Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಇಂಜಿನಿಯರಿಂಗ್ ಆದವರಿಗೆ KEA ಯಿಂದ ಭರ್ಜರಿ ಆಫರ್: 37 AE/AEE ಹುದ್ದೆಗಳಿಗೆ ನೇಮಕಾತಿ! 1.5 ಲಕ್ಷ ರೂ. ವರೆಗೆ ಸಂಬಳದ ಸರ್ಕಾರಿ ನೌಕರಿ!

  • Picture of Gundijalu Shwetha By Gundijalu Shwetha
  • Published On: June 1, 2026
KEA Recruitment 2026: ಇಂಜಿನಿಯರಿಂಗ್ ಆದವರಿಗೆ KEA ಯಿಂದ ಭರ್ಜರಿ ಆಫರ್: 37 AE/AEE ಹುದ್ದೆಗಳಿಗೆ ನೇಮಕಾತಿ! 1.5 ಲಕ್ಷ ರೂ. ವರೆಗೆ ಸಂಬಳದ ಸರ್ಕಾರಿ ನೌಕರಿ!

KEA Recruitment 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೃಷಿ ಮಾರಾಟ ಇಲಾಖೆ, BWSSB ಹಾಗೂ KSSIDC ಗಳಲ್ಲಿ ಖಾಲಿ ಇರುವ 37 ಸಹಾಯಕ ಅಭಿಯಂತರ (AE) ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಹುದ್ದೆಗಳಿಗೆ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. ಬಿ.ಇ (B.E) ಮುಗಿಸಿದವರು ಜೂನ್ 4 ರೊಳಗೆ ಅರ್ಜಿ ಸಲ್ಲಿಸಬಹುದು.

📅 Last Date for Apply Online 04.06.2026

ಇಂಜಿನಿಯರಿಂಗ್ ಆದವರಿಗೆ KEA ಯಿಂದ ಭರ್ಜರಿ ಆಫರ್: AE, AEE ಹುದ್ದೆಗಳಿಗೆ ಬಂಪರ್ ನೇಮಕಾತಿ!

ನಮಸ್ಕಾರ ಸ್ನೇಹಿತರೆ, ಇಂಜಿನಿಯರಿಂಗ್ (Engineering) ಓದಿ ಮುಗಿಸಿದ ಮೇಲೆ ಹೇಗಾದರೂ ಮಾಡಿ ಒಂದು ಒಳ್ಳೆ ಕೋರ್ (Core) ಕಂಪನಿಯಲ್ಲಿ, ಅದರಲ್ಲೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬ ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ ನ ಕನಸಾಗಿರುತ್ತದೆ. ಈಗಿನ ಕಾಲದಲ್ಲಿ ಸಿವಿಲ್, ಮೆಕ್ಯಾನಿಕಲ್ ಇಂಜಿನಿಯರ್‌ಗಳಿಗೆ ಐಟಿ (IT) ಕ್ಷೇತ್ರದವರಷ್ಟು ಸುಲಭವಾಗಿ ಕೆಲಸ ಸಿಗುವುದಿಲ್ಲ ಎನ್ನುವ ಮಾತಿದೆ. ಹಗಲು ರಾತ್ರಿ ಎನ್ನದೆ ಲೈಬ್ರರಿಗಳಲ್ಲಿ ಕೂತು ಎಕ್ಸಾಮ್‌ಗೆ ಪ್ರಿಪೇರ್ ಆಗುವ ವಿದ್ಯಾರ್ಥಿಗಳಿಗೆ ಯಾವ ಇಲಾಖೆಯಲ್ಲಿ ಕೆಲಸ ಖಾಲಿ ಇದೆ ಅನ್ನೋ ಮಾಹಿತಿ ಸರಿಯಾದ ಸಮಯಕ್ಕೆ ಸಿಕ್ಕರೆ ಅದುವೇ ದೊಡ್ಡ ಲಾಟರಿ. ನೀವೂ ಕೂಡ ಇಂತಹದೊಂದು ಅತ್ಯುತ್ತಮ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಯಾಗಿದ್ದರೆ, ನಿಮಗಾಗಿ ಒಂದು ಭರ್ಜರಿ ಸಿಹಿಸುದ್ದಿ ಕಾದಿದೆ.

WhatsApp Channel
Join Now
Telegram Channel
Join Now

ಕರ್ನಾಟಕದ ಎಲ್ಲಾ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಹೆಮ್ಮೆಯ ಸಂಸ್ಥೆಯಾದ ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ (KEA – Karnataka Examination Authority) ಇದೀಗ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ನಿಗಮಗಳಲ್ಲಿ ಖಾಲಿ ಇರುವ ತಾಂತ್ರಿಕ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮುಂದಾಗಿದೆ. ಹೌದು, ಸರ್ಕಾರಿ ಇಲಾಖೆಗಳು, ನಿಗಮಗಳು ಮತ್ತು ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿ (RPC) ಹಾಗೂ ಕಲ್ಯಾಣ ಕರ್ನಾಟಕ (HK) ವೃಂದದಲ್ಲಿ ಖಾಲಿ ಇರುವ ಸಹಾಯಕ ಅಭಿಯಂತರರು (Assistant Engineer) ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಹುದ್ದೆಗಳ ನೇರ ನೇಮಕಾತಿಗಾಗಿ ಪರಿಷ್ಕೃತ ಅಧಿಸೂಚನೆ (Revised Notification) ಹೊರಡಿಸಲಾಗಿದೆ.

ಈ KEA Recruitment 2026 ರ ಅಡಿಯಲ್ಲಿ ಒಟ್ಟು 37 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀವು ಬಿ.ಇ (B.E) ಅಥವಾ ಬಿ.ಟೆಕ್ (B.Tech) ಮುಗಿಸಿದ್ದರೆ ಇದು ನಿಮಗಾಗಿ ಬಂದಿರುವ ಅತ್ಯುತ್ತಮ ಅವಕಾಶ. ಈ ಬಂಪರ್ Govt Jobs for Engineers ನ ಸಂಪೂರ್ಣ ವಿವರಗಳನ್ನು, ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳಿವೆ? ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು? ಸಂಬಳ ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಅನ್ನು ಇಲ್ಲಿ ಬಹಳ ಸರಳವಾಗಿ ವಿವರಿಸಲಾಗಿದೆ. ಪೂರ್ತಿಯಾಗಿ ಓದಿ.

KEA Recruitment 2026: ಇಂಜಿನಿಯರಿಂಗ್ ಆದವರಿಗೆ KEA ಯಿಂದ ಭರ್ಜರಿ ಆಫರ್: 37 AE/AEE ಹುದ್ದೆಗಳಿಗೆ ನೇಮಕಾತಿ! 1.5 ಲಕ್ಷ ರೂ. ವರೆಗೆ ಸಂಬಳದ ಸರ್ಕಾರಿ ನೌಕರಿ!

ವಿವಿಧ ಇಲಾಖೆಗಳ ನೇಮಕಾತಿ (NHK) – 2025 ಪರಿಷ್ಕೃತ ಅಧಿಸೂಚನೆ (20-05-2026)

rec_RPC_NOTI_20052026kannadaDownload

ವಿವಿಧ ಇಲಾಖೆಗಳ ನೇಮಕಾತಿ (HK) – 2025 ಪರಿಷ್ಕೃತ ಅಧಿಸೂಚನೆ (20-05-2026)

20260521112944kannada (1)Download

ಯಾವ್ಯಾವ ಹುದ್ದೆಗಳು ಖಾಲಿ ಇವೆ? (Vacancy Details OF KEA Recruitment 2026 )

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮುಖ್ಯವಾಗಿ 3 ಪ್ರಮುಖ ಇಲಾಖೆಗಳಿಗೆ ಇಂಜಿನಿಯರ್‌ಗಳನ್ನು ಭರ್ತಿ ಮಾಡುತ್ತಿದೆ. ಅವುಗಳೆಂದರೆ ಕೃಷಿ ಮಾರಾಟ ಇಲಾಖೆ, ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB – ಜಲಮಂಡಳಿ) ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC).

ಉಳಿಕೆ ಮೂಲ ವೃಂದದ (RPC) ಹುದ್ದೆಗಳು (ಒಟ್ಟು 30 ಹುದ್ದೆಗಳು):

ಇಲಾಖೆ / ಸಂಸ್ಥೆಹುದ್ದೆಯ ಹೆಸರು (Post Name)ಖಾಲಿ ಹುದ್ದೆಗಳು
ಕೃಷಿ ಮಾರಾಟ ಇಲಾಖೆಸಹಾಯಕ ಅಭಿಯಂತರರು (ಸಿವಿಲ್) 10
ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB)ಸಹಾಯಕ ಅಭಿಯಂತರರು (ಸಿವಿಲ್) 13
ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB)ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) 02
ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB)ಸಹಾಯಕ ಅಭಿಯಂತರರು (ಕಂಪ್ಯೂಟರ್ ಸೈನ್ಸ್) 01
ಕೆ.ಎಸ್.ಎಸ್.ಐ.ಡಿ.ಸಿ (KSSIDC)ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್) 01
ಕೆ.ಎಸ್.ಎಸ್.ಐ.ಡಿ.ಸಿ (KSSIDC)ಸಹಾಯಕ ಅಭಿಯಂತರರು (ಸಿವಿಲ್) 03

ಕಲ್ಯಾಣ ಕರ್ನಾಟಕ (HK) ವೃಂದದ ಹುದ್ದೆಗಳು (ಒಟ್ಟು 07 ಹುದ್ದೆಗಳು):

ಇಲಾಖೆ / ಸಂಸ್ಥೆಹುದ್ದೆಯ ಹೆಸರು (Post Name)ಖಾಲಿ ಹುದ್ದೆಗಳು
ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB)ಸಹಾಯಕ ಅಭಿಯಂತರರು (ಸಿವಿಲ್) 05
ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB)ಸಹಾಯಕ ಅಭಿಯಂತರರು (ಮೆಕ್ಯಾನಿಕಲ್) 01
ಕೆ.ಎಸ್.ಎಸ್.ಐ.ಡಿ.ಸಿ (KSSIDC)ಸಹಾಯಕ ಅಭಿಯಂತರರು (ಸಿವಿಲ್) 01

ಈ ಹುದ್ದೆಗಳನ್ನು ಸಾಮಾನ್ಯ ಅರ್ಹತೆ (GM), ಪ.ಜಾ. (SC), ಪ.ಪಂ (ST) ಸೇರಿದಂತೆ ವಿವಿಧ ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮದಂತೆ ಹಂಚಿಕೆ ಮಾಡಲಾಗುತ್ತದೆ. ಇದು BWSSB Recruitment ಗಾಗಿ ಕಾಯುತ್ತಿರುವ ಯುವಕರಿಗೆ ಸೂಪರ್ ಆಫರ್.

ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆಗಳೇನು? (Educational Qualification FOR KEA Recruitment 2026 )

ಈ ಬಂಪರ್ Assistant Engineer Jobs ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು:

  • ಸಹಾಯಕ ಅಭಿಯಂತರರು (ಸಿವಿಲ್): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ (Civil Engineering) ನಲ್ಲಿ ಬಿ.ಇ / ಬಿ.ಟೆಕ್ ಪದವಿ ಪಡೆದಿರಬೇಕು. BWSSB ಹುದ್ದೆಗೆ ಕನಿಷ್ಠ 6 ತಿಂಗಳ ಕಂಪ್ಯೂಟರ್ ಬೇಸಿಕ್ಸ್ ಕೋರ್ಸ್ ಮುಗಿಸಿರಬೇಕು.
  • ಸಹಾಯಕ ಅಭಿಯಂತರರು (ಮೆಕ್ಯಾನಿಕಲ್): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ (Mechanical Engineering) ನಲ್ಲಿ ಪದವಿ ಪಡೆದಿರಬೇಕು ಹಾಗೂ 6 ತಿಂಗಳ ಕಂಪ್ಯೂಟರ್ ಕೋರ್ಸ್ ಕಡ್ಡಾಯ.
  • ಸಹಾಯಕ ಅಭಿಯಂತರರು (ಕಂಪ್ಯೂಟರ್ ಸೈನ್ಸ್): ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್‌ನಲ್ಲಿ (Computer Science Engineering) ಪದವಿ ಪಡೆದಿರಬೇಕು ಹಾಗೂ 6 ತಿಂಗಳ ಕಂಪ್ಯೂಟರ್ ಕೋರ್ಸ್ ಕಡ್ಡಾಯ.
  • ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್): KSSIDC ಯಲ್ಲಿನ ಈ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ಪದವಿಯ ಜೊತೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಕೆಲಸದ ಅನುಭವ (3 years experience) ಕಡ್ಡಾಯವಾಗಿರಬೇಕು.

ವಯೋಮಿತಿ ಎಷ್ಟಿರಬೇಕು? (Age Limit)

ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಟ 18 ವರ್ಷಗಳು ತುಂಬಿರತಕ್ಕದ್ದು. ಸರ್ಕಾರದ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು, ವಯೋಮಿತಿ ಹೀಗಿದೆ:

  • ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು.
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷಗಳು.
  • ಪ.ಜಾ / ಪ.ಪಂ / ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು.

ಆಯ್ಕೆಯಾದವರಿಗೆ ಸಿಗುವ ಬಂಪರ್ ಸಂಬಳ ಮತ್ತು ಸೌಲಭ್ಯಗಳು (Salary Details)

ನೀವು ಈ ಹುದ್ದೆಗಳಿಗೆ ಆಯ್ಕೆಯಾದರೆ ಸಿಗುವ ಸಂಬಳ ಖಾಸಗಿ ಐಟಿ ಕಂಪನಿಗಳನ್ನೂ ನಾಚಿಸುವಂತಿರುತ್ತದೆ.

  • ಸಹಾಯಕ ಕಾರ್ಯಪಾಲಕ ಅಭಿಯಂತರ (AEE): ರೂ. 83,700 ದಿಂದ ರೂ. 1,55,200 ರವರೆಗೆ ಅತ್ಯುತ್ತಮ ವೇತನ ಶ್ರೇಣಿ (Pay Scale).
  • ಸಹಾಯಕ ಅಭಿಯಂತರ (AE – ಕೃಷಿ / KSSIDC): ರೂ. 69,250 ದಿಂದ ರೂ. 1,34,200 ರವರೆಗೆ ವೇತನ ಶ್ರೇಣಿ.
  • ಸಹಾಯಕ ಅಭಿಯಂತರ (AE – BWSSB): ರೂ. 53,250 ದಿಂದ ರೂ. 1,15,460 ರವರೆಗೆ (2018 ರ ವೇತನ ಶ್ರೇಣಿಯಂತೆ). ಈ ಬೇಸಿಕ್ ಸಂಬಳ ಮಾತ್ರವಲ್ಲದೆ, ಇದರ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಮೆಡಿಕಲ್ ಫೆಸಿಲಿಟಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಭತ್ಯೆಗಳು ಸೇರಿ ಕೈಗೆ ಭರ್ಜರಿ ಸಂಬಳ ಸಿಗಲಿದೆ.

ಪ್ರಮುಖ ದಿನಾಂಕಗಳು (Important Dates Of KEA Recruitment 2026 )

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ದಿನಾಂಕಗಳನ್ನು ಕಡ್ಡಾಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21.05.2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04.06.2026.
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 05.06.2026 (ಸಂಜೆ 4.00 ಗಂಟೆಯೊಳಗೆ).

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ (Selection Process & Exam Pattern)

ಇದು ರಾಜ್ಯ ಮಟ್ಟದಲ್ಲಿ ನಡೆಯುವ ಸಂಪೂರ್ಣ ಪಾರದರ್ಶಕ ನೇಮಕಾತಿಯಾಗಿದೆ. ಅಭ್ಯರ್ಥಿಗಳನ್ನು ಆಫ್‌ಲೈನ್-ಒಎಂಆರ್ (Offline-OMR) ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

  • ಕಡ್ಡಾಯ ಕನ್ನಡ ಪರೀಕ್ಷೆ: 150 ಅಂಕಗಳ ಬಹು ಆಯ್ಕೆ ಮಾದರಿಯ ಕಡ್ಡಾಯ ಕನ್ನಡ ಪರೀಕ್ಷೆ ಇರುತ್ತದೆ. ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯಲೇಬೇಕು. (SSLC ಯಲ್ಲಿ ಕನ್ನಡ ಓದಿದವರಿಗೆ ವಿನಾಯಿತಿ ಇದೆ ).
  • ಪತ್ರಿಕೆ 1 (ಸಾಮಾನ್ಯ ಜ್ಞಾನ): 300 ಅಂಕಗಳು, 2 ಗಂಟೆಗಳ ಕಾಲಾವಧಿ. ಇದರಲ್ಲಿ ಪ್ರಚಲಿತ ವಿದ್ಯಮಾನಗಳು, ವಿಜ್ಞಾನ, ಇತಿಹಾಸ, ಭೂಗೋಳ, ಸಂವಿಧಾನ ಮುಂತಾದ ವಿಷಯಗಳಿರುತ್ತವೆ.
  • ಪತ್ರಿಕೆ 2 (ನಿರ್ದಿಷ್ಟ ಪತ್ರಿಕೆ): 300 ಅಂಕಗಳು, 2 ಗಂಟೆಗಳ ಕಾಲಾವಧಿ. ಇದು ನೀವು ಓದಿದ ಇಂಜಿನಿಯರಿಂಗ್ (ಸಿವಿಲ್/ಮೆಕ್ಯಾನಿಕಲ್/ಕಂಪ್ಯೂಟರ್ ಸೈನ್ಸ್) ಪಠ್ಯಕ್ರಮವನ್ನು ಆಧರಿಸಿರುತ್ತದೆ.
  • ನೆಗೆಟಿವ್ ಮಾರ್ಕಿಂಗ್ (Negative Marking): ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶ ದಷ್ಟು (0.75) ಅಂಕಗಳನ್ನು ಕಳೆಯಲಾಗುವುದು. ಹೀಗಾಗಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಸುಮ್ಮನೆ ಟಿಕ್ ಮಾಡುವಂತಿಲ್ಲ!

ಅರ್ಜಿ ಶುಲ್ಕ (Application Fee)

  • ಸಾಮಾನ್ಯ (GM) ಮತ್ತು ಇತರೆ ಪ್ರವರ್ಗಗಳ (2A, 2B, 3A, 3B) ಅಭ್ಯರ್ಥಿಗಳಿಗೆ: ರೂ. 750/-.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ರೂ. 500/-.
  • ವಿಶೇಷ ಚೇತನ (PwD) ಅಭ್ಯರ್ಥಿಗಳಿಗೆ: ರೂ. 250/-. ಒಂದೇ ಪಠ್ಯಕ್ರಮದ ಹೆಚ್ಚುವರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೆ ಪ್ರತಿ ಹೆಚ್ಚುವರಿ ಹುದ್ದೆಗೆ ರೂ. 100 ನ್ನು ಪಾವತಿಸಬೇಕು.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply Online for KEA Recruitment 2026 )

ನೀವು ಈ Karnataka Govt Jobs ಗೆ ಅರ್ಜಿ ಸಲ್ಲಿಸಲು ಬಯಸಿದರೆ, ಕೇವಲ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

🔗 Official Notification of ವಿವಿಧ ಇಲಾಖೆಗಳ ನೇಮಕಾತಿ (NHK) – 2025 ಪರಿಷ್ಕೃತ ಅಧಿಸೂಚನೆ (20-05-2026) 🔗 Official Notification of ವಿವಿಧ ಇಲಾಖೆಗಳ ನೇಮಕಾತಿ (HK) – 2025 ಪರಿಷ್ಕೃತ ಅಧಿಸೂಚನೆ (20-05-2026) 👉 Click Here Apply Online ಗ್ರೂಪ್-ಎ ಮತ್ತು ಬಿ ಹುದ್ದೆಗಳ ಪರಿಷ್ಕೃತ ಅಧಿಸೂಚನೆ ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ (ಕೆಕೆ)
  1. https://cetonline.karnataka.gov.in/kea/ಮೊದಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
  2. ಅಲ್ಲಿ ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಆಯ್ಕೆ ಮಾಡಿ ರಿಜಿಸ್ಟರ್ ಆಗಿ.
  3. ಆನ್‌ಲೈನ್ ಅರ್ಜಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ ಮತ್ತು ಮೀಸಲಾತಿ ವಿವರಗಳನ್ನು (GM, SC, ST, ಗ್ರಾಮೀಣ, ಕನ್ನಡ ಮಾಧ್ಯಮ ಇತ್ಯಾದಿ) ತಪ್ಪಿಲ್ಲದೆ ಭರ್ತಿ ಮಾಡಿ.
  4. ಸರ್ಕಾರದ ಆದೇಶದನ್ವಯ ಪ.ಜಾತಿ ಅಭ್ಯರ್ಥಿಗಳು ತಮ್ಮ ಜಾತಿ ಪ್ರಮಾಣ ಪತ್ರದ RD ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
  5. ನಿಮ್ಮ ಇತ್ತೀಚಿನ ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  6. ಅಂತಿಮವಾಗಿ ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, ನಿಮ್ಮ ಅರ್ಜಿಯ ಪ್ರಿಂಟ್ ಔಟ್ ಅನ್ನು ಭವಿಷ್ಯದ ರೆಫರೆನ್ಸ್‌ಗಾಗಿ ಇಟ್ಟುಕೊಳ್ಳಿ.

ಬೆಂಗಳೂರು ಜಲಮಂಡಳಿ ಅಥವಾ ಕೈಗಾರಿಕಾ ನಿಗಮಗಳಲ್ಲಿ ಅಧಿಕಾರಿಯಾಗಿ ಕೆಲಸ ಮಾಡುವುದು ಬಹಳ ಹೆಮ್ಮೆಯ ವಿಚಾರ. ಹೀಗಾಗಿ ಸಮಯವನ್ನು ವ್ಯರ್ಥ ಮಾಡದೆ, ಇಂದೇ ಸಿಲೆಬಸ್ ನೋಡಿಕೊಂಡು ಓದಲು ಶುರುಮಾಡಿ. ಸುಳ್ಳು ಮಾಹಿತಿ ನೀಡಿದರೆ ಕ್ರಿಮಿನಲ್ ಕೇಸ್ ಬೀಳುತ್ತದೆ ಎಂದು KEA ಎಚ್ಚರಿಸಿದೆ, ಹಾಗಾಗಿ ಪ್ರಾಮಾಣಿಕವಾಗಿ ಅರ್ಜಿ ಸಲ್ಲಿಸಿ. ಆಲ್ ದ ಬೆಸ್ಟ್!

ಪ್ರಮುಖ ಲಿಂಕ್ ಗಳು/Important Links:

ವಿವರ (Details)ಡೌನ್‌ಲೋಡ್ ಲಿಂಕ್ (Download Link)
KEA Recruitment 2026
Official Notification PDF
Notification ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Official Website: 
https://cetonline.karnataka.gov.in/kea/
KEA Recruitment 2026
Apply Online Direct Link
Click Here to Apply Online
Last Date 04/06/2026
ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿhttps://quicknewztoday.com/category/jobs/

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • BE/B.Tech ಆದವರಿಗೆ ಬಿಗ್ ಬಂಪರ್ ಆಫರ್: ಬಿಎಸ್‌ಎನ್‌ಎಲ್ (BSNL) ನಲ್ಲಿ 100 ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳ ನೇಮಕಾತಿ!
  • ಡಿಗ್ರಿ ಆದವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (SBI) ಬಂಪರ್ ಆಫರ್: 7150 ಹುದ್ದೆಗಳಿಗೆ ಅರ್ಜಿ ಆಹ್ವಾನ!
  • ಪಿಯುಸಿ ಆದವರಿಗೆ ಸೇನೆಯಲ್ಲಿ ಡೈರೆಕ್ಟ್ ಆಫೀಸರ್ ಹುದ್ದೆ: UPSC NDA 2026ಗೆ ಅಪ್ಲೈ ಮಾಡೋದು ಹೇಗೆ?
  • PUC/Degree ಪಾಸ್ ಆದವರಿಗೆ KEA ದಲ್ಲಿ ಭರ್ಜರಿ ಸರ್ಕಾರಿ ಕೆಲಸ: FDA/ SDA ಹುದ್ದೆಗಳಿಗೆ ಅರ್ಜಿ ಆಹ್ವಾನ!

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Karnataka Lokayukta Recruitment 2026: ಕರ್ನಾಟಕ ಲೋಕಾಯುಕ್ತದಲ್ಲಿ 26 ಹುದ್ದೆಗಳಿಗೆ ಅರ್ಜಿ ಆಹ್ವಾನ! ಯಾವುದೇ ಪದವಿ ಬೇಡ! ಕೇವಲ PUC ಪಾಸಾದವರಿಗೆ ಸುವರ್ಣಾವಕಾಶ!

ಕರ್ನಾಟಕ ಲೋಕಾಯುಕ್ತದಲ್ಲಿ 26 ಹುದ್ದೆಗಳಿಗೆ ಅರ್ಜಿ ಆಹ್ವಾನ! ಯಾವುದೇ ಪದವಿ ಬೇಡ! ಕೇವಲ PUC ಪಾಸಾದವರಿಗೆ ಸುವರ್ಣಾವಕಾಶ!

RRB Section Controller Recruitment 2026: ರೈಲ್ವೇ ಇಲಾಖೆಯಲ್ಲಿ ಪದವೀಧರರಿಗೆ ಸುವರ್ಣಾವಕಾಶ: 1.19 ಲಕ್ಷ ಸಂಬಳದ 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ!

ರೈಲ್ವೇ ಇಲಾಖೆಯಲ್ಲಿ ಪದವೀಧರರಿಗೆ ಸುವರ್ಣಾವಕಾಶ: 1.19 ಲಕ್ಷ ಸಂಬಳದ 119 ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ!

EPF Interest Rate 2026: ಉದ್ಯೋಗಿಗಳಿಗೆ ಸಿಹಿ ಸುದ್ದಿ! ಕೇಂದ್ರದಿಂದ ಭರ್ಜರಿ ಗಿಫ್ಟ್: 2026ರ EPF ಬಡ್ಡಿದರ ಶೇ. 8.25 ಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ!

ಉದ್ಯೋಗಿಗಳಿಗೆ ಸಿಹಿ ಸುದ್ದಿ! ಕೇಂದ್ರದಿಂದ ಭರ್ಜರಿ ಗಿಫ್ಟ್: 2026ರ EPF ಬಡ್ಡಿದರ ಶೇ. 8.25 ಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ!

LPG Gas Cylinder New Rules 2026: LPG ಗ್ರಾಹಕರಿಗೆ 2026ರ ಹೊಸ ಅಪ್ಡೇಟ್: ಈ ಕೆಲಸ ಮಾಡದಿದ್ದರೆ ನಿಮ್ಮ ಗ್ಯಾಸ್ ಕನೆಕ್ಷನ್ 30 ದಿನಗಳಲ್ಲಿ ಕಟ್!

LPG ಗ್ರಾಹಕರಿಗೆ 2026ರ ಹೊಸ ಅಪ್ಡೇಟ್: ಈ ಕೆಲಸ ಮಾಡದಿದ್ದರೆ ನಿಮ್ಮ ಗ್ಯಾಸ್ ಕನೆಕ್ಷನ್ 30 ದಿನಗಳಲ್ಲಿ ಕಟ್!

Karnataka Guest Lecturer Recruitment 2026: ರಾಜ್ಯದ ಸರ್ಕಾರಿ ಡಿಗ್ರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಭರ್ಜರಿ ನೇಮಕಾತಿ! ಸೇವೆ ಮತ್ತು ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ!

ರಾಜ್ಯದ ಸರ್ಕಾರಿ ಡಿಗ್ರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಭರ್ಜರಿ ನೇಮಕಾತಿ! ಸೇವೆ ಮತ್ತು ಮೆರಿಟ್ ಆಧಾರದ ಮೇಲೆ ನೇರ ಆಯ್ಕೆ!

PrevPreviousಡಿಗ್ರಿ ಪಾಸ್ ಆದವರಿಗೆ ಸೇನೆಯಲ್ಲಿ ಡೈರೆಕ್ಟ್ ಆಫೀಸರ್ ಹುದ್ದೆ: UPSC ಯಿಂದ CDS-2 ಅಧಿಸೂಚನೆ ಪ್ರಕಟ!
Nextಡಿಗ್ರಿ ಆದವರಿಗೆ ಪರೀಕ್ಷೆ ಇಲ್ಲದೆ ಬ್ಯಾಂಕ್ ನೌಕರಿ: ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್‌ನಲ್ಲಿ 635 ಹುದ್ದೆಗಳ ಬಂಪರ್ ಆಫರ್!Next
KSP Constable Recruitment 2026: PUC ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಬಂಪರ್: 2314 ಕಾನ್‌ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

PUC ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಬಂಪರ್: 2314 ಕಾನ್‌ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

13 July 2026
Read More »
Kalyana Karnataka Surveyor Recruitment 2026: KEA ಇಂದ ಹೊಸ ನೋಟಿಫಿಕೇಶನ್ ಬಿಡುಗಡೆ: 190 ಭೂಮಾಪಕ ಹುದ್ದೆಗಳಿಗೆ ಆಗಸ್ಟ್ 7ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸುವರ್ಣಾವಕಾಶ

KEA ಇಂದ ಹೊಸ ನೋಟಿಫಿಕೇಶನ್ ಬಿಡುಗಡೆ: 190 ಭೂಮಾಪಕ ಹುದ್ದೆಗಳಿಗೆ ಆಗಸ್ಟ್ 7ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸುವರ್ಣಾವಕಾಶ

12 July 2026
Read More »
KEA Surveyor recruitment 2026: Diploma/B.E/B.Sc ಆದವರಿಗೆ ಬಂಪರ್: ಕರ್ನಾಟಕ ಭೂಮಾಪನ ಇಲಾಖೆಯಲ್ಲಿ 560 ಭೂಮಾಪಕ (Surveyor) ಹುದ್ದೆಗಳಿಗೆ ಅರ್ಜಿ ಆಹ್ವಾನ!

Diploma/B.E/B.Sc ಆದವರಿಗೆ ಬಂಪರ್: ಕರ್ನಾಟಕ ಭೂಮಾಪನ ಇಲಾಖೆಯಲ್ಲಿ 560 ಭೂಮಾಪಕ (Surveyor) ಹುದ್ದೆಗಳಿಗೆ ಅರ್ಜಿ ಆಹ್ವಾನ!

12 July 2026
Read More »
Page1 Page2 Page3 Page4 … Page159
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs