KEA K-SET 2025: ಕೆ-ಸೆಟ್ 2025ರ ವಿಸ್ತೃತ ಅಧಿಸೂಚನೆ ಪ್ರಕಟವಾಗಿದ್ದು, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಜಿಯ ಕೊನೆಯ ದಿನಾಂಕ, ಪರೀಕ್ಷಾ ದಿನಾಂಕ, ಅರ್ಹತೆ, ಶುಲ್ಕ ಮತ್ತು ಪರೀಕ್ಷಾ ವಿಧಾನದ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.
ಬೆಂಗಳೂರು: ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025 (K-SET) ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವಿಸ್ತೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯ ಅಥವಾ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2025 ಅಧಿಸೂಚನೆ PDF file Click Here
ಪ್ರಮುಖ ದಿನಾಂಕಗಳು/ K-SET 2025 application Date, K-SET 2025 Exam Date:
- ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಆಗಸ್ಟ್ 28, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 18, 2025
- ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 19, 2025
- ಪ್ರವೇಶಪತ್ರ ಪ್ರಕಟ: ಅಕ್ಟೋಬರ್ 24, 2025
- ಪರೀಕ್ಷಾ ದಿನಾಂಕ: ನವೆಂಬರ್ 2, 2025
ಅರ್ಹತೆಗಳು ಮತ್ತು ವಯೋಮಿತಿ:
- ವಿದ್ಯಾರ್ಹತೆ: ಸ್ನಾತಕೋತ್ತರ ಪದವಿಯಲ್ಲಿ ಸಾಮಾನ್ಯ ವರ್ಗದವರಿಗೆ ಕನಿಷ್ಠ ಶೇ. 55 ಅಂಕಗಳು, ಪರಿಶಿಷ್ಟ ಜಾತಿ/ಪಂಗಡ, ವಿಶೇಷಚೇತನರು ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 50 ಅಂಕಗಳನ್ನು ಗಳಿಸಿರಬೇಕು.
- ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ: ಪ್ರಸ್ತುತ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ತಾತ್ಕಾಲಿಕವಾಗಿ ಪರೀಕ್ಷೆ ತೆಗೆದುಕೊಳ್ಳಬಹುದು. ಆದರೆ, ಕೆ-ಸೆಟ್ ಫಲಿತಾಂಶ ಪ್ರಕಟವಾದ ದಿನದಿಂದ ಎರಡು ವರ್ಷದೊಳಗೆ ಸ್ನಾತಕೋತ್ತರ ಪದವಿಯ ಅಂಕಪಟ್ಟಿಯನ್ನು ಸಲ್ಲಿಸುವುದು ಕಡ್ಡಾಯ.
- ವಯೋಮಿತಿ: ಈ ಪರೀಕ್ಷೆಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.
- ವಿಷಯ: ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯದಲ್ಲಿಯೇ ಪರೀಕ್ಷೆ ಬರೆಯಬೇಕು.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್) – 2025 ಅರ್ಜಿ ಸಲ್ಲಿಸಲು ನೇರ ಲಿಂಕ್:
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ₹1,000
- ಪ್ರವರ್ಗ-1, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷಚೇತನರು ಮತ್ತು ತೃತೀಯ ಲಿಂಗಿಗಳಿಗೆ: ₹700
- ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
ಪರೀಕ್ಷಾ ವಿಧಾನ ಮತ್ತು ವಿಷಯಗಳು:
ಕೆ-ಸೆಟ್ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ಎರಡು ಪತ್ರಿಕೆಗಳಿರುತ್ತವೆ.
- ಪತ್ರಿಕೆ 1 (ಸಾಮಾನ್ಯ ಪತ್ರಿಕೆ): ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ಬೋಧನಾ ಮತ್ತು ಬುದ್ಧಿಮತ್ತೆ ಸಾಮರ್ಥ್ಯವನ್ನು ಪರಿಶೀಲಿಸುತ್ತದೆ. ಇದರಲ್ಲಿ 100 ಅಂಕಗಳ 50 ಪ್ರಶ್ನೆಗಳಿರುತ್ತವೆ ಮತ್ತು ಪರೀಕ್ಷಾ ಸಮಯ 1 ಗಂಟೆ. ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯ.
- ಪತ್ರಿಕೆ 2 (ವಿಷಯ ಪತ್ರಿಕೆ): ಇದು ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿರುತ್ತದೆ. ಇದರಲ್ಲಿ 200 ಅಂಕಗಳ 100 ಪ್ರಶ್ನೆಗಳಿರುತ್ತವೆ ಮತ್ತು ಪರೀಕ್ಷಾ ಸಮಯ 2 ಗಂಟೆ.
- ಋಣಾತ್ಮಕ ಮೌಲ್ಯಮಾಪನ: ಪರೀಕ್ಷೆಯಲ್ಲಿ ಯಾವುದೇ ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ.
ಕನಿಷ್ಠ ಅರ್ಹತಾ ಅಂಕಗಳು:
- ಅರ್ಹತೆ ಪಡೆಯಲು, ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಕಡ್ಡಾಯವಾಗಿ ಹಾಜರಾಗಿ ಕನಿಷ್ಠ ಅಂಕಗಳನ್ನು ಗಳಿಸಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳು: ಎರಡೂ ಪತ್ರಿಕೆಗಳಲ್ಲಿ ಒಟ್ಟಾಗಿ ಶೇ. 40 ಅಂಕಗಳನ್ನು ಗಳಿಸಬೇಕು.
- ಮೀಸಲಾತಿ ವರ್ಗದ (ಎಸ್ಸಿ, ಎಸ್ಟಿ, ಒಬಿಸಿ, ಪಿಡಬ್ಲ್ಯುಡಿ) ಅಭ್ಯರ್ಥಿಗಳು: ಎರಡೂ ಪತ್ರಿಕೆಗಳಲ್ಲಿ ಒಟ್ಟಾಗಿ ಶೇ. 35 ಅಂಕಗಳನ್ನು ಗಳಿಸಬೇಕು.
ಕೆಲವು ಮಹತ್ವದ ಸೂಚನೆಗಳು:
- 1991ರ ಸೆಪ್ಟೆಂಬರ್ 19 ರೊಳಗೆ ಸ್ನಾತಕೋತ್ತರ ಪರೀಕ್ಷೆ ಪೂರ್ಣಗೊಳಿಸಿರುವವರು ಮತ್ತು ಪಿಎಚ್.ಡಿ ಪದವಿ ಪಡೆದವರು ತಮ್ಮ ಒಟ್ಟು ಅಂಕಗಳಲ್ಲಿ ಶೇ. 5ರಷ್ಟು ವಿನಾಯಿತಿ ಪಡೆಯುತ್ತಾರೆ.
- ಕರ್ನಾಟಕ ರಾಜ್ಯದ ಹೊರಗಿನ ಪರಿಶಿಷ್ಟ ಜಾತಿ/ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದಡಿ ಪರಿಗಣಿಸಲಾಗುತ್ತದೆ.
- ಈಗಾಗಲೇ ಅದೇ ವಿಷಯದಲ್ಲಿ ಕೆ-ಸೆಟ್ ಅರ್ಹತೆ ಪಡೆದವರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಹಾಗೆ ಸಲ್ಲಿಸಿದರೆ ಅವರ ಅರ್ಹತೆಯನ್ನು ರದ್ದುಪಡಿಸಲಾಗುತ್ತದೆ.
- ಪರೀಕ್ಷೆಯಲ್ಲಿ ಮರು ಮೌಲ್ಯಮಾಪನ ಅಥವಾ ಮರು ಎಣಿಕೆಗೆ ಅವಕಾಶವಿಲ್ಲ.
ಪರೀಕ್ಷಾ ವಿಷಯಗಳು ಮತ್ತು ಕೇಂದ್ರಗಳು:
- ಒಟ್ಟು ವಿಷಯಗಳು: 33
- ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬಳ್ಳಾರಿ, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಮತ್ತು ವಿಜಯಪುರ.
ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in ಗೆ ಭೇಟಿ ನೀಡಬಹುದು.
KSET – 2025 ಆನ್ಲೈನ್ ಅಪ್ಲಿಕೇಶನ್ ಲಿಂಕ್.01-09-2025 ನೇರ ಲಿಂಕ್: https://cetonline.karnataka.gov.in/kea/kset2025
KARNATAKA STATE ELIGIBILITY TEST-2025/ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ -2025: ನೇರ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ. https://cetonline.karnataka.gov.in/KSET2025/
Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ
Navodaya Vidyalaya Class 11 Admission 2026: ನೇರ ಲಿಂಕ್, ಅರ್ಹತೆ, ಪರೀಕ್ಷಾ ದಿನಾಂಕದ ಸಂಪೂರ್ಣ ಮಾಹಿತಿ
Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button