Kisan Credit Card (KCC): ರೈತರಿಗೆ ಬಂಪರ್ ಸುದ್ದಿ – ₹5 ಲಕ್ಷವರೆಗೆ ಭದ್ರತೆ ರಹಿತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ!

ರೈತರಿಗೆ ಬಂಪರ್ ಸುದ್ದಿ – ₹5 ಲಕ್ಷವರೆಗೆ ಭದ್ರತೆ ರಹಿತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ!
Share and Spread the love

Kisan Credit Card (KCC): ರೈತರಿಗೆ ಬಂಪರ್ ಸುದ್ದಿ – ₹5 ಲಕ್ಷವರೆಗೆ ಭದ್ರತೆ ರಹಿತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಭಾರತ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಿಂದ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ವಿಮಾ ರಕ್ಷಣೆಯಂತಹ ಅನೇಕ ಪ್ರಯೋಜನಗಳು ಲಭಿಸುತ್ತಿದ್ದು, ಕೃಷಿಯಲ್ಲಿ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ.

Follow Us Section

ಕೃಷಿ ಭಾರತದ ಆರ್ಥಿಕತೆಯ ಮೂಲಸೌಕರ್ಯವಾಗಿದ್ದು, ರೈತರಿಗೆ ನಿತ್ಯದ ಹಣಕಾಸಿನ ಪಡಿಪುಡಿಗಳನ್ನು ಎದುರಿಸಲು ಭಾರತ ಸರ್ಕಾರ 1998ರಲ್ಲಿ ನಬಾರ್ಡ್ ಸಹಯೋಗದೊಂದಿಗೆ “ಕಿಸಾನ್ ಕ್ರೆಡಿಟ್ ಕಾರ್ಡ್” (Kisan Credit Card – KCC) ಯೋಜನೆಯನ್ನು ಪ್ರಾರಂಭಿಸಿತು.

Kisan Credit Card: ಯೋಜನೆಯ ಉದ್ದೇಶಗಳು

  • ಅಲ್ಪಾವಧಿ ಬೆಳೆ ಸಾಲ
  • ಕೊಯ್ಲು ನಂತರದ ವೆಚ್ಚ ನಿರ್ವಹಣೆ
  • ಉತ್ಪನ್ನ ಮಾರಾಟ ಸಾಲ
  • ರೈತ ಕುಟುಂಬದ ನಿತ್ಯದ ಅಗತ್ಯಗಳಿಗೆ ಹಣಕಾಸು
  • ಕೃಷಿ ಯಂತ್ರೋಪಕರಣಗಳ ನಿರ್ವಹಣೆ
  • ಹೂಡಿಕೆಗಳಿಗೆ ಸಾಲ

ಇದನ್ನೂ ಓದಿ: Easement Act 1882: ಜಮೀನಿಗೆ ಹೋಗಲು ದಾರಿ ಸಮಸ್ಯೆ ಇರುವ ರೈತರಿಗೆ ಸಿಹಿ ಸುದ್ದಿ! ಇನ್ನೂ ಯಾರೂ ದಾರಿಗೆ ಅಡ್ಡಿಪಡಿಸಲು ಸಾಧ್ಯವಿಲ್ಲ– ರಾಜ್ಯ ಸರ್ಕಾರದಿಂದ ಹೊಸ ಕಾನೂನು ಜಾರಿ!

Kisan Credit Card ಮುಖ್ಯ ಪ್ರಯೋಜನಗಳು

  • ಕಡಿಮೆ ಬಡ್ಡಿದರದ ಸಾಲಗಳು
    ವಾರ್ಷಿಕ 7% ಬಡ್ಡಿದರದಲ್ಲಿ ₹3 ಲಕ್ಷವರೆಗೆ (ಈಗ ₹5 ಲಕ್ಷ) ಸಾಲ ಲಭ್ಯ. ಪ್ರಾಂಪ್ಟ್ ಪಾವತಿ ಮಾಡಿದರೆ 4% ಕ್ಕೆ ಇಳಿಯುವ ಅವಕಾಶ ಇದೆ.
  • ಭದ್ರತೆಯ ಅಗತ್ಯವಿಲ್ಲದ ಸಾಲ
    ₹2 ಲಕ್ಷದವರೆಗೆ ಭದ್ರತೆಯ ಅಗತ್ಯವಿಲ್ಲ.
  • ಸಹಜ ಹಾಗೂ ಒಂದೇ ಗವಾಕ್ಷಿಯ ಮೂಲಕ ಪ್ರಕ್ರಿಯೆ
    ಅರ್ಜಿ ಪ್ರಕ್ರಿಯೆ ಸುಲಭ ಇದೆ.
  • ಸಮಯೋಚಿತ ಮರುಪಾವತಿ ವ್ಯವಸ್ಥೆ
    ಬೆಳೆ ಕೊಯ್ಲು ನಂತರದ ಅವಧಿಗೆ ಹೊಂದಿಕೊಳ್ಳುವ ರೀತಿಯ ಮರುಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
  • ವಿಮಾ ಸೌಲಭ್ಯ
    ಬೆಳೆ ವಿಮೆ ಹಾಗೂ ಅಪಘಾತ ವಿಮೆ ಕೂಡ ಲಭ್ಯವಿದೆ.
  • ಡಿಜಿಟಲ್ ಸೇವೆಗಳಲ್ಲಿ ಸೌಲಭ್ಯ
    ATM, POS, BC ಪಾಯಿಂಟ್‌ಗಳ ಮೂಲಕ ಲಾಭ ಪಡೆಯಬಹುದು.

ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆ

  • ಮಾಲೀಕ ರೈತರು, ಗೇಣಿ ರೈತರು, SHG, JLG ಸದಸ್ಯರು ಅರ್ಹರಿದ್ದು ಅರ್ಜಿ ಸಲ್ಲಿಸಬಹುದು.

Kisan Credit Card ಅರ್ಜಿ ಸಲ್ಲಿಸುವ ವಿಧಾನ:
ರೈತರು ತಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಬ್ಯಾಂಕುಗಳಲ್ಲಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಲಭ್ಯವಿದೆ. ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಭೂಮಿಯ ದಾಖಲೆ (RTC/ಪಹಣಿ)
  • ಬ್ಯಾಂಕ್ ಖಾತೆ ವಿವರ
  • ಪಾಸ್‌ಪೋರ್ಟ್ ಅಳತೆಗಿನ ಫೋಟೋ

Kisan Credit Card ಇಂದ ಸಮಗ್ರ ಪರಿಣಾಮಗಳು:

  • ಅನೌಪಚಾರಿಕ ಸಾಲದ ಮೇಲೆ ಅವಲಂಬನೆ ಕಡಿಮೆ ಮಾಡುತ್ತದೆ.
  • ಕೃಷಿ ಉತ್ಪಾದಕತೆ ಹೆಚ್ಚಳ ಮಾಡಿಕೊಳ್ಳಬಹುದು.
  • ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರ್ಪಡೆಗೊಂಡು ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬಹುದು.
  • ರೈತರ ಆತ್ಮವಿಶ್ವಾಸ ಹೆಚ್ಚಳ ಆಗುವ ಸಾಧ್ಯತೆ ಇರುತ್ತದೆ.

ಇತ್ತೀಚಿನ ಘೋಷಣೆ (2025-26 ಬಜೆಟ್)

  • ಕೃಷಿ ಸಾಲ ಮಿತಿಯನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ರೈತರ ತಾತ್ಕಾಲಿಕ ಹಾಗೂ ದೀರ್ಘಾವಧಿ ಸಾಲ ಅವಶ್ಯಕತೆ ಪೂರೈಸುವತ್ತ ಮತ್ತೊಂದು ಹೆಜ್ಜೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ ಹೆಚ್ಚಳ

ಎಲ್ಲಾ ರೈತರಿಗೂ ಲಭ್ಯವಿರುವ ಸೌಲಭ್ಯ:
Kisan Credit Card ಯೋಜನೆಯ ಉದ್ದೇಶವೇ ರೈತರಿಗೆ ಬೇಗನೆ, ಸರಳವಾಗಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಹಣ ನೀಡುವುದು. ಈ ಯೋಜನೆಯ ಅಡಿಯಲ್ಲಿ ಈಗ ₹5 ಲಕ್ಷವರೆಗೆ ಭದ್ರತೆ ಇಲ್ಲದೆ (Collateral Free) ಸಾಲ ಪಡೆಯಲು ಅವಕಾಶವಿದೆ. ಇದರಿಂದ ಅನೌಪಚಾರಿಕ ಸಾಲದ ಕಠಿಣತೆಗಳನ್ನು ಎದುರಿಸುತ್ತಿರುವ ರೈತರಿಗೆ ಹಿತಕರ ಪರಿಹಾರ ಸಿಕ್ಕಂತಾಗಿದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯದ ಲಾಭ:
Kisan Credit Card ಕೆಸಿಸಿ ಯೋಜನೆಯಡಿ ನೀಡಲಾಗುವ ಸಾಲದ ಬಡ್ಡಿದರವು 7% ಇರುತ್ತದೆ. ಆದರೆ ಬಡ್ಡಿದರ ಸಬ್ಸಿಡಿಯೊಂದಿಗೆ ಸಮರ್ಪಕವಾಗಿ 4% ದಕ್ಕೆ ಇಳಿಯಬಹುದು. ಈ ಸಬ್ಸಿಡಿ ಪಡೆಯಲು ರೈತರು ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು.

ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಸದುಪಯೋಗ:
ಈ ಯೋಜನೆಯ ಲಾಭವನ್ನು ಕೇವಲ ಬೆಳೆ ಬೆಳೆದ ರೈತರು ಮಾತ್ರವಲ್ಲದೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿರುವವರು ಕೂಡ ಪಡೆಯಬಹುದು.

ರೈತರಿಗೆ ಎಚ್ಚರಿಕೆ:
ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಇನ್ಶುರನ್ಸ್ ಸಬ್ಸಿಡಿ ಹಾಗೂ ಬಡ್ಡಿದರ ರಿಯಾಯಿತಿ ಲಭ್ಯವಾಗುತ್ತದೆ. ಹಾಗಾಗಿ ನಿರ್ಧಿಷ್ಟ ಅವಧಿಯಲ್ಲಿ ಸಾಲ ತೀರಿಸುವುದು ಅನಿವಾರ್ಯ.

👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

🔗Ration Card Cancellation List 2025: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ! ಬಿಪಿಎಲ್ ಕಾರ್ಡ್ ಪಡೆಯಲು ಹೊಸ ಅರ್ಹತೆ ಏನು?

🔗Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

🔗2025-26 ಬಜೆಟ್ ಪ್ರಕಾರ ಆಶಾ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಬಂಪರ್ ಸುದ್ದಿ: ರಾಜ್ಯ ಸರ್ಕಾರದಿಂದ ಗೌರವಧನ ಹೆಚ್ಚಳ!

🔗Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ!

🔗Panchamitra WhatsApp Chat: ಪಂಚಮಿತ್ರ ಸೇವೆ WhatsApp ಮೂಲಕ ನೇರವಾಗಿ ನಿಮ್ಮ ಗ್ರಾಮಪಂಚಾಯಿತಿಯ 15+ ಸರ್ಕಾರಿ ಸೇವೆಗಳನ್ನು ಪಡೆಯಿರಿ!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Share and Spread the love

Leave a Reply

Your email address will not be published. Required fields are marked *

ಮುಖಪುಟ ಉದ್ಯೋಗ ಶಿಕ್ಷಣ English Blogs