NPCIL Apprenticeship 2025: NPCIL 337 ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ! ITI, ಡಿಪ್ಲೊಮಾ ಮತ್ತು ಪದವೀಧರರಿಗೆ ಸುವರ್ಣಾವಕಾಶ. ಜುಲೈ 21ರೊಳಗೆ ಅರ್ಜಿ ಸಲ್ಲಿಸಿ.
ಹಾಸನ, ಜುಲೈ 03, 2025: ಭಾರತೀಯ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NPCIL) ಸಂಸ್ಥೆಯು ಆಕಾಂಕ್ಷಿಗಳಿಗೆ ಸುವರ್ಣಾವಕಾಶ ಕಲ್ಪಿಸಿದೆ. ಸಂಸ್ಥೆಯು ಟ್ರೇಡ್, ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ಒಟ್ಟು 337 ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 21, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
NPCIL Apprenticeship 2025: ITI, ಡಿಪ್ಲೊಮಾ ಮತ್ತು ಪದವೀಧರರಿಗೆ ಸುವರ್ಣಾವಕಾಶ: ಒಟ್ಟು 337 ಅಪ್ರೆಂಟಿಸ್‌ಗಳ ಆಯ್ಕೆ
NPCIL ವಿವಿಧ ವಿಭಾಗಗಳಲ್ಲಿ ಉದ್ಯೋಗ ತರಬೇತಿಗೆ ಸುವರ್ಣಾವಕಾಶ: NPCIL 337 ಅಪ್ರೆಂಟಿಸ್‌ಗಳಿಗೆ ಅರ್ಜಿ! npcil training ಅಪ್ರೆಂಟಿಸ್‌ಗಳಿಗೆ ಅವಕಾಶ ಕಲ್ಪಿಸಿದೆ:
- NPCIL ITI ಅಪ್ರೆಂಟಿಸ್‌ಶಿಪ್ ಗ್ರೇಡ್ ಅಪ್ರೆಂಟಿಸ್ (122 ಅಭ್ಯರ್ಥಿಗಳು): ಫಿಟ್ಟರ್, ಮಷಿನಿಸ್ಟ್, ವೆಲ್ಡರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಪಂಪ್ ಆಪರೇಟರ್ ಕಮ್ ಮೆಕಾನಿಕ್, ಇನ್‌ಸ್ಟ್ರುಮೆಂಟ್ ಮೆಕಾನಿಕ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (COPA) ಟ್ರೇಡ್‌ಗಳಲ್ಲಿ ಐಟಿಐ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.
- NPCIL ಡಿಪ್ಲೊಮಾ ಅಪ್ರೆಂಟಿಸ್‌ಶಿಪ್ ಟೆಕ್ನಿಷಿಯನ್ ಅಪ್ರೆಂಟಿಸ್ (94 ಅಭ್ಯರ್ಥಿಗಳು): ಮೆಕಾನಿಕಲ್, ಎಲೆಕ್ಟ್ರಿಕಲ್, ಕೆಮಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ವಿಭಾಗಗಳಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಅವಕಾಶವಿದೆ.
- ಗ್ರಾಜುಯೇಟ್ ಅಪ್ರೆಂಟಿಸ್ (121 ಅಭ್ಯರ್ಥಿಗಳು): ಮೆಕಾನಿಕಲ್, ಕೆಮಿಕಲ್, ಎಲೆಕ್ಟ್ರಿಕಲ್, ಇನ್‌ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ವಿಭಾಗಗಳಲ್ಲಿ ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದು. ಇವುಗಳಲ್ಲದೆ, ಬಿ.ಎಸ್ಸಿ, ಬಿ.ಎ., ಬಿ.ಕಾಮ್ ಅಥವಾ ಇತರೆ ಪದವೀಧರರಿಗೂ ಎಂಜಿನಿಯರಿಂಗ್‌ಯೇತರ ವಿಭಾಗದಲ್ಲಿ ತರಬೇತಿ ಪಡೆಯುವ ಅವಕಾಶವಿದೆ.
NPCIL Apprenticeship 2025: ವಯೋಮಿತಿ ಮತ್ತು ಶಿಕ್ಷಣ ಅರ್ಹತೆ:
ಅರ್ಜಿ ಸಲ್ಲಿಸಲು ಪ್ರತಿ ವಿಭಾಗಕ್ಕೂ ನಿರ್ದಿಷ್ಟ ವಯೋಮಿತಿ ನಿಗದಿಪಡಿಸಲಾಗಿದೆ:
- ಟ್ರೇಡ್ ಅಪ್ರೆಂಟಿಸ್: 14 ರಿಂದ 24 ವರ್ಷಗಳು.
- ಟೆಕ್ನಿಷಿಯನ್ ಅಪ್ರೆಂಟಿಸ್‌ಶಿಪ್: 18 ರಿಂದ 25 ವರ್ಷಗಳು.
- ಗ್ರಾಜುಯೇಟ್ ಅಪ್ರೆಂಟಿಸ್‌ಶಿಪ್: 20 ರಿಂದ 28 ವರ್ಷಗಳು.ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅಪ್ರೆಂಟಿಸ್‌ಶಿಪ್ ಅವಧಿ ಮತ್ತು ಸ್ಟೈಫಂಡ್:
ಈ ಎಲ್ಲಾ ಅಪ್ರೆಂಟಿಸ್‌ಶಿಪ್‌ಗಳು ಒಂದು ವರ್ಷದ ಉದ್ಯೋಗ ತರಬೇತಿಯನ್ನು ಒಳಗೊಂಡಿವೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ:
- ಟ್ರೇಡ್ ಅಪ್ರೆಂಟಿಸ್: ₹7,700 – ₹8,050
- ಟೆಕ್ನಿಷಿಯನ್ ಅಪ್ರೆಂಟಿಸ್: ₹8,000
- ಗ್ರಾಜುಯೇಟ್ ಅಪ್ರೆಂಟಿಸ್: ₹9,000
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ತಮ್ಮ ಹೆಸರನ್ನು ಸೂಕ್ತ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು:
- ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳು: www.apprenticeshipindia.gov.in ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
- ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಅಭ್ಯರ್ಥಿಗಳು: www.nats.education.gov.in ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಪ್ರಮುಖ ಸೂಚನೆಗಳು:
- ಈಗಾಗಲೇ ಅಪ್ರೆಂಟಿಸ್‌ಶಿಪ್ ಪಡೆದಿರುವವರು ಅಥವಾ ಪ್ರಸ್ತುತ ಪಡೆಯುತ್ತಿರುವ ಅಭ್ಯರ್ಥಿಗಳು ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
- ಒಂದು ವರ್ಷಕ್ಕಿಂತ ಹೆಚ್ಚು ಸೇವಾನುಭವ ಹೊಂದಿರುವವರು ಸಹ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ನಿಗದಿತ ವಿದ್ಯಾರ್ಹತೆಗಿಂತ ಉನ್ನತ ಮಟ್ಟದ ಶಿಕ್ಷಣ ಪಡೆದವರಿಗೂ (ಉದಾ: ಐಟಿಐಗೆ ಪದವಿ, ಡಿಪ್ಲೊಮಾಗೆ ಎಂಜಿನಿಯರಿಂಗ್ ಪದವಿ) ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು NPCIL ಸ್ಪಷ್ಟಪಡಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಬಂಧಿತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.
🔗Important Links /Dates:
NPCIL Apprenticeship 2025 official Website/NPCIL ಅಪ್ರೆಂಟಿಸ್‌ಶಿಪ್ | Click Here to official Website |
---|---|
NPCIL Apprenticeship 2025 Detailed Advertisement NPCIL ಅಪ್ರೆಂಟಿಸ್‌ಶಿಪ್ ಅಧಿಸೂಚನೆ (NPCIL Apprenticeship notification) | Click Here for Notification |
Last Date | 21/07/2025 |
👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ
🔗IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!
🔗AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇