Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್! NPCIL ನಲ್ಲಿ 330 ಹುದ್ದೆಗಳಿಗೆ ನೇರ ನೇಮಕಾತಿ! 80 ಸಾವಿರಕ್ಕೂ ಹೆಚ್ಚು ಸಂಬಳ!

  • Picture of Gundijalu Shwetha By Gundijalu Shwetha
  • Published On: April 11, 2026
NPCIL Recruitment 2026: ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್! NPCIL ನಲ್ಲಿ 330 ಹುದ್ದೆಗಳಿಗೆ ನೇರ ನೇಮಕಾತಿ! 80 ಸಾವಿರಕ್ಕೂ ಹೆಚ್ಚು ಸಂಬಳ!

NPCIL Recruitment 2026: ಕೇಂದ್ರ ಸರ್ಕಾರದ ಅಧೀನದಲ್ಲಿರುವ NPCIL ನಲ್ಲಿ 330 ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಇ/ಬಿ.ಟೆಕ್ ಮುಗಿಸಿ ಗೇಟ್ ಪರೀಕ್ಷೆ ಪಾಸ್ ಆದವರು ಏಪ್ರಿಲ್ 30ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ತಿಂಗಳಿಗೆ 80 ಸಾವಿರಕ್ಕೂ ಹೆಚ್ಚು ಸಂಬಳ ಸಿಗಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

📅 Last Date for Apply Online 30-April-2026

NPCIL ನೇಮಕಾತಿ 2026: ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್, 80 ಸಾವಿರಕ್ಕೂ ಹೆಚ್ಚು ಸಂಬಳದ ಸರ್ಕಾರಿ ಕೆಲಸ!

ಇಂಜಿನಿಯರಿಂಗ್ ಪದವಿ ಮುಗಿಸಿ, ಕೈತುಂಬಾ ಸಂಬಳ ತರುವಂತಹ ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಭರ್ಜರಿ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಭಾರತ ಸರ್ಕಾರದ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಬರುವ ‘ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (NPCIL) ಬರೋಬ್ಬರಿ 330 ‘ಎಕ್ಸಿಕ್ಯೂಟಿವ್ ಟ್ರೈನಿ’ (Executive Trainees – 2026) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಗೇಟ್ (GATE) ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವೇ ಸರಿ. ಯಾಕೆಂದರೆ, ಗೇಟ್ ಸ್ಕೋರ್ ಆಧಾರದ ಮೇಲೆಯೇ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಲಾಗುತ್ತದೆ. NPCIL Recruitment 2026 ರ ಕುರಿತಾದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕಂಪ್ಲೀಟ್ ಡೀಟೇಲ್ಸ್ ಅನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.

WhatsApp Channel
Join Now
Telegram Channel
Join Now

ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಹುದ್ದೆಗಳಿವೆ? (Vacancy Details)

ಈ ಬಾರಿ ಎನ್‌ಪಿಸಿಐಎಲ್ ಒಟ್ಟು 330 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ 314 ಪ್ರಸ್ತುತ ಖಾಲಿ ಇರುವ ಹುದ್ದೆಗಳಾಗಿದ್ದರೆ, 16 ಬ್ಯಾಕ್‌ಲಾಗ್ ಹುದ್ದೆಗಳಾಗಿವೆ. ವಿಭಾಗವಾರು (Discipline) ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಮೆಕ್ಯಾನಿಕಲ್ (Mechanical): 125 ಹುದ್ದೆಗಳು
  • ಕೆಮಿಕಲ್ (Chemical): 40 ಹುದ್ದೆಗಳು
  • ಎಲೆಕ್ಟ್ರಿಕಲ್ (Electrical): 65 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್ (Electronics): 50 ಹುದ್ದೆಗಳು
  • ಇನ್ಸ್ಟ್ರುಮೆಂಟೇಶನ್ (Instrumentation): 15 ಹುದ್ದೆಗಳು
  • ಸಿವಿಲ್ (Civil): 35 ಹುದ್ದೆಗಳು ಒಟ್ಟು ಖಾಲಿ ಹುದ್ದೆಗಳು = 330.

Online Registration for Recruitment of Executive Trainees (2026) in NPCIL through GATE 2024/2025/2026 starts from April 10 2026 (10:00 Hrs). Application submission closes on April 30 2026 (16:00 Hrs).

NPCIL Recruitment 2026: ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್! NPCIL ನಲ್ಲಿ 330 ಹುದ್ದೆಗಳಿಗೆ ನೇರ ನೇಮಕಾತಿ! 80 ಸಾವಿರಕ್ಕೂ ಹೆಚ್ಚು ಸಂಬಳ!

ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳೇನು? (Eligibility Criteria)

ಈ ಬಂಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗಗಳಲ್ಲಿ ಬಿ.ಇ (B.E), ಬಿ.ಟೆಕ್ (B.Tech), ಬಿ.ಎಸ್ಸಿ ಇಂಜಿನಿಯರಿಂಗ್ (B.Sc Engineering) ಅಥವಾ 5 ವರ್ಷದ ಇಂಟಿಗ್ರೇಟೆಡ್ ಎಂ.ಟೆಕ್ (M.Tech) ಪದವಿಯನ್ನು ಕನಿಷ್ಠ ಶೇ. 60% ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  • ಎಂಜಿನಿಯರಿಂಗ್ ಉದ್ಯೋಗ ಆಕಾಂಕ್ಷಿಗಳು ಗಮನಿಸಬೇಕಾದ ಅತಿ ಮುಖ್ಯ ಅಂಶವೆಂದರೆ, ಅಭ್ಯರ್ಥಿಗಳು ಕಡ್ಡಾಯವಾಗಿ ಗೇಟ್ ಪರೀಕ್ಷೆ (GATE – Graduate Aptitude Test in Engineering) ಪಾಸ್ ಮಾಡಿರಬೇಕು. 2024, 2025 ಅಥವಾ 2026ನೇ ಸಾಲಿನಲ್ಲಿ ನಡೆದ ಗೇಟ್ ಪರೀಕ್ಷೆಯ ಮಾನ್ಯವಾದ ಸ್ಕೋರ್ (Valid GATE Score) ಹೊಂದಿರುವವರು ಮಾತ್ರ ಅರ್ಜಿ ಹಾಕಲು ಅರ್ಹರು. 2023 ಅಥವಾ ಅದಕ್ಕಿಂತ ಹಿಂದಿನ ಗೇಟ್ ಸ್ಕೋರ್ ಅನ್ನು ಪರಿಗಣಿಸಲಾಗುವುದಿಲ್ಲ. GATE 2026 Jobs
  • ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು, ಆದರೆ ಅವರು ನವೆಂಬರ್ 30, 2026 ರೊಳಗೆ ತಮ್ಮ ಡಿಗ್ರಿ ರಿಸಲ್ಟ್ ಅನ್ನು ಸಲ್ಲಿಸಬೇಕಾಗುತ್ತದೆ.

ವಯೋಮಿತಿ ಎಷ್ಟಿರಬೇಕು? (Age Limit)

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 30/04/2026 ಕ್ಕೆ ಅನ್ವಯವಾಗುವಂತೆ ಈ ಕೆಳಗಿನ ವಯೋಮಿತಿ ನಿಗದಿಪಡಿಸಲಾಗಿದೆ:

  • ಸಾಮಾನ್ಯ (General) ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಅಭ್ಯರ್ಥಿಗಳಿಗೆ ಗರಿಷ್ಠ 26 ವರ್ಷ.
  • ಒಬಿಸಿ (OBC – NCL) ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದ್ದು, ಗರಿಷ್ಠ 29 ವರ್ಷದವರೆಗೆ ಅರ್ಜಿ ಸಲ್ಲಿಸಬಹುದು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದ್ದು, ಗರಿಷ್ಠ 31 ವರ್ಷದವರೆಗೆ ಅವಕಾಶವಿದೆ.
  • ಅಂಗವಿಕಲ ಅಭ್ಯರ್ಥಿಗಳಿಗೆ (PwBD) 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆಯಾದವರಿಗೆ ಸಿಗುವ ಬಂಪರ್ ಸಂಬಳ ಮತ್ತು ಸೌಲಭ್ಯಗಳು (Salary & Perks)

ಈ ಉದ್ಯೋಗಕ್ಕೆ ಆಯ್ಕೆಯಾದರೆ ನಿಮ್ಮ ಲೈಫ್ ಸೆಟಲ್ ಆದಂತೆಯೇ ಲೆಕ್ಕ!

  • ಟ್ರೈನಿಂಗ್ ಸಮಯದಲ್ಲಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ಒಂದು ವರ್ಷದ ಟ್ರೈನಿಂಗ್ ನೀಡಲಾಗುತ್ತದೆ. ಈ ಸಮಯದಲ್ಲಿ ಪ್ರತಿ ತಿಂಗಳು ಬರೋಬ್ಬರಿ 74,000 ರೂ. ಸ್ಟೈಪೆಂಡ್ (Stipend) ನೀಡಲಾಗುತ್ತದೆ. ಜೊತೆಗೆ ಪುಸ್ತಕಗಳನ್ನು ಖರೀದಿಸಲು 30,000 ರೂ. ಒನ್-ಟೈಮ್ ಅಲೋವೆನ್ಸ್ ಕೂಡ ಸಿಗಲಿದೆ. ವಸತಿ ಮತ್ತು ಊಟದ ವ್ಯವಸ್ಥೆಯನ್ನು ಎನ್‌ಪಿಸಿಐಎಲ್ ಕಡೆಯಿಂದಲೇ ಉಚಿತವಾಗಿ ಮಾಡಿಕೊಡಲಾಗುತ್ತದೆ.
  • ಟ್ರೈನಿಂಗ್ ನಂತರದ ಸಂಬಳ: ಒಂದು ವರ್ಷದ ಟ್ರೈನಿಂಗ್ ಯಶಸ್ವಿಯಾಗಿ ಮುಗಿಸಿದ ನಂತರ, ಅಭ್ಯರ್ಥಿಗಳನ್ನು ‘ಸೈಂಟಿಫಿಕ್ ಆಫೀಸರ್ / ಸಿ’ (Scientific Officer/C) ಹುದ್ದೆಗೆ ನೇಮಕ ಮಾಡಲಾಗುತ್ತದೆ. ಆಗ 7ನೇ ವೇತನ ಆಯೋಗದ ಲೆವೆಲ್-10 ರ ಅಡಿಯಲ್ಲಿ ಮೂಲ ವೇತನ 56,100 ರೂ. ಫಿಕ್ಸ್ ಆಗುತ್ತದೆ. ಇದರ ಜೊತೆಗೆ ಶೇ. 58% ತುಟ್ಟಿಭತ್ಯೆ (DA) ಸೇರಿ ಒಟ್ಟು ತಿಂಗಳ ಸಂಬಳ 88,000 ರೂ. ದಾಟುತ್ತದೆ!.
  • ಇಷ್ಟೇ ಅಲ್ಲದೆ ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ, ಉಚಿತ ವೈದ್ಯಕೀಯ ಸೌಲಭ್ಯ, ಮಕ್ಕಳ ಶಿಕ್ಷಣ ಭತ್ಯೆ, ಟಿವಿ-ಮೊಬೈಲ್ ಬಿಲ್ ಮರುಪಾವತಿ ಸೇರಿದಂತೆ ಹತ್ತು ಹಲವು ಸೌಲಭ್ಯಗಳು ಸಿಗಲಿವೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process of NPCIL Recruitment 2026)

ಇಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು ಪಡೆದಿರುವ ಗೇಟ್ (GATE 2024/2025/2026) ಸ್ಕೋರ್ ಆಧಾರದ ಮೇಲೆ ಒಂದು ಹುದ್ದೆಗೆ 12 ಜನರಂತೆ (1:12 ಅನುಪಾತದಲ್ಲಿ) ಶಾರ್ಟ್ ಲಿಸ್ಟ್ ಮಾಡಿ ನೇರ ಸಂದರ್ಶನಕ್ಕೆ (Personal Interview) ಕರೆಯಲಾಗುತ್ತದೆ. ಸಂದರ್ಶನವು ಜೂನ್ 8 ರಿಂದ ಜೂನ್ 19, 2026 ರವರೆಗೆ ಮುಂಬೈ, ನರೋರಾ, ಮದ್ರಾಸ್ ಅಥವಾ ಕೈಗಾ (ಕರ್ನಾಟಕ) ದಲ್ಲಿ ನಡೆಯುವ ಸಾಧ್ಯತೆಯಿದೆ. ಸಂದರ್ಶನದಲ್ಲಿ ಮಾಡುವ ಪರ್ಫಾರ್ಮೆನ್ಸ್ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

AdvtDownload

ಗಮನಿಸಿ (ಬಾಂಡ್ ವಿಚಾರ): ಆಯ್ಕೆಯಾದ ಅಭ್ಯರ್ಥಿಗಳು ಟ್ರೈನಿಂಗ್ ಮುಗಿದ ಮೇಲೆ ಕನಿಷ್ಠ 3 ವರ್ಷಗಳ ಕಾಲ ಎನ್‌ಪಿಸಿಐಎಲ್ ನಲ್ಲಿ ಕಡ್ಡಾಯವಾಗಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕಾಗಿ 9,18,000 ರೂ. (ಒಂಬತ್ತು ಲಕ್ಷದ ಹದಿನೆಂಟು ಸಾವಿರ) ಗಳ ಸೇವಾ ಬಾಂಡ್ (Service Bond) ಬರೆದುಕೊಡಬೇಕು.

ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು

  • ಸಾಮಾನ್ಯ, EWS ಮತ್ತು ಒಬಿಸಿ (OBC) ವರ್ಗದ ಪುರುಷ ಅಭ್ಯರ್ಥಿಗಳಿಗೆ: 500 ರೂ. ಅರ್ಜಿ ಶುಲ್ಕ ಇರುತ್ತದೆ.
  • ಮಹಿಳಾ ಅಭ್ಯರ್ಥಿಗಳು, SC/ST, ಅಂಗವಿಕಲರು (PwBD) ಮತ್ತು ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಸಂಪೂರ್ಣ ಉಚಿತ).
  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 10/04/2026 (ಬೆಳಗ್ಗೆ 10:00 ಗಂಟೆಯಿಂದ).
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/04/2026 (ಸಂಜೆ 4:00 ಗಂಟೆಯವರೆಗೆ).

NPCIL ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ? (How to Apply Online)

🔗 Official Notification NPCIL Recruitment 2026 👉 Click for New Registration Online NPCIL Recruitment 2026

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎನ್‌ಪಿಸಿಐಎಲ್ ನ ಅಧಿಕೃತ ವೆಬ್‌ಸೈಟ್ www.npcilcareers.co.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

  1. ವೆಬ್‌ಸೈಟ್‌ಗೆ ಹೋಗಿ ‘Apply Online Registration’ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮ ಗೇಟ್ ರಿಜಿಸ್ಟ್ರೇಷನ್ ನಂಬರ್, ಹೆಸರು, ಜನ್ಮ ದಿನಾಂಕ ಮುಂತಾದ ವಿವರಗಳನ್ನು ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.
  3. ಆಕ್ಟಿವೇಶನ್ ಲಿಂಕ್ ಕ್ಲಿಕ್ ಮಾಡಿ ಲಾಗಿನ್ ಆದ ನಂತರ ನಿಮ್ಮ ಶೈಕ್ಷಣಿಕ ವಿವರಗಳನ್ನು ತುಂಬಿ.
  4. ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಿ.
  5. ಕೊನೆಯದಾಗಿ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ (ಅನ್ವಯವಾದರೆ) ಪಾವತಿಸಿ, ಅರ್ಜಿಯ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.

ಸಮಯ ವ್ಯರ್ಥ ಮಾಡದೆ ಇಂದೇ ಅರ್ಜಿ ಸಲ್ಲಿಸಿ, ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ!

ಪ್ರಮುಖ ಲಿಂಕ್ ಗಳು/Important Links:

ವಿವರ (Details)ಡೌನ್‌ಲೋಡ್ ಲಿಂಕ್ (Download Link)
NPCIL Recruitment 2026
Official Notification PDF

Download Official Notification
NPCIL Recruitment 2026
Apply online Direct Link
Click Here Registration
Last Date to Apply Online30/04/2026
ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿhttps://quicknewztoday.com/category/jobs/

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • Karnataka High Court Recruitment 2026: Last Date: 15/04/2026
  • UIDAI Recruitment 2026: Last Date: 13/05/2026
  • Haveri District Pourakarmika Recruitment 2026: Last Date:30/04/2026

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

RCF Recruitment 2026: ಕೇಂದ್ರ ಸರ್ಕಾರಿ ಕೆಲಸ: RCF ನಲ್ಲಿ 188 ಆಪರೇಟರ್ ಹುದ್ದೆ! B.Sc/BE/Degree/Diploma ಪಾಸ್ ಆದವರಿಗೆ ಬಂಪರ್ ಆಫರ್!

ಕೇಂದ್ರ ಸರ್ಕಾರಿ ಕೆಲಸ: RCF ನಲ್ಲಿ 188 ಆಪರೇಟರ್ ಹುದ್ದೆ! B.Sc/BE/Degree/Diploma ಪಾಸ್ ಆದವರಿಗೆ ಬಂಪರ್ ಆಫರ್!

Indian Bank SO Recruitment 2026: ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಆಫರ್: ಇಂಡಿಯನ್ ಬ್ಯಾಂಕ್‌ನಲ್ಲಿ ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ!

ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಆಫರ್: ಇಂಡಿಯನ್ ಬ್ಯಾಂಕ್‌ನಲ್ಲಿ ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ!

CRPF Recruitment 2026: 10ನೇ ಕ್ಲಾಸ್ ಪಾಸ್ ಆದವರಿಗೆ ಸಿಹಿ ಸುದ್ದಿ: CRPF ನಲ್ಲಿ 9175 ಬಂಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

10ನೇ ಕ್ಲಾಸ್ ಪಾಸ್ ಆದವರಿಗೆ ಸಿಹಿ ಸುದ್ದಿ: CRPF ನಲ್ಲಿ 9175 ಬಂಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

NPCIL Recruitment 2026: ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್! NPCIL ನಲ್ಲಿ 330 ಹುದ್ದೆಗಳಿಗೆ ನೇರ ನೇಮಕಾತಿ! 80 ಸಾವಿರಕ್ಕೂ ಹೆಚ್ಚು ಸಂಬಳ!

ಇಂಜಿನಿಯರಿಂಗ್ ಮುಗಿಸಿದವರಿಗೆ ಬಂಪರ್ ಆಫರ್! NPCIL ನಲ್ಲಿ 330 ಹುದ್ದೆಗಳಿಗೆ ನೇರ ನೇಮಕಾತಿ! 80 ಸಾವಿರಕ್ಕೂ ಹೆಚ್ಚು ಸಂಬಳ!

RBI New Rules:ಆನ್‌ಲೈನ್ ವಹಿವಾಟಿನಲ್ಲಿ ಬರಲಿದೆ 3 ದೊಡ್ಡ ಬದಲಾವಣೆ: 10 ಸಾವಿರ ರೂ ಟ್ರಾನ್ಸಾಕ್ಷನ್‌ಗೂ ಬಂತು ಹೊಸ ರೂಲ್ಸ್!

ಆನ್‌ಲೈನ್ ವಹಿವಾಟಿನಲ್ಲಿ ಬರಲಿದೆ 3 ದೊಡ್ಡ ಬದಲಾವಣೆ: 10 ಸಾವಿರ ರೂ ಟ್ರಾನ್ಸಾಕ್ಷನ್‌ಗೂ ಬಂತು ಹೊಸ ರೂಲ್ಸ್!

PrevPreviousಆನ್‌ಲೈನ್ ವಹಿವಾಟಿನಲ್ಲಿ ಬರಲಿದೆ 3 ದೊಡ್ಡ ಬದಲಾವಣೆ: 10 ಸಾವಿರ ರೂ ಟ್ರಾನ್ಸಾಕ್ಷನ್‌ಗೂ ಬಂತು ಹೊಸ ರೂಲ್ಸ್!
Next10ನೇ ಕ್ಲಾಸ್ ಪಾಸ್ ಆದವರಿಗೆ ಸಿಹಿ ಸುದ್ದಿ: CRPF ನಲ್ಲಿ 9175 ಬಂಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!Next
Unlock the Power of Static GK: Top Tricks for Cracking Government Exams

Unlock the Power of Static GK: Top Tricks for Cracking Government Exams

18 May 2025
Read More »
Indira Gandhi National Old Age Pension Scheme 2025: ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ ಯೋಜನೆಗೆ ಅರ್ಜಿ ಹಾಕಿ ಪ್ರತಿ ತಿಂಗಳು ₹1200 ಪಿಂಚಣಿ ಪಡೆಯುವುದು ಹೇಗೆ??

Indira Gandhi National Old Age Pension Scheme 2025: ಇಂದಿರಾ ಗಾಂಧಿ ವೃದ್ಧಾಪ್ಯ ಪಿಂಚಣಿ ಯೋಜನೆಗೆ ಅರ್ಜಿ ಹಾಕಿ ಪ್ರತಿ ತಿಂಗಳು ₹1200 ಪಿಂಚಣಿ ಪಡೆಯುವುದು ಹೇಗೆ??

6 May 2025
Read More »
Mahindra XUV700 5-Seater Phased Out: Major Shift as Brand Gears Up for Mahindra XUV 7XO Launch in 2026

Mahindra XUV700 5-Seater Phased Out: Major Shift as Brand Gears Up for Mahindra XUV 7XO Launch in 2026

3 May 2025
Read More »
Page1 … Page120 Page121 Page122 Page123
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs