ಕರ್ನಾಟಕ ಭೂ ಕಂದಾಯ ಕಾಯ್ದೆ 1964 ತಿದ್ದುಪಡಿ: ಕೇವಲ 30 ದಿನದಲ್ಲಿ ಭೂಪರಿವರ್ತನೆ! ರೈತರಿಗೆ ಮತ್ತು ಹೂಡಿಕೆದಾರರಿಗೆ ಬಂಪರ್ ಕೊಡುಗೆ!

Karnataka Land Revenue Act 1964: ಕರ್ನಾಟಕ ಭೂ ಕಂದಾಯ ಕಾಯ್ದೆ 1964 ತಿದ್ದುಪಡಿ: ಕೇವಲ 30 ದಿನದಲ್ಲಿ ಭೂಪರಿವರ್ತನೆ! ರೈತರಿಗೆ ಮತ್ತು ಹೂಡಿಕೆದಾರರಿಗೆ ಬಂಪರ್ ಕೊಡುಗೆ!

Karnataka Land Revenue Act 1964: ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ರಾಜ್ಯ ಸರ್ಕಾರವು ಮಹತ್ವದ ತಿದ್ದುಪಡಿ ತಂದಿದೆ. ಕೇವಲ 30 ದಿನದಲ್ಲಿ ಭೂಪರಿವರ್ತನೆ, ಆನ್‌ಲೈನ್ ಅರ್ಜಿ ಮತ್ತು ಮಾಸ್ಟರ್ ಪ್ಲಾನ್ ವಿನಾಯಿತಿ ಸೇರಿದಂತೆ ಹಲವು ಸುಧಾರಣೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ಸರ್ಕಾರವು ರೈತರು ಮತ್ತು ಭೂಮಾಲೀಕರ ದಶಕಗಳ ಕಾಲದ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ (Karnataka Land Revenue Act 1964) 95ನೇ ಕಲಂಗೆ ಸಂಬಂಧಿಸಿದಂತೆ ಐತಿಹಾಸಿಕ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಸುಮಾರು 56 ವರ್ಷಗಳ ನಂತರ ಭೂ ಕಂದಾಯ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರುವ ಮೂಲಕ ಭೂಪರಿವರ್ತನೆ (Land Conversion) ಪ್ರಕ್ರಿಯೆಯನ್ನು ಅತ್ಯಂತ ಸರಳೀಕರಣಗೊಳಿಸಲಾಗಿದೆ.

ಬೆಂಗಳೂರು: ಕರ್ನಾಟಕದ ಭೂ ಸುಧಾರಣಾ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಭೂಪರಿವರ್ತನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುವ ಕಾಲ ಈಗ ಮುಗಿದಿದೆ. ಕಂದಾಯ ಇಲಾಖೆಯು ಹೊರಡಿಸಿರುವ ಅಂತಿಮ ಅಧಿಸೂಚನೆಯ ಪ್ರಕಾರ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಿಕೊಳ್ಳುವ ನಿಯಮಗಳನ್ನು ಅತ್ಯಂತ ಸುಲಭಗೊಳಿಸಲಾಗಿದೆ. ಸಾರ್ವಜನಿಕರಿಗೆ ಪಾರದರ್ಶಕ ಮತ್ತು ಸುಲಭ ನ್ಯಾಯದಾನ ನೀಡುವ ಉದ್ದೇಶದಿಂದ ಕಂದಾಯ ನ್ಯಾಯಾಲಯಗಳಿಗೂ ಡಿಜಿಟಲ್ ಸ್ಪರ್ಶ ನೀಡಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ತಿದ್ದುಪಡಿಯ ಪ್ರಮುಖ ಮುಖ್ಯಾಂಶಗಳು:

ಕಳೆದ 56 ವರ್ಷಗಳ ನಂತರ ಕರ್ನಾಟಕ ಭೂ ಕಂದಾಯ ನಿಯಮಗಳು 1966ಕ್ಕೆ ಸಮಗ್ರವಾಗಿ 44 ಹೊಸ ನಿಯಮಗಳನ್ನು ಸೇರಿಸುವ ಮೂಲಕ ತಿದ್ದುಪಡಿ ತರಲಾಗಿದೆ. ಇದರ ಪ್ರಮುಖ ಉದ್ದೇಶಗಳು ಹೀಗಿವೆ:

  • ಪಾರದರ್ಶಕ ನ್ಯಾಯದಾನ: ಕಂದಾಯ ನ್ಯಾಯಾಲಯಗಳನ್ನು ಪಾರದರ್ಶಕವಾಗಿ ನಡೆಸುವುದು.
  • ಅಭಿವೃದ್ಧಿಗೆ ವೇಗ: ಭೂಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಿಸಿ ರಾಜ್ಯದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸುವುದು.
  • ಹೂಡಿಕೆದಾರ ಸ್ನೇಹಿ: ಬಂಡವಾಳ ಹೂಡಿಕೆದಾರರಿಗೆ ಸುಲಭವಾಗಿ ಭೂಮಿ ಲಭ್ಯವಾಗುವಂತೆ ಮಾಡುವುದು.

ಭೂಪರಿವರ್ತನೆ (Land Conversion)ಯಲ್ಲಿ ತರಲಾದ ಪ್ರಮುಖ ಬದಲಾವಣೆಗಳು:

  1. ಮಾಸ್ಟರ್ ಪ್ಲಾನ್ ವಿನಾಯಿತಿ: ನಗರ ಯೋಜನೆ ಅಥವಾ ಮಾಸ್ಟರ್ ಪ್ಲಾನ್ ಅನ್ವಯ ಈಗಾಗಲೇ ಗುರುತಿಸಲಾದ ಭೂಬಳಕೆಯ ಪ್ರಕಾರ ಭೂಮಿಯನ್ನು ಬಳಸಲು ಪ್ರತ್ಯೇಕ ಭೂಪರಿವರ್ತನೆ ಅಗತ್ಯವಿಲ್ಲ. ನೇರವಾಗಿ ನಕ್ಷೆ ಅನುಮೋದನೆಗೆ (Plan Approval) ಹೋಗಬಹುದು.
  2. 30 ದಿನಗಳ ಗಡುವು: ಈ ಹಿಂದೆ ಮೂರ್ನಾಲ್ಕು ತಿಂಗಳು ಬೇಕಾಗುತ್ತಿದ್ದ ಭೂಪರಿವರ್ತನೆ ಪ್ರಕ್ರಿಯೆಯನ್ನು ಈಗ ಕೇವಲ 30 ದಿನಗಳಿಗೆ ಸೀಮಿತಗೊಳಿಸಲಾಗಿದೆ.
  3. ಸ್ವಯಂ ಚಾಲಿತ ಭೂಪರಿವರ್ತನೆ (Deemed Conversion): ಜಿಲ್ಲಾಧಿಕಾರಿಗಳು ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ, ಅದನ್ನು ಸ್ವಯಂಚಾಲಿತವಾಗಿ ಅನುಮೋದಿತ ಎಂದು ಪರಿಗಣಿಸಲಾಗುತ್ತದೆ.
  4. ಆನ್‌ಲೈನ್ ಅರ್ಜಿ: ಭೂಪರಿವರ್ತನೆಗೆ ಮನೆಯಿಂದಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸುಲಭ ವ್ಯವಸ್ಥೆ ಜಾರಿಗೆ ಬಂದಿದೆ.
  5. ಸಣ್ಣ ಕೈಗಾರಿಕೆಗಳಿಗೆ ವಿನಾಯಿತಿ: ಎರಡು ಎಕರೆವರೆಗಿನ ಭೂಮಿಯಲ್ಲಿ ಸಣ್ಣ ಕೈಗಾರಿಕೆ ಸ್ಥಾಪಿಸಲು ಇನ್ಮುಂದೆ ಭೂಪರಿವರ್ತನೆಯ ಅವಶ್ಯಕತೆ ಇಲ್ಲ.
  6. ನವೀಕರಿಸಬಹುದಾದ ಇಂಧನ: ಸೌರ ಅಥವಾ ಪವನ ಇಂಧನ ಘಟಕಗಳನ್ನು ನಿರ್ಮಿಸಲು ಇಂಧನ ಇಲಾಖೆಯ ಅನುಮತಿ ಇದ್ದರೆ ಸಾಕು, ಭೂಪರಿವರ್ತನೆ ಬೇಕಿಲ್ಲ.

ಕಂದಾಯ ನ್ಯಾಯಾಲಯಗಳ ಡಿಜಿಟಲೀಕರಣ:

ಈ ತಿದ್ದುಪಡಿಯ ಮತ್ತೊಂದು ದೊಡ್ಡ ಲಾಭವ ಎಂದರೆ ಕಂದಾಯ ನ್ಯಾಯಾಲಯಗಳ ಸುಧಾರಣೆ.

  • RCCMS ಬಳಕೆ: ಡಿಜಿಟಲೀಕರಣದ ಮೂಲಕ ಅದೇಶಗಳನ್ನು ನೀಡಲಾಗುತ್ತಿದ್ದು, ಇದು ನ್ಯಾಯಿಕ ಪ್ರಕ್ರಿಯೆಗೆ ಹೆಚ್ಚಿನ ಬಲ ನೀಡಿದೆ.
  • ಆನ್‌ಲೈನ್ ಕಲಾಪ: ವಾದಿ ಮತ್ತು ಪ್ರತಿವಾದಿಗಳು ಕಚೇರಿಗೆ ಅಲೆಯುವ ಬದಲು ಆನ್‌ಲೈನ್ ಮೂಲಕವೇ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಹುದು. ಇದರಿಂದ ಸಮಯ ಮತ್ತು ಹಣದ ಉಳಿತಾಯವಾಗಲಿದೆ.
  • ಅಧಿಕಾರ ವ್ಯಾಪ್ತಿ ನಿಗದಿ: ಉಪ ವಿಭಾಗಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟಪಡಿಸಲಾಗಿದ್ದು, ಕಾನೂನು ಬಾಹಿರ ಆದೇಶಗಳಿಗೆ ಕಡಿವಾಣ ಹಾಕಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ 95ನೇ ಕಲಂಗೆ ತಂದಿರುವ ನೂತನ ತಿದ್ದುಪಡಿಯ ಅನ್ವಯ, ಭೂಪರಿವರ್ತನೆ (Land Conversion) ಪ್ರಕ್ರಿಯೆ ಈಗ ಸಂಪೂರ್ಣ ಡಿಜಿಟಲ್ ಮತ್ತು ಸರಳವಾಗಿದೆ. ಈ ಪ್ರಕ್ರಿಯೆಗೆ ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿ ಮತ್ತು ಆನ್‌ಲೈನ್ ವಿಧಾನದ ಮಾಹಿತಿ ಇಲ್ಲಿದೆ:

ಭೂಪರಿವರ್ತನೆಗೆ ಅಗತ್ಯವಿರುವ ದಾಖಲೆಗಳ ಪಟ್ಟಿ (Checklist for Land Conversion)

ಆನ್‌ಲೈನ್ ಅರ್ಜಿಯ ಸಮಯದಲ್ಲಿ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಿ:

  • ಆಧಾರ್ ಕಾರ್ಡ್: ಅರ್ಜಿದಾರರ ಗುರುತಿನ ಚೀಟಿ.
  • ಜಮೀನಿನ ಪಹಣಿ (RTC): ಪ್ರಸ್ತುತ ಸಾಲಿನ ಪಹಣಿ ದಾಖಲೆ.
  • ಮ್ಯುಟೇಶನ್ ಪ್ರತಿ (Mutation Copy): ಭೂಮಿಯ ಹಕ್ಕು ಬದಲಾವಣೆಯ ದಾಖಲೆ.
  • ಭೂ ದಾಖಲೆಗಳ ನಕ್ಷೆ (Atlas/Sketch): ಜಮೀನಿನ ನಿಖರ ಅಳತೆ ತೋರಿಸುವ ನಕ್ಷೆ.
  • ಮಾಸ್ಟರ್ ಪ್ಲಾನ್ ವಲಯದ ದೃಢೀಕರಣ: ಜಮೀನು ಇರುವ ಪ್ರದೇಶವು ನಗರ ಯೋಜನಾ ವ್ಯಾಪ್ತಿಯಲ್ಲಿರುವ ಬಗ್ಗೆ ಮಾಹಿತಿ (ಅನ್ವಯವಾಗುವಲ್ಲಿ).
  • ಅಫಿಡವಿಟ್ (Affidavit): ಭೂಪರಿವರ್ತನೆಯ ಉದ್ದೇಶ ಮತ್ತು ನಿಯಮಗಳ ಪಾಲನೆಯ ಬಗ್ಗೆ ಸ್ವಯಂ ಘೋಷಿತ ಪ್ರಮಾಣಪತ್ರ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ( How to Apply Land Conversion in karantaka Step-by-Step Procedure)

ಹೊಸ ತಿದ್ದುಪಡಿಯ ಪ್ರಕಾರ, ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಆನ್‌ಲೈನ್ ಮೂಲಕ ಹೀಗೆ ಅರ್ಜಿ ಸಲ್ಲಿಸಬಹುದು:

  1. ವೆಬ್‌ಸೈಟ್‌ಗೆ ಭೇಟಿ ನೀಡಿ: ಕಂದಾಯ ಇಲಾಖೆಯ ಅಧಿಕೃತ RCCMS (Revenue Court Case Management System) ಅಥವಾ ಭೂಮಿ (Bhoomi) ಪೋರ್ಟಲ್‌ಗೆ ಲಾಗಿನ್ ಆಗಿ.
  2. ಅರ್ಜಿ ಆಯ್ಕೆ: ಮುಖಪುಟದಲ್ಲಿರುವ ‘Land Conversion’ ಅಥವಾ ‘Apply for Conversion’ ಆಯ್ಕೆಯನ್ನು ಆರಿಸಿ.
  3. ಮಾಹಿತಿ ನಮೂದು: ನಿಮ್ಮ ಜಮೀನಿನ ಸರ್ವೆ ನಂಬರ್, ಹಿಸ್ಸಾ ನಂಬರ್ ಮತ್ತು ನಿಮ್ಮ ಆಧಾರ್ ವಿವರಗಳನ್ನು ದಾಖಲಿಸಿ.
  4. ದಾಖಲೆಗಳ ಅಪ್‌ಲೋಡ್: ಮೇಲೆ ತಿಳಿಸಿದ ಚೆಕ್‌ಲಿಸ್ಟ್ ಪ್ರಕಾರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಶುಲ್ಕ ಪಾವತಿ: ನಿಗದಿತ ಭೂಪರಿವರ್ತನಾ ಶುಲ್ಕವನ್ನು ಆನ್‌ಲೈನ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ ಪಾವತಿಸಿ.
  6. ಅಕ್ನಾಲೆಡ್ಜ್‌ಮೆಂಟ್: ಅರ್ಜಿ ಸಲ್ಲಿಸಿದ ನಂತರ ಸಿಗುವ ರಸೀದಿಯನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.

ಹೊಸ ತಿದ್ದುಪಡಿಯ ವಿಶೇಷ ಲಾಭಗಳು:

  • 30 ದಿನಗಳ ಕಡ್ಡಾಯ ಗಡುವು: ನೀವು ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕು.
  • ಡೀಮ್ಡ್ ಕನ್ವರ್ಷನ್ (Deemed Conversion): ಒಂದು ವೇಳೆ 30 ದಿನಗಳೊಳಗೆ ಯಾವುದೇ ಉತ್ತರ ಬಾರದಿದ್ದರೆ, ನಿಮ್ಮ ಭೂಪರಿವರ್ತನೆಗೆ ಅನುಮೋದನೆ ಸಿಕ್ಕಿದೆ ಎಂದು ಸ್ವಯಂಚಾಲಿತವಾಗಿ ಪರಿಗಣಿಸಲಾಗುತ್ತದೆ.
  • ಆನ್‌ಲೈನ್ ನ್ಯಾಯಾಲಯ: ಭೂಮಿ ವಿವಾದಗಳಿದ್ದಲ್ಲಿ ಈಗ ಆನ್‌ಲೈನ್ ಮೂಲಕವೇ ವಿಚಾರಣೆಗೆ ಹಾಜರಾಗಲು ಅವಕಾಶವಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯ ನೂತನ ತಿದ್ದುಪಡಿಗೆ ಸಂಬಂಧಿಸಿದಂತೆ ರೈತರು ಮತ್ತು ಭೂಮಾಲೀಕರು ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs):

1. ನೂತನ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ತಿದ್ದುಪಡಿಯ ಪ್ರಕಾರ ಭೂಪರಿವರ್ತನೆಗೆ ಎಷ್ಟು ದಿನ ಬೇಕಾಗುತ್ತದೆ?

ಹೊಸ ನಿಯಮದ ಪ್ರಕಾರ, ಜಿಲ್ಲಾಧಿಕಾರಿಗಳು ಭೂಪರಿವರ್ತನೆ ಅರ್ಜಿಯನ್ನು ಸ್ವೀಕರಿಸಿದ 30 ದಿನಗಳೊಳಗೆ ಕಡ್ಡಾಯವಾಗಿ ನಿರ್ಧಾರ ತೆಗೆದುಕೊಳ್ಳಬೇಕು

2. ಜಿಲ್ಲಾಧಿಕಾರಿಗಳು 30 ದಿನಗಳೊಳಗೆ ಯಾವುದೇ ನಿರ್ಧಾರ ತಿಳಿಸದಿದ್ದರೆ ಏನಾಗುತ್ತದೆ?

ಒಂದು ವೇಳೆ 30 ದಿನಗಳ ಮಿತಿಯೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಆ ಭೂಮಿಯು ಸ್ವಯಂಚಾಲಿತವಾಗಿ ಭೂಪರಿವರ್ತನೆಯಾಗಿದೆ (Deemed Conversion) ಎಂದು ಪರಿಗಣಿಸಲಾಗುತ್ತದೆ.

3. ಮಾಸ್ಟರ್ ಪ್ಲಾನ್ ಅಡಿಯಲ್ಲಿ ಬರುವ ಭೂಮಿಗೆ ಪ್ರತ್ಯೇಕ ಭೂಪರಿವರ್ತನೆ (Land Conversion) ಅಗತ್ಯವಿದೆಯೇ?

ಇಲ್ಲ, ಮಾಸ್ಟರ್ ಪ್ಲಾನ್ ಪ್ರಕಾರ ಭೂ ಬಳಕೆಗೆ ಈಗಾಗಲೇ ಅನುಮತಿ ಇದ್ದರೆ, ಅಂತಹ ಸಂದರ್ಭಗಳಲ್ಲಿ ಪ್ರತ್ಯೇಕ ಭೂಪರಿವರ್ತನೆಯ ಅಗತ್ಯವಿರುವುದಿಲ್ಲ; ಬದಲಾಗಿ ನೇರವಾಗಿ ನಕ್ಷೆ ಅನುಮೋದನೆಗೆ (Plan Approval) ಹೋಗಬಹುದು

4. ಯಾವ ಉದ್ದೇಶಗಳಿಗೆ ಭೂಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ?

ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಎರಡು ಎಕರೆಯವರೆಗೆ ಮತ್ತು ನವೀಕರಿಸಬಹುದಾದ ಇಂಧನ (ಸೌರ/ಪವನ) ಯೋಜನೆಗಳಿಗೆ ಇಂಧನ ಇಲಾಖೆಯ ಅನುಮತಿ ಇದ್ದರೆ ಭೂಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.

5. ಕಂದಾಯ ನ್ಯಾಯಾಲಯದ ಕಲಾಪಗಳಿಗೆ ನಾನು ಕಚೇರಿಗೆ ಅಲೆಯಬೇಕೇ?

ಅಗತ್ಯವಿಲ್ಲ. ಕಂದಾಯ ನ್ಯಾಯಾಲಯಗಳನ್ನು ಆನ್‌ಲೈನ್ ಮೂಲಕ ನಡೆಸಲು ಕಾನೂನು ತರಲಾಗಿದ್ದು, ವಾದಿ ಮತ್ತು ಪ್ರತಿವಾದಿಗಳು ಆನ್‌ಲೈನ್ ಮೂಲಕವೇ ಭಾಗವಹಿಸಬಹುದು.

6. ಭೂಪರಿವರ್ತನೆಗೆ (Land Conversion) ಅರ್ಜಿ ಸಲ್ಲಿಸುವುದು ಹೇಗೆ?

ಸಾರ್ವಜನಿಕರು ಭೂಪರಿವರ್ತನೆಗಾಗಿ ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

ಪಹಣಿಯಲ್ಲಿ ಬೆಳೆ ಮಾಹಿತಿ ತಪ್ಪಾಗಿದೆಯೇ? ನಿಮ್ಮ ಮೊಬೈಲ್‌ನಲ್ಲೇ ಸರಿಪಡಿಸಿಕೊಳ್ಳಲು ಇಲ್ಲಿದೆ 4 ಸರಳ ಹಂತಗಳು!

KUSUM-B Subsidy Scheme: ಕೇವಲ ಶೇ.20% ವೆಚ್ಚದಲ್ಲಿ ಸೌರ ಪಂಪ್‌ಸೆಟ್‌ಗಳು! ಸಿದ್ದರಾಮಯ್ಯನವರಿಂದ ‘ಕುಸುಮ್ ಬಿ’ ಯೋಜನೆಗೆ ಗ್ರೀನ್ ಸಿಗ್ನಲ್!

PMFBY: ರೈತರಿಗೆ ಕೊನೆಯ ಅವಕಾಶ: ಫಸಲ್ ಬಿಮಾ ನೋಂದಣಿಗೆ ಜುಲೈ 31ರ ಗಡುವು! ಬೆಳೆ ವಿಮೆ ಮಾಡಿಸಿಕೊಳ್ಳಿರಿ ವಿಮಾ ಭದ್ರತೆ ಪಡೆಯಿರಿ!

Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್‌ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ

(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?

DL, RC ಪಡೆಯಲು RTO ಕಚೇರಿಗೆ ಹೋಗಬೇಕಾಗಿಲ್ಲ! ಇನ್ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಮನೆಗೆ ಬರಲಿದೆ ಸ್ಮಾರ್ಟ್ ಕಾರ್ಡ್‌ಗಳು!

Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯ!

ಕರ್ನಾಟಕ ಹೈಕೋರ್ಟ್ ಆದೇಶ: ಬಡ್ತಿ ಪ್ರಕ್ರಿಯೆಗೆ ಷರತ್ತುಬದ್ಧ ಅನುಮತಿ! 3,644 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!

ಗನ್‌ ಲೈಸೆನ್ಸ್‌ ಹೊಂದಿರುವವರಿಗೆ ಹೈಕೋರ್ಟ್‌ನಿಂದ ‘ಬ್ರೇಕಿಂಗ್ ನ್ಯೂಸ್’! ಇನ್ಮುಂದೆ ಲೈಸೆನ್ಸ್ ವರ್ಗಾಯಿಸಲು ಹೊಸ ರೂಲ್ಸ್ ಜಾರಿ!

KPTCL ಲೈನ್‌ಮನ್ ನೇಮಕಾತಿ: ಐಟಿಐ ವಿದ್ಯಾರ್ಥಿಗಳಿಗೆ ಆದ್ಯತೆ ಕೋರಿ ಹೈಕೋರ್ಟ್‌ನಲ್ಲಿ ಮೊರೆ; ಡಿ. 3 ಕ್ಕೆ ವಿಚಾರಣೆ ಮುಂದುವರಿಕೆ!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs