ಲಾ ವರ್ಗದ ಮಕ್ಕಳಿಗೂ ಕಡ್ಡಾಯವಾಗಿ ಅನ್ವಯಿಸುತ್ತದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ಕೋಟಾ ವಿವರಗಳು

  • ಗ್ರಾಮೀಣ ಕೋಟಾ (Rural Quota): ಪ್ರತಿ ಜಿಲ್ಲೆಯ ಒಟ್ಟು ಸೀಟುಗಳ ಪೈಕಿ ಕನಿಷ್ಠ ಶೇ. 75 ರಷ್ಟು ಸೀಟುಗಳನ್ನು ಕಡ್ಡಾಯವಾಗಿ ಗ್ರಾಮೀಣ ಭಾಗದ ಶಾಲೆಯಲ್ಲಿ ಓದಿದ ಪ್ರತಿಭಾವಂತ ಮಕ್ಕಳಿಗೆ ಮೀಸಲಿಡಲಾಗುತ್ತದೆ. ಮಗು 3, 4 ಮತ್ತು 5ನೇ ತರಗತಿಯನ್ನು ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಓದಿರಬೇಕು.
  • ನಗರ ಕೋಟಾ (Urban Quota): ಮಗು ಮೂರು ವರ್ಷಗಳಲ್ಲಿ ಕೇವಲ ಒಂದೇ ಒಂದು ದಿನ ನಗರ ಪ್ರದೇಶದ ಶಾಲೆಯಲ್ಲಿ ಓದಿದ್ದರೂ ಸಹ ಆ ಮಗುವನ್ನು ನಗರ ಪ್ರದೇಶದ ಅಭ್ಯರ್ಥಿ ಎಂದೇ ಪರಿಗಣಿಸಲಾಗುತ್ತದೆ.
  • ಮಹಿಳಾ ಮೀಸಲಾತಿ: ಒಟ್ಟು ಲಭ್ಯವಿರುವ ಸೀಟುಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು (1/3rd Seats) ಸೀಟುಗಳನ್ನು ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಕಾಯ್ದಿರಿಸಲಾಗುತ್ತದೆ.

Jawahar Navodaya Vidyalaya admission 2027 (JNVST 2027) ಪರೀಕ್ಷೆಯ ಪ್ರಮುಖ ವಿವರಗಳು ಮತ್ತು ದಿನಾಂಕಗಳು :

ವಿವರಗಳು (Event Details)ಅಧಿಕೃತ ಮಾಹಿತಿ ಮತ್ತು ದಿನಾಂಕಗಳು
ಪರೀಕ್ಷೆ ನಡೆಸುವ ಸಂಸ್ಥೆನವೋದಯ ವಿದ್ಯಾಲಯ ಸಮಿತಿ (NVS),
ಭಾರತ ಸರ್ಕಾರ
ಪ್ರವೇಶಾತಿ ತರಗತಿ6ನೇ ತರಗತಿ (ಸೆಷನ್ 2027-28)
ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ31 ಜುಲೈ 2026 (31-07-2026)
ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ28 ನವೆಂಬರ್ 2026 (28-11-2026)
ಪರೀಕ್ಷೆ ನಡೆಯುವ ಸಮಯಬೆಳಿಗ್ಗೆ 11:30 ರಿಂದ ಮಧ್ಯಾಹ್ನ 01:30 ರವರೆಗೆ (2 ಗಂಟೆ)
ಅಧಿಕೃತ ಅರ್ಜಿ ಸಲ್ಲಿಕೆ ಜಾಲತಾಣhttps://navodaya.gov.in

ಪ್ರವೇಶ ಪರೀಕ್ಷೆಯ ಸ್ವರೂಪ ಮತ್ತು ಪಠ್ಯಕ್ರಮ (Exam Pattern of Jawahar Navodaya Vidyalaya admission 2027)

ನವೋದಯ ಪ್ರವೇಶ ಪರೀಕ್ಷೆಯು (JNVST 2027) ಒಟ್ಟು 2 ಗಂಟೆಗಳ ಕಾಲಾವಧಿಯನ್ನು ಹೊಂದಿದ್ದು, ಕೇವಲ ವಸ್ತುನಿಷ್ಠ (Objective Type) ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯಲ್ಲಿ ಒಟ್ಟು 80 ಪ್ರಶ್ನೆಗಳಿದ್ದು 100 ಅಂಕಗಳನ್ನು ಹೊಂದಿರುತ್ತದೆ:

  1. ಮಾನಸಿಕ ಸಾಮರ್ಥ್ಯ ಪರೀಕ್ಷೆ (Mental Ability Test): ಒಟ್ಟು 40 ಪ್ರಶ್ನೆಗಳಿದ್ದು 50 ಅಂಕಗಳನ್ನು ಒಳಗೊಂಡಿರುತ್ತದೆ. ಇದು ಸಂಪೂರ್ಣವಾಗಿ ಚಿತ್ರಗಳು ಮತ್ತು ರೇಖಾಚಿತ್ರಗಳ ಆಧಾರಿತ ಆಬ್ಜೆಕ್ಟಿವ್ ಪರೀಕ್ಷೆಯಾಗಿದೆ.
  2. ಗಣಿತ ಪರೀಕ್ಷೆ (Arithmetic Test): ಒಟ್ಟು 20 ಪ್ರಶ್ನೆಗಳಿದ್ದು 25 ಅಂಕಗಳನ್ನು ಹೊಂದಿರುತ್ತದೆ. (ಸಂಖ್ಯಾ ಪದ್ಧತಿ, ಭಿನ್ನರಾಶಿಗಳು, ಅಳತೆಗಳು ಮುಂತಾದ 12 ಮೂಲಭೂತ ಗಣಿತ ವಿಷಯಗಳು).
  3. ಭಾಷಾ ಪರೀಕ್ಷೆ (Language Test): ಒಟ್ಟು 20 ಪ್ರಶ್ನೆಗಳಿದ್ದು 25 ಅಂಕಗಳನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ತಾವು ಆರಿಸಿಕೊಂಡ ಪ್ರಾದೇಶಿಕ ಭಾಷೆಯ (ಉದಾಹರಣೆಗೆ ಕನ್ನಡ) ನಾಲ್ಕು ಗದ್ಯ ಭಾಗಗಳನ್ನು (Passages) ಓದಿ ಉತ್ತರ ಬರೆಯಬೇಕು.

ನೆನಪಿರಲಿ: ಪರೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ (No Negative Marking) ಇರುವುದಿಲ್ಲ. ಪ್ರತಿ ಸರಿಯಾದ ಉತ್ತರಕ್ಕೆ 1.25 ಅಂಕಗಳನ್ನು ನೀಡಲಾಗುತ್ತದೆ. ದಿವ್ಯಾಂಗ ಮಕ್ಕಳಿಗೆ ಹೆಚ್ಚುವರಿಯಾಗಿ 40 ನಿಮಿಷಗಳ ಕಾಲಾವಕಾಶ ಸಿಗಲಿದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲೆಗಳು

ಆನ್‌ಲೈನ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಲು ನೀವು ಇಂಟರ್ನೆಟ್ ಸೆಂಟರ್‌ಗೆ ಹೋಗಬಹುದು ಅಥವಾ ನವೋದಯ ಶಾಲೆಗಳಲ್ಲಿ ಇರುವ ಉಚಿತ ಹೆಲ್ಪ್‌ಡೆಸ್ಕ್ ನೆರವು ಪಡೆಯಬಹುದು. ಅರ್ಜಿ ಹಾಕಲು ಈ ಕೆಳಗಿನ ದಾಖಲೆಗಳನ್ನು ಸಾಫ್ಟ್ ಪ್ರತಿಯಲ್ಲಿ (10 ರಿಂದ 100 kb ಗಾತ್ರದ JPG ಫಾರ್ಮ್ಯಾಟ್) ಸಿದ್ಧವಾಗಿಟ್ಟುಕೊಳ್ಳಿ:

  • ಮಗುವಿನ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ.
  • ಮಗುವಿನ ಸಹಿ ಹಾಗೂ ತಂದೆ ಅಥವಾ ತಾಯಿಯ ಸಹಿ.
  • ಶಾಲಾ ಮುಖ್ಯೋಪಾಧ್ಯಾಯರಿಂದ ದೃಢೀಕರಿಸಲ್ಪಟ್ಟ ಸ್ಟಡಿ ಸರ್ಟಿಫಿಕೇಟ್.
  • ಮಗುವಿನ ಆಧಾರ್ ಕಾರ್ಡ್ ವಿವರಗಳು ಅಥವಾ ಪೋಷಕರ ವಾಸಸ್ಥಳ ದೃಢೀಕರಣ ಪತ್ರ.

ಯಾವುದೇ ಸುಳ್ಳು ಮಾಹಿತಿ ನೀಡಿದರೆ ಮಗುವಿನ ಅಡ್ಮಿಷನ್ ತಕ್ಷಣ ರದ್ದಾಗುವುದರಿಂದ ಅತ್ಯಂತ ಜಾಗರೂಕರಾಗಿ ಸರಿಯಾದ ವಿವರಗಳನ್ನು ಭರ್ತಿ ಮಾಡಿ ಜುಲೈ 31ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಮ್ಮ ಕ್ವಿಕ್ ನ್ಯೂಸ್ ಟುಡೇ ಕಡೆಯಿಂದ ಆಲ್ ದ ಬೆಸ್ಟ್!

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ! SSP Scholarship 2026-27 ಅರ್ಜಿ ಸಲ್ಲಿಕೆ ಆರಂಭ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Karnataka Forest Watcher Recruitment 2026 : SSLC ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಬಂಪರ್ : ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 775 ಫಾರೆಸ್ಟ್ ವಾಚರ್ ಹುದ್ದೆಗಳಿಗೆ ನೇರ ನೇಮಕಾತಿ!

SSLC ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಬಂಪರ್ : ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 775 ಫಾರೆಸ್ಟ್ ವಾಚರ್ ಹುದ್ದೆಗಳಿಗೆ ನೇರ ನೇಮಕಾತಿ!

JNVST 2027: ಪೋಷಕರೇ ಗಮನಿಸಿ: 2027-28ನೇ ಸಾಲಿನ ಜವಾಹರ್ ನವೋದಯ ಶಾಲೆ 6ನೇ ತರಗತಿ ಉಚಿತ ಪ್ರವೇಶಾತಿ ಆರಂಭ! ಇಂದೇ ಅರ್ಜಿ ಹಾಕಿ!

ಪೋಷಕರೇ ಗಮನಿಸಿ! 2027-28ನೇ ಸಾಲಿನ ಜವಾಹರ್ ನವೋದಯ ಶಾಲೆ 6ನೇ ತರಗತಿ ಉಚಿತ ಪ್ರವೇಶಾತಿ ಆರಂಭ! ಇಂದೇ ಅರ್ಜಿ ಹಾಕಿ!

IBPS PO recruitment 2026: ಬ್ಯಾಂಕ್ ಉದ್ಯೋಗ ಹುಡುಕುತ್ತಿರುವರಿಗೆ ಬಂಪರ್ ಅವಕಾಶ: IBPS ನಿಂದ 6715 ಬ್ಯಾಂಕ್ PO ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

ಬ್ಯಾಂಕ್ ಉದ್ಯೋಗ ಹುಡುಕುತ್ತಿರುವರಿಗೆ ಬಂಪರ್ ಅವಕಾಶ: IBPS ನಿಂದ 6715 ಬ್ಯಾಂಕ್ PO ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

HPCL Recruitment 2026: HPCL ನಲ್ಲಿ ಮೆಗಾ ನೇಮಕಾತಿ! ಡಿಪ್ಲೊಮಾ/ ಇಂಜಿನಿಯರಿಂಗ್ ಆದವರಿಗೆ ಬಂಪರ್ ಆಫರ್! 11 ಲಕ್ಷದವರೆಗೆ ಪ್ಯಾಕೇಜ್!

HPCL ನಲ್ಲಿ ಮೆಗಾ ನೇಮಕಾತಿ! ಡಿಪ್ಲೊಮಾ/ ಇಂಜಿನಿಯರಿಂಗ್ ಆದವರಿಗೆ ಬಂಪರ್ ಆಫರ್! 11 ಲಕ್ಷದವರೆಗೆ ಪ್ಯಾಕೇಜ್!

RRI Bengaluru recruitment 2026: ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಭರ್ಜರಿ ನೇಮಕಾತಿ: ITI/Diploma/BE ಆದವರಿಗೆ ಕೇಂದ್ರ ಸರ್ಕಾರಿ ಕೆಲಸ! ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಭರ್ಜರಿ ನೇಮಕಾತಿ: ITI/Diploma/BE ಆದವರಿಗೆ ಕೇಂದ್ರ ಸರ್ಕಾರಿ ಕೆಲಸ! ಇಂದೇ ಅರ್ಜಿ ಸಲ್ಲಿಸಿ!

PrevPreviousಬ್ಯಾಂಕ್ ಉದ್ಯೋಗ ಹುಡುಕುತ್ತಿರುವರಿಗೆ ಬಂಪರ್ ಅವಕಾಶ: IBPS ನಿಂದ 6715 ಬ್ಯಾಂಕ್ PO ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!
NextSSLC ಪಾಸ್ ಆದವರಿಗೆ ಅರಣ್ಯ ಇಲಾಖೆಯಲ್ಲಿ ಬಂಪರ್ : ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 775 ಫಾರೆಸ್ಟ್ ವಾಚರ್ ಹುದ್ದೆಗಳಿಗೆ ನೇರ ನೇಮಕಾತಿ!Next
Trump's 50% Tariff on Brazil:ಬ್ರೆಜಿಲ್‌ನ ವ್ಯಾಪಾರ ಅಡಚಣೆ! ಭಾರತದ ಅಕ್ಕಿ ಮತ್ತು ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸುವರ್ಣಾವಕಾಶ!

Trump’s Tariff on Brazil:ಬ್ರೆಜಿಲ್‌ನ ವ್ಯಾಪಾರ ಅಡಚಣೆ! ಭಾರತದ ಅಕ್ಕಿ ಮತ್ತು ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸುವರ್ಣಾವಕಾಶ!

10 July 2025
Read More »
Ration card Adhar Link: ಯಾವುದೇ ಜಂಜಾಟವಿಲ್ಲದೆ ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿ! ಇಲ್ಲಿದೆ ಮಾಹಿತಿ

Ration card Adhar Link: ಯಾವುದೇ ಜಂಜಾಟವಿಲ್ಲದೆ ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಿ! ಇಲ್ಲಿದೆ ಮಾಹಿತಿ

9 July 2025
Read More »
Detox Drink: ರೋಗ ನಿರೋಧಕ ಶಕ್ತಿ ಬೇಕಾ? ಚರ್ಮದ ಕಾಂತಿ ಹೆಚ್ಚಿಸಬೇಕಾ? ಈ 3 ಜ್ಯೂಸ್ ಮಿಶ್ರಣ ನಿಮ್ಮ ಉತ್ತಮ ಆಯ್ಕೆ!

Detox Drink: ರೋಗ ನಿರೋಧಕ ಶಕ್ತಿ ಬೇಕಾ? ಚರ್ಮದ ಕಾಂತಿ ಹೆಚ್ಚಿಸಬೇಕಾ? ಈ 3 ಜ್ಯೂಸ್ ಮಿಶ್ರಣ ನಿಮ್ಮ ಉತ್ತಮ ಆಯ್ಕೆ!

6 July 2025
Read More »
Page1 … Page149 Page150 Page151 Page152 Page153 Page154
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs