BPL Ration card cancellation: ರಾಜ್ಯದಲ್ಲಿ 14 ಲಕ್ಷ ಅನರ್ಹ BPL ರೇಷನ್ ಕಾರ್ಡ್ ರದ್ದು ಮಾಡಲು ಸಚಿವ ಕೆ.ಎಚ್. ಮುನಿಯಪ್ಪ ಆದೇಶ ನೀಡಿದ್ದಾರೆ. ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗದಂತೆ ತಡೆಯುವುದು ಹೇಗೆ? ತಪ್ಪಾಗಿ ಕ್ಯಾನ್ಸಲ್ ಆದರೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ಬಳಿ BPL ರೇಷನ್ ಕಾರ್ಡ್ ಇದ್ಯಾ? 14 ಲಕ್ಷ ಕಾರ್ಡ್ ರದ್ದತಿಗೆ ಮುನಿಯಪ್ಪ ದಿಢೀರ್ ಆದೇಶ!
ರಾಜ್ಯದಲ್ಲಿ ಉಚಿತ ರೇಷನ್, ಅನ್ನಭಾಗ್ಯದ ದುಡ್ಡು ಹಾಗೂ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಲಕ್ಷಾಂತರ ಜನರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ದೊಡ್ಡ ಶಾಕ್ ಕೊಟ್ಟಿದ್ದಾರೆ. ಹೌದು, ರಾಜ್ಯದಲ್ಲಿ ಬರೋಬ್ಬರಿ 14 ಲಕ್ಷ ಅನರ್ಹ ಬಿಪಿಎಲ್ (BPL Ration card cancellation) ಪಡಿತರ ಚೀಟಿಗಳನ್ನು ರದ್ದು ಮಾಡಲು ಆಹಾರ ಇಲಾಖೆ ಭರ್ಜರಿ ಕಾರ್ಯಾಚರಣೆ ಶುರು ಮಾಡಿದೆ. ಈ ವಿಚಾರ ಈಗ ಗಲ್ಲಿಗಲ್ಲಿಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಸರ್ಕಾರದ ನಿಯಮಗಳ ಪ್ರಕಾರ ಬಡವರಿಗೆ ಮಾತ್ರ ಸಿಗಬೇಕಾದ ಬಿಪಿಎಲ್ ಕಾರ್ಡ್‌ಗಳನ್ನು, ಅನುಕೂಲಸ್ಥರು, ಸರ್ಕಾರಿ ನೌಕರರು, ಹಾಗೂ ಕಾರ್-ಬಂಗಲೆ ಇದ್ದವರೂ ಇಟ್ಟುಕೊಂಡು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಇಂತಹವರ ಪಟ್ಟಿ ಮಾಡಿ, ನಿರ್ದಾಕ್ಷಿಣ್ಯವಾಗಿ ಕಾರ್ಡ್ ರದ್ದು ಮಾಡುವಂತೆ ಖುದ್ದು ಸಚಿವರೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಯಾವ್ಯಾವ ಕಾರ್ಡ್‌ಗಳು ರದ್ದಾಗಲಿವೆ?
ಸಚಿವ ಕೆ.ಎಚ್. ಮುನಿಯಪ್ಪ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಮಾನದಂಡಗಳನ್ನು ಮೀರಿ ಬಹಳಷ್ಟು ಮಂದಿ, ಅಂದರೆ ಶ್ರೀಮಂತರು ಕೂಡ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಿ, ಅವರ ಮೇಲೆ BPL Ration Card Cancellation ಅಸ್ತ್ರ ಪ್ರಯೋಗಿಸಲಾಗುತ್ತಿದೆ.
ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ, ಅವರನ್ನು ಎಪಿಎಲ್ (APL) ಕಾರ್ಡ್‌ಗೆ ವರ್ಗಾಯಿಸಲು (APL Card conversion) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರದಿಂದಲೂ ಕೂಡ ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಬಂದಿದೆ. ಹೀಗಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್‌ಗಳ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದೆ.
ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಲು ಕಾರಣಗಳೇನು? BPL Ration card cancellation
ಸರ್ಕಾರದ ನಿಯಮಗಳ ಪ್ರಕಾರ ಈ ಕೆಳಗಿನ ಸೌಲಭ್ಯ ಹೊಂದಿರುವವರು ಬಿಪಿಎಲ್ ಕಾರ್ಡ್ ಇಟ್ಟುಕೊಳ್ಳುವಂತಿಲ್ಲ:
- ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರರಾಗಿದ್ದರೆ.
- ಸ್ವಂತ ಕಾರು ಅಥವಾ ನಾಲ್ಕು ಚಕ್ರದ ವಾಹನ (ಟ್ಯಾಕ್ಸಿ ಹೊರತುಪಡಿಸಿ) ಹೊಂದಿದ್ದರೆ.
- ವಾರ್ಷಿಕ ಆದಾಯ ಮಿತಿ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ.
- ಆದಾಯ ತೆರಿಗೆ (Income Tax) ಕಟ್ಟುವವರಾಗಿದ್ದರೆ.
- ನಿಗದಿತ ಮಿತಿಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದರೆ.
ನೀವು ಈ ಪಟ್ಟಿಯಲ್ಲಿ ಬರುತ್ತೀರಾ ಇಲ್ಲವಾ ಎಂಬುದನ್ನು ಹೊಸ Karnataka Ration Card List 2026 ಬಿಡುಗಡೆಯಾದಾಗ ಚೆಕ್ ಮಾಡಿಕೊಳ್ಳಬಹುದು.
ಬಡವರ ಕಾರ್ಡ್ ರದ್ದಾದರೆ ಟೆನ್ಷನ್ ಬೇಡ, ಇಲ್ಲಿದೆ ಪರಿಹಾರ!
ಇಲಾಖೆಯ ಈ ದಿಢೀರ್ ಕಾರ್ಯಾಚರಣೆಯಿಂದ ನಿಜವಾದ ಬಡವರು ಕೂಡ ಭಯಬೀಳುವಂತಾಗಿದೆ. “ನಮ್ಮ ಹತ್ರ ಕಾರು, ಬಂಗಲೆ ಏನೂ ಇಲ್ಲ, ಆದ್ರೂ ನಮ್ ಕಾರ್ಡ್ ಕ್ಯಾನ್ಸಲ್ ಆದ್ರೆ ಏನ್ ಮಾಡೋದು?” ಅನ್ನೋ ಆತಂಕ ಅನೇಕರಲ್ಲಿದೆ. ಈ ಬಗ್ಗೆಯೂ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
ಒಂದು ವೇಳೆ ತಾಂತ್ರಿಕ ದೋಷದಿಂದ ಅಥವಾ ಅಧಿಕಾರಿಗಳ ತಪ್ಪಿನಿಂದ ಯಾವುದೇ ಅರ್ಹ, ಬಡ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಅವರು ಆತಂಕ ಪಡುವ ಅಗತ್ಯವಿಲ್ಲ. ಅಂಥವರು ನೇರವಾಗಿ ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಗೆ ಹೋಗಿ, ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ, ಪರಿಶೀಲನೆ ನಡೆಸಿ ಮತ್ತೆ ಅವರಿಗೆ ಬಿಪಿಎಲ್ ಕಾರ್ಡ್ ವಾಪಸ್ ನೀಡಲಾಗುವುದು ಎಂದು ಮುನಿಯಪ್ಪ ಭರವಸೆ ನೀಡಿದ್ದಾರೆ. ನಿಮ್ಮ ಕಾರ್ಡ್ ಸ್ಟೇಟಸ್ ತಿಳಿಯಲು How to check BPL card status ಎಂದು ಆನ್‌ಲೈನ್‌ನಲ್ಲಿ ಹುಡುಕಿ ಅಧಿಕೃತ ವೆಬ್‌ಸೈಟ್ ಮೂಲಕ ಚೆಕ್ ಮಾಡಬಹುದು.
ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಸೇಲ್: ಮುನಿಯಪ್ಪ ಗರಂ
ಇದೇ ವೇಳೆ ಅಡುಗೆ ಅನಿಲ (LPG Gas Cylinder) ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆಯೂ ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಮನೆಗೆ ಬಳಸುವ ಗ್ಯಾಸ್ ಸಿಲಿಂಡರ್‌ಗಳನ್ನು ಕೆಲವು ಏಜೆನ್ಸಿಗಳು ಮತ್ತು ದಲ್ಲಾಳಿಗಳು ಸೇರಿಕೊಂಡು ಹೋಟೆಲ್‌ಗಳಿಗೆ, ಕಮರ್ಷಿಯಲ್ ಅಂಗಡಿಗಳಿಗೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಇವರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆಯ ಸಹಾಯ ಪಡೆಯುವುದಾಗಿ ಸಚಿವರು ಗುಡುಗಿದ್ದಾರೆ. ಈ ಬಗ್ಗೆ ಗೃಹ ಸಚಿವರ ಜೊತೆಗೂ ಮಾತುಕತೆ ನಡೆಸಲಿದ್ದಾರಂತೆ.
ಕೇಂದ್ರದ ವಿರುದ್ಧ ತಾರತಮ್ಯದ ಆರೋಪ
ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಬಗ್ಗೆಯೂ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಅಡುಗೆ ಅನಿಲ ಪೂರೈಕೆಯಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆದಿದ್ದರೂ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದರು.
“ಗ್ಯಾಸ್ ಅಭಾವ ಸೃಷ್ಟಿಯಾಗುವುದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ನಾವು ಕೇವಲ ಏಜೆನ್ಸಿಗಳು ಸರಿಯಾಗಿ ಕೆಲಸ ಮಾಡುತ್ತಿವೆಯಾ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರಾ ಎಂಬುದನ್ನಷ್ಟೇ ನೋಡಿಕೊಳ್ಳಬಹುದು. ಬೆಂಗಳೂರಿನಲ್ಲಿ ಬೇರೆ ರಾಜ್ಯದ ಲಕ್ಷಾಂತರ ಜನ ಬಂದು ನೆಲೆಸಿದ್ದಾರೆ. ಹೀಗಾಗಿ ಗ್ಯಾಸ್ ಬಳಕೆ ಜಾಸ್ತಿ ಇದೆ. ಇದನ್ನು ಅರ್ಥ ಮಾಡಿಕೊಂಡು ಕೇಂದ್ರ ಸರ್ಕಾರ ತಾರತಮ್ಯ ಮಾಡದೆ ಗ್ಯಾಸ್ ಪೂರೈಕೆ ಮಾಡಬೇಕು. ಈ ಬಗ್ಗೆ ಶುಕ್ರವಾರ ಇಂಡಿಯನ್ ಆಯಿಲ್ ಅಧಿಕಾರಿಗಳ ಜೊತೆ ಮಹತ್ವದ ಮೀಟಿಂಗ್ ಕರೆದಿದ್ದೇನೆ” ಎಂದು ಸಚಿವರು ಮಾಹಿತಿ ನೀಡಿದರು.
ಒಟ್ಟಿನಲ್ಲಿ, ರಾಜ್ಯ ಸರ್ಕಾರದ ಈ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆಯಿಂದ Anna Bhagya Scheme ಅಡಿ ಉಚಿತ ಅಕ್ಕಿ ಪಡೆಯುತ್ತಿದ್ದ ಲಕ್ಷಾಂತರ ಅನರ್ಹರಿಗೆ ಬಿಸಿ ಮುಟ್ಟುವುದಂತೂ ಗ್ಯಾರಂಟಿ.
Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Buttons