Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು (KVLDCL) 2026-27ನೇ ಸಾಲಿಗೆ ವಿವಿಧ ಕಲ್ಯಾಣ ಯೋಜನೆಗಳಡಿ ಸಾಲ ಹಾಗೂ ಸಹಾಯಧನಕ್ಕಾಗಿ ಆನ್‌ಲೈನ್ ಅರ್ಜಿ!

  • Picture of Gundijalu Shwetha By Gundijalu Shwetha
  • Published On: September 2, 2026
KVLDC loan: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು (KVLDCL) 2026-27ನೇ ಸಾಲಿಗೆ ವಿವಿಧ ಕಲ್ಯಾಣ ಯೋಜನೆಗಳಡಿ ಸಾಲ ಹಾಗೂ ಸಹಾಯಧನಕ್ಕಾಗಿ ಆನ್‌ಲೈನ್ ಅರ್ಜಿ!

KVLDC loan: ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನ ವಿವಿಧ ಸಾಲ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಶೈಕ್ಷಣಿಕ ಸಾಲ ಮತ್ತು ವಾಹನ ಖರೀದಿಗೆ ಸಹಾಯಧನ ಪಡೆಯಲು ಸೆಪ್ಟೆಂಬರ್ 30ರೊಳಗೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ.

WhatsApp Channel
Join Now
Telegram Channel
Join Now

ರಾಜ್ಯದ ಪ್ರವರ್ಗ-3B ಯಲ್ಲಿ ಬರುವ ವೀರಶೈವ-ಲಿಂಗಾಯತ ಸಮುದಾಯದ ಜನರ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ Karnataka Veerashaiva Lingayat Development Corporation 2026-27ನೇ ಸಾಲಿಗೆ ವಿವಿಧ ಸಾಲ (KVLDC loan) ಮತ್ತು ಸಹಾಯಧನ ಯೋಜನೆಗಳಡಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

KVLDC loan: ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು (KVLDCL) 2026-27ನೇ ಸಾಲಿಗೆ ವಿವಿಧ ಕಲ್ಯಾಣ ಯೋಜನೆಗಳಡಿ ಸಾಲ ಹಾಗೂ ಸಹಾಯಧನಕ್ಕಾಗಿ ಆನ್‌ಲೈನ್ ಅರ್ಜಿ!

1. ಶೈಕ್ಷಣಿಕ ಸಾಲ ಯೋಜನೆಗಳು

ಬಸವ ಬೆಳಗು ಯೋಜನೆ (ಹೊಸ ವಿದ್ಯಾರ್ಥಿಗಳಿಗೆ)

ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಲು ನೆರವಾಗುವ ಅತ್ಯುತ್ತಮ Education loan in Karnataka ಇದಾಗಿದೆ.

  • ಅರ್ಹತೆ: ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಗರಿಷ್ಠ ₹3.50 ಲಕ್ಷದೊಳಗಿರಬೇಕು.
  • ಕೋರ್ಸ್‌ಗಳು: ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ 28 ವೃತ್ತಿಪರ ಕೋರ್ಸ್‌ಗಳು.
  • ಷರತ್ತು: CET, NEET ಮುಂತಾದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದಡಿ ಸೀಟು ಪಡೆದಿರಬೇಕು.
  • ಸಾಲದ ಮೊತ್ತ: ವಾರ್ಷಿಕ ಗರಿಷ್ಠ ₹1.00 ಲಕ್ಷದಂತೆ, ಕೋರ್ಸ್‌ನ ಅವಧಿಗೆ ಗರಿಷ್ಠ ₹4.00 ಲಕ್ಷದಿಂದ ₹5.00 ಲಕ್ಷಗಳವರೆಗೆ.
  • ಬಡ್ಡಿ ದರ: ಕೇವಲ ಶೇ. 2ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ.

ಬಸವ ಬೆಳಗು ಯೋಜನೆ (ನವೀಕರಣ – Renewals)

ಹಿಂದಿನ ವರ್ಷಗಳಲ್ಲಿ ನಿಗಮದಿಂದ ಸಾಲ ಪಡೆದ ವಿದ್ಯಾರ್ಥಿಗಳು ಮುಂದಿನ ವರ್ಷದ ವ್ಯಾಸಂಗಕ್ಕೆ ನವೀಕರಣ ಸಾಲ ಪಡೆಯಲು ಹಿಂದಿನ ವರ್ಷದ ಅಂಕಪಟ್ಟಿ ಹಾಗೂ ವ್ಯಾಸಂಗ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.

ವಿದೇಶ ವ್ಯಾಸಂಗ ಸಾಲ ಯೋಜನೆ

ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಭಾರಿ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ.

  • ಅರ್ಹತೆ: ಕುಟುಂಬದ ವಾರ್ಷಿಕ ಆದಾಯ ₹15.00 ಲಕ್ಷದೊಳಗಿರಬೇಕು.
  • ಕೋರ್ಸ್‌ಗಳು: QS World Ranking ನಲ್ಲಿ 1000 ರೊಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಗ್ರಾಜುಯೇಷನ್, ಪಿಎಚ್‌ಡಿ (Ph.D), ಮಾಸ್ಟರ್ ಡಿಗ್ರಿ ವ್ಯಾಸಂಗ.
  • ಸಾಲದ ಮೊತ್ತ: ವಾರ್ಷಿಕ ಗರಿಷ್ಠ ₹25.00 ಲಕ್ಷದಂತೆ, 3 ವರ್ಷದ ಅವಧಿಗೆ ಒಟ್ಟು ಗರಿಷ್ಠ ₹50.00 ಲಕ್ಷ ಸಾಲ.
  • ಬಡ್ಡಿ ದರ: ವಾರ್ಷಿಕ ಶೇ. 6ರ ಬಡ್ಡಿ ದರ.

2. ಜೀವಜಲ ಯೋಜನೆ (ಗಂಗಾ ಕಲ್ಯಾಣ)

ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಉಚಿತ ಕೊಳವೆ ಬಾವಿ ಕೊರೆಸುವ Ganga Kalyana Scheme 2026 ರೈತರಿಗೆ ವರದಾನವಾಗಿದೆ.

  • ಆದಾಯ ಮಿತಿ: ಗ್ರಾಮಾಂತರ ಪ್ರದೇಶದವರಿಗೆ ₹98,000 ಹಾಗೂ ಪಟ್ಟಣ ಪ್ರದೇಶದವರಿಗೆ ₹1,20,000.
  • ಜಮೀನು ಮಿತಿ: ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಇರಬೇಕು. ಇತರೆ ಜಿಲ್ಲೆಗಳಲ್ಲಿ ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರುವ ರೈತರು ಮಾತ್ರ ಇದಕ್ಕೆ ಅರ್ಹರು.
  • ಅಗತ್ಯ ದಾಖಲೆಗಳು: Farmer’s FRUITS ID ಮತ್ತು ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಕಡ್ಡಾಯ.
ಜಿಲ್ಲೆಗಳುಒಟ್ಟು ಘಟಕ ವೆಚ್ಚಬೋರ್‌ವೆಲ್ ಡ್ರಿಲ್ಲಿಂಗ್ & ಪಂಪ್‌ಸೆಟ್ವಿದ್ಯುತ್ ಸರಬರಾಜು ಬಾಬ್ತುಸಾಲದ ಮೊತ್ತ (ಶೇ. 4 ಬಡ್ಡಿ)
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು (6 ಜಿಲ್ಲೆಗಳು)₹ 4,75,000₹ 3,50,000₹ 75,000₹ 50,000
ಉಳಿದ 25 ಜಿಲ್ಲೆಗಳು₹ 3,75,000₹ 2,50,000₹ 75,000₹ 50,000

3. ಕಾಯಕಕಿರಣ ಯೋಜನೆ (ಸ್ವಯಂ ಉದ್ಯೋಗ)

ನಿರುದ್ಯೋಗಿಗಳು ಸ್ವಂತ ಉದ್ಯೋಗ ಶುರು ಮಾಡಲು ಆರ್ಥಿಕ ನೆರವು ನೀಡುವ ಯೋಜನೆ.

ಘಟಕ ವೆಚ್ಚಸಹಾಯಧನ (ಸಬ್ಸಿಡಿ) ಮೊತ್ತಸಾಲದ ಮೊತ್ತಬಡ್ಡಿ ದರ
₹ 1,00,000₹ 20,000₹ 80,000ಶೇ. 4%
₹ 2,00,000₹ 30,000₹ 1,70,000ಶೇ. 4%

4. ಸ್ವಾವಲಂಬಿ ಸಾರಥಿ ಯೋಜನೆ

ನಿರುದ್ಯೋಗಿ ಯುವಕ-ಯುವತಿಯರು ಟ್ಯಾಕ್ಸಿ, ಗೂಡ್ಸ್ ವಾಹನ ಮುಂತಾದ ನಾಲ್ಕು ಚಕ್ರದ ವಾಣಿಜ್ಯ ವಾಹನಗಳನ್ನು (ಹಳದಿ ಬೋರ್ಡ್) ಖರೀದಿಸಿ ಸ್ವಯಂ ಉದ್ಯೋಗ ಕಂಡುಕೊಳ್ಳಲು Swavalambi Sarathi Scheme ನೆರವಾಗುತ್ತದೆ.

  • ಸಬ್ಸಿಡಿ ವಿವರ: ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಪಡೆಯುವ ವಾಹನ ಸಾಲಕ್ಕೆ ಶೇ. 50ರಷ್ಟು ಅಥವಾ ಗರಿಷ್ಠ ₹3.00 ಲಕ್ಷಗಳ ಸಹಾಯಧನ (ಸಬ್ಸಿಡಿ) ನಿಗಮದಿಂದ ಸಿಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕಿನ ಬಡ್ಡಿ ದರದಲ್ಲಿ ಸಾಲ ಪಡೆಯಬೇಕು.
  • ವಯೋಮಿತಿ: 21 ರಿಂದ 45 ವರ್ಷಗಳು.

5. ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ

ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಸರ್ಕಾರಿ ತರಬೇತಿ ಸಂಸ್ಥೆಗಳಾದ ITI, GTTC, KGTTI, ATDC, VTU ಮೂಲಕ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಯೋಜನೆ.

  • ಅರ್ಹತೆ: 10ನೇ ತರಗತಿ, ಪಿಯುಸಿ, ಐಟಿಐ, ಡಿಪ್ಲೊಮಾ ಅಥವಾ ಪದವಿ ಮುಗಿಸಿರಬೇಕು.
  • ವಯೋಮಿತಿ: 18 ರಿಂದ 25 ವರ್ಷಗಳು.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ₹8.00 ಲಕ್ಷಗಳಿಗಿಂತ ಕಡಿಮೆ ಇರಬೇಕು.
  • ಅರ್ಜಿ ಸಲ್ಲಿಕೆ: ಕೌಶಲ್ ಕರ್ ಪೋರ್ಟಲ್ (https://www.kaushalkar.com) ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ಷರತ್ತುಗಳು ಹಾಗೂ ನಿಯಮಗಳು

  • ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.
  • ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೊಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಹರು.
  • KVLDC loan apply online ಪ್ರಕ್ರಿಯೆಯು ಸೇವಾ ಸಿಂಧು ಪೋರ್ಟಲ್, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಡೆಯುತ್ತದೆ.
  • 2024-25 ಹಾಗೂ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ, ಆಯ್ಕೆ ಸಮಿತಿಗಳ ಮುಂದೆ ಮಂಜೂರಾತಿಗೆ ಬಾಕಿ ಇರುವವರು ಈ ವರ್ಷ ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.09.2026

ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ಜಾಲತಾಣ https://kvldcl.karnataka.gov.in ಗೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆಗಳಾದ 080-22865522, 9900012351, 9900012352 ಸಂಪರ್ಕಿಸಬಹುದು.

Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Buttons

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Dakshina Kannada renamed to Mangaluru : ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ನಿಮ್ಮ ಸಲಹೆ, ಆಕ್ಷೇಪಣೆ ಸಲ್ಲಿಸಲು 30 ದಿನಗಳ ಗಡುವು!

ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ ‘ಮಂಗಳೂರು ಜಿಲ್ಲೆ’: ನಿಮ್ಮ ಸಲಹೆ, ಆಕ್ಷೇಪಣೆ ಸಲ್ಲಿಸಲು 30 ದಿನಗಳ ಗಡುವು!

MECON Recruitment 2026: ಡಿಪ್ಲೊಮಾ, ಇಂಜಿನಿಯರಿಂಗ್ ಮುಗಿಸಿದವರಿಗೆ ಬೃಹತ್ ಅವಕಾಶ: MECON ಲಿಮಿಟೆಡ್‌ನಿಂದ 59 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಡಿಪ್ಲೊಮಾ, ಇಂಜಿನಿಯರಿಂಗ್ ಮುಗಿಸಿದವರಿಗೆ ಬೃಹತ್ ಅವಕಾಶ: MECON ಲಿಮಿಟೆಡ್‌ನಿಂದ 59 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

RRB NTPC Recruitment 2026: ರೈಲ್ವೆ ಇಲಾಖೆಯಲ್ಲಿ ಬಂಪರ್ ಆಫರ್: ಡಿಗ್ರಿ ಪಾಸಾದವರಿಗೆ 3548 'NTPC' ಹುದ್ದೆಗಳ ಬೃಹತ್ ನೇಮಕಾತಿ! ಇಂದೇ ಅರ್ಜಿ ಸಲ್ಲಿಸಿ!

ರೈಲ್ವೆ ಇಲಾಖೆಯಲ್ಲಿ ಬಂಪರ್ ಆಫರ್: ಡಿಗ್ರಿ ಪಾಸಾದವರಿಗೆ 3548 ‘NTPC’ ಹುದ್ದೆಗಳ ಬೃಹತ್ ನೇಮಕಾತಿ! ಇಂದೇ ಅರ್ಜಿ ಸಲ್ಲಿಸಿ!

Naval Dockyard Karwar Recruitment 2026: 8th, 10th ಮತ್ತು ITI ಪಾಸಾದವರಿಗೆ ಬಂಪರ್ ಆಫರ್: ಕಾರವಾರ ನೇವಲ್ ಡಾಕ್‌ಯಾರ್ಡ್‌ನಿಂದ 210 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

8th, 10th ಮತ್ತು ITI ಪಾಸಾದವರಿಗೆ ಬಂಪರ್ ಆಫರ್: ಕಾರವಾರ ನೇವಲ್ ಡಾಕ್‌ಯಾರ್ಡ್‌ನಿಂದ 210 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

Muskaan Scholarship 2026-27: 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಖಾತೆಗೆ ಬರಲಿದೆ ₹12,000 ಸ್ಕಾಲರ್‌ಶಿಪ್! ಇಂದೇ ಅಪ್ಲೈ ಮಾಡಿ

9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಖಾತೆಗೆ ಬರಲಿದೆ ₹12,000 ಸ್ಕಾಲರ್‌ಶಿಪ್! ಇಂದೇ ಅಪ್ಲೈ ಮಾಡಿ

PrevPreviousಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಬಂಪರ್ ಯೋಜನೆಗಳು! ₹50 ಲಕ್ಷದವರೆಗೆ ಸಾಲ, ₹3 ಲಕ್ಷ ಸಬ್ಸಿಡಿ!
Nextಕೊಡಗು ಜಿಲ್ಲಾ ಕೋರ್ಟ್‌ನಲ್ಲಿ 10th ಮತ್ತು PUC ಪಾಸಾದವರಿಗೆ ಬಂಪರ್ ಆಫರ್: ಜವಾನ, ಟೈಪಿಸ್ಟ್, ಜಾರಿಕಾರ & ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ!Next
KEA VAO recruitment 2026: PUC ಪಾಸ್ ಆದವರಿಗೆ ಸರ್ಕಾರಿ ಕೆಲಸ! ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿ!

PUC ಪಾಸ್ ಆದವರಿಗೆ ಸರ್ಕಾರಿ ಕೆಲಸ! ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿ!

13 July 2026
Read More »
KSP Constable Recruitment 2026: PUC ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಬಂಪರ್: 2314 ಕಾನ್‌ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

PUC ಪಾಸ್ ಆದವರಿಗೆ ಪೊಲೀಸ್ ಇಲಾಖೆಯಲ್ಲಿ ಬಂಪರ್: 2314 ಕಾನ್‌ಸ್ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ ಪ್ರಕಟ!

13 July 2026
Read More »
Kalyana Karnataka Surveyor Recruitment 2026: KEA ಇಂದ ಹೊಸ ನೋಟಿಫಿಕೇಶನ್ ಬಿಡುಗಡೆ: 190 ಭೂಮಾಪಕ ಹುದ್ದೆಗಳಿಗೆ ಆಗಸ್ಟ್ 7ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸುವರ್ಣಾವಕಾಶ

KEA ಇಂದ ಹೊಸ ನೋಟಿಫಿಕೇಶನ್ ಬಿಡುಗಡೆ: 190 ಭೂಮಾಪಕ ಹುದ್ದೆಗಳಿಗೆ ಆಗಸ್ಟ್ 7ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಸುವರ್ಣಾವಕಾಶ

12 July 2026
Read More »
Page1 … Page24 Page25 Page26 Page27 Page28 … Page183
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs