Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! 14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಮುನಿಯಪ್ಪ ಆದೇಶ! ನಿಮ್ಮ ಕಾರ್ಡ್ ಸೇಫ್ ಇದ್ಯಾ ಚೆಕ್ ಮಾಡಿ!

  • Picture of Gundijalu Shwetha By Gundijalu Shwetha
  • Published On: April 10, 2026
BPL Ration card cancellation: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! 14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ರದ್ದತಿಗೆ ಮುನಿಯಪ್ಪ ಆದೇಶ! ನಿಮ್ಮ ಕಾರ್ಡ್ ಸೇಫ್ ಇದ್ಯಾ ಚೆಕ್ ಮಾಡಿ!

BPL Ration card cancellation: ರಾಜ್ಯದಲ್ಲಿ 14 ಲಕ್ಷ ಅನರ್ಹ BPL ರೇಷನ್ ಕಾರ್ಡ್ ರದ್ದು ಮಾಡಲು ಸಚಿವ ಕೆ.ಎಚ್. ಮುನಿಯಪ್ಪ ಆದೇಶ ನೀಡಿದ್ದಾರೆ. ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗದಂತೆ ತಡೆಯುವುದು ಹೇಗೆ? ತಪ್ಪಾಗಿ ಕ್ಯಾನ್ಸಲ್ ಆದರೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಬಳಿ BPL ರೇಷನ್ ಕಾರ್ಡ್ ಇದ್ಯಾ? 14 ಲಕ್ಷ ಕಾರ್ಡ್ ರದ್ದತಿಗೆ ಮುನಿಯಪ್ಪ ದಿಢೀರ್ ಆದೇಶ!

ರಾಜ್ಯದಲ್ಲಿ ಉಚಿತ ರೇಷನ್, ಅನ್ನಭಾಗ್ಯದ ದುಡ್ಡು ಹಾಗೂ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಲಕ್ಷಾಂತರ ಜನರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ದೊಡ್ಡ ಶಾಕ್ ಕೊಟ್ಟಿದ್ದಾರೆ. ಹೌದು, ರಾಜ್ಯದಲ್ಲಿ ಬರೋಬ್ಬರಿ 14 ಲಕ್ಷ ಅನರ್ಹ ಬಿಪಿಎಲ್ (BPL Ration card cancellation) ಪಡಿತರ ಚೀಟಿಗಳನ್ನು ರದ್ದು ಮಾಡಲು ಆಹಾರ ಇಲಾಖೆ ಭರ್ಜರಿ ಕಾರ್ಯಾಚರಣೆ ಶುರು ಮಾಡಿದೆ. ಈ ವಿಚಾರ ಈಗ ಗಲ್ಲಿಗಲ್ಲಿಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.

WhatsApp Channel
Join Now
Telegram Channel
Join Now

ಸರ್ಕಾರದ ನಿಯಮಗಳ ಪ್ರಕಾರ ಬಡವರಿಗೆ ಮಾತ್ರ ಸಿಗಬೇಕಾದ ಬಿಪಿಎಲ್ ಕಾರ್ಡ್‌ಗಳನ್ನು, ಅನುಕೂಲಸ್ಥರು, ಸರ್ಕಾರಿ ನೌಕರರು, ಹಾಗೂ ಕಾರ್-ಬಂಗಲೆ ಇದ್ದವರೂ ಇಟ್ಟುಕೊಂಡು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಇಂತಹವರ ಪಟ್ಟಿ ಮಾಡಿ, ನಿರ್ದಾಕ್ಷಿಣ್ಯವಾಗಿ ಕಾರ್ಡ್ ರದ್ದು ಮಾಡುವಂತೆ ಖುದ್ದು ಸಚಿವರೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಯಾವ್ಯಾವ ಕಾರ್ಡ್‌ಗಳು ರದ್ದಾಗಲಿವೆ?

ಸಚಿವ ಕೆ.ಎಚ್. ಮುನಿಯಪ್ಪ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಮಾನದಂಡಗಳನ್ನು ಮೀರಿ ಬಹಳಷ್ಟು ಮಂದಿ, ಅಂದರೆ ಶ್ರೀಮಂತರು ಕೂಡ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದಾರೆ. ಇಂತಹವರನ್ನು ಪತ್ತೆ ಹಚ್ಚಿ, ಅವರ ಮೇಲೆ BPL Ration Card Cancellation ಅಸ್ತ್ರ ಪ್ರಯೋಗಿಸಲಾಗುತ್ತಿದೆ.

ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿ, ಅವರನ್ನು ಎಪಿಎಲ್ (APL) ಕಾರ್ಡ್‌ಗೆ ವರ್ಗಾಯಿಸಲು (APL Card conversion) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಕೇಂದ್ರ ಸರ್ಕಾರದಿಂದಲೂ ಕೂಡ ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಬಂದಿದೆ. ಹೀಗಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್‌ಗಳ ಪರಿಷ್ಕರಣೆ ಕಾರ್ಯ ಭರದಿಂದ ಸಾಗುತ್ತಿದೆ.

ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಲು ಕಾರಣಗಳೇನು? BPL Ration card cancellation

ಸರ್ಕಾರದ ನಿಯಮಗಳ ಪ್ರಕಾರ ಈ ಕೆಳಗಿನ ಸೌಲಭ್ಯ ಹೊಂದಿರುವವರು ಬಿಪಿಎಲ್ ಕಾರ್ಡ್ ಇಟ್ಟುಕೊಳ್ಳುವಂತಿಲ್ಲ:

  • ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರರಾಗಿದ್ದರೆ.
  • ಸ್ವಂತ ಕಾರು ಅಥವಾ ನಾಲ್ಕು ಚಕ್ರದ ವಾಹನ (ಟ್ಯಾಕ್ಸಿ ಹೊರತುಪಡಿಸಿ) ಹೊಂದಿದ್ದರೆ.
  • ವಾರ್ಷಿಕ ಆದಾಯ ಮಿತಿ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ.
  • ಆದಾಯ ತೆರಿಗೆ (Income Tax) ಕಟ್ಟುವವರಾಗಿದ್ದರೆ.
  • ನಿಗದಿತ ಮಿತಿಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದರೆ.

ನೀವು ಈ ಪಟ್ಟಿಯಲ್ಲಿ ಬರುತ್ತೀರಾ ಇಲ್ಲವಾ ಎಂಬುದನ್ನು ಹೊಸ Karnataka Ration Card List 2026 ಬಿಡುಗಡೆಯಾದಾಗ ಚೆಕ್ ಮಾಡಿಕೊಳ್ಳಬಹುದು.

ಬಡವರ ಕಾರ್ಡ್ ರದ್ದಾದರೆ ಟೆನ್ಷನ್ ಬೇಡ, ಇಲ್ಲಿದೆ ಪರಿಹಾರ!

ಇಲಾಖೆಯ ಈ ದಿಢೀರ್ ಕಾರ್ಯಾಚರಣೆಯಿಂದ ನಿಜವಾದ ಬಡವರು ಕೂಡ ಭಯಬೀಳುವಂತಾಗಿದೆ. “ನಮ್ಮ ಹತ್ರ ಕಾರು, ಬಂಗಲೆ ಏನೂ ಇಲ್ಲ, ಆದ್ರೂ ನಮ್ ಕಾರ್ಡ್ ಕ್ಯಾನ್ಸಲ್ ಆದ್ರೆ ಏನ್ ಮಾಡೋದು?” ಅನ್ನೋ ಆತಂಕ ಅನೇಕರಲ್ಲಿದೆ. ಈ ಬಗ್ಗೆಯೂ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.

ಒಂದು ವೇಳೆ ತಾಂತ್ರಿಕ ದೋಷದಿಂದ ಅಥವಾ ಅಧಿಕಾರಿಗಳ ತಪ್ಪಿನಿಂದ ಯಾವುದೇ ಅರ್ಹ, ಬಡ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಅವರು ಆತಂಕ ಪಡುವ ಅಗತ್ಯವಿಲ್ಲ. ಅಂಥವರು ನೇರವಾಗಿ ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಗೆ ಹೋಗಿ, ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ, ಪರಿಶೀಲನೆ ನಡೆಸಿ ಮತ್ತೆ ಅವರಿಗೆ ಬಿಪಿಎಲ್ ಕಾರ್ಡ್ ವಾಪಸ್ ನೀಡಲಾಗುವುದು ಎಂದು ಮುನಿಯಪ್ಪ ಭರವಸೆ ನೀಡಿದ್ದಾರೆ. ನಿಮ್ಮ ಕಾರ್ಡ್ ಸ್ಟೇಟಸ್ ತಿಳಿಯಲು How to check BPL card status ಎಂದು ಆನ್‌ಲೈನ್‌ನಲ್ಲಿ ಹುಡುಕಿ ಅಧಿಕೃತ ವೆಬ್‌ಸೈಟ್ ಮೂಲಕ ಚೆಕ್ ಮಾಡಬಹುದು.

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಸೇಲ್: ಮುನಿಯಪ್ಪ ಗರಂ

ಇದೇ ವೇಳೆ ಅಡುಗೆ ಅನಿಲ (LPG Gas Cylinder) ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆಯೂ ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಮನೆಗೆ ಬಳಸುವ ಗ್ಯಾಸ್ ಸಿಲಿಂಡರ್‌ಗಳನ್ನು ಕೆಲವು ಏಜೆನ್ಸಿಗಳು ಮತ್ತು ದಲ್ಲಾಳಿಗಳು ಸೇರಿಕೊಂಡು ಹೋಟೆಲ್‌ಗಳಿಗೆ, ಕಮರ್ಷಿಯಲ್ ಅಂಗಡಿಗಳಿಗೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಇವರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆಯ ಸಹಾಯ ಪಡೆಯುವುದಾಗಿ ಸಚಿವರು ಗುಡುಗಿದ್ದಾರೆ. ಈ ಬಗ್ಗೆ ಗೃಹ ಸಚಿವರ ಜೊತೆಗೂ ಮಾತುಕತೆ ನಡೆಸಲಿದ್ದಾರಂತೆ.

ಕೇಂದ್ರದ ವಿರುದ್ಧ ತಾರತಮ್ಯದ ಆರೋಪ

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಬಗ್ಗೆಯೂ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಅಡುಗೆ ಅನಿಲ ಪೂರೈಕೆಯಲ್ಲಿ ರಾಜ್ಯಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆದಿದ್ದರೂ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದರು.

“ಗ್ಯಾಸ್ ಅಭಾವ ಸೃಷ್ಟಿಯಾಗುವುದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ನಾವು ಕೇವಲ ಏಜೆನ್ಸಿಗಳು ಸರಿಯಾಗಿ ಕೆಲಸ ಮಾಡುತ್ತಿವೆಯಾ ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರಾ ಎಂಬುದನ್ನಷ್ಟೇ ನೋಡಿಕೊಳ್ಳಬಹುದು. ಬೆಂಗಳೂರಿನಲ್ಲಿ ಬೇರೆ ರಾಜ್ಯದ ಲಕ್ಷಾಂತರ ಜನ ಬಂದು ನೆಲೆಸಿದ್ದಾರೆ. ಹೀಗಾಗಿ ಗ್ಯಾಸ್ ಬಳಕೆ ಜಾಸ್ತಿ ಇದೆ. ಇದನ್ನು ಅರ್ಥ ಮಾಡಿಕೊಂಡು ಕೇಂದ್ರ ಸರ್ಕಾರ ತಾರತಮ್ಯ ಮಾಡದೆ ಗ್ಯಾಸ್ ಪೂರೈಕೆ ಮಾಡಬೇಕು. ಈ ಬಗ್ಗೆ ಶುಕ್ರವಾರ ಇಂಡಿಯನ್ ಆಯಿಲ್ ಅಧಿಕಾರಿಗಳ ಜೊತೆ ಮಹತ್ವದ ಮೀಟಿಂಗ್ ಕರೆದಿದ್ದೇನೆ” ಎಂದು ಸಚಿವರು ಮಾಹಿತಿ ನೀಡಿದರು.

ಒಟ್ಟಿನಲ್ಲಿ, ರಾಜ್ಯ ಸರ್ಕಾರದ ಈ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆಯಿಂದ Anna Bhagya Scheme ಅಡಿ ಉಚಿತ ಅಕ್ಕಿ ಪಡೆಯುತ್ತಿದ್ದ ಲಕ್ಷಾಂತರ ಅನರ್ಹರಿಗೆ ಬಿಸಿ ಮುಟ್ಟುವುದಂತೂ ಗ್ಯಾರಂಟಿ.

Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

  • BPL/APL ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ವರ್ ಓಪನ್! ಮಾರ್ಚ್ 31ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಡೀಟೇಲ್ಸ್
  • ಬಿಪಿಎಲ್ ಕಾರ್ಡ್‌ದಾರರಿಗೆ ಬಂಪರ್ ಸುದ್ದಿ: ಇನ್ಮುಂದೆ 10 ಕೆಜಿ ಅಕ್ಕಿ ಸಿಗಲ್ಲ! ಬದಲಿಗೆ ಸಿಗಲಿದೆ ‘ಇಂದಿರಾ ಕಿಟ್’! ಮಾರ್ಚ್‌ ತಿಂಗಳಿಂದಲೇ ವಿತರಣೆ ಆರಂಭ!
  • Digital Ration Card: ಪಡಿತರ ಚೀಟಿ ಕಳೆದುಹೋಗುವ ಚಿಂತೆ ಬೇಡ! ಮೊಬೈಲ್‌ನಲ್ಲೇ ಡಿಜಿಟಲ್ ರೇಷನ್ ಕಾರ್ಡ್ ಪಡೆಯುವುದು ಹೇಗೆ?

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Buttons

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

RCF Recruitment 2026: ಕೇಂದ್ರ ಸರ್ಕಾರಿ ಕೆಲಸ: RCF ನಲ್ಲಿ 188 ಆಪರೇಟರ್ ಹುದ್ದೆ! B.Sc/BE/Degree/Diploma ಪಾಸ್ ಆದವರಿಗೆ ಬಂಪರ್ ಆಫರ್!

ಕೇಂದ್ರ ಸರ್ಕಾರಿ ಕೆಲಸ: RCF ನಲ್ಲಿ 188 ಆಪರೇಟರ್ ಹುದ್ದೆ! B.Sc/BE/Degree/Diploma ಪಾಸ್ ಆದವರಿಗೆ ಬಂಪರ್ ಆಫರ್!

Indian Bank SO Recruitment 2026: ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಆಫರ್: ಇಂಡಿಯನ್ ಬ್ಯಾಂಕ್‌ನಲ್ಲಿ ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ!

ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಆಫರ್: ಇಂಡಿಯನ್ ಬ್ಯಾಂಕ್‌ನಲ್ಲಿ ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ!

CRPF Recruitment 2026: 10ನೇ ಕ್ಲಾಸ್ ಪಾಸ್ ಆದವರಿಗೆ ಸಿಹಿ ಸುದ್ದಿ: CRPF ನಲ್ಲಿ 9175 ಬಂಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

10ನೇ ಕ್ಲಾಸ್ ಪಾಸ್ ಆದವರಿಗೆ ಸಿಹಿ ಸುದ್ದಿ: CRPF ನಲ್ಲಿ 9175 ಬಂಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

NPCIL Recruitment 2026: ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್! NPCIL ನಲ್ಲಿ 330 ಹುದ್ದೆಗಳಿಗೆ ನೇರ ನೇಮಕಾತಿ! 80 ಸಾವಿರಕ್ಕೂ ಹೆಚ್ಚು ಸಂಬಳ!

ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್! NPCIL ನಲ್ಲಿ 330 ಹುದ್ದೆಗಳಿಗೆ ನೇರ ನೇಮಕಾತಿ! 80 ಸಾವಿರಕ್ಕೂ ಹೆಚ್ಚು ಸಂಬಳ!

RBI New Rules:ಆನ್‌ಲೈನ್ ವಹಿವಾಟಿನಲ್ಲಿ ಬರಲಿದೆ 3 ದೊಡ್ಡ ಬದಲಾವಣೆ: 10 ಸಾವಿರ ರೂ ಟ್ರಾನ್ಸಾಕ್ಷನ್‌ಗೂ ಬಂತು ಹೊಸ ರೂಲ್ಸ್!

ಆನ್‌ಲೈನ್ ವಹಿವಾಟಿನಲ್ಲಿ ಬರಲಿದೆ 3 ದೊಡ್ಡ ಬದಲಾವಣೆ: 10 ಸಾವಿರ ರೂ ಟ್ರಾನ್ಸಾಕ್ಷನ್‌ಗೂ ಬಂತು ಹೊಸ ರೂಲ್ಸ್!

PrevPreviousPUC ವಿದ್ಯಾರ್ಥಿಗಳೇ ಗಮನಿಸಿ: 2027ರಿಂದ ಪ್ರಿಂಟೆಡ್ ಅಂಕಪಟ್ಟಿ ರದ್ದು! ಹಾಗಾದ್ರೆ ಅಡ್ಮಿಷನ್! ಕೆಲಸಕ್ಕೆ ಮುಂದೇನು? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!
Nextರೈತರಿಗೆ ಬಿಗ್ ಶಾಕ್! ಇನ್ಮುಂದೆ ”ಫ್ರೂಟ್ಸ್ ಐಡಿ’ (FID)’ ನಂಬರ್ ಇಲ್ಲದಿದ್ದರೆ ರಸಗೊಬ್ಬರ ಖಂಡಿತಾ ಸಿಗಲ್ಲ! ಸರ್ಕಾರದ ಹೊಸ ರೂಲ್ಸ್ ಏನು?Next
IOCL Recruitment 2025-26: 394 ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ₹1 ಲಕ್ಷದವರೆಗೆ ವೇತನ ಪಡೆಯುವ ಸುವರ್ಣಾವಕಾಶ

IOCL Recruitment 2025-26: 394 ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ₹1 ಲಕ್ಷದವರೆಗೆ ವೇತನ ಪಡೆಯುವ ಸುವರ್ಣಾವಕಾಶ

21 December 2025
Read More »
ಕಾಫಿನಾಡಿನಲ್ಲಿ ಹವಾಮಾನ ವೈಪರಿತ್ಯಕ್ಕೆ ಕಾಫಿ ಬೆಳೆಗಾರರ ಬದುಕು ಅಯೋಮಯ! ಮುಂದಿನ ವರ್ಷ ಕಾಫಿ ಫಸಲು ಸಿಗುವುದು ಅನುಮಾನ?

ಕಾಫಿನಾಡಿನಲ್ಲಿ ಹವಾಮಾನ ವೈಪರಿತ್ಯಕ್ಕೆ ಕಾಫಿ ಬೆಳೆಗಾರರ ಬದುಕು ಅಯೋಮಯ! ಮುಂದಿನ ವರ್ಷ ಕಾಫಿ ಫಸಲು ಸಿಗುವುದು ಅನುಮಾನ?

20 December 2025
Read More »
7 Game-Changing Features of the New Triumph Tracker 400: More Power and Aggressive Flat-Track Style Unveiled!

7 Game-Changing Features of the New Triumph Tracker 400: More Power and Aggressive Flat-Track Style Unveiled!

18 December 2025
Read More »
Page1 … Page93 Page94 Page95 Page96 Page97 … Page123
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs