Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಕೊಲ್ಲಿ ಯುದ್ಧದ ಕಿಚ್ಚು: ಭಾರತದಲ್ಲಿ ಇಂದಿನಿಂದಲೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಡ್ರೈ ಫ್ರೂಟ್ಸ್ ಕೂಡ ದುಬಾರಿ!

  • Picture of Gundijalu Shwetha By Gundijalu Shwetha
  • Published On: March 7, 2026
LPG Cylinder Price Today: ಕೊಲ್ಲಿ ಯುದ್ಧದ ಕಿಚ್ಚು: ಭಾರತದಲ್ಲಿ ಇಂದಿನಿಂದಲೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಡ್ರೈ ಫ್ರೂಟ್ಸ್ ಕೂಡ ದುಬಾರಿ!

LPG Cylinder Price Today: ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಇಂದಿನಿಂದಲೇ ಗೃಹಬಳಕೆ ಮತ್ತು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಜೊತೆಗೆ ಮಧ್ಯಪ್ರಾಚ್ಯದಿಂದ ಆಮದಾಗುವ ಡ್ರೈ ಫ್ರೂಟ್ಸ್ ಬೆಲೆಯೂ ಗಗನಕ್ಕೇರುವ ಭೀತಿ ಎದುರಾಗಿದೆ. ಬೆಲೆ ಏರಿಕೆಯ ಸಂಪೂರ್ಣ ವರದಿ ಇಲ್ಲಿದೆ.

ಯುದ್ಧದ ಎಫೆಕ್ಟ್: ಇಂದಿನಿಂದಲೇ ಗ್ಯಾಸ್ ಸಿಲಿಂಡರ್, ಡ್ರೈ ಫ್ರೂಟ್ಸ್ ರೇಟ್ ದುಬಾರಿ! ಸಾಮಾನ್ಯರ ಜೇಬಿಗೆ ಬೀಳುತ್ತಾ ಕತ್ತರಿ?

ನಮಸ್ಕಾರ ಸ್ನೇಹಿತರೆ. ಒಂದು ಕಡೆ ಪ್ರಪಂಚದ ನಕ್ಷೆಯಲ್ಲಿ ಶಾಂತಿ ನೆಲೆಸುವ ಬದಲು ದಿನೇ ದಿನೇ ಯುದ್ಧದ ಕಾರ್ಮೋಡಗಳು ಕವಿಯುತ್ತಿವೆ. ಮಧ್ಯಪ್ರಾಚ್ಯದಲ್ಲಿ, ಅಂದರೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ಭುಗಿಲೆದ್ದಿರುವ ಮಿಲಿಟರಿ ಸಂಘರ್ಷದ ಬಿಸಿ ಈಗ ನೇರವಾಗಿ ಭಾರತೀಯರ ಅಡುಗೆ ಮನೆಗೆ ತಟ್ಟಲು ಶುರುವಾಗಿದೆ. ಹೌದು, ನೀವು ಕೇಳುತ್ತಿರುವುದು ನಿಜ. ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ವೆಚ್ಚ ತೀವ್ರವಾಗಿ ಏರಿಕೆಯಾಗಿದ್ದು, ಇದರ ನೇರ ಎಫೆಕ್ಟ್ ನಮ್ಮ ಗೃಹಬಳಕೆಯ ಎಲ್‌ಪಿಜಿ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಮೇಲಾಗಿದೆ. ಅಷ್ಟೇ ಅಲ್ಲದೆ, ಮಧ್ಯಪ್ರಾಚ್ಯದಿಂದಲೇ ಅತಿ ಹೆಚ್ಚು ಆಮದಾಗುವ ಡ್ರೈ ಫ್ರೂಟ್ಸ್ ಕೂಡ ಮುಂದಿನ ದಿನಗಳಲ್ಲಿ ಸಾಮಾನ್ಯರಿಗೆ ಗಗನಕುಸುಮವಾಗುವ ಲಕ್ಷಣಗಳು ಕಾಣುತ್ತಿವೆ.

WhatsApp Channel
Join Now
Telegram Channel
Join Now

ಈ ಲೇಖನದಲ್ಲಿ ನಾವು ಈ ಬೆಲೆ ಏರಿಕೆಯ ಹಿಂದಿನ ಕಾರಣಗಳೇನು? ಈಗ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಾಗಿದೆ? ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಈ ಬೆಲೆ ಏರಿಕೆ ಅನ್ವಯಿಸುತ್ತಾ? ಮತ್ತು ಡ್ರೈ ಫ್ರೂಟ್ಸ್ ಮಾರುಕಟ್ಟೆಯ ಇಂದಿನ ಪರಿಸ್ಥಿತಿ ಹೇಗಿದೆ ಅನ್ನೋದನ್ನ ವಿವರವಾಗಿ ನೋಡೋಣ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಏರಿಕೆ: ಯಾವ ಸಿಲಿಂಡರ್‌ಗೆ ಎಷ್ಟು ರೇಟ್?

LPG Cylinder Price Hike: ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತನ್ನ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ದರಗಳನ್ನು ಪ್ರಕಟಿಸಿದ್ದು, ಈ ಹೊಸ ದರಗಳು ಮಾರ್ಚ್ 7 ಅಂದರೆ ಇಂದಿನಿಂದಲೇ ಜಾರಿಗೆ ಬರಲಿವೆ.

  • ಗೃಹ ಬಳಕೆಯ ಸಿಲಿಂಡರ್: ಸಾಮಾನ್ಯ ಜನರು ಅಡುಗೆ ಮನೆಯಲ್ಲಿ ಬಳಸುವ ಸಬ್ಸಿಡಿ ರಹಿತ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 60 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ.
  • ವಾಣಿಜ್ಯ ಸಿಲಿಂಡರ್: ಹೋಟೆಲ್, ರೆಸ್ಟೋರೆಂಟ್ ಮತ್ತು ಬೇಕರಿಗಳಲ್ಲಿ ಬಳಸುವ 19 ಕೆಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 114.5 ರೂ.ಗಳಷ್ಟು ಭಾರಿ ಏರಿಕೆ ಮಾಡಲಾಗಿದೆ. (ಗಮನಿಸಿ: ಮಾರ್ಚ್ 1 ರಂದಷ್ಟೇ ಈ ವಾಣಿಜ್ಯ ಸಿಲಿಂಡರ್‌ಗೆ 28 ರೂ. ಹೆಚ್ಚಿಸಲಾಗಿತ್ತು. ಈಗ ಮತ್ತೆ ಏರಿಕೆಯಾಗಿದೆ).
LPG Cylinder Price Today: ಕೊಲ್ಲಿ ಯುದ್ಧದ ಕಿಚ್ಚು: ಭಾರತದಲ್ಲಿ ಇಂದಿನಿಂದಲೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಡ್ರೈ ಫ್ರೂಟ್ಸ್ ಕೂಡ ದುಬಾರಿ!

ಪ್ರಮುಖ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ (14.2 ಕೆಜಿ) ದರಗಳ ವಿವರ:LPG Cylinder Price Today

  • ನವದೆಹಲಿಯಲ್ಲಿ: 913 ರೂ.
  • ಮುಂಬೈನಲ್ಲಿ: 912.50 ರೂ.
  • ಚೆನ್ನೈನಲ್ಲಿ: 928.50 ರೂ.
  • ಕೋಲ್ಕತ್ತಾದಲ್ಲಿ: 939 ರೂ.

(ನಿಮ್ಮ ಸ್ಥಳೀಯ ವ್ಯಾಟ್ ಮತ್ತು ಮಾರಾಟ ತೆರಿಗೆಯ ಆಧಾರದ ಮೇಲೆ ನಿಮ್ಮ ಊರಿನಲ್ಲಿ ಬೆಲೆಗಳು ಸ್ವಲ್ಪ ಬದಲಾಗಬಹುದು). ಕಳೆದ ವರ್ಷದ ಏಪ್ರಿಲ್‌ನಲ್ಲಿ ಕೊನೆಯದಾಗಿ ಗ್ಯಾಸ್ ಬೆಲೆಯನ್ನು 50 ರೂ. ಹೆಚ್ಚಿಸಲಾಗಿತ್ತು. ಆನಂತರ, ಕಳೆದ 11 ತಿಂಗಳಲ್ಲಿ ಇದು ಎರಡನೇ ಬಾರಿಗೆ ಆಗುತ್ತಿರುವ ಬೆಲೆ ಏರಿಕೆಯಾಗಿದೆ.

ಉಜ್ವಲ ಫಲಾನುಭವಿಗಳಿಗೆ ಟೆನ್ಷನ್ ಇದೆಯಾ?

ಇಲ್ಲ! 2016ರಲ್ಲಿ ಶುರುವಾದ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಅಡಿಯಲ್ಲಿ ಉಚಿತ ಎಲ್‌ಪಿಜಿ ಕನೆಕ್ಷನ್ ಪಡೆದಿರುವ ದೇಶದ 10 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಈ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ. ಅವರಿಗೆ ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಿಗುತ್ತಿರುವ 300 ರೂ.ಗಳ ಸಬ್ಸಿಡಿ (Subsidy) ಎಂದಿನಂತೆ ಮುಂದುವರಿಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಜಾಗತಿಕವಾಗಿ ಇಂಧನ ಬೆಲೆ ಏರುತ್ತಿದ್ದರೂ, ನಮ್ಮ ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಇನ್ನೂ ಗ್ಯಾಸ್ ಬೆಲೆ ಕಡಿಮೆಯಾಗಿಯೇ ಇದೆ ಎನ್ನುತ್ತಾರೆ ತಜ್ಞರು. ಇದು LPG cylinder price today ನ ತಾಜಾ ಪರಿಸ್ಥಿತಿ.

ಡ್ರೈ ಫ್ರೂಟ್ಸ್ ಪ್ರಿಯರಿಗೆ ಕಾದಿದೆ ಆತಂಕ!

ಗ್ಯಾಸ್ ಸಿಲಿಂಡರ್ ಕಥೆಯಾದರೆ, ಇತ್ತ ಡ್ರೈ ಫ್ರೂಟ್ಸ್ ಮಾರುಕಟ್ಟೆಯಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಭಾರತಕ್ಕೆ ಬರುವ ಬಹುಪಾಲು ಡ್ರೈ ಫ್ರೂಟ್ಸ್ (Dry Fruits) ಅಂದರೆ ಅಂಜೂರ, ಪಿಸ್ತಾ, ಖರ್ಜೂರ ಮತ್ತು ಬಾದಾಮಿ ಬರುವುದು ಇದೇ ಯುದ್ಧ ಪೀಡಿತ ಮಧ್ಯಪ್ರಾಚ್ಯ ದೇಶಗಳಿಂದ, ವಿಶೇಷವಾಗಿ ಇರಾನ್‌ನಿಂದ.

ಇರಾನ್-ಇಸ್ರೇಲ್ ನಡುವೆ ಯುದ್ಧ ಶುರುವಾಗಿರುವುದರಿಂದ ಜಾಗತಿಕ ವ್ಯಾಪಾರ, ವಿಶೇಷವಾಗಿ ಹಡಗು ಮಾರ್ಗಗಳ ಮೂಲಕ ನಡೆಯುವ ಆಮದು ರಫ್ತು ವ್ಯವಹಾರದಲ್ಲಿ ದೊಡ್ಡ ಮಟ್ಟದ ಅನಿಶ್ಚಿತತೆ ಉಂಟಾಗಿದೆ. ಹೀಗಾಗಿ, ಭಾರತಕ್ಕೆ ಬರುವ ಡ್ರೈ ಫ್ರೂಟ್ಸ್ ಆಮದು ಸ್ಥಗಿತಗೊಂಡರೆ ಮುಂದಿನ ದಿನಗಳಲ್ಲಿ ಇವುಗಳ ಬೆಲೆ ಗಣನೀಯವಾಗಿ ಏರುವ ಭೀತಿ ಶುರುವಾಗಿದೆ.

ರಂಜಾನ್ ಹಬ್ಬದ ಹಿನ್ನೆಲೆ, ಸದ್ಯಕ್ಕಿಲ್ಲ ಸಮಸ್ಯೆ!

ಈಗಾಗಲೇ ದಿನಸಿ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಡ್ರೈ ಫ್ರೂಟ್ಸ್ ದುಬಾರಿಯಾಗುತ್ತೆ ಅಂದರೆ ಟೆನ್ಷನ್ ಆಗೋದು ಸಹಜ. ಆದರೆ ಮಾರುಕಟ್ಟೆಯ ವ್ಯಾಪಾರಿಗಳು ಹೇಳುವ ಪ್ರಕಾರ, ಸದ್ಯಕ್ಕೆ ಗಾಬರಿ ಪಡುವ ಅವಶ್ಯಕತೆಯಿಲ್ಲ. ಏಕೆಂದರೆ, ಪ್ರಸ್ತುತ ರಂಜಾನ್ ಹಬ್ಬದ ಸೀಸನ್ ಆಗಿರುವುದರಿಂದ, ದೊಡ್ಡ ದೊಡ್ಡ ವ್ಯಾಪಾರಿಗಳು ಕನಿಷ್ಠ ಎರಡು-ಮೂರು ತಿಂಗಳ ಹಿಂದೆಯೇ ಬೃಹತ್ ಪ್ರಮಾಣದಲ್ಲಿ ಸ್ಟಾಕ್ ತರಿಸಿಟ್ಟುಕೊಂಡಿದ್ದಾರೆ. ಹಾಗಾಗಿ, ಈಗ ಮಾರುಕಟ್ಟೆಯಲ್ಲಿ ಯಾವುದೇ ದಿಢೀರ್ ದರ ಏರಿಕೆ ಕಂಡುಬಂದಿಲ್ಲ. Dry fruits market trends ಸದ್ಯಕ್ಕೆ ಸ್ಥಿರವಾಗಿದೆ.

ಆದರೆ, ಯುದ್ಧ ದೀರ್ಘಕಾಲದವರೆಗೆ ಮುಂದುವರಿದರೆ, ಇರಾನ್ ಮತ್ತು ಇತರ ದೇಶಗಳಿಂದ ಹೊಸ ಸ್ಟಾಕ್ ಬರುವುದು ನಿಂತುಹೋಗುತ್ತದೆ. ಆಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ, ಪೂರೈಕೆ ಕಡಿಮೆಯಾಗುವುದರಿಂದ ಸಹಜವಾಗಿಯೇ ಬೆಲೆಗಳು ನಾಲ್ಕೈದು ಪಟ್ಟು ಏರಿದರೂ ಆಶ್ಚರ್ಯವಿಲ್ಲ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್ ಬೆಲೆ ಎಷ್ಟಿದೆ?

ಇರಾನ್ ಮತ್ತಿತರ ಭಾಗಗಳಿಂದ ಬಂದಿರುವ ಡ್ರೈ ಫ್ರೂಟ್ಸ್‌ಗಳ ಇಂದಿನ ಅಂದಾಜು ಬೆಲೆಗಳು (ಕೆಜಿಗೆ) ಹೀಗಿವೆ:

  • ಬಾದಾಮಿ: 920 ರೂ.
  • ಖರ್ಜೂರ: 1,300 ರೂ.
  • ಪಿಸ್ತಾ: 1,800 ರೂ.
  • ಪ್ಲೇನ್ ಪಿಸ್ತಾ: 2,400 ರೂ.
  • ವಾಲ್‌ನಟ್ (ಅಕ್ರೋಟ್): 2,000 ರೂ.
  • ಒಣ ದ್ರಾಕ್ಷಿ: 880 ರೂ.
  • ಕೇಸರಿ: 1 ಗ್ರಾಂಗೆ 450 ರೂ.

ಒಂದು ವೇಳೆ ಡ್ರೈ ಫ್ರೂಟ್ಸ್ ಬೆಲೆ ಏರಿಕೆಯಾದರೆ ಅದರ ನೇರ ಪರಿಣಾಮ ಕೇವಲ ಮನೆಗಳಿಗಷ್ಟೇ ಅಲ್ಲ, ಐಸ್‌ಕ್ರೀಮ್ ಪಾರ್ಲರ್‌ಗಳು, ಬೇಕರಿಗಳು, ಸ್ವೀಟ್ ಸ್ಟಾಲ್‌ಗಳು ಮತ್ತು ಹೋಟೆಲ್ ಉದ್ಯಮಕ್ಕೂ ತಟ್ಟಲಿದೆ. ಏಕೆಂದರೆ ಈ ಉದ್ಯಮಗಳಲ್ಲಿ ಡ್ರೈ ಫ್ರೂಟ್ಸ್‌ಗಳನ್ನು ಪ್ರಮುಖ ಪದಾರ್ಥಗಳಾಗಿ ಬಳಸಲಾಗುತ್ತದೆ. ಇದರಿಂದಾಗಿ ನಾವು ತಿನ್ನುವ ಸಿಹಿತಿಂಡಿಗಳ ಬೆಲೆಯೂ ಹೆಚ್ಚಾಗಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಅದರ ಆರ್ಥಿಕ ಪರಿಣಾಮ ಇಡೀ ಪ್ರಪಂಚದ ಮೇಲೆ ಬೀರುತ್ತದೆ ಎನ್ನುವುದಕ್ಕೆ ಈ Impact of Middle East war on India ಉತ್ತಮ ಉದಾಹರಣೆಯಾಗಿದೆ. ಯುದ್ಧ ಆದಷ್ಟು ಬೇಗ ನಿಂತು, ವಾಣಿಜ್ಯ ವ್ಯವಹಾರಗಳು ಸುಗಮವಾಗಿ ನಡೆಯಲಿ, ಬೆಲೆ ಏರಿಕೆಯ ಬರೆಯಿಂದ ಜನಸಾಮಾನ್ಯರು ಪಾರಾಗಲಿ ಎನ್ನುವುದೇ ಎಲ್ಲರ ಹಾರೈಕೆ

ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp, Facebook & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now

ಸರ್ಕಾರಿ ಉದ್ಯೋಗಗಳ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತ ಹಾಗೂ ಆರೋಗ್ಯ ಮತ್ತು ಹೆಲ್ತ್ ಟಿಪ್ಸ್ ಗಳ ಬಗ್ಗೆ/ಪ್ರಮುಖ ಅಂತಾರಾಷ್ಟ್ರೀಯ ಮತ್ತು ಆರ್ಥಿಕ ಸುದ್ದಿಗಳಿಗಾಗಿ quicknewztoday.com  ಭೇಟಿ ಮಾಡಿ.

Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

KEA UGCET 2026 ಫಲಿತಾಂಶ ಔಟ್: ಕೆಇಎ ವೆಬ್‌ಸೈಟ್ ಕ್ರಾಶ್‌; ರಿಸಲ್ಟ್ ನೋಡೋದು ಹೇಗೆ?

KEA UGCET 2026 ಫಲಿತಾಂಶ ಔಟ್: ಕೆಇಎ ವೆಬ್‌ಸೈಟ್ ಕ್ರಾಶ್‌; ರಿಸಲ್ಟ್ ನೋಡೋದು ಹೇಗೆ?

Karnataka Police Civil Constable recruitment 2026: ಪಿಯುಸಿ ಪಾಸ್ ಆದವರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3991 ಸಿವಿಲ್ ಕಾನ್ಸ್​​ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ!

ಪಿಯುಸಿ ಪಾಸ್ ಆದವರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 3991 ಸಿವಿಲ್ ಕಾನ್ಸ್​​ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ!

ಡಿಗ್ರಿ ಆದವರಿಗೆ ಬಂಪರ್ ಆಫರ್! AFCAT 02/2026: ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳು!

ಡಿಗ್ರಿ ಆದವರಿಗೆ ಬಂಪರ್ ಆಫರ್! AFCAT 02/2026: ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳು!

KEA Agriculture Officer Recruitment 2026: ಬಿ.ಎಸ್ಸಿ ಅಗ್ರಿ/ ಬಿ.ಟೆಕ್ ಆದವರಿಗೆ ಭರ್ಜರಿ ಗುಡ್ ನ್ಯೂಸ್: KEA ಕಡೆಯಿಂದ ಕೃಷಿ ಇಲಾಖೆಯಲ್ಲಿ 945 AO ಮತ್ತು AAO ಹುದ್ದೆಗಳ ಬೃಹತ್ ನೇಮಕಾತಿ!

ಬಿ.ಎಸ್ಸಿ ಅಗ್ರಿ/ ಬಿ.ಟೆಕ್ ಆದವರಿಗೆ ಭರ್ಜರಿ ಗುಡ್ ನ್ಯೂಸ್: KEA ಕಡೆಯಿಂದ ಕೃಷಿ ಇಲಾಖೆಯಲ್ಲಿ 945 AO ಮತ್ತು AAO ಹುದ್ದೆಗಳ ಬೃಹತ್ ನೇಮಕಾತಿ!

Electric Vehicle : ಎಲೆಕ್ಟ್ರಿಕ್ ಕಾರು ಕೊಳ್ಳುವುದು ಬೆಸ್ಟಾ ಅಥವಾ ಪೆಟ್ರೋಲ್ ಕಾರಾ?: ಪೆಟ್ರೋಲ್ ಕಾರಿಗಿಂತ 16 ಲಕ್ಷ ರೂ. ಉಳಿತಾಯ ಆಗೋದು ಹೇಗೆ?

ಎಲೆಕ್ಟ್ರಿಕ್ ಕಾರು ಕೊಳ್ಳುವುದು ಬೆಸ್ಟಾ ಅಥವಾ ಪೆಟ್ರೋಲ್ ಕಾರಾ?: ಪೆಟ್ರೋಲ್ ಕಾರಿಗಿಂತ 16 ಲಕ್ಷ ರೂ. ಉಳಿತಾಯ ಆಗೋದು ಹೇಗೆ?

PrevPreviousKarnataka Budget 2026-27: A Massive Leap Forward for Energy and Technology
Nextಇಂಡಿಯಾ ಪೋಸ್ಟ್ GDS Result 2026 ಪ್ರಕಟ! ಮೊಬೈಲ್‌ನಲ್ಲೇ ನಿಮ್ಮ ರಿಸಲ್ಟ್ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ ಡೇಟ್ ಚೆಕ್ ಮಾಡೋದು ಹೇಗೆ?Next
UPSC NDA 2026: ಪಿಯುಸಿ ಆದವರಿಗೆ ಸೇನೆಯಲ್ಲಿ ಡೈರೆಕ್ಟ್ ಆಫೀಸರ್ ಹುದ್ದೆ: UPSC NDA 2026ಗೆ ಅಪ್ಲೈ ಮಾಡೋದು ಹೇಗೆ?

ಪಿಯುಸಿ ಆದವರಿಗೆ ಸೇನೆಯಲ್ಲಿ ಡೈರೆಕ್ಟ್ ಆಫೀಸರ್ ಹುದ್ದೆ: UPSC NDA 2026ಗೆ ಅಪ್ಲೈ ಮಾಡೋದು ಹೇಗೆ?

1 June 2026
Read More »
NATA 2026 registration: B.Arch ಆರ್ಕಿಟೆಕ್ಟ್ ಆಗೋ ಕನಸು ಕಂಡಿದ್ದೀರಾ? ಬಂತು ಬಿಗ್ ಅಪ್ಡೇಟ್: NATA 2026 ರಿಜಿಸ್ಟ್ರೇಷನ್ ಶುರು! ಲಾಸ್ಟ್ ಡೇಟ್ ಮಿಸ್ ಮಾಡ್ಕೋಬೇಡಿ!

B.Arch ಆರ್ಕಿಟೆಕ್ಟ್ ಆಗೋ ಕನಸು ಕಂಡಿದ್ದೀರಾ? ಬಂತು ಬಿಗ್ ಅಪ್ಡೇಟ್: NATA 2026 ರಿಜಿಸ್ಟ್ರೇಷನ್ ಶುರು! ಲಾಸ್ಟ್ ಡೇಟ್ ಮಿಸ್ ಮಾಡ್ಕೋಬೇಡಿ!

31 May 2026
Read More »
SBI Apprentice Recruitment 2026: ಡಿಗ್ರಿ ಆದವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (SBI) ಬಂಪರ್ ಆಫರ್: 7150 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಡಿಗ್ರಿ ಆದವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (SBI) ಬಂಪರ್ ಆಫರ್: 7150 ಹುದ್ದೆಗಳಿಗೆ ಅರ್ಜಿ ಆಹ್ವಾನ!

31 May 2026
Read More »
Page1 Page2 Page3 Page4 … Page138
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs