KEA UGCET 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ 2026 ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಆದರೆ ಭಾರಿ ಟ್ರಾಫಿಕ್‌ನಿಂದಾಗಿ ವೆಬ್‌ಸೈಟ್ ಸರ್ವರ್ ಕ್ರಾಶ್ ಆಗಿದ್ದು, ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ಫಲಿತಾಂಶ ಕಳುಹಿಸಲು ಕೆಇಎ ನಿರ್ಧರಿಸಿದೆ. ಸಂಪೂರ್ಣ ವಿವರ ಇಲ್ಲಿದೆ.
UGCET 2026 ಫಲಿತಾಂಶ ಬಿಡುಗಡೆ: ಸರ್ವರ್ ಕ್ರಾಶ್ ಆಗಿದ್ದಕ್ಕೆ ವಾಟ್ಸಾಪ್‌ನಲ್ಲಿ ರಿಸಲ್ಟ್ ನೀಡಲು ಕೆಇಎ ಮುಂದು!
ಕಳೆದ ಹಲವು ದಿನಗಳಿಂದ ಕಾದು ಕುಳಿತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಬಹುನಿರೀಕ್ಷಿತ UGCET 2026 results ಅನ್ನು ಅಧಿಕೃತವಾಗಿ ಇಂದು ಅಂದರೆ ಜೂನ್ 6ರ ಶನಿವಾರದಂದು ಪ್ರಕಟಿಸಿದೆ. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೆಇಎ ಸಹ ಅಧ್ಯಕ್ಷರೂ ಆದ ಡಾ. ಶರಣ ಪ್ರಕಾಶ ಪಾಟೀಲ ಅವರು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಸಂಪೂರ್ಣ ವಿವರಗಳನ್ನು ಬಿಡುಗಡೆ ಮಾಡಿದರು.
ಯೋಜನೆಯ ಪ್ರಕಾರ ಸಾರ್ವಜನಿಕರು ಮಧ್ಯಾಹ್ನ 2:00 ಗಂಟೆಯ ನಂತರ ಅಧಿಕೃತ ವೆಬ್‌ಸೈಟ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ತಮ್ಮ ಫಲಿತಾಂಶವನ್ನು ನೋಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ರಿಸಲ್ಟ್ ಲಿಂಕ್ ಲೈವ್ ಆಗುತ್ತಿದ್ದಂತೆ ಒಂದೇ ಬಾರಿಗೆ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಲಾಗಿನ್ ಆಗಲು ಪ್ರಯತ್ನಿಸಿದ್ದರಿಂದ KEA website ಸರ್ವರ್ ಭಾರಿ ಟ್ರಾಫಿಕ್ ತಾಳಲಾರದೆ ಸಂಪೂರ್ಣವಾಗಿ ಕ್ರಾಶ್ ಆಗಿದೆ! ಸದ್ಯಕ್ಕೆ ವೆಬ್‌ಸೈಟ್ ಓಪನ್ ಆಗುತ್ತಿಲ್ಲ ಹಾಗೂ ತಾಂತ್ರಿಕ ದೋಷ ಎದುರಾಗಿದೆ.
ವಿದ್ಯಾರ್ಥಿಗಳಿಗೆ ವಾಟ್ಸಾಪ್‌ನಲ್ಲಿ ರಿಸಲ್ಟ್: ಕೆಇಎ ಹೊಸ ಪ್ಲಾನ್!
ಸರ್ವರ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಕಂಗಾಲಾಗಿದ್ದು, ಗಂಟೆಗಟ್ಟಲೆ ಕಂಪ್ಯೂಟರ್ ಮತ್ತು ಮೊಬೈಲ್ ಮುಂದೆ ಕುಳಿತು ಪರದಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ. ವೆಬ್‌ಸೈಟ್ ಸರ್ವರ್ ಅನ್ನು ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಅಲ್ಲಿಯವರೆಗೆ ವಿದ್ಯಾರ್ಥಿಗಳು ಆತಂಕ ಪಡಬಾರದು ಮತ್ತು ಪದೇ ಪದೇ ವೆಬ್‌ಸೈಟ್ ಓಪನ್ ಮಾಡಿ ಟ್ರಾಫಿಕ್ ಹೆಚ್ಚಿಸಬಾರದು ಎಂದು ವಿನಂತಿಸಿದ್ದಾರೆ.
ಅಲ್ಲದೆ, ಪರ್ಯಾಯ ವ್ಯವಸ್ಥೆಯಾಗಿ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ನೇರವಾಗಿ WhatsApp ಮೂಲಕವೇ ಅವರ ಫಲಿತಾಂಶ ಮತ್ತು ರಾಂಕಿಂಗ್ ವಿವರಗಳನ್ನು ವೈಯಕ್ತಿಕವಾಗಿ ಕಳುಹಿಸಿಕೊಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಗಾಬರಿಯಾಗದೇ ಸ್ವಲ್ಪ ಸಮಯ ತಾಳ್ಮೆಯಿಂದ ಇರುವಂತೆ ಇಲಾಖೆ ಕೋರಿದೆ. ಸರ್ವರ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ. ರಿಸಲ್ಟ್ ಲಿಂಕ್‌ಗಳ ಅಪ್ಡೇಟ್‌ಗಾಗಿ ನಮ್ಮ ಪೇಜ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಈ ಪ್ರಮುಖ ಮಾಹಿತಿಯನ್ನು ತಕ್ಷಣವೇ ಶೇರ್ ಮಾಡಿ ಅಲರ್ಟ್ ಮಾಡಿ!
- KEA ಅಧಿಕೃತ ಲಿಂಕ್‌ಗಳು:
keaonline.karnataka.gov.inಹಾಗೂcetonline.karnataka.gov.in/kea
ವಿದ್ಯಾರ್ಥಿಗಳು, ಸಂಜೆ 5 ಗಂಟೆ ನಂತರ ಈ ಕೆಳಗಿನ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಫಲಿತಾಂಶ ಪಡೆಯಬಹುದು.
ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:https://cetonline.karnataka.gov.in/kea/ugcet2026
ಹೆಚ್.ಪ್ರಸನ್ನ ಐಎಎಸ್ ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
- ವೆಟರ್ನರಿ ಯೂನಿವರ್ಸಿಟಿಯಲ್ಲಿ ಬೃಹತ್ ನೇಮಕಾತಿ: 96 ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
- PUC/Degree ಪಾಸ್ ಆದವರಿಗೆ KEA ದಲ್ಲಿ ಭರ್ಜರಿ ಸರ್ಕಾರಿ ಕೆಲಸ: FDA/ SDA ಹುದ್ದೆಗಳಿಗೆ ಅರ್ಜಿ ಆಹ್ವಾನ!
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button