NMDC Recruitment 2025: 995 ಹುದ್ದೆಗಳಲ್ಲಿ ಬಳ್ಳಾರಿಯಲ್ಲೂ ಉದ್ಯೋಗಾವಕಾಶ! – ಜೂನ್ 14 ಅರ್ಜಿ ಸಲ್ಲಿಸಲು ಕೊನೆಯ ದಿನ!

NMDC Recruitment 2025: 995 ಹುದ್ದೆಗಳಲ್ಲಿ ಬಳ್ಳಾರಿಯಲ್ಲೂ ಉದ್ಯೋಗಾವಕಾಶ! – ಜೂನ್ 14 ಅರ್ಜಿ ಸಲ್ಲಿಸಲು ಕೊನೆಯ ದಿನ!
Share and Spread the love

NMDC Recruitment 2025: ಕಿರಂಡುಲ್, ಬಚೆಲಿ, ದೊಣಿಮಳೈ (ಬಳ್ಳಾರಿ) ಘಟಕಗಳಲ್ಲಿ 995 ಹುದ್ದೆಗಳಿಗೆ ನೇಮಕಾತಿ. ಐಟಿಐ, ಡಿಪ್ಲೊಮಾ, ಪದವೀಧರರಿಗೆ ಅವಕಾಶ. ಅರ್ಜಿ ಕೊನೆಯ ದಿನ ಜೂನ್ 14 ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

Follow Us Section

ಸಾರ್ವಜನಿಕ ವಲಯದ ಪ್ರಮುಖ ಸ್ಟೀಲ್ ಕಂಪೆನಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (NMDC) ತನ್ನ ಕಿರಂಡುಲ್, ಬಚೆಲಿ (ಛತ್ತೀಸ್‌ಗಢ) ಹಾಗೂ ದೊಣಿಮಳೈ (ಬಳ್ಳಾರಿ, ಕರ್ನಾಟಕ) ಘಟಕಗಳಲ್ಲಿ ವಿವಿಧ ಹುದ್ದೆಗಳಿಗೆ 995 ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

ಈ ನೇಮಕಾತಿ ಆಯ್ಕೆ ಪ್ರಕ್ರಿಯೆ ಆನ್‌ಲೈನ್ ಮೂಲಕ ನಡೆಯಲಿದೆ. ಅರ್ಜಿ ಸಲ್ಲಿಸಲು ಇಚ್ಛೆ ಇರುವ ಅರ್ಹ ಅಭ್ಯರ್ಥಿಗಳು 2025ರ ಜೂನ್ 14ರೊಳಗೆ ಅರ್ಜಿ ಸಲ್ಲಿಸಬೇಕು.


🧰 ಹುದ್ದೆಗಳ ವಿವರ ಮತ್ತು ಅರ್ಹತೆ:

ಪ್ರಮುಖ ಹುದ್ದೆಗಳು ಮತ್ತು ಖಾಲಿ ಸ್ಥಾನಗಳ ಸಂಖ್ಯೆ:

  1. ಫೀಲ್ಡ್ ಅಟೆಂಡೆಂಟ್ (ಟ್ರೇನಿ) – 151 ಹುದ್ದೆಗಳು
    • ಅರ್ಹತೆ: ಮಿಡ್‌ಲ್ ಪಾಸ್ ಅಥವಾ ಐಟಿಐ
    • ವೇತನ: ₹18,000 – ₹31,850
  2. ಮೆಂಟೆನೆನ್ಸ್ ಅಸಿಸ್ಟೆಂಟ್ (ಇಲೆಕ್ಟ್ರಿಕಲ್ ಮತ್ತು ಮೆಕಾನಿಕಲ್) – 456 ಹುದ್ದೆಗಳು
    • ಅರ್ಹತೆ: ಐಟಿಐ (ಫಿಟರ್, ವೆಲ್ಡರ್, ಡೀಸೆಲ್ ಮೆಕಾನಿಕ್, ಎಲೆಕ್ಟ್ರಿಷಿಯನ್)
    • ವೇತನ: ₹18,700 – ₹32,940
  3. ಬ್ಲಾಸ್ಟರ್ ಗ್ರೇಡ್ II (ಟ್ರೇನಿ) – 6 ಹುದ್ದೆಗಳು
    • ಅರ್ಹತೆ: ಐಟಿಐ/ಮ್ಯಾಟ್ರಿಕ್ + ಬ್ಲಾಸ್ಟರ್/ಮೈನಿಂಗ್ ಮೆಟ್ ಪ್ರಮಾಣಪತ್ರ + 3 ವರ್ಷ ಅನುಭವ
  4. ಇಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಟೆಕ್ನಿಷಿಯನ್, ಎಚ್‌ಇಎಂ ಮೆಕಾನಿಕ್, ಎಮ್‌ಸಿಒ, ಕ್ಯೂಸಿಎ (ಟ್ರೇನಿ) – 100+ ಹುದ್ದೆಗಳು
    • ಅರ್ಹತೆ: ಮೂರು ವರ್ಷದ ಡಿಪ್ಲೊಮಾ ಅಥವಾ ಬಿಎಸ್ಸಿ (ಕೇಮಿಸ್ಟ್ರಿ / ಜಿಯೋಲಜಿ)

ಗಮನಿಸಿ: ಘೋಷಿಸಲಾದ ವಿದ್ಯಾರ್ಹತೆಗೆ ಹೋಲಿಸಿಕೊಂಡು ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳ ಅರ್ಜಿ ತಿರಸ್ಕರಿಸಲಾಗುತ್ತದೆ.


📅 ಮುಖ್ಯ ದಿನಾಂಕಗಳು:

  • ಅರ್ಜಿಯ ಪ್ರಾರಂಭ ದಿನಾಂಕ: ಮೇ 25, 2025
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್ 14, 2025
  • ಅರ್ಜಿ ಸಲ್ಲಿಸಲು ವೆಬ್‌ಸೈಟ್: www.nmdc.co.in
  • ಅರ್ಜಿಶುಲ್ಕ: ₹150 (ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿಬಿಡಿ/ಮಾಜಿ ಸೈನಿಕರಿಗೆ ವಿನಾಯಿತಿ)

📝 ಆಯ್ಕೆ ವಿಧಾನ:

ಹುದ್ದೆಗಳ ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ:

1️⃣ ಮೊದಲ ಹಂತ – OMR ಆಧಾರಿತ ಪರೀಕ್ಷೆ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)

  • ಫೀಲ್ಡ್ ಅಟೆಂಡೆಂಟ್: ಸಾಮಾನ್ಯ ಜ್ಞಾನ (70), ಸಂಖ್ಯಾತ್ಮಕ ಮತ್ತು ಲಾಜಿಕ್ (30)
  • ಇತರೆ ಹುದ್ದೆಗಳು: ವೃತ್ತಿಪರ ವಿಷಯ (30), ಸಾಮಾನ್ಯ ಜ್ಞಾನ (50), ಲಾಜಿಕ್ ಮತ್ತು ಸಂಖ್ಯಾತ್ಮಕ (20)
  • ಕನಿಷ್ಠ ಅರ್ಹ ಅಂಕಗಳು:
    • ಸಾಮಾನ್ಯ/EWS – 50
    • ಓಬಿಸಿ – 45
    • ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿಬಿಡಿ – 40

2️⃣ ಎರಡನೇ ಹಂತ – ಶಾರೀರಿಕ ಸಾಮರ್ಥ್ಯ ಪರೀಕ್ಷೆ / ಟ್ರೇಡ್ ಟೆಸ್ಟ್

  • ಕೇವಲ ಅರ್ಹತಾ ಪರೀಕ್ಷೆ (ಅಂಕಗಳನ್ನು ಲೆಕ್ಕಿಸಲ್ಲ)
  • ಅರ್ಹತಾ ಅಂಕಗಳು:
    • UR/EWS: 40%
    • OBC: 37%
    • SC/ST/PwBD: 30%

📎 ಹುದ್ದೆ ಸ್ಥಾನಗಳು:

  • ಕಿರಂಡುಲ್ ಮತ್ತು ಬಚೆಲಿ (ಛತ್ತೀಸ್‌ಗಢ)
  • ದೊಣಿಮಳೈ (ಬಳ್ಳಾರಿ, ಕರ್ನಾಟಕ)
    ಹುದ್ದೆಗಳ ಹಂಚಿಕೆ ಪ್ರತ್ಯೇಕ ಲೆವೆಲ್‌ನಲ್ಲಿ ಜಾರಿಯಲ್ಲಿದೆ.

🧾 ಅರ್ಜಿದಾರರು ಅಪ್ಲೋಡ್ ಮಾಡಬೇಕಾದ ದಾಖಲೆಗಳು:

  • ಭವಾಚಿತ್ರ, ಸಹಿ
  • ವಿದ್ಯಾರ್ಹತೆ ಪ್ರಮಾಣಪತ್ರಗಳು
  • ಜಾತಿ ಪ್ರಮಾಣಪತ್ರ
  • ಅನುಭವದ ದಾಖಲೆಗಳು (ಅವಶ್ಯವಿದ್ದಲ್ಲಿ)

💼 ವಿದ್ಯಾರ್ಥಿಗಳ ಸೌಲಭ್ಯಗಳು ಮತ್ತು ವೇತನ:

  • ತರಬೇತಿ ಅವಧಿಯಲ್ಲಿ: ₹18,000–₹19,500
  • ನಿಯಮಿತ ಸೇವೆಯ ನಂತರ: ₹18,100–₹35,040 + ಭತ್ಯೆ + ಸೌಲಭ್ಯಗಳು (ಪಿಎಫ್, ಮೆಡಿಕಲ್, ಗ್ರಾಚ್ಯುಟಿ)
  • ಪ್ರಾರಂಭದ ಐದು ವರ್ಷಗಳಲ್ಲಿ ಬ್ಯಾಚುಲರ್ ವಸತಿ ನೀಡಲಾಗುತ್ತದೆ.

📢 ಗಮನಾರ್ಹ ಮಾಹಿತಿ:

  • ಅಭ್ಯರ್ಥಿಗಳು ಒಂದೇ ಘಟಕದ (ಕಿರಂಡುಲ್/ಬಚೆಲಿ/ದೊಣಿಮಳೈ) ಮತ್ತು ಒಂದೇ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು.
  • ಎಲ್ಲಾ ಮಾಹಿತಿಗಳನ್ನು ಎನ್‌ಎಂಡಿಸಿ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ.

🔗Important Links /Dates:

NMDC Recruitment 2025 Apply OnlineClick Here to Apply
NMDC Recruitment 2025 Detailed AdvertisementClick Here for PDF Notification
Last Date14/06/2025

ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನೀವು ಅಧಿಕೃತ ವೆಬ್ ಸೈಟ್ ಅನ್ನು ಭೇಟಿ ನೀಡಿ

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗Air Force Group C Recruitment 2025:ಭಾರತೀಯ ವಾಯುಸೇನೆ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿ 2025: SSLC,PUC ವಿದ್ಯಾರ್ಹತೆ ಹೊಂದಿರುವವರಿಗೆ ಅವಕಾಶ!

🔗NHAI Recruitment 2025:ಎನ್‌ಎಚ್‌ಎಐನಲ್ಲಿ ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ನೇಮಕಾತಿ: ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶ!

🔗Indian Army Commissioned Officer Recruitment 2025:ಭಾರತೀಯ ಸೇನೆಯಲ್ಲಿ 12ನೇ ತರಗತಿ ಉತ್ತೀರ್ಣ ಅದವರಿಗೆ ಸುವರ್ಣಾವಕಾಶ 90 ಹುದ್ದೆಗಳಿಗೆ ಅರ್ಜಿ ಆಹ್ವಾನ!

🔗CISF Recruitment 2025: ಹಾಕಿ ಕ್ರೀಡಾಪಟುಗಳಿಗೆ ಉದ್ಯೋಗ ಅವಕಾಶ – ಸಂಪೂರ್ಣ ಮಾಹಿತಿ ಇಲ್ಲಿದೆ

🔗CCI Recruitment 2025: ಭಾರತೀಯ ಜವಳಿ ಇಲಾಖೆಡಿಯಲ್ಲಿ ಡಿಪ್ಲೊಮಾ, ಬಿಎಸ್ಸಿ, ಎಂಬಿಎ ಪದವೀಧರರಿಗೆ ಉದ್ಯೋಗ ಅವಕಾಶ

🔗KSRLPS Recruitment 2025:ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ ನೇಮಕಾತಿ: 13 ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇

Follow Us Section
Share and Spread the love

Leave a Reply

Your email address will not be published. Required fields are marked *

ಮುಖಪುಟ ಉದ್ಯೋಗ ಶಿಕ್ಷಣ English Blogs