KCET 2026 Date Extended: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ-2026 (CET-2026) ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿದೆ. ಫೆಬ್ರವರಿ 22 ರವರೆಗೆ ಆನ್‌ಲೈನ್ ನೋಂದಣಿಗೆ ಅವಕಾಶವಿದ್ದು, ಶುಲ್ಕ ಪಾವತಿಸಲು ಫೆಬ್ರವರಿ 24 ಕೊನೆಯ ದಿನವಾಗಿದೆ. ಪರೀಕ್ಷೆ ಏಪ್ರಿಲ್ 23 ಮತ್ತು 24 ರಂದು ನಡೆಯಲಿದೆ.
ರಾಜ್ಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರ ಕೋರ್ಸ್‌ಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ಇಲ್ಲೊಂದು ಬಂಪರ್ ಸಿಹಿ ಸುದ್ದಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ-2026 (CET-2026) ಆಕಾಂಕ್ಷಿಗಳಿಗೆ ಕೊನೆಯ ಕ್ಷಣದಲ್ಲಿ ಬಿಗ್ ರಿಲೀಫ್ ನೀಡಿದೆ. ವಿವಿಧ ಕಾರಣಗಳಿಂದ ಇನ್ನೂ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಥವಾ ಅರ್ಧಕ್ಕೆ ಅರ್ಜಿ ಪ್ರಕ್ರಿಯೆ ನಿಲ್ಲಿಸಿದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಮಾಡಿಕೊಡಲಾಗಿದೆ.
ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗೆ ಸಜ್ಜಾಗುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಥವಾ ತಾಂತ್ರಿಕ ತೊಂದರೆಯಿಂದ ಅರ್ಜಿ ಹಾಕದವರಿಗೆ ಅನುಕೂಲವಾಗಲಿ ಎಂದು ಕೆಇಎ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಸುದ್ದಿಯ ಸಂಪೂರ್ಣ ವಿವರ, ಹೊಸ ದಿನಾಂಕಗಳು ಮತ್ತು ನೀವು ಏನು ಮಾಡಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಿಇಟಿ-2026: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ – ಕೆಇಎ ಅಧಿಕೃತ ಪ್ರಕಟಣೆ
KCET 2026 Date Extended: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಎಂದರೆ ವಿದ್ಯಾರ್ಥಿಗಳ ಪಾಲಿಗೆ ಒಂದು ಹಬ್ಬವಿದ್ದಂತೆ. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಇದು ಹೆಬ್ಬಾಗಿಲು. ನಿಗದಿತ ವೇಳಾಪಟ್ಟಿಯಂತೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಭರದಿಂದ ಸಾಗಿತ್ತು. ಆದರೆ, ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಅರ್ಜಿ ಹಾಕಿಲ್ಲ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕೆಇಎ ಈಗ ದಿನಾಂಕವನ್ನು ಮುಂದೂಡಿದೆ.
| 13-02 CET-2026 ಗೆ ನೋಂದಣಿ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ (13-02-2026) |
ಈ ಹಿಂದೆ ನಿಗದಿಪಡಿಸಿದಂತೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 16, 2026 ಕೊನೆಯ ದಿನವಾಗಿತ್ತು. ಹಾಗೆಯೇ ಶುಲ್ಕ ಪಾವತಿಸಲು ಫೆಬ್ರವರಿ 18, 2026 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಈಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಗಡುವನ್ನು ವಿಸ್ತರಿಸಲಾಗಿದೆ.
ಹೊಸ ದಿನಾಂಕಗಳು ಯಾವುವು? (UGCET 2026 New Extended Dates)
kcet 2026 application date extended: ಕೆಇಎ ಹೊರಡಿಸಿರುವ ಇತ್ತೀಚಿನ ಪತ್ರಿಕಾ ಪ್ರಕಟಣೆಯ ಪ್ರಕಾರ, ಪರಿಷ್ಕೃತ ವೇಳಾಪಟ್ಟಿ ಹೀಗಿದೆ:
- ಆನ್‌ಲೈನ್ ನೋಂದಣಿ ಮತ್ತು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 22-02-2026 (ರಾತ್ರಿ 11.59 ರವರೆಗೆ).
- ಶುಲ್ಕ ಪಾವತಿಸಲು (Fee Payment) ಕೊನೆಯ ದಿನಾಂಕ: 24-02-2026 (ಸಂಜೆ 5.30 ರವರೆಗೆ).
ಅಂದರೆ, ನಿಮಗೆ ಅರ್ಜಿ ಸಲ್ಲಿಸಲು ಇನ್ನು ಸುಮಾರು ಒಂದು ವಾರಗಳ ಕಾಲಾವಕಾಶ ಸಿಕ್ಕಂತಾಗಿದೆ. ಯಾರು ಇನ್ನೂ ಅರ್ಜಿ ಹಾಕಿಲ್ಲವೋ, ಅವರು ತಡಮಾಡದೆ ಕೂಡಲೇ ಅರ್ಜಿ ಸಲ್ಲಿಸುವುದು ಉತ್ತಮ. ಕೊನೆಯ ದಿನದವರೆಗೂ ಕಾಯಬೇಡಿ, ಸರ್ವರ್ ಸಮಸ್ಯೆ ಎದುರಾಗಬಹುದು.
ಪರೀಕ್ಷೆ ಯಾವಾಗ ನಡೆಯಲಿದೆ?
KCET 2026 Exam Date: ಅರ್ಜಿ ಸಲ್ಲಿಸುವ ದಿನಾಂಕ ಬದಲಾಗಿದ್ದರೂ, ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಕೆಇಎ ಈ ಮೊದಲೇ ಪ್ರಕಟಿಸಿದಂತೆ, ಸಿಇಟಿ-2026 ಪರೀಕ್ಷೆಯು ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ.
- ಪರೀಕ್ಷಾ ದಿನಾಂಕಗಳು: 23-04-2026 ಮತ್ತು 24-04-2026.
ಹೀಗಾಗಿ ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅರ್ಜಿ ಹಾಕಿದ ಮೇಲೆ ನಿರಾಳರಾಗದೆ, ಪರೀಕ್ಷಾ ತಯಾರಿಯನ್ನು ಚುರುಕುಗೊಳಿಸಬೇಕು.
ಈಗಾಗಲೇ 2.87 ಲಕ್ಷಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ!
ರಾಜ್ಯದಲ್ಲಿ ಸಿಇಟಿ ಪರೀಕ್ಷೆಗೆ ಎಷ್ಟೊಂದು ಡಿಮ್ಯಾಂಡ್ ಇದೆ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಇದೆ. ಕೆಇಎ ನೀಡಿರುವ ಮಾಹಿತಿಯ ಪ್ರಕಾರ, ಈಗಾಗಲೇ ಸುಮಾರು 2,87,909 (ಎರಡು ಲಕ್ಷದ ಎಂಬತ್ತೇಳು ಸಾವಿರಕ್ಕೂ ಹೆಚ್ಚು) ಅಭ್ಯರ್ಥಿಗಳು ಸಿಇಟಿ-2026ಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಈ ಸಂಖ್ಯೆ ಏರುತ್ತಲೇ ಇದೆ. ಈ ಬಾರಿಯೂ ದಾಖಲೆ ಮಟ್ಟದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆಯಿದೆ. ಈ ಕಾಂಪಿಟೇಷನ್ ನೋಡಿದರೆ, ಸೀಟು ಪಡೆಯಲು ನೀವು ಎಷ್ಟು ಕಷ್ಟಪಡಬೇಕು ಎಂಬುದು ಅರ್ಥವಾಗುತ್ತದೆ.
ಈಗಾಗಲೇ ಅರ್ಜಿ ಹಾಕಿದವರಿಗೆ ಕೆಇಎ ನೀಡಿದ ಮಹತ್ವದ ಸೂಚನೆ
ಬರೀ ಹೊಸದಾಗಿ ಅರ್ಜಿ ಹಾಕುವವರಿಗೆ ಮಾತ್ರವಲ್ಲ, ಈಗಾಗಲೇ ಅರ್ಜಿ ಸಲ್ಲಿಸಿ “ನಮ್ಮ ಕೆಲಸ ಮುಗೀತು” ಎಂದು ಸುಮ್ಮನಿರುವವರಿಗೂ ಕೆಇಎ ಒಂದು ಎಚ್ಚರಿಕೆ ಸಂದೇಶ ನೀಡಿದೆ. ಅದೇನಪ್ಪ ಅಂದ್ರೆ, “ಕರೆಕ್ಷನ್” ಅಥವಾ ತಿದ್ದುಪಡಿ.
ಅನೇಕ ಬಾರಿ ವಿದ್ಯಾರ್ಥಿಗಳು ಗಡಿಬಿಡಿಯಲ್ಲಿ ತಪ್ಪು ಮಾಹಿತಿ ತುಂಬಿರುತ್ತಾರೆ. ಹೆಸರಿನ ಸ್ಪೆಲ್ಲಿಂಗ್ ತಪ್ಪು, ರಿಸರ್ವೇಶನ್ ಕೆಟಗರಿ ತಪ್ಪು, ಅಥವಾ ಕಾಲೇಜು ಕೋಡ್ ತಪ್ಪು ಮಾಡಿರಬಹುದು. ಇಂತಹ ತಪ್ಪುಗಳಿದ್ದರೆ ಮುಂದೆ ಕೌನ್ಸೆಲಿಂಗ್ ಸಮಯದಲ್ಲಿ ದೊಡ್ಡ ಸಮಸ್ಯೆ ಆಗುತ್ತದೆ. ಸೀಟು ಸಿಕ್ಕರೂ ದಾಖಲೆ ಪರಿಶೀಲನೆಯಲ್ಲಿ ರಿಜೆಕ್ಟ್ ಆಗುವ ಭಯ ಇರುತ್ತದೆ.
ಅದಕ್ಕೆ ಕೆಇಎ ಏನು ಹೇಳಿದೆ ಅಂದ್ರೆ: “ಈಗಾಗಲೇ ಅರ್ಜಿ ಸಲ್ಲಿಸಿರುವವರು ತಾವು ನೀಡಿದ ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಮತ್ತೊಮ್ಮೆ ಚೆಕ್ ಮಾಡಿಕೊಳ್ಳಿ. ತಪ್ಪಿದ್ದರೆ, ಲಾಗಿನ್ (Login) ಆಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ನೀವು ಕೊನೆಯದಾಗಿ ಸಬ್ಮಿಟ್ (Submit) ಮಾಡುವ ಮಾಹಿತಿಯೇ ಸರ್ವರ್‌ನಲ್ಲಿ ಸೇವ್ ಆಗುತ್ತದೆ” ಎಂದು ಸ್ಪಷ್ಟಪಡಿಸಿದೆ. ಹಾಗಾಗಿ, ಒಮ್ಮೆ ಲಾಗಿನ್ ಆಗಿ ನಿಮ್ಮ ಅಪ್ಲಿಕೇಶನ್ ಪ್ರಿವ್ಯೂ ನೋಡ್ಕೊಳ್ಳಿ. ಎಲ್ಲವೂ ಸರಿಯಿದ್ದರೆ ಚಿಂತೆ ಇಲ್ಲ. ಏನಾದರೂ ತಪ್ಪಿದ್ದರೆ ಈಗಲೇ ಸರಿಪಡಿಸಿಕೊಳ್ಳಿ.
ಅರ್ಜಿ ಸಲ್ಲಿಸುವುದು ಹೇಗೆ? (ಸರಳ ಹಂತಗಳು)
ಇನ್ನೂ ಅರ್ಜಿ ಹಾಕದವರು ಈ ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಅರ್ಜಿ ಹಾಕಬಹುದು:
- ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಕೆಇಎ ಅಧಿಕೃತ ವೆಬ್‌ಸೈಟ್ (kea.kar.nic.in) ಗೆ ಹೋಗಿ.
- CET-2026 ಲಿಂಕ್: ಮುಖಪುಟದಲ್ಲಿ ಕಾಣುವ ‘UGCET-2026 Online Application‘ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೋಂದಣಿ (Registration): ‘New User’ ಆಗಿದ್ದರೆ ಮೊದಲು ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ ಕೊಟ್ಟು ಲಾಗಿನ್ ಕ್ರಿಯೇಟ್ ಮಾಡಿ.
- ಮಾಹಿತಿ ಭರ್ತಿ: ಲಾಗಿನ್ ಆದ ನಂತರ ನಿಮ್ಮ ವೈಯಕ್ತಿಕ ವಿವರ, ಶೈಕ್ಷಣಿಕ ವಿವರ ಮತ್ತು ಮೀಸಲಾತಿ ವಿವರಗಳನ್ನು ತುಂಬಿ.
- ಫೋಟೋ ಅಪ್‌ಲೋಡ್: ನಿಮ್ಮ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಡಿಕ್ಲರೇಷನ್: ಎಲ್ಲಾ ಮಾಹಿತಿ ಸರಿಯಿದೆ ಎಂದು ಖಚಿತಪಡಿಸಿಕೊಂಡು ‘Submit’ ಕೊಡಿ.
- ಶುಲ್ಕ ಪಾವತಿ: ಕೊನೆಯದಾಗಿ ನಿಗದಿಪಡಿಸಿದ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಪ್ರಿಂಟ್ ಔಟ್: ಫೈನಲ್ ಸಬ್ಮಿಷನ್ ಆದ ಮೇಲೆ ಅಪ್ಲಿಕೇಶನ್ ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಯಾಕೆ ತಡ ಮಾಡ್ಬಾರ್ದು? ಸರ್ವರ್ ಬ್ಯುಸಿ ಆಗುವ ಸಾಧ್ಯತೆ ಇರುತ್ತದೆ. ಕೊನೆಯ ದಿನಾಂಕದ (ಫೆಬ್ರವರಿ 22) ವರೆಗೂ ಕಾಯದೆ ಇಂದೇ ಅರ್ಜಿ ಹಾಕಿ ಮುಗಿಸಿ. ನಿಮ್ಮ ಸ್ನೇಹಿತರಿಗೂ ಈ ವಿಷಯ ತಿಳಿಸಿ. ಯಾರಾದರೂ ಅರ್ಜಿ ಹಾಕೋದು ಮರೆತಿದ್ದರೆ ಅವರಿಗೆ ಇದೊಂದು ಲೈಫ್ ಸೇವಿಂಗ್ ನ್ಯೂಸ್ ಆಗಬಹುದು.
ಒಟ್ಟಿನಲ್ಲಿ, ಎಂಜಿನಿಯರ್ ಅಥವಾ ಡಾಕ್ಟರ್ ಆಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಕೆಇಎ ಮತ್ತೊಂದು ಅವಕಾಶ ನೀಡಿದೆ. ಇದರ ಸದುಪಯೋಗ ಪಡ್ಕೊಳ್ಳಿ. ಆಲ್ ದಿ ಬೆಸ್ಟ್!
Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ:
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button