Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? TET/CET ಪಾಸ್ ಆದವರಿಗೆ ಬಂಪರ್! 15000 ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟ!

  • Picture of Gundijalu Shwetha By Gundijalu Shwetha
  • Published On: August 13, 2026
Karnataka Teacher Recruitment 2026: ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? TET/CET ಪಾಸ್ ಆದವರಿಗೆ ಬಂಪರ್! 15000 ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟ!

Karnataka Teacher Recruitment 2026: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ 15,000 ಪ್ರಾಥಮಿಕ, ಪ್ರೌಢ, ಗಣಕ ವಿಜ್ಞಾನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ (GPSTR/PST/HSTR) ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಬಿ.ಎಡ್/ಡಿ.ಎಡ್ ಮುಗಿಸಿದ ಅಭ್ಯರ್ಥಿಗಳು ಸೆಪ್ಟೆಂಬರ್ 07 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪರೀಕ್ಷಾ ಮಾದರಿ, ಸಿಲೆಬಸ್, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

📅 Last Date to Apply Online 07.09.2026

ಬಿ.ಎಡ್ (B.Ed), ಡಿ.ಎಡ್ (D.Ed) ಪಾಸಾದವರಿಗೆ ಬಿಗ್ ಬ್ರೇಕಿಂಗ್: ರಾಜ್ಯದಲ್ಲಿ 15,000 ‘ಶಾಲಾ ಶಿಕ್ಷಕರ’ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!

ನಮಸ್ಕಾರ ನಾಡಿನ ಶೈಕ್ಷಣಿಕ ವಲಯದ ಉದ್ಯೋಗಾಕಾಂಕ್ಷಿಗಳಿಗೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಬೇಕು, ಮಕ್ಕಳಿಗೆ ವಿದ್ಯಾದಾನ ಮಾಡಬೇಕು ಎಂಬ ಉದಾತ್ತ ಕನಸು ಕಾಣುತ್ತಿರುವ ಲಕ್ಷಾಂತರ ಬಿ.ಎಡ್ (B.Ed) ಹಾಗೂ ಡಿ.ಎಡ್ (D.Ed) ಪದವೀಧರರಿಗೆ ಕರ್ನಾಟಕ ಸರ್ಕಾರವು ಅತಿ ದೊಡ್ಡ ಸಿಹಿಸುದ್ದಿ ನೀಡಿದೆ. ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಬಹುನಿರೀಕ್ಷಿತ Karnataka Teacher Recruitment 2026 ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.

WhatsApp Channel
Join Now
Telegram Channel
Join Now

ಒಟ್ಟು 15,000 ಪ್ರಾಥಮಿಕ (PST), ಪದವೀಧರ ಪ್ರಾಥಮಿಕ (GPSTR), ಪ್ರೌಢಶಾಲಾ ಸಹ ಶಿಕ್ಷಕರು (HSTR), ಕಂಪ್ಯೂಟರ್ ಸೈನ್ಸ್ (CST) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ (PET) ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದ್ದು, ಆಗಸ್ಟ್ 18, 2026 ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ.

ನೀವು ಇಂಟರ್ನೆಟ್‌ನಲ್ಲಿ ಪ್ರಸ್ತುತ GPSTR Notification Karnataka ಅಥವಾ High school teacher recruitment 2026 ಕುರಿತು ಹುಡುಕುತ್ತಿದ್ದರೆ, ನಿಮಗಾಗಿ ಸಿಕ್ಕಿರುವ ಅತ್ಯಂತ ನಿಖರವಾದ ಹಾಗೂ ಸಂಪೂರ್ಣವಾದ ಮಾಹಿತಿ ಇದಾಗಿದೆ. ಶಿಕ್ಷಣ ಇಲಾಖೆಯು ಆಗಸ್ಟ್ 10 ರಂದು ನೂತನ ವಿಶೇಷ ನೇಮಕಾತಿ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ಈ ಬಾರಿ ಪರೀಕ್ಷಾ ಮಾದರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ. ಹಾಗಾದರೆ ಹೊಸ ನಿಯಮಗಳ ಪ್ರಕಾರ ಶೈಕ್ಷಣಿಕ ಅರ್ಹತೆ ಏನು? ವಯೋಮಿತಿ ಎಷ್ಟು? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎಂಬೆಲ್ಲಾ ಮಾಹಿತಿಯನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ, ಪೂರ್ತಿಯಾಗಿ ಓದಿ.

Karnataka Teacher Recruitment 2026: ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? TET/CET ಪಾಸ್ ಆದವರಿಗೆ ಬಂಪರ್! 15000 ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟ!

ಯಾವ್ಯಾವ ಹುದ್ದೆಗಳು ಖಾಲಿ ಇವೆ? (Karnataka Teacher Recruitment 2026 Vacancy Details)

ಈ ಬಾರಿಯ ಮೆಗಾ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ-ೇತರ ಕರ್ನಾಟಕ ವಿಭಾಗಗಳೆರಡರಲ್ಲೂ ಒಟ್ಟು 15,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ:

ಹುದ್ದೆಯ ಹೆಸರು (Post Name)ಕಲ್ಯಾಣ ಕರ್ನಾಟಕಕಲ್ಯಾಣ-ೇತರ ಕರ್ನಾಟಕಒಟ್ಟು ಹುದ್ದೆಗಳು
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (GPSTR 6-8)3,2285,2728,500
ಪ್ರೌಢಶಾಲಾ ಸಹ ಶಿಕ್ಷಕರು (Assistant Master – HSTR)2,2142,2864,500
ಪ್ರಾಥಮಿಕ ಶಾಲಾ ಶಿಕ್ಷಕರು (PST 1-5)800100900
ದೈಹಿಕ ಶಿಕ್ಷಣ ಶಿಕ್ಷಕರು (PET)425175600
ಗಣಕ ವಿಜ್ಞಾನ ಶಿಕ್ಷಕರು (Computer Science – CST)300200500
ಒಟ್ಟಾರೆ ಒಟ್ಟು ಹುದ್ದೆಗಳು6,9678,03315,000

(ಗಮನಿಸಿ: ವಿಜಯಪುರ-352, ಬೆಳಗಾವಿ-831, ಮೈಸೂರು-748, ಕಲಬುರಗಿ-2051 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ).

ಶೈಕ್ಷಣಿಕ ವಿದ್ಯಾರ್ಹತೆ ಏನು ಬೇಕು? (Educational Qualification for Karnataka Teacher Recruitment 2026)

ನೀವು Teacher eligibility test Karnataka (TET) ಪಾಸ್ ಆಗಿದ್ದೀರಾ? ಹಾಗಾದ್ರೆ ಹುದ್ದೆವಾರು ಅರ್ಹತೆಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ:

  • ಪದವಿ (Degree): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯಲ್ಲಿ (B.A/B.Sc) ಕನಿಷ್ಠ ಶೇ. 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು (SC/ST/Cat-1/PwD ಅಭ್ಯರ್ಥಿಗಳಿಗೆ 45% ಅಂಕಗಳು ಸಾಕು).
  • ಶಿಕ್ಷಕರ ತರಬೇತಿ (Teacher Training): ಬಿ.ಎಡ್ (B.Ed) ಅಥವಾ ಡಿ.ಎಡ್ (D.Ed / D.El.Ed) ಅಥವಾ ವಿಶೇಷ ಶಿಕ್ಷಣದಲ್ಲಿ ಬಿ.ಎಡ್ / ಡಿ.ಎಡ್ ಪೂರೈಸಿರಬೇಕು.
  • TET ಕಡ್ಡಾಯ: ಶಿಕ್ಷಕರ ಅರ್ಹತಾ ಪರೀಕ್ಷೆಯ ಪತ್ರಿಕೆ-2 (TET / CTET Paper-2) ರಲ್ಲಿ ಕಡ್ಡಾಯವಾಗಿ ಅರ್ಹತೆ ಪಡೆದಿರಬೇಕು. (ಪ್ರಾಥಮಿಕ ಶಾಲಾ ಶಿಕ್ಷಕರಿಗೆ Paper-1 ಪಾಸ್ ಆಗಿರಬೇಕು).
  • ಗಣಕ ವಿಜ್ಞಾನ (CST): B.Sc (Computer Science) ಅಥವಾ BCA ಅಥವಾ B.E / B.Tech (CS/IT/E&C) ನಲ್ಲಿ ಕನಿಷ್ಠ 50% ಅಂಕ ಪಡೆದಿರಬೇಕು. (ನೇಮಕಗೊಂಡ 5 ವರ್ಷಗಳೊಳಗೆ B.Ed ಹಾಗೂ TET ಪೂರ್ಣಗೊಳಿಸಬೇಕು ಎಂಬ ವಿಶೇಷ ನಿಯಮವಿದೆ).

ವಯೋಮಿತಿ ಮತ್ತು ಸಡಿಲಿಕೆ (Age Limit)

ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಸಾಮಾನ್ಯ ವರ್ಗ (General Merit): ಗರಿಷ್ಠ 40 ವರ್ಷಗಳು.
  • ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷಗಳು.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC / ST) ಹಾಗೂ ಪ್ರವರ್ಗ-1 & PwD: ಗರಿಷ್ಠ 45 ವರ್ಷಗಳು.

ಆಯ್ಕೆ ಪ್ರಕ್ರಿಯೆ ಮತ್ತು ವೈಟೇಜ್ ಲೆಕ್ಕಾಚಾರ ಹೇಗೆ? (Selection Process & Weightage of Karnataka Teacher Recruitment 2026)

ಈ ಬಾರಿಯ ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮೆರಿಟ್ ಆಧಾರದ ಮೇಲೆ, ಅಂದರೆ ಸ್ಪರ್ಧಾತ್ಮಕ ಪರೀಕ್ಷೆ (CET), TET ಹಾಗೂ ಶೈಕ್ಷಣಿಕ ಕೋರ್ಸ್‌ಗಳ ಅಂಕಗಳನ್ನು ಸಂಯೋಜಿಸಿ (Derived Percentage / Weightage) ಲೆಕ್ಕಹಾಕಿ ಫೈನಲ್ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ.

  • ಪಿಎಸ್ಟಿ (PST 1-5): ಸಿಇಟಿ-70%, ಟಿಇಟಿ-20%, ಪಿಯುಸಿ-8% ಹಾಗೂ ಡಿ.ಎಡ್-2% ರಷ್ಟು ವೈಟೇಜ್.
  • ಜಿಪಿಟಿ (GPSTR 6-8): ಸಿಇಟಿ-70%, ಟಿಇಟಿ-20%, ಪದವಿ-8% ಹಾಗೂ ಬಿ.ಎಡ್-2% ವೈಟೇಜ್.
  • ಹೆಚ್ಎಸ್ಟಿಆರ್ (HSTR) & PET: ಸಿಇಟಿ-85%, ಪದವಿ-13% ಹಾಗೂ ಬಿ.ಎಡ್-2% ವೈಟೇಜ್.
  • ಕಂಪ್ಯೂಟರ್ ಸೈನ್ಸ್ (CST): ಸಿಇಟಿ-85% ಹಾಗೂ ಪದವಿ-15% ವೈಟೇಜ್.

(ವಿಶೇಷ ಸೂಚನೆ: ಪ್ರತಿಯೊಂದು ಪತ್ರಿಕೆಯಲ್ಲೂ ಕನಿಷ್ಠ 35% ಅಂಕ ಗಳಿಸುವುದು ಕಡ್ಡಾಯ).

ಹೊಸ ನೇಮಕಾತಿ ನಿಯಮಗಳಲ್ಲಿನ 4 ಪ್ರಮುಖ ಬದಲಾವಣೆಗಳು

  1. ವಿವರಣಾತ್ಮಕ ಪತ್ರಿಕೆ ರದ್ದು (No Descriptive Paper): ಈ ಬಾರಿಯ ಶಿಕ್ಷಕರ ನೇಮಕಾತಿಯಲ್ಲಿ ಹಳೆಯ ದೀರ್ಘ ಬರವಣಿಗೆಯ ವಿವರಣಾತ್ಮಕ ಪತ್ರಿಕೆಯನ್ನು ಕೈಬಿಡಲಾಗಿದೆ. ಪರೀಕ್ಷೆಯು ಕೇವಲ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳನ್ನು (MCQ / OMR ಮಾದರಿ) ಒಳಗೊಂಡಿರಲಿದೆ.
  2. ಒಂದೇ ಅರ್ಜಿಯಲ್ಲಿ ಹಲವು ಹುದ್ದೆಗಳಿಗೆ ಅವಕಾಶ: ಅಭ್ಯರ್ಥಿಗಳು ಬೇರೆ ಬೇರೆ ಹುದ್ದೆಗಳಿಗೆ ಪ್ರತ್ಯೇಕ ಅರ್ಜಿ ಹಾಕುವಂತಿಲ್ಲ. ಅರ್ಹತೆಗೆ ತಕ್ಕಂತೆ ಒಂದೇ ಆನ್‌ಲೈನ್ ಅರ್ಜಿಯಲ್ಲಿ ಆದ್ಯತೆಗಳನ್ನು (Preferences) ನೀಡಬಹುದು.
  3. ಸೇವಾನಿರತ ಶಿಕ್ಷಕರಿಗೆ ನಿರ್ಬಂಧ: ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಾವು ಕೆಲಸ ಮಾಡುತ್ತಿರುವ ಅದೇ ವೃಂದದ ಹುದ್ದೆಗೆ ಮರು ಅರ್ಜಿ ಸಲ್ಲಿಸುವಂತಿಲ್ಲ.
  4. ಋಣಾತ್ಮಕ ಮೌಲ್ಯಮಾಪನ (Negative Marking): OMR ಶೀಟ್‌ನಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. ಒಂದು ವೇಳೆ ನಿಮಗೆ ಉತ್ತರ ಗೊತ್ತಿಲ್ಲದಿದ್ದರೆ ಕಡ್ಡಾಯವಾಗಿ 5ನೇ ವೃತ್ತವನ್ನು ಶೇಡ್ ಮಾಡಬೇಕು. ಯಾವುದನ್ನೂ ಶೇಡ್ ಮಾಡದಿದ್ದರೆ ಪ್ರತಿ ಪ್ರಶ್ನೆಗೆ 0.25 ಅಂಕ ಕಡಿತವಾಗುತ್ತದೆ.

ಅರ್ಜಿ ಶುಲ್ಕ ಎಷ್ಟು? (Application Fee)

  • ಸಾಮಾನ್ಯ ವರ್ಗ ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ:
    • ಒಂದು ವೃಂದದ ಒಂದು ಹುದ್ದೆಗೆ: ₹ 750/-
    • ಒಂದೇ ವೃಂದದ ಎರಡು ಹುದ್ದೆಗಳಿಗೆ: ₹ 1125/- (ಪ್ರತಿ ಹೆಚ್ಚುವರಿ ಹುದ್ದೆಗೆ ₹ 375/- ಹೆಚ್ಚುವರಿ).
  • SC / ST / ಪ್ರವರ್ಗ-1 / ಮಾಜಿ ಸೈನಿಕ / ವಿಕಲಚೇತನ / ತೃತೀಯ ಲಿಂಗಿ ಅಭ್ಯರ್ಥಿಗಳಿಗೆ:
    • ಒಂದು ವೃಂದದ ಒಂದು ಹುದ್ದೆಗೆ: ₹ 500/-
    • ಒಂದೇ ವೃಂದದ ಎರಡು ಹುದ್ದೆಗಳಿಗೆ: ₹ 750/- (ಪ್ರತಿ ಹೆಚ್ಚುವರಿ ಹುದ್ದೆಗೆ ₹ 250/- ಹೆಚ್ಚುವರಿ).

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply Online Karnataka Teacher Recruitment 2026)

ನೀವು Karnataka teachers recruitment 2026 ಗಾಗಿ ಅರ್ಜಿ ಸಲ್ಲಿಸಲು ಬಯಸಿದರೆ, ಕೆಳಗಿನ ಹಂತಗಳನ್ನು ಅನುಸರಿಸಿ:

🔗 Official Notification of Karnataka Teacher Recruitment 2026 👉 Click Here to Apply for Karnataka Teacher Recruitment 2026
  1. ಮೊದಲು ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣ schooleducation.karnataka.gov.in ಗೆ ಭೇಟಿ ನೀಡಿ.
  2. ಮುಖಪುಟದಲ್ಲಿರುವ “ಟೀಚರ್ ರಿಕ್ರೂಟ್ಮೆಂಟ್ 2026 ಆನ್ಲೈನ್ ಅಪ್ಲಿಕೇಶನ್” ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ ನೀಡಿ ಯೂಸರ್ ನೇಮ್ (User Name) ಮತ್ತು ಪಾಸ್ವರ್ಡ್ (Password) ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಿ.
  4. ಆನ್‌ಲೈನ್ ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ದಾಖಲೆಗಳು, TET ಅಂಕಗಳು ಹಾಗೂ ಮೀಸಲಾತಿ ಪ್ರಮಾಣಪತ್ರಗಳ ಆರ್.ಡಿ (RD) ಸಂಖ್ಯೆಯನ್ನು ತಪ್ಪಿಲ್ಲದೆ ನಮೂದಿಸಿ.
  5. ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
  6. ಆನ್‌ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಿ, ಅರ್ಜಿಯನ್ನು ಸಬ್ಮಿಟ್ (Submit) ಮಾಡಿ ಹಾಗೂ ಮುಂದಿನ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು (Important Dates):

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 18 ಆಗಸ್ಟ್ 2026
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಸೆಪ್ಟೆಂಬರ್ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್ 2026

(ಸ್ಪರ್ಧಾತ್ಮಕ ಪರೀಕ್ಷೆಗಳು ಅಕ್ಟೋಬರ್ 05, 2026 ರಿಂದ ಅಕ್ಟೋಬರ್ 13, 2026 ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿವೆ).

Karnataka Teacher Recruitment 2026 Important Links:

  • Apply Online: Click here
  • District Wise Notification: Click Here
  • Gaztted PSTR, GPSTR, HSTR & PT Posts: Click Here
  • Official Notification PDF: Click here
  • Official Website: Click here 
  • GPSTR Recruitment 2026 Notification PDF Download
  • GPSTR Syllabus 2026 – Click to Check
  • Gaztted Notification for Computer Science Teacher Posts: Click Here

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ದೀರ್ಘಕಾಲದಿಂದ ನೇಮಕಾತಿಗಾಗಿ ಕಾಯುತ್ತಿದ್ದ ನಿರುದ್ಯೋಗಿ ಯುವಜನತೆಗೆ 15,000 ಹುದ್ದೆಗಳ ಅಧಿಸೂಚನೆ ದೊಡ್ಡ ರಿಲೀಫ್ ನೀಡಿದೆ. ಪರೀಕ್ಷಾ ಮಾದರಿಯಲ್ಲಿನ ಬದಲಾವಣೆಗಳು ಸ್ಪರ್ಧೆಯನ್ನು ಮತ್ತಷ್ಟು ಪಾರದರ್ಶಕ ಮತ್ತು ನಿಖರವಾಗಿಸುವ ನಿರೀಕ್ಷೆ ಇದೆ. ಕೊನೆ ಕ್ಷಣದ ನೆಟ್‌ವರ್ಕ್ ಸಮಸ್ಯೆಗಳನ್ನು ತಪ್ಪಿಸಲು ಆದಷ್ಟು ಬೇಗ ಅರ್ಜಿ ಸಲ್ಲಿಸಿ, ಇಂದೇ ಪರೀಕ್ಷಾ ಸಿದ್ಧತೆಯನ್ನು ಆರಂಭಿಸಿ. ಶುಭವಾಗಲಿ!

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

Job Description Last Date Apply Now
SBI Junior Associate Recruitment 2026 – 9124 Posts 31 Aug 2026 Apply Online
KEA KSET 2026 (Degree College Proffessor Job) 05 Sep 2026 Apply Online
KFD Forest Watcher Recruitment 2026 – 775 Posts 31 Aug 2026 Apply Online

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Karnataka Teacher Recruitment 2026: ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? TET/CET ಪಾಸ್ ಆದವರಿಗೆ ಬಂಪರ್! 15000 ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟ!

ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? TET/CET ಪಾಸ್ ಆದವರಿಗೆ ಬಂಪರ್! 15000 ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಪ್ರಕಟ!

KEA KSET 2026: ಡಿಗ್ರಿ ಕಾಲೇಜುಗಳಲ್ಲಿ ಪ್ರೊಫೆಸರ್ ಆಗಬೇಕೆ? KEA ಯಿಂದ KSET 2026 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ!

ಡಿಗ್ರಿ ಕಾಲೇಜುಗಳಲ್ಲಿ ಪ್ರೊಫೆಸರ್ ಆಗಬೇಕೆ? KEA ಯಿಂದ KSET 2026 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ!

Karnataka High Court SDA Recruitment 2026: ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್: ಕರ್ನಾಟಕ ಹೈಕೋರ್ಟ್‌ನಲ್ಲಿ 20 SDA ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಶುರು!

ಡಿಗ್ರಿ ಪಾಸಾದವರಿಗೆ ಗುಡ್ ನ್ಯೂಸ್: ಕರ್ನಾಟಕ ಹೈಕೋರ್ಟ್‌ನಲ್ಲಿ 20 SDA ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಶುರು!

SBI Junior Associate Recruitment 2026: SBI ಬ್ಯಾಂಕ್‌ನಲ್ಲಿ 9000+ ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಬೃಹತ್ ನೇಮಕಾತಿ! ಪದವೀಧರರಿಗೆ ಬಂಪರ್ ಆಫರ್!

SBI ಬ್ಯಾಂಕ್‌ನಲ್ಲಿ 9000+ ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಬೃಹತ್ ನೇಮಕಾತಿ! ಪದವೀಧರರಿಗೆ ಬಂಪರ್ ಆಫರ್!

Gas cylinder eKYC: ಆಗಸ್ಟ್ 16 ರೊಳಗೆ ಗ್ಯಾಸ್ eKYC ಮುಗಿಸದಿದ್ದರೆ ಸಿಲಿಂಡರ್ ರದ್ದಾಗುತ್ತೆ! ಮೊಬೈಲ್‌ನಲ್ಲೇ 2 ನಿಮಿಷದಲ್ಲಿ ಗ್ಯಾಸ್ eKYC ಕಂಪ್ಲೀಟ್ ಮಾಡಿ!

ಆಗಸ್ಟ್ 16 ರೊಳಗೆ ಗ್ಯಾಸ್ eKYC ಮುಗಿಸದಿದ್ದರೆ ಸಿಲಿಂಡರ್ ರದ್ದಾಗುತ್ತೆ! ಮೊಬೈಲ್‌ನಲ್ಲೇ 2 ನಿಮಿಷದಲ್ಲಿ ಗ್ಯಾಸ್ eKYC ಕಂಪ್ಲೀಟ್ ಮಾಡಿ!

PrevPreviousಡಿಗ್ರಿ ಕಾಲೇಜುಗಳಲ್ಲಿ ಪ್ರೊಫೆಸರ್ ಆಗಬೇಕೆ? KEA ಯಿಂದ KSET 2026 ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ!
KFD Elephant Kavdiga Recruitment 2026: ಯಾವುದೇ ಲಿಖಿತ ಪರೀಕ್ಷೆ ಇಲ್ಲ! ಅರ್ಜಿ ಶುಲ್ಕವೂ ಇಲ್ಲ! ಕರ್ನಾಟಕ ಅರಣ್ಯ ಇಲಾಖೆಯಲ್ಲಿ 57 ಆನೆ ಕವಾಡಿಗ ಹುದ್ದೆಗಳ ನೇಮಕಾತಿ!

ಯಾವುದೇ ಲಿಖಿತ ಪರೀಕ್ಷೆ ಇಲ್ಲ! ಅರ್ಜಿ ಶುಲ್ಕವೂ ಇಲ್ಲ! ಕರ್ನಾಟಕ ಅರಣ್ಯ ಇಲಾಖೆಯಲ್ಲಿ 57 ಆನೆ ಕವಾಡಿಗ ಹುದ್ದೆಗಳ ನೇಮಕಾತಿ!

4 August 2026
Read More »
RailTel Apprentice 2026: BE/B.Tech/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ರೈಲ್ವೆ ಅಪ್ರೆಂಟಿಸ್ ಕೆಲಸ!

BE/B.Tech/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ರೈಲ್ವೆ ಅಪ್ರೆಂಟಿಸ್ ಕೆಲಸ!

4 August 2026
Read More »
ISRO Recruitment 2026: ಬೆಂಗಳೂರು/ಹಾಸನ ಸೇರಿದಂತೆ ಇಸ್ರೋದಲ್ಲಿ ಬಂಪರ್ ಉದ್ಯೋಗಾವಕಾಶ: BE/B.Tech ಮುಗಿಸಿದವರಿಗೆ 92 ಸೈಂಟಿಸ್ಟ್/ ಇಂಜಿನಿಯರ್ ಹುದ್ದೆ!

ಬೆಂಗಳೂರು/ಹಾಸನ ಸೇರಿದಂತೆ ಇಸ್ರೋದಲ್ಲಿ ಬಂಪರ್ ಉದ್ಯೋಗಾವಕಾಶ: BE/B.Tech ಮುಗಿಸಿದವರಿಗೆ 92 ಸೈಂಟಿಸ್ಟ್/ ಇಂಜಿನಿಯರ್ ಹುದ್ದೆ!

1 August 2026
Read More »
Page1 Page2 Page3 Page4 Page5 Page6 … Page167
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs