Karnataka Vishwakarma Communities: 2025-26ನೇ ಸಾಲಿಗೆ ವಿಶ್ವಕರ್ಮ ಸಮುದಾಯದವರಿಗೆ ನಿಗಮದಿಂದ ನೂತನ ಯೋಜನೆಗಳು – ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ! ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯದವರಿಗೆ ನಿಗಮದಿಂದ ನೀಡುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಉಪಯೋಗ ಅಗಲಿದೆ.
ಬೆಂಗಳೂರು, ಜೂನ್ 5: ಕರ್ನಾಟಕ ವಿಶ್ವಕರ್ಮ ಸಮುದಾಯಗಳ (Karnataka Vishwakarma Communities) ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ವಿವಿಧ ಸ್ವಯಂ ಉದ್ಯೋಗ ಹಾಗೂ ಶಿಕ್ಷಣ ಸಹಾಯಧನ ಯೋಜನೆಗಳನ್ನು ಘೋಷಿಸಿದ್ದು, ಅರ್ಹ ಅರ್ಜಿದಾರರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಗಳ ಅಡಿಯಲ್ಲಿ ಸಾಲ ಅಥವಾ ಸಹಾಯಧನ ಪಡೆಯಲು ಇಚ್ಛಿಸುವ ಅರ್ಹ ವ್ಯಕ್ತಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಅರ್ಜಿಯ ಅಂತಿಮ ದಿನಾಂಕ: 02/07/2025
(ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕವಿಲ್ಲ)
VISHWAKARMA COMMUNITIES: ಯೋಜನೆಗಳ ವಿವರ:
- ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು: ಸಾಲ ಯೋಜನೆಯಲ್ಲಿ ಶೇ.20ರಷ್ಟು ಗರಿಷ್ಠ ರೂ.20,000/-ಗಳ ಸಹಾಯಧನ ಹಾಗೂ ಗರಿಷ್ಠ ಸಾಲ ರೂ.80,000/-ಗಳನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡುವುದು. ಪಂಚವೃತ್ತಿಆರ್ಥಿಕ ನೆರವುಯೋಜನೆಯಡಿ ಫಲಾನುಭವಿಗಳ ಯೋಜನಾ ವೆಚ್ಚವನ್ನು ಆಧಾರಿಸಿ ಕನಿಷ್ಠ ರೂ.50,000/-ರೂ ಗಳಿಂದ ಗರಿಷ್ಠ ತಲಾ 1 ಲಕ್ಷ ರೂ.ಗಳವರೆಗೆ ಘಟಕ ವೆಚ್ಚವನ್ನಾಗಿ ಮಂಜೂರು ಮಾಡಲಾಗುವುದು.
- ಸ್ವಯಂ ಉದ್ಯೋಗ ನೇರಸಾಲ ಯೋಜನೆ: ಈ ಯೋಜನೆಯಲ್ಲಿಗರಿಷ್ಠ ರೂ.50,000/-ಗಳ ಆರ್ಥಿಕ ನೆರವುಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20ರಷ್ಟು ಗರಿಷ್ಠ ರೂ.10,000/-ಗಳ ಸಹಾಯಧನ ಹಾಗೂ ಉಳಿಕೆ ಗರಿಷ್ಠ ರೂ.40,000/-ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
- ಅರಿವು-ಶೈಕ್ಷಣಿಕ ನೇರಸಾಲ (ಹೊಸ ಮತ್ತು ನವೀಕರಣ): ವಿದ್ಯಾರ್ಥಿಗಳಿಗೆ ಕೋರ್ಸ್‍ನಅವಧಿಗೆ ಶೇಕಡ 2ರ ಬಡ್ಡಿದರದಲ್ಲಿಗರಿಷ್ಠ ವಾರ್ಷಿಕ 1.00ಲಕ್ಷಗಳ ವರೆಗೆ ಸಾಲ ಒದಗಿಸಲಾಗುವುದು. ಮರುಪಾವತಿ ವಿದ್ಯಾರ್ಥಿಯುಕೋರ್ಸ್ ಪೂರ್ಣಗೊಂಡ 4ನೇ ತಿಂಗಳಿಂದ ಮರುಪಾವತಿಯ ಕಂತುಗಳು ತಾನಾಗಿಯೇ ಪ್ರಾರಂಭವಾಗುತ್ತವೆ. ಮರುಪಾವತಿಯಅವಧಿ 3 ವರ್ಷಗಳು (36 ಕಂತುಗಳು).
- ಗಂಗಾ ಕಲ್ಯಾಣ ಯೋಜನೆ – (ವಿಶಿಷ್ಟ ಜಿಲ್ಲೆಗಳಲ್ಲಿ ಜಮೀನು ಹೊಂದಿರುವವರಿಗೆ ಮಾತ್ರ) ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು. ಸಣ್ಣ ಮತ್ತು ಅತಿಸಣ್ಣ ರೈತರಾಗಿಬೇಕು. ಘಟಕ ವೆಚ್ಚ:-ರೂ.2.50ಲಕ್ಷಗಳು ಇದರಲ್ಲಿ ರೂ.1.50ಲಕ್ಷಗಳ ಸಹಾಯಧನ(ಸಬ್ಸಿಡಿ) ಹಾಗೂ ಸಾಲದ ಮೊತ್ತ ರೂ.50,000/-ಗಳು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಸಾಲ. ಸಾಲದ ಮರುಪಾವತಿ ಅವಧಿ 3 ವರ್ಷಗಳು, ರೂ.50,000ಗಳನ್ನು ವಿದ್ಯುದ್ದೀಕರಣಕ್ಕೆ ನೀಡಲಾಗುವುದು.
- ಬ್ಯಾಂಕ್ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ
- ಸ್ವಾವಲಂಬಿ ಸಾರಥಿ ಯೋಜನೆ
- ವಿದೇಶಿ ವ್ಯಾಸಂಗ ಯೋಜನೆ – (ವಾರ್ಷಿಕ ಆದಾಯ ಮಿತಿ ರೂ.15 ಲಕ್ಷ)
- ಸ್ವಾತಂತ್ರ್ಯ ಅಮೃತ ಮುನ್ನಡೆ ಯೋಜನೆ – (www.kaushalkar.com ನಲ್ಲಿ ಅರ್ಜಿ)
ಇದನ್ನೂ ಓದಿ: Nijasharana Ambigara Chowdaiah Development Corporation: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2025-26ನೇ ಸಾಲಿನ ಯೋಜನೆಗಳಿಗೆ ಅರ್ಜಿ ಆಹ್ವಾನ!
ಅರ್ಹತಾ ಮಾನದಂಡಗಳು:
- ಕರ್ನಾಟಕದ ಖಾಯಂ ನಿವಾಸಿ ಇರಬೇಕು
- ವಿಶ್ವಕರ್ಮ ಸಮುದಾಯ ಅಥವಾ ಅದರ ಉಪಜಾತಿಗೆ ಸೇರಿದವರಾಗಿರಬೇಕು
- ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ
- ವಯೋಮಿತಿ 18ರಿಂದ 55 ವರ್ಷ (ಅರಿವು ಯೋಜನೆಗೆ 30 ವರ್ಷವರೆಗೆ)
- ಹಿಂದಿನ ಯಾವ ಯೋಜನೆಯ ಸಹಾಯವನ್ನೂ ಪಡೆದಿರಬಾರದು
- ಆಧಾರ್-ಜೋಡಣೆ ಆಗಿರುವ ಮೊಬೈಲ್ ಹಾಗೂ ಬ್ಯಾಂಕ್ ಖಾತೆ ಕಡ್ಡಾಯ
- ಗ್ರಾಮಾಂತರದವರಿಗೆ ವಾರ್ಷಿಕ ಆದಾಯ ಮಿತಿ: ₹98,000
- ನಗರ ಪ್ರದೇಶದವರಿಗೆ: ₹1,20,000
- ಮಹಿಳೆಗಳಿಗೆ 33%, ವಿಕಲಚೇತನರಿಗೆ 5%, ತೃತೀಯ ಲಿಂಗಿಗಳಿಗೆ 1% ಮೀಸಲಾತಿ
VISHWAKARMA COMMUNITIES Loan Schemes: ಅರ್ಜಿಸಲ್ಲಿಸುವ ವಿಧಾನ:
- ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು
- ಬೆಂಗಳೂರು-ಒನ್, ಕರ್ನಾಟಕ-ಒನ್, ಆತಲ್ ಜನಸ್ನೇಹಿ ಕೇಂದ್ರಗಳಲ್ಲಿ ಸಹ ಸಹಾಯ ಲಭ್ಯವಿದೆ
- ಅರ್ಜಿ ಸಲ್ಲಿಸುವಾಗ ಆಧಾರ್, ಜಾತಿ, ಆದಾಯ ಪ್ರಮಾಣಪತ್ರ ಮತ್ತು ಬ್ಯಾಂಕ್ ಡೀಟೇಲ್ಸ್ ಒಂದೇ ರೀತಿಯಲ್ಲಿ ಇರಬೇಕು
ಪ್ರಮುಖ ಟಿಪ್ಪಣಿ:
2023-24 ಮತ್ತು 2024-25ರಲ್ಲಿ ಅರ್ಜಿ ಸಲ್ಲಿಸಿದ್ದವರಿಗೂ ಈ ಬಾರಿ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ:
- ನಿಗಮದ ವೆಬ್‌ಸೈಟ್: https://kvcdcl.karnataka.gov.in
- ದೂರವಾಣಿ: 080-22374848 / 7899899039
- ಸ್ಥಳೀಯ ಜಿಲ್ಲೆಗಳಲ್ಲಿ ಅಭಿವೃದ್ಧಿ ನಿಗಮದ ಕಚೇರಿಯನ್ನು ಸಂಪರ್ಕಿಸಿ
ಸೂಚನೆ: ಯೋಜನೆಗಳ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಾದಲ್ಲಿ ಹೊಸ ಮಾರ್ಗಸೂಚಿಯಂತೆ ಜಾರಿಗೆ ತರಲಾಗುತ್ತದೆ.
👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇