Ministry of Labour & Employment Scholarship 2025-26: 2025-26ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ: ಕಾರ್ಮಿಕರ ಮಕ್ಕಳಿಗೆ ಪ್ರಿ-ಮೆಟ್ರಿಕ್ ಮತ್ತು ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನ ಲಭ್ಯ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವ ವಿಧಾನ ಇತರೆ ಎಲ್ಲಾ ಮಾಹಿತಿಗಳನ್ನು ತಿಳಿಯಲು ಇಲ್ಲಿ ನೋಡಿ.
ಬೆಂಗಳೂರು, ಜೂನ್ 21, 2025: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಬೀಡಿ, ಸುಣ್ಣಕಲ್ಲು, ಡಾಲೊಮೈಟ್/ಕಬ್ಬಿಣದ ಗಣಿಗಳು, ಕ್ರೋಮ್, ಮ್ಯಾಂಗನೀಸ್ ಅದಿರಿನ ಗಣಿಗಳು ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ 2025-26ನೇ ಸಾಲಿನ ಶಿಕ್ಷಣಕ್ಕಾಗಿ ಆರ್ಥಿಕ ನೆರವಿನ ಅನುದಾನ ಪಡೆಯಲು ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಕಲ್ಯಾಣ ಮತ್ತು ಉಪಕರ ಆಯುಕ್ತರ ಕಚೇರಿಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
Ministry of Labour & Employment Scholarship 2025-26: ಪ್ರಮುಖ ದಿನಾಂಕಗಳು:
- ಪ್ರಿ-ಮೆಟ್ರಿಕ್ (1 ರಿಂದ 10 ನೇ ತರಗತಿ): ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 31, 2025
- ಪೋಸ್ಟ್-ಮೆಟ್ರಿಕ್ (11 ನೇ ತರಗತಿ ಮತ್ತು ಮೇಲ್ಪಟ್ಟು): ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2025
Ministry of Labour & Employment Scholarship 2025-26: ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿಗಳನ್ನು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (https://scholarships.gov.in/Students) ಮೂಲಕ ಆನ್ಲೈನ್ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಈ ಶೈಕ್ಷಣಿಕ ವರ್ಷದಿಂದ ಸ್ಕಾಲರ್ಶಿಪ್ ಅರ್ಜಿಗಳನ್ನು ಸಲ್ಲಿಸಲು ‘ಒನ್ ಟೈಮ್ ರಿಜಿಸ್ಟ್ರೇಷನ್’ ಕಡ್ಡಾಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
Ministry of Labour & Employment Scholarship 2025-26: ವಿದ್ಯಾರ್ಥಿವೇತನದ ಮೊತ್ತ:
ತರಗತಿ | ಮೊತ್ತ (ರೂ.) |
1 ರಿಂದ 4 ರವರೆಗೆ | 1000 |
5 ರಿಂದ 8 ರವರೆಗೆ | 1500 |
9 ರಿಂದ 10 ರವರೆಗೆ | 2000 |
11 ರಿಂದ 12 ರವರೆಗೆ | 3000 |
ವೃತ್ತಿಪರವಲ್ಲದ ಪದವಿ/ಸ್ನಾತಕೋತ್ತರ/ಡಿಪ್ಲೊಮಾ ಕೋರ್ಸ್ಗಳು (ಉದಾ: ಬಿಎ, ಬಿಎಸ್ಸಿ, ಬಿಬಿಎ, ಪಿಜಿಡಿಸಿಎ, ಬಿಎಸ್ಸಿ (ಕೃಷಿ)) | 6000 |
ಐಟಿಐ | 6000 |
ಪಾಲಿಟೆಕ್ನಿಕ್ | 6000 |
ವೃತ್ತಿಪರ ಪದವಿ ಕೋರ್ಸ್ಗಳು (ಉದಾ: ಬಿ.ಇ, ಬಿ.ಟೆಕ್, ಎಂಬಿಬಿಎಸ್, ಬಿಎಎಂಎಸ್, ಬಿಯುಎಂಎಸ್, ಎಂಸಿಎ, ಎಂಬಿಎ) | 25000 |
Ministry of Labour & Employment Scholarship 2025-26: ಇತರೆ ಪ್ರಮುಖ ಅಂಶಗಳು:
- ವಿದ್ಯಾರ್ಥಿವೇತನವು ಎನ್ಇಎಫ್ಟಿ ಮಾರ್ಗವಾಗಿ ಆಧಾರ್ ದೃಢೀಕೃತ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಸ್ಕೀಮ್ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಆಗುತ್ತದೆ.
- ಅರ್ಜಿ ಸಲ್ಲಿಸಲು ಮತ್ತು ಪರಿಶೀಲನೆಗೆ ನಿಗದಿಪಡಿಸಿದ ಕೊನೆಯ ದಿನಾಂಕಗಳನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅದರ ಪರಿಶೀಲನೆಯ ಹಂತವನ್ನು ಆಗಾಗ್ಗೆ ಪರಿಶೀಲಿಸಲು ಕೋರಲಾಗಿದೆ.
- ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಭರ್ತಿ ಮಾಡಲು ಮತ್ತು ಪರಿಶೀಲಿಸಲು ಸಹಾಯ ನೀಡಲು ಕೋರಲಾಗಿದೆ.
- ತಾಂತ್ರಿಕ ಸಹಾಯಕ್ಕಾಗಿ helpdesk@nsp.gov.in ಅನ್ನು ಸಂಪರ್ಕಿಸಬಹುದು ಅಥವಾ 0120-6619540 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.
- ಹೆಚ್ಚಿನ ಮಾಹಿತಿಗಾಗಿ wclwoblr-ka@nic.in ಗೆ ಅಥವಾ 080-23471406 ಸಂಖ್ಯೆಗೆ ಸಂಪರ್ಕಿಸಬಹುದು.
ಈ ಉಪಕ್ರಮವು ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಬೆಂಬಲವನ್ನು ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಸಹಾಯಕವಾಗಲಿದೆ.
👉Read More Education News/ ಇನ್ನಷ್ಟು ಶಿಕ್ಷಣ ಸುದ್ದಿ ಓದಿ
🔗SDF Vidyadhan Scholarship 2025 : ಪ್ರತಿಭಾವಂತ ಎಸ್.ಎಸ್.ಎಲ್.ಸಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನ!
🔗Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ
ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button 👇