NPCIL ಕೈಗಾ ಅಣುಶಕ್ತಿ ಫಟಕದಲ್ಲಿ 391 ಹುದ್ದೆಗಳ ನೇಮಕಾತಿ ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ತನ್ನ ಕೈಗಾ, ಉತ್ತರ ಕನ್ನಡ ಜಿಲ್ಲೆ ಶಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಇದರಲ್ಲಿ ತಾಂತ್ರಿಕ, ವೈಜ್ಞಾನಿಕ, ಸಹಾಯಕ ಮತ್ತು ಇತರ ವಿಭಾಗಗಳಲ್ಲಿ ಒಟ್ಟು 391 ಹುದ್ದೆಗಳು ಲಭ್ಯವಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 1, 2025 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಭಾರತೀಯ ಅಣುಶಕ್ತಿ ನಿಗಮ ನಿಯಮಿತದ ಕೈಗಾ ಅಣುಶಕ್ತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಲಾಗಿದೆ.
NPCIL Notification 2025 – Click Here to Download
ಹುದ್ದೆಗಳ ವಿವರ
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
---|---|
ಸೈಂಟಿಫಿಕ್ ಅಸಿಸ್ಟೆಂಟ್ (ಬಿ) | 45 |
ಸೈಂಟಿಫಿಕ್ ಅಸಿಸ್ಟೆಂಟ್ (ಸ್ಟಿಪೆಂಡರಿ ಟ್ರೈನಿ) | 82 |
ಟೆಕ್ನಿಷಿಯನ್ (ಸ್ಟಿಪೆಂಡರಿ ಟ್ರೈನಿ) | 226 |
ಅಸಿಸ್ಟೆಂಟ್ ಗ್ರೇಡ್-1 (HR) | 22 |
ಅಸಿಸ್ಟೆಂಟ್ ಗ್ರೇಡ್-1 (F&A) | 4 |
ಅಸಿಸ್ಟೆಂಟ್ ಗ್ರೇಡ್-1 (C &MM) | 10 |
ನರ್ಸ್ | 1 |
ಎಕ್ಸರೇ ಟೆಕ್ನಿಷಿಯನ್ | 1 |
➡ ಒಟ್ಟು ಹುದ್ದೆಗಳ ಸಂಖ್ಯೆ: 391

ವೇತನಶ್ರೇಣಿಗಳು:
- ನರ್ಸ್ ಹುದ್ದೆಗೆ: ₹68,697
- ಸೈಂಟಿಫಿಕ್ ಅಸಿಸ್ಟೆಂಟ್ B ಹುದ್ದೆಗೆ: ₹54,162
- ಇನ್ನುಳಿದ ಹುದ್ದೆಗಳಿಗೆ: ₹39,015
- ಸ್ಟೆಪೆಂಡಿಯರಿ ಹುದ್ದೆಗೆ:
- ತರಬೇತಿ ಅವಧಿಯಲ್ಲಿ ₹24,000,
- ತರಬೇತಿ ಪೂರ್ಣಗೊಂಡ ಬಳಿಕ ₹54,162
- ಈ ವೇತನದ ಜೊತೆಗೆ ಇತರ ಸೌಲಭ್ಯಗಳು ಸಂಸ್ಥೆಯ ನಿಯಮಾನುಸಾರ ಅನ್ವಯವಾಗುತ್ತವೆ.
ಶೈಕ್ಷಣಿಕ ಅರ್ಹತೆ:
NPCIL ನೇಮಕಾತಿಯಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೆಪೆಂಡಿಯರಿ ಟ್ರೇನಿ, ಅಸಿಸ್ಟೆಂಟ್, ನರ್ಸ್, ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅವಕಾಶವಿದ್ದು, ಹುದ್ದೆಗಳಿಗೆ ಅನ್ವಯಿಸುವ ಶೈಕ್ಷಣಿಕ ಅರ್ಹತೆಗಳು ಈ ಕೆಳಗಿನಂತಿವೆ:
- ಸೈಂಟಿಫಿಕ್ ಅಸಿಸ್ಟೆಂಟ್: ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್, ಇನ್‌ಸ್ಟ್ರುಮೆಂಟೇಶನ್ ವಿಷಯದಲ್ಲಿ ಡಿಪ್ಲೊಮಾ (ಕನಿಷ್ಠ ಶೇ. 60 ಅಂಕ) ಹೊಂದಿರಬೇಕು.ಕಂಪ್ಯೂಟರ್ ಸೈನ್ಸ್‌ನಲ್ಲಿ B.Sc ಪದವಿ ಹೊಂದಿದರೂ ಅರ್ಜಿ ಸಲ್ಲಿಸಬಹುದು.
- ಟೆಕ್ನಿಷಿಯನ್: 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು.
- ಭಾಷಾ ವಿಷಯವಾಗಿ ಇಂಗ್ಲಿಷ್ ಓದಿರಬೇಕು.
- ಆಯಾ ಟ್ರೇಡ್‌ಗಳಲ್ಲಿ 2 ವರ್ಷದ ITI ಕೋರ್ಸ್ ಪೂರೈಸಿರಬೇಕು.
- ವಿದ್ಯಾರ್ಹತೆ ಪೂರ್ಣಗೊಳ್ಳುವ ಬಳಿಕ ಕನಿಷ್ಠ 1 ವರ್ಷದ ಅನುಭವ ಅಗತ್ಯ.
- ಸ್ಟಿಪೆಂಡಿಯರಿ ಟ್ರೇನಿ: ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ B.Sc ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು.
- ಅಸಿಸ್ಟೆಂಟ್ ಹುದ್ದೆಗಳು: ಪದವಿ (Graduation) ಪೂರ್ಣಗೊಳಿಸಿದವರಿಗೇ ಅರ್ಜಿ ಸಲ್ಲಿಸಲು ಅವಕಾಶ.ಯಾವುದೇ ವಿಷಯದಲ್ಲಿ ಪದವಿ ಪೂರೈಸಿದವರು ಕೂಡ ಅರ್ಹರು.
- ನರ್ಸ್ & ಫಾರ್ಮಸಿ ಟೆಕ್ನಿಷಿಯನ್: ನರ್ಸಿಂಗ್ & ಮಿಡ್‌ವೈಫರಿ ವಿಷಯದಲ್ಲಿ ಡಿಪ್ಲೊಮಾ ಅಥವಾ B.Sc (ನರ್ಸಿಂಗ್) ಪೂರೈಸಿರಬೇಕು.
ವಯೋಮಿತಿ:
- ಕನಿಷ್ಠ 18 ವರ್ಷ
- ಗರಿಷ್ಠ 30ವರ್ಷ (ಹುದ್ದೆಯ ಪ್ರಕಾರ ಬೇರೆಬೇರೆ).
- ಗರಿಷ್ಠ ವಯೋಮಿತಿ:
- ಸೈಂಟಿಫಿಕ್ ಅಸಿಸ್ಟೆಂಟ್ & ನರ್ಸ್: 30 ವರ್ಷ
- ಸ್ಟೆಪೆಂಡಿಯರಿ ಟ್ರೇನಿ & ಟೆಕ್ನಿಷಿಯನ್: 25 ವರ್ಷ
- ಅಸಿಸ್ಟೆಂಟ್: 21 ರಿಂದ 28 ವರ್ಷ
- ಮೀಸಲಾತಿ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ (UR), ಆರ್ಥಿಕ ದುರ್ಬಲ ವರ್ಗ (EWS) & ಇತರೆ ಹಿಂದುಳಿದ ವರ್ಗ (OBC) ಅಭ್ಯರ್ಥಿಗಳು:
- ಸೈಂಟಿಫಿಕ್ ಅಸಿಸ್ಟೆಂಟ್ & ಸ್ಟೆಪೆಂಡಿಯರಿ ಟ್ರೇನಿ: ₹150
- ಇತರ ಎಲ್ಲಾ ಹುದ್ದೆಗಳು: ₹100
SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
How to Apply / ಅರ್ಜಿ ಸಲ್ಲಿಕೆ:
NPCIL Online Application Form – Click Here to Apply
ಅರ್ಜಿ ಸಲ್ಲಿಕೆ ವಿಧಾನ:
- ನೋಂದಣಿ (Registration): ಅಭ್ಯರ್ಥಿಗಳು ಕೇವಲ www.npcilcareers.co.in ಮೂಲಕವೇ ಅರ್ಜಿ ಸಲ್ಲಿಸಬೇಕು. ಹಸ್ತ ಮುದ್ರಿತ (Handwritten) ಅಥವಾ ಇತರ ಯಾವುದೇ ಮಾದರಿಯ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
- ಅಗತ್ಯ ಮಾಹಿತಿಗಳು: ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ, ಅನುಭವ, ಅಂಕ ಶೇಕಡಾ, ಮೊಬೈಲ್ ನಂಬರ, ಇಮೇಲ್ ವಿಳಾಸ ಮುಂತಾದ ಮಾಹಿತಿಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು.
- ಅಗತ್ಯ ದಾಖಲೆಗಳ ಅಪ್ಲೋಡ್:
- ಪಾಸ್‌ಪೋರ್ಟ್ ಅಳತೆಯ ಫೋಟೋ (JPG ಸ್ವರೂಪ, 10KB–50KB, ರೆಸಲ್ಯೂಷನ್: 240×180 – 640×480).
- ಸಹಿ (Signature) (JPG ಸ್ವರೂಪ, ಗರಿಷ್ಠ 20KB, ರೆಸಲ್ಯೂಷನ್: 80×100 – 160×560).
- ಇಮೇಲ್ & SMS ಸುಚನೆಗಳು:ಮಾನ್ಯ ಇಮೇಲ್ ID (ಸಣ್ಣ ಅಕ್ಷರಗಳಲ್ಲಿ) ಮತ್ತು ಸಕ್ರಿಯ ಮೊಬೈಲ್ ಸಂಖ್ಯೆ ಒದಗಿಸಬೇಕು.
- TRAI NCPR (DND) ಪಟ್ಟಿಯಲ್ಲಿ ನಿಮ್ಮ ಸಂಖ್ಯೆಯಿದ್ದರೆ, SMS ಅಪ್‌ಡೇಟ್‌ಗಳನ್ನು ಪಡೆಯಲು ಅದನ್ನು ತೆಗೆದುಹಾಕಲು ಸೇವಾ ಪೂರೈಕೆದಾರನನ್ನು ಸಂಪರ್ಕಿಸಿ.
- ಅರ್ಜಿ ಸಲ್ಲಿಕೆ ಹಂತಗಳು:
- ಹಂತ 1: ನೋಂದಣಿ – ಹೆಸರು, DOB, ವರ್ಗ (Category), ಇಮೇಲ್, ಮೊಬೈಲ್ ನಮೂದಿಸಿ.
- ಹಂತ 2: ಇಮೇಲ್ ಮೂಲಕ ಪ್ರಾಪ್ತವಾದ ಲಿಂಕ್ ಮೂಲಕ ಖಾತೆಯನ್ನು ಸಕ್ರಿಯಗೊಳಿಸಿ.
- ಹಂತ 3: ಖಾತೆಗೆ ಲಾಗಿನ್ ಮಾಡಿ ಮತ್ತು ಶೈಕ್ಷಣಿಕ ಅರ್ಹತೆ, ಅನುಭವ, ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
- ಹಂತ 4: ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ, ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿ.
📍 ಅಧಿಸೂಚನೆ ಲಿಂಕ್: click here
📅 ಅಂತಿಮ ದಿನಾಂಕ: 01.04.2025
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
ಬಿಇಎಲ್ ಶಾಲೆಯಲ್ಲಿ 2025 ನೇಮಕಾತಿ – ಶಿಕ್ಷಕರಿಗೆ ಅವಕಾಶ
ಆಯ್ಕೆ ಪ್ರಕ್ರಿಯೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
- ಕೆಲವು ಹುದ್ದೆಗಳಿಗೆ ಕೌಶಲ್ಯ ಪರೀಕ್ಷೆ ಕೂಡ ನಡೆಸಲಾಗುತ್ತದೆ.
- ಪರೀಕ್ಷೆ NPCIL ನಿಗದಿಪಡಿಸಿದ ಕೇಂದ್ರಗಳಲ್ಲಿ ನಡೆಯಲಿದೆ.
- ನೇಮಕಗೊಂಡ ಅಭ್ಯರ್ಥಿಗಳು ಆರಂಭದಲ್ಲಿ ನಿರ್ದಿಷ್ಟ ಅವಧಿಗೆ ತರಬೇತಿ ಪಡೆಯಬೇಕು.
- ಪರೀಕ್ಷೆ/ಲಿಖಿತ ಪರೀಕ್ಷೆ
- ಪ್ರಾಯೋಗಿಕ ಪರೀಕ್ಷೆ (Demo/Skill Test)
- ವೈಯಕ್ತಿಕ ಸಂದರ್ಶನ (Interview)
- ಅಂತಿಮ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸಲಾಗುವುದು
⭐ ಈ ನೇಮಕಾತಿ ಯಾರು ಬಳಸಿಕೊಳ್ಳಬಹುದು?
✅ ಟೆಕ್ನಿಷಿಯನ್/ಐಟಿಐ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು
✅ ತಾಂತ್ರಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು
✅ ವೈದ್ಯಕೀಯ (ನರ್ಸ್, ಫಾರ್ಮಸಿ) ಹುದ್ದೆಗಳ ಆಸಕ್ತರು
✅ ಕರ್ನಾಟಕದ ಸ್ಥಳೀಯರು ಮತ್ತು ಇತರ ರಾಜ್ಯದ ಅಭ್ಯರ್ಥಿಗಳು
📌 ಮುಖ್ಯ ಅಂಶಗಳು:
🔹 ಅರ್ಜಿ ಸಲ್ಲಿಕೆ ಆರಂಭ: ಈಗಾಗಲೇ ಪ್ರಾರಂಭವಾಗಿದೆ
🔹 ಅಂತಿಮ ದಿನಾಂಕ: ಏಪ್ರಿಲ್ 1, 2025
🔹 ನೌಕರಿ ಸ್ಥಳ: ಕೈಗಾ ಅಣುಶಕ್ತಿ ಫಟಕ, ಕರ್ನಾಟಕ
🔹 ವಿಭಾಗ: ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯ ನೇಮಕಾತಿ.
ಅಗತ್ಯ ಸೂಚನೆಗಳು:
- ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿ.
- ಅರ್ಜಿ ಒಮ್ಮೆ ಸಲ್ಲಿಸಿದ ನಂತರ ಯಾವುದೇ ಬದಲಾವಣೆ ಸಾಧ್ಯವಿಲ್ಲ.
- ಅಭ್ಯರ್ಥಿಗಳು ಅರ್ಜಿ ಸ್ಥಿತಿ ಪರೀಕ್ಷಿಸಲು ತಮ್ಮ ಲಾಗಿನ್ ID ಮತ್ತು ಪಾಸ್ವರ್ಡ್ ಬಳಸಬಹುದು.
- ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ e-Admit Card ಮತ್ತು e-Call Letter NPCIL ಕರಿಯರ್ ಪೋರ್ಟ್‌ನಲ್ಲಿ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.npcilcareers.co.in ಭೇಟಿ ನೀಡಿ.
👉 ಈ ಅವಕಾಶವನ್ನು ಬಳಸಿ, ಅರ್ಜಿ ಸಲ್ಲಿಸಿ!
ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನ: 2025 ಏಪ್ರಿಲ್ 1,

ಆಯ್ಕೆಯಾದ ಅಭ್ಯರ್ಥಿಗಳ ಕಾರ್ಯನಿರ್ವಹಣಾ ಸ್ಥಳ: ಕೈಗಾ ಸ್ಥಾವರ, ಉತ್ತರ ಕನ್ನಡ ಜಿಲ್ಲೆ
ಹೆಚ್ಚಿನ ಮಾಹಿತಿಗಾಗಿ:➡️ ಅಧಿಕೃತ ವೆಬ್‌ಸೈಟ್: www.npcil.nic.inಇದು NPCIL ನೇಮಕಾತಿ 2025 ಕುರಿತು ಸಂಪೂರ್ಣ ಮಾಹಿತಿ. ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು!