Karnataka Teacher Recruitment 2026 Date Extended: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ 15,000 ಪ್ರಾಥಮಿಕ, ಪ್ರೌಢ, ಗಣಕ ವಿಜ್ಞಾನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ (GPSTR/PST/HSTR) ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಬಿ.ಎಡ್/ಡಿ.ಎಡ್ ಮುಗಿಸಿದ ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಸೆಪ್ಟೆಂಬರ್ 25, 2026 ರವರೆಗೆ ವಿಸ್ತರಿಸಲಾಗಿದೆ. ವಿವಾಹಿತ ಅಭ್ಯರ್ಥಿಗಳ ಜಾತಿ, ಆದಾಯ ಪ್ರಮಾಣಪತ್ರ ನಿಯಮ ಬದಲಾಗಿದ್ದು, ತಪ್ಪು ಸರಿಪಡಿಸಲು ಆನ್‌ಲೈನ್ ಎಡಿಟ್ (Edit) ಅವಕಾಶ ನೀಡಲಾಗಿದೆ. ಪರೀಕ್ಷಾ ಮಾದರಿ, ಸಿಲೆಬಸ್, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿ.ಎಡ್ (B.Ed), ಡಿ.ಎಡ್ (D.Ed) ಪಾಸಾದವರಿಗೆ ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ 15,000 ‘ಶಾಲಾ ಶಿಕ್ಷಕರ’ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!
ನಮಸ್ಕಾರ ನಾಡಿನ ಶೈಕ್ಷಣಿಕ ವಲಯದ ಉದ್ಯೋಗಾಕಾಂಕ್ಷಿಗಳಿಗೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಬೇಕು, ಮಕ್ಕಳಿಗೆ ವಿದ್ಯಾದಾನ ಮಾಡಬೇಕು ಎಂಬ ಉದಾತ್ತ ಕನಸು ಕಾಣುತ್ತಿರುವ ಲಕ್ಷಾಂತರ ಬಿ.ಎಡ್ (B.Ed) ಹಾಗೂ ಡಿ.ಎಡ್ (D.Ed) ಪದವೀಧರರಿಗೆ ಕರ್ನಾಟಕ ಸರ್ಕಾರವು ಅತಿ ದೊಡ್ಡ ಸಿಹಿಸುದ್ದಿ ನೀಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಬಹುನಿರೀಕ್ಷಿತ Karnataka Teacher Recruitment 2026 ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಒಟ್ಟು 15,000 ಪ್ರಾಥಮಿಕ (PST), ಪದವೀಧರ ಪ್ರಾಥಮಿಕ (GPSTR), ಪ್ರೌಢಶಾಲಾ ಸಹ ಶಿಕ್ಷಕರು (HSTR), ಕಂಪ್ಯೂಟರ್ ಸೈನ್ಸ್ (CST) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ (PET) ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಆಗಸ್ಟ್ 18, 2026 ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ.
ನೀವು ಇಂಟರ್ನೆಟ್‌ನಲ್ಲಿ ಪ್ರಸ್ತುತ GPSTR Recruitment 2026 ಅಥವಾ High school teacher recruitment 2026 ಕುರಿತು ಹುಡುಕುತ್ತಿದ್ದರೆ, ನಿಮಗಾಗಿ ಸಿಕ್ಕಿರುವ ಅತ್ಯಂತ ನಿಖರವಾದ ಹಾಗೂ ಸಂಪೂರ್ಣವಾದ ಮಾಹಿತಿ ಇದಾಗಿದೆ. ಶಿಕ್ಷಣ ಇಲಾಖೆಯು ಆಗಸ್ಟ್ 10 ರಂದು ನೂತನ ವಿಶೇಷ ನೇಮಕಾತಿ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಈ ಬಾರಿ ಪರೀಕ್ಷಾ ಮಾದರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ. ಹಾಗಾದರೆ ಹೊಸ ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಏನು? ವಯೋಮಿತಿ ಎಷ್ಟು? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎಂಬೆಲ್ಲಾ ಮಾಹಿತಿಯನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ, ಪೂರ್ತಿಯಾಗಿ ಓದಿ.
ಯಾವ್ಯಾವ ಹುದ್ದೆಗಳು ಖಾಲಿ ಇವೆ? (Karnataka Teacher Recruitment 2026 Vacancy Details)
ಈ ಬಾರಿಯ ಮೆಗಾ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ-ೇತರ ಕರ್ನಾಟಕ ವಿಭಾಗಗಳೆರಡರಲ್ಲೂ ಒಟ್ಟು 15,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ:
| ಹುದ್ದೆಯ ಹೆಸರು (Post Name) | ಕಲ್ಯಾಣ ಕರ್ನಾಟಕ | ಕಲ್ಯಾಣ-ೇತರ ಕರ್ನಾಟಕ | ಒಟ್ಟು ಹುದ್ದೆಗಳು |
| ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (GPSTR 6-8) | 3,228 | 5,272 | 8,500 |
| ಪ್ರೌಢಶಾಲಾ ಸಹ ಶಿಕ್ಷಕರು (Assistant Master – HSTR) | 2,214 | 2,286 | 4,500 |
| ಪ್ರಾಥಮಿಕ ಶಾಲಾ ಶಿಕ್ಷಕರು (PST 1-5) | 800 | 100 | 900 |
| ದೈಹಿಕ ಶಿಕ್ಷಣ ಶಿಕ್ಷಕರು (PET) | 425 | 175 | 600 |
| ಗಣಕ ವಿಜ್ಞಾನ ಶಿಕ್ಷಕರು (Computer Science – CST) | 300 | 200 | 500 |
| ಒಟ್ಟಾರೆ ಒಟ್ಟು ಹುದ್ದೆಗಳು | 6,967 | 8,033 | 15,000 |
(ಗಮನಿಸಿ: ವಿಜಯಪುರ-352, ಬೆಳಗಾವಿ-831, ಮೈಸೂರು-748, ಕಲಬುರಗಿ-2051 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ).
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಅರ್ಜಿ ದಿನಾಂಕ ವಿಸ್ತರಣೆ ಹಾಗೂ ಜಾತಿ, ಆದಾಯ ಪ್ರಮಾಣಪತ್ರ ನಿಯಮದಲ್ಲಿ ಮಹತ್ವದ ಬದಲಾವಣೆ! Karnataka Teacher Recruitment 2026 Date Extended
ಶಾಲಾ ಶಿಕ್ಷಣ ಇಲಾಖೆಯಡಿ ಕೊಡಗು ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ) ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-II (1 ರಿಂದ 8ನೇ ತರಗತಿ) ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಸೇರ್ಪಡೆ ಅಧಿಸೂಚನೆಯನ್ನು ಹೊರಡಿಸಿದೆ. ಆಗಸ್ಟ್ 12, 2026 ರಂದು ಹೊರಡಿಸಲಾಗಿದ್ದ ಮೂಲ ನೇಮಕಾತಿ ಅಧಿಸೂಚನೆಗೆ ಪ್ರಮುಖ ತಿದ್ದುಪಡಿಗಳನ್ನು ತರಲಾಗಿದ್ದು, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಲಾಗಿದೆ. ನೀವು Karnataka Teacher Recruitment 2026 ಗಾಗಿ ಕಾಯುತ್ತಿದ್ದರೆ, ಈ ಪರಿಷ್ಕೃತ ಆದೇಶವು ನಿಮಗೆ ದೊಡ್ಡ ರಿಲೀಫ್ ನೀಡಲಿದೆ.
ವಿಶೇಷವಾಗಿ ವಿವಾಹಿತ ಅಭ್ಯರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು (Caste and Income Certificate) ಪರಿಗಣಿಸುವ ನಿಯಮದಲ್ಲಿ ಸರ್ಕಾರವು ಸ್ಪಷ್ಟನೆ ನೀಡಿದ್ದು, ಈಗಾಗಲೇ ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ತಮ್ಮ ಆನ್‌ಲೈನ್ ಅರ್ಜಿಯನ್ನು ತಿದ್ದುಪಡಿ (Online Edit) ಮಾಡಲು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. Teacher Jobs ಗೆ ಸಂಬಂಧಿಸಿದಂತೆ ನೇಮಕಾತಿ ಪ್ರಾಧಿಕಾರ ಹಾಗೂ ಉಪನಿರ್ದೇಶಕರು (ಆಡಳಿತ), ಕೊಡಗು ಜಿಲ್ಲೆ ಇವರು ಸೆಪ್ಟೆಂಬರ್ 03, 2026 ರಂದು ಈ ಅಧಿಕೃತ ಸೇರ್ಪಡೆ ಅಧಿಸೂಚನೆಯನ್ನು (ಸಂಖ್ಯೆ: ಇ1/ಸ.ಪ್ರಾ.ಶಿ.ನೇಮಕ/01/2026-27) ಬಿಡುಗಡೆ ಮಾಡಿದ್ದಾರೆ. ಈ ಕೆಳಗೆ ಹೊಸ ನಿಯಮಗಳು, ವಿಸ್ತರಣೆಯಾದ ದಿನಾಂಕಗಳು ಮತ್ತು ತಿದ್ದುಪಡಿ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಸರಳವಾಗಿ ವಿವರಿಸಲಾಗಿದೆ.
ವಿವಾಹಿತ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಹೊಸ ನಿಯಮಗಳು ಹಿಂದಿನ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮದಡಿ ಪ್ರವರ್ಗ-II(a), II(b), III(a), ಮತ್ತು III(b) ಗೆ ಸೇರಿದ ಅಭ್ಯರ್ಥಿಗಳು ನಮೂನೆ-ಎಫ್ (Form-F) ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ತಿಳಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಹೊಸ ಆದೇಶದ (ಆದೇಶ ಸಂಖ್ಯೆ: ಹಿಂವಕ 232 ಬಿಸಿಎ 2026, ದಿನಾಂಕ: 01/09/2026) ಅನ್ವಯ, ಈ ನಿಯಮದಲ್ಲಿ ಸ್ಪಷ್ಟ ಬದಲಾವಣೆ ತರಲಾಗಿದೆ. ಇದು School Education Department Karnataka ದ ಉದ್ಯೋಗ ಮೀಸಲಾತಿಗೆ ಅನ್ವಯವಾಗಲಿದೆ.
ಹೊಸ ನಿಯಮದ ಪ್ರಕಾರ ವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳು ತಮ್ಮ ಆದಾಯ ಪ್ರಮಾಣಪತ್ರವನ್ನು ಪಡೆಯುವಾಗ ಈ ಕೆಳಗಿನ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
- ತಂದೆ-ತಾಯಿಯ ಆದಾಯ ಪರಿಗಣಿಸುವಂತಿಲ್ಲ: ವಿವಾಹಿತ ಮಹಿಳಾ ಅಥವಾ ಪುರುಷ ಅರ್ಜಿದಾರರ ಆದಾಯಕ್ಕೆ ಅವರ ತಂದೆ-ತಾಯಿಗಳ (Parents) ಆದಾಯವನ್ನು ಯಾವುದೇ ಕಾರಣಕ್ಕೂ ಸೇರಿಸಬಾರದು.
- ಸ್ವಾಯತ್ತ (ಪ್ರತ್ಯೇಕ) ಕುಟುಂಬದ ನಿಯಮ: ಪತಿ ಮತ್ತು ಪತ್ನಿಯರು ಒಂದು ಸ್ವಾಯತ್ತ (Independent) ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಅರ್ಜಿದಾರರ ಆದಾಯಕ್ಕೆ ಕೇವಲ ಅವರ ಪತಿ/ಪತ್ನಿಯ (Spouse) ಆದಾಯವನ್ನು ಮಾತ್ರ ಸೇರಿಸಬೇಕು.
- ಅವಿಭಕ್ತ (ಜಾಯಿಂಟ್) ಕುಟುಂಬದ ನಿಯಮ: ಒಂದು ವೇಳೆ ಅರ್ಜಿದಾರರು ಅವಿಭಕ್ತ (Joint) ಕುಟುಂಬದ ಅಂಗವಾಗಿ ವಾಸಿಸುತ್ತಿದ್ದರೆ, ಆಗ ಅರ್ಜಿದಾರರ ವೈಯಕ್ತಿಕ ಆದಾಯ ಮತ್ತು ಇಡೀ ಅವಿಭಕ್ತ ಕುಟುಂಬದ ಒಟ್ಟು ಆದಾಯವನ್ನು ಸೇರಿಸಿ ಕುಟುಂಬದ ಒಟ್ಟು ಉತ್ಪನ್ನವನ್ನು ಲೆಕ್ಕ ಹಾಕಬೇಕು.
ಈ ಮೇಲಿನ ನಿಯಮಗಳ ಅನ್ವಯ ಪ್ರವರ್ಗ-II(a), II(b), III(a), ಮತ್ತು III(b) ವರ್ಗಗಳಿಗೆ ಸೇರಿದ ವಿವಾಹಿತ ಅಭ್ಯರ್ಥಿಗಳು ಹೊಸದಾಗಿ ನಮೂನೆ-ಎಫ್ (Form-F) ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದು ತಮ್ಮ ಆನ್‌ಲೈನ್ ಅರ್ಜಿಯೊಂದಿಗೆ ಕಡ್ಡಾಯವಾಗಿ ಲಗತ್ತಿಸಬೇಕು. ಈ Primary School Teacher Vacancy ನೇಮಕಾತಿಯಲ್ಲಿ ಮೀಸಲಾತಿ ಪಡೆಯಲು ಇದು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ.
ತಪ್ಪು ಅರ್ಜಿ ಸಲ್ಲಿಸಿದವರಿಗೆ ಆನ್‌ಲೈನ್ ಎಡಿಟ್ (Online Edit) ಅವಕಾಶ ಈಗಾಗಲೇ ಮೂಲ ಅಧಿಸೂಚನೆಯಂತೆ ಸೆಪ್ಟೆಂಬರ್ 07, 2026 ರ ಗಡುವಿನೊಳಗೆ ಆನ್‌ಲೈನ್ ಅರ್ಜಿ (Submit) ಸಲ್ಲಿಸಿರುವ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಾಧಿಕಾರವು ಶುಭಸುದ್ದಿ ನೀಡಿದೆ.
- ಒಂದು ವೇಳೆ ಪ್ರವರ್ಗ-II(a), II(b), III(a), ಮತ್ತು III(b) ವರ್ಗದ ವಿವಾಹಿತ ಅಭ್ಯರ್ಥಿಗಳು ಮೇಲಿನ ಹೊಸ ಸರ್ಕಾರಿ ಆದೇಶದ ನಿಯಮಗಳ ಪ್ರಕಾರ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಲಗತ್ತಿಸದೇ ಇದ್ದರೆ, ಅಂತಹ ಅಭ್ಯರ್ಥಿಗಳು ಗಾಬರಿಯಾಗುವ ಅಗತ್ಯವಿಲ್ಲ.
- ಅಂತಹ ಅಭ್ಯರ್ಥಿಗಳಿಗೆ ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಲು ಆನ್‌ಲೈನ್ ಎಡಿಟ್ (Online Edit) ಆಯ್ಕೆಯನ್ನು ಒದಗಿಸಲಾಗಿದೆ.
- ಅಭ್ಯರ್ಥಿಗಳು ಎಡಿಟ್ ಆಪ್ಷನ್ ಬಳಸಿಕೊಂಡು, ಹೊಸ ನಿಯಮದಂತೆ ಪಡೆದ ಸರಿಯಾದ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಹೊಸದಾಗಿ ಅಪ್‌ಲೋಡ್ (Upload) ಮಾಡಬಹುದು. ಇದು Apply Online Karnataka Teachers ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಮಾಡಿಕೊಟ್ಟ ದೊಡ್ಡ ಅನುಕೂಲವಾಗಿದೆ.
ಅರ್ಜಿ ಸಲ್ಲಿಕೆ ದಿನಾಂಕದ ಭಾರಿ ವಿಸ್ತರಣೆ ಹಳೆಯ ಅಧಿಸೂಚನೆಯ ಉಪಕಂಡಿಕೆ-V ರಲ್ಲಿ ತಿಳಿಸಿದಂತೆ, ಶುಲ್ಕ ಪಾವತಿಯೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು 18/08/2026 ರಿಂದ 07/09/2026 ರವರೆಗೆ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಆದರೆ ಹೊಸ ನಿಯಮಗಳ ಸೇರ್ಪಡೆಯ ಕಾರಣದಿಂದಾಗಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಲಾಗಿದೆ.
| ವಿವರಗಳು (Details) | ಹಳೆಯ ದಿನಾಂಕ (Old Date) | ಪರಿಷ್ಕೃತ ಹೊಸ ದಿನಾಂಕ (New Date) |
| ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Karnataka Teacher Recruitment 2026 Date Extended | 07/09/2026 | 25/09/2026 |
| ಪಾವತಿಸಿದ ಶುಲ್ಕವನ್ನು ಇತ್ಯರ್ಥಪಡಿಸಿಕೊಳ್ಳಲು ಕೊನೆಯ ದಿನಾಂಕ | 07/09/2026 | 28/09/2026 |
ಅಭ್ಯರ್ಥಿಗಳು ಗಮನಿಸಬೇಕಾದ ಅತಿ ಮುಖ್ಯ ಅಂಶವೆಂದರೆ, ನೇಮಕಾತಿಗೆ ಸಂಬಂಧಪಟ್ಟ ಎಲ್ಲಾ ಪ್ರಮಾಣ ಪತ್ರಗಳನ್ನು (Certificates) ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ (ಅಂದರೆ 25/09/2026 ರೊಳಗೆ) ಪಡೆದಿರಬೇಕು ಹಾಗೂ ಅವುಗಳನ್ನು ಆನ್‌ಲೈನ್ ಅರ್ಜಿಯೊಂದಿಗೆ ಕಡ್ಡಾಯವಾಗಿ ಅಪ್‌ಲೋಡ್ (Upload) ಮಾಡಿರಬೇಕು.
ಅಧಿಕೃತ ವೆಬ್‌ಸೈಟ್ ವಿಳಾಸದಲ್ಲಿ ಬದಲಾವಣೆ ಹಿಂದಿನ ನೇಮಕಾತಿ ಅಧಿಸೂಚನೆಯ ಪುಟ ಸಂಖ್ಯೆ 16 (ಉಪಕಂಡಿಕೆ-iii) ಮತ್ತು 19ರಲ್ಲಿ ಇಲಾಖಾ ವೆಬ್‌ಸೈಟ್ ವಿಳಾಸವನ್ನು ತಪ್ಪಾಗಿ [https://schooleducation.kar.nic.in]ಎಂದು ಮುದ್ರಿಸಲಾಗಿತ್ತು. ಇದನ್ನು ಸರಿಪಡಿಸಲಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸವನ್ನು [https://schooleducation.karnataka.gov.in] ಎಂದು ಓದಿಕೊಳ್ಳತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಗಳು ಇದೇ ಹೊಸ ವೆಬ್‌ಸೈಟ್ ಲಿಂಕ್ ಬಳಸಿ ಅರ್ಜಿ ಸಲ್ಲಿಸಬೇಕು ಹಾಗೂ ಎಡಿಟ್ ಮಾಡಬೇಕು.
ಶಿಕ್ಷಕ ವೃತ್ತಿ ಪಡೆಯಲು ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಜಾತಿ/ಆದಾಯ ಪ್ರಮಾಣಪತ್ರದ ಗೊಂದಲ ನಿವಾರಣೆಯಾಗಿದ್ದು, ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯ ಸಿಕ್ಕಿದೆ. ಆನ್‌ಲೈನ್ ಪೋರ್ಟಲ್‌ನಲ್ಲಿ ಎಡಿಟ್ ಅವಕಾಶವನ್ನು ಬಳಸಿಕೊಂಡು, ಸರಿಯಾದ ದಾಖಲೆಗಳನ್ನು ನಿಗದಿತ ಗಡುವಿನೊಳಗೆ ಅಪ್‌ಲೋಡ್ ಮಾಡಲು ಮರೆಯದಿರಿ.
ಶೈಕ್ಷಣಿಕ ವಿದ್ಯಾರ್ಹತೆ ಏನು ಬೇಕು? (Educational Qualification for Karnataka Teacher Recruitment 2026)
ನೀವು Teacher eligibility test Karnataka (TET) ಪಾಸ್ ಆಗಿದ್ದೀರಾ? ಹಾಗಾದ್ರೆ ಹುದ್ದೆವಾರು ಅರ್ಹತೆಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ:
- ಪದವಿ (Degree): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ (B.A/B.Sc) ಕನಿಷ್ಠ ಶೇ. 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (SC/ST/Cat-1/PwD ಅಭ್ಯರ್ಥಿಗಳಿಗೆ 45% ಅಂಕಗಳು ಸಾಕು).
- ಶಿಕ್ಷಕರ ತರಬೇತಿ (Teacher Training): ಬಿ.ಎಡ್ (B.Ed) ಅಥವಾ ಡಿ.ಎಡ್ (D.Ed / D.El.Ed) ಅಥವಾ ವಿಶೇಷ ಶಿಕ್ಷಣದಲ್ಲಿ ಬಿ.ಎಡ್ / ಡಿ.ಎಡ್ ಪೂರೈಸಿರಬೇಕು.
- TET ಕಡ್ಡಾಯ: ಶಿಕ್ಷಕರ ಅರ್ಹತಾ ಪರೀಕ್ಷೆಯ ಪತ್ರಿಕೆ-2 (TET / CTET Paper-2) ರಲ್ಲಿ ಕಡ್ಡಾಯವಾಗಿ ಅರ್ಹತೆ ಪಡೆದಿರಬೇಕು. (ಪ್ರಾಥಮಿಕ ಶಾಲಾ ಶಿಕ್ಷಕರಿಗೆ Paper-1 ಪಾಸ್ ಆಗಿರಬೇಕು).
- ಗಣಕ ವಿಜ್ಞಾನ (CST): B.Sc (Computer Science) ಅಥವಾ BCA ಅಥವಾ B.E / B.Tech (CS/IT/E&C) ನಲ್ಲಿ ಕನಿಷ್ಠ 50% ಅಂಕ ಪಡೆದಿರಬೇಕು. (ನೇಮಕಗೊಂಡ 5 ವರ್ಷಗಳೊಳಗೆ B.Ed ಹಾಗೂ TET ಪೂರ್ಣಗೊಳಿಸಬೇಕು ಎಂಬ ವಿಶೇಷ ನಿಯಮವಿದೆ).
ವಯೋಮಿತಿ ಮತ್ತು ಸಡಿಲಿಕೆ (Age Limit)
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
- ಸಾಮಾನ್ಯ ವರ್ಗ (General Merit): ಗರಿಷ್ಠ 40 ವರ್ಷಗಳು.
- ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷಗಳು.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC / ST) ಹಾಗೂ ಪ್ರವರ್ಗ-1 & PwD: ಗರಿಷ್ಠ 45 ವರ್ಷಗಳು.
ಆಯ್ಕೆ ಪ್ರಕ್ರಿಯೆ ಮತ್ತು ವೈಟೇಜ್ ಲೆಕ್ಕಾಚಾರ ಹೇಗೆ? (Selection Process & Weightage of Karnataka Teacher Recruitment 2026)
ಈ ಬಾರಿಯ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮೆರಿಟ್ ಆಧಾರದ ಮೇಲೆ, ಅಂದರೆ ಸ್ಪರ್ಧಾತ್ಮಕ ಪರೀಕ್ಷೆ (CET), TET ಹಾಗೂ ಶೈಕ್ಷಣಿಕ ಕೋರ್ಸ್‌ಗಳ ಅಂಕಗಳನ್ನು ಸಂಯೋಜಿಸಿ (Derived Percentage / Weightage) ಲೆಕ್ಕಹಾಕಿ ಫೈನಲ್ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ.
- ಪಿಎಸ್ಟಿ (PST 1-5): ಸಿಇಟಿ-70%, ಟಿಇಟಿ-20%, ಪಿಯುಸಿ-8% ಹಾಗೂ ಡಿ.ಎಡ್-2% ರಷ್ಟು ವೈಟೇಜ್.
- ಜಿಪಿಟಿ (GPSTR 6-8): ಸಿಇಟಿ-70%, ಟಿಇಟಿ-20%, ಪದವಿ-8% ಹಾಗೂ ಬಿ.ಎಡ್-2% ವೈಟೇಜ್.
- ಹೆಚ್ಎಸ್ಟಿಆರ್ (HSTR) & PET: ಸಿಇಟಿ-85%, ಪದವಿ-13% ಹಾಗೂ ಬಿ.ಎಡ್-2% ವೈಟೇಜ್.
- ಕಂಪ್ಯೂಟರ್ ಸೈನ್ಸ್ (CST): ಸಿಇಟಿ-85% ಹಾಗೂ ಪದವಿ-15% ವೈಟೇಜ್.
(ವಿಶೇಷ ಸೂಚನೆ: ಪ್ರತಿಯೊಂದು ಪತ್ರಿಕೆಯಲ್ಲೂ ಕನಿಷ್ಠ 35% ಅಂಕ ಗಳಿಸುವುದು ಕಡ್ಡಾಯ).
ಹೊಸ ನೇಮಕಾತಿ ನಿಯಮಗಳಲ್ಲಿನ 4 ಪ್ರಮುಖ ಬದಲಾವಣೆಗಳು
- ವಿವರಣಾತ್ಮಕ ಪತ್ರಿಕೆ ರದ್ದು (No Descriptive Paper): ಈ ಬಾರಿಯ ಶಿಕ್ಷಕರ ನೇಮಕಾತಿಯಲ್ಲಿ ಹಳೆಯ ದೀರ್ಘ ಬರವಣಿಗೆಯ ವಿವರಣಾತ್ಮಕ ಪತ್ರಿಕೆಯನ್ನು ಕೈಬಿಡಲಾಗಿದೆ. ಪರೀಕ್ಷೆಯು ಕೇವಲ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳನ್ನು (MCQ / OMR ಮಾದರಿ) ಒಳಗೊಂಡಿರಲಿದೆ.
- ಒಂದೇ ಅರ್ಜಿಯಲ್ಲಿ ಹಲವು ಹುದ್ದೆಗಳಿಗೆ ಅವಕಾಶ: ಅಭ್ಯರ್ಥಿಗಳು ಬೇರೆ ಬೇರೆ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಹಾಕುವಂತಿಲ್ಲ. ಅರ್ಹತೆಗೆ ತಕ್ಕಂತೆ ಒಂದೇ ಆನ್‌ಲೈನ್ ಅರ್ಜಿಯಲ್ಲಿ ಆದ್ಯತೆಗಳನ್ನು (Preferences) ನೀಡಬಹುದು.
- ಸೇವಾನಿರತ ಶಿಕ್ಷಕರಿಗೆ ನಿರ್ಬಂಧ: ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಾವು ಕೆಲಸ ಮಾಡುತ್ತಿರುವ ಅದೇ ವೃಂದದ ಹುದ್ದೆಗೆ ಮರು ಅರ್ಜಿ ಸಲ್ಲಿಸುವಂತಿಲ್ಲ.
- ಋಣಾತ್ಮಕ ಮೌಲ್ಯಮಾಪನ (Negative Marking): OMR ಶೀಟ್‌ನಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. ಒಂದು ವೇಳೆ ನಿಮಗೆ ಉತ್ತರ ಗೊತ್ತಿಲ್ಲದಿದ್ದರೆ ಕಡ್ಡಾಯವಾಗಿ 5ನೇ ವೃತ್ತವನ್ನು ಶೇಡ್ ಮಾಡಬೇಕು. ಯಾವುದನ್ನೂ ಶೇಡ್ ಮಾಡದಿದ್ದರೆ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತವಾಗುತ್ತದೆ.
ಅರ್ಜಿ ಶುಲ್ಕ ಎಷ್ಟು? (Application Fee)
- ಸಾಮಾನ್ಯ ವರ್ಗ ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ:
- ಒಂದು ವೃಂದದ ಒಂದು ಹುದ್ದೆಗೆ: ₹ 750/-
- ಒಂದೇ ವೃಂದದ ಎರಡು ಹುದ್ದೆಗಳಿಗೆ: ₹ 1125/- (ಪ್ರತಿ ಹೆಚ್ಚುವರಿ ಹುದ್ದೆಗೆ ₹ 375/- ಹೆಚ್ಚುವರಿ).
- SC / ST / ಪ್ರವರ್ಗ-1 / ಮಾಜಿ ಸೈನಿಕ / ವಿಕಲಚೇತನ / ತೃತೀಯ ಲಿಂಗಿ ಅಭ್ಯರ್ಥಿಗಳಿಗೆ:
- ಒಂದು ವೃಂದದ ಒಂದು ಹುದ್ದೆಗೆ: ₹ 500/-
- ಒಂದೇ ವೃಂದದ ಎರಡು ಹುದ್ದೆಗಳಿಗೆ: ₹ 750/- (ಪ್ರತಿ ಹೆಚ್ಚುವರಿ ಹುದ್ದೆಗೆ ₹ 250/- ಹೆಚ್ಚುವರಿ).
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply Online Karnataka Teacher Recruitment 2026)
ನೀವು Karnataka teachers recruitment 2026 ಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ, ಕೆಳಗಿನ ಹಂತಗಳನ್ನು ಅನುಸರಿಸಿ:
- ಮೊದಲು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ
schooleducation.karnataka.gov.inಗೆ ಭೇಟಿ ನೀಡಿ. - ಮುಖಪುಟದಲ್ಲಿರುವ “ಟೀಚರ್ ರಿಕ್ರೂಟ್ಮೆಂಟ್ 2026 ಆನ್ಲೈನ್ ಅಪ್ಲಿಕೇಶನ್” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ ನೀಡಿ ಯೂಸರ್ ನೇಮ್ (User Name) ಮತ್ತು ಪಾಸ್ವರ್ಡ್ (Password) ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಿ.
- ಆನ್‌ಲೈನ್ ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ದಾಖಲೆಗಳು, TET ಅಂಕಗಳು ಹಾಗೂ ಮೀಸಲಾತಿ ಪ್ರಮಾಣಪತ್ರಗಳ ಆರ್.ಡಿ (RD) ಸಂಖ್ಯೆಯನ್ನು ತಪ್ಪಿಲ್ಲದೆ ನಮೂದಿಸಿ.
- ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
- ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು ಸಬ್ಮಿಟ್ (Submit) ಮಾಡಿ ಹಾಗೂ ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು ( Karnataka Teacher Recruitment 2026 Date Extended Important Dates ):
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 18 ಆಗಸ್ಟ್ 2026
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಸೆಪ್ಟೆಂಬರ್ 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 28 ಸೆಪ್ಟೆಂಬರ್ 2026
Karnataka Teacher Recruitment 2026 Important Links:
- Apply Online: Click here
- District Wise Notification: Click Here
- Gaztted PSTR, GPSTR, HSTR & PT Posts: Click Here
- Official Notification PDF: Click here
- Official Website: Click here
- GPSTR Recruitment 2026 Notification PDF Download
- GPSTR Syllabus 2026 – Click to Check
- Gaztted Notification for Computer Science Teacher Posts: Click Here
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ದೀರ್ಘಕಾಲದಿಂದ ನೇಮಕಾತಿಗಾಗಿ ಕಾಯುತ್ತಿದ್ದ ನಿರುದ್ಯೋಗಿ ಯುವಜನತೆಗೆ 15,000 ಹುದ್ದೆಗಳ ಅಧಿಸೂಚನೆ ದೊಡ್ಡ ರಿಲೀಫ್ ನೀಡಿದೆ. ಪರೀಕ್ಷಾ ಮಾದರಿಯಲ್ಲಿನ ಬದಲಾವಣೆಗಳು ಸ್ಪರ್ಧೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ನಿಖರವಾಗಿಸುವ ನಿರೀಕ್ಷೆ ಇದೆ. ಕೊನೆ ಕ್ಷಣದ ನೆಟ್‌ವರ್ಕ್ ಸಮಸ್ಯೆಗಳನ್ನು ತಪ್ಪಿಸಲು ಆದಷ್ಟು ಬೇಗ ಅರ್ಜಿ ಸಲ್ಲಿಸಿ, ಇಂದೇ ಪರೀಕ್ಷಾ ಸಿದ್ಧತೆಯನ್ನು ಆರಂಭಿಸಿ. ಶುಭವಾಗಲಿ!
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
| Job Description | Last Date | Apply Now |
|---|---|---|
| IBPS RRB Recruitment 2026 – 9995 Posts | 21 Sep 2026 | Apply Online |
| UPSC Combined Geo-Scientist Examination 2027 – 127 Posts | 22 Sep 2026 | Apply Online |
| Bank of India Recruitment 2026 – 146 Posts | 25 Sep 2026 | Apply Online |
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button