MGNREGA Replaced by VB-G RAM G: ಹಳೆಯ ಮಹಾತ್ಮ ಗಾಂಧಿ ನರೇಗಾ (MGNREGA) ಯೋಜನೆ ರದ್ದಾಗಿದ್ದು, ಜುಲೈ 1ರಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್ (ಹೊಸ ವಿಬಿ-ಜಿ ರಾಮ್ ಜಿ ಯೋಜನೆ (VB-G RAM G)) ಜಾರಿಗೆ ಬಂದಿದೆ. ವರ್ಷಕ್ಕೆ 125 ದಿನ ಕೆಲಸ, ದಿನಕ್ಕೆ 382 ರೂ. ಕೂಲಿ ಸಿಗಲಿದೆ. ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ.
ಹಳೇ ನರೇಗಾ ಸ್ಕೀಮ್ ರದ್ದು, ಬಂತು ಹೊಸ ‘ವಿಬಿ-ಜಿ ರಾಮ್ ಜಿ’ ಯೋಜನೆ: ವರ್ಷಕ್ಕೆ 125 ದಿನಗಳ ಸರ್ಕಾರಿ ಕೆಲಸದ ಗ್ಯಾರಂಟಿ!
ನಮಸ್ಕಾರ ನಾಡಿನ ರೈತ ಬಾಂಧವರೇ ಹಾಗೂ ಗ್ರಾಮೀಣ ಭಾಗದ ಕೂಲಿಕಾರ ಸ್ನೇಹಿತರೇ, ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಬಡಜನರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮತ್ತಷ್ಟು ಬಲ ತುಂಬಲು ಬಹಳ ದೊಡ್ಡ ಹೆಜ್ಜೆಯೊಂದನ್ನು ಇಟ್ಟಿದೆ. ಹತ್ತಾರು ವರ್ಷಗಳಿಂದ ಹಳ್ಳಿಗಳಲ್ಲಿ ಜನಪ್ರಿಯವಾಗಿದ್ದ ಹಳೆಯ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯನ್ನು (ಮನರೇಗಾ – MGNREGA Scheme) ಈಗ ಸಂಪೂರ್ಣವಾಗಿ ಬದಲಾಯಿಸಲಾಗಿದೆ.
ಹೌದು, ಕಳೆದ ಜುಲೈ 1ರಿಂದಲೇ ದೇಶಾದ್ಯಂತ Viksit Bharat Guarantee for Rozgar and Ajeevika Mission (Gramin) ಅಂದರೆ ಶಾರ್ಟ್ ಆಗಿ ‘ವಿಬಿ-ಜಿ ರಾಮ್ ಜಿ’ (VB-G RAM G) ಎಂಬ ಹೊಸ ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಬದುಕುತ್ತಿರುವ, ಸ್ವಯಂ ಪ್ರೇರಿತರಾಗಿ ಅಕುಶಲ ದೈಹಿಕ ಕೆಲಸ ಮಾಡಲು ಇಚ್ಚಿಸುವ ಪ್ರತಿಯೊಂದು ವಯಸ್ಕ ಸದಸ್ಯರ ಕುಟುಂಬಕ್ಕೂ ಈಗ ಒಂದು ಆರ್ಥಿಕ ವರ್ಷದಲ್ಲಿ ಬರೋಬ್ಬರಿ 125 ದಿನಗಳ ಉದ್ಯೋಗದ ಖಾತರಿಯನ್ನು ಈ ಹೊಸ ಸ್ಕೀಮ್ ನೀಡುತ್ತದೆ! ನೀವು ಇಂಟರ್ನೆಟ್‌ನಲ್ಲಿ ಸದ್ಯಕ್ಕೆ Rural employment scheme Karnataka ಬಗ್ಗೆ ಹುಡುಕುತ್ತಿದ್ದರೆ, ಈ ಹೊಸ ಬದಲಾವಣೆಗಳ ಬಗ್ಗೆ ನೀವು ತಿಳಿಯಲೇಬೇಕು. ಹಾಗಾದ್ರೆ ಹಳೇ ನರೇಗಾಗೂ ಈ ಹೊಸ ಯೋಜನೆಗೂ ಏನು ವ್ಯತ್ಯಾಸ? ಕೂಲಿ ಎಷ್ಟು ಸಿಗುತ್ತೆ? ಅರ್ಜಿ ಹಾಕೋದು ಹೇಗೆ? ಎಲ್ಲ ವಿವರಗಳನ್ನು ಸರಳವಾಗಿ ಇಲ್ಲಿ ವಿವರಿಸಲಾಗಿದೆ.
100 ದಿನದ ಕೆಲಸ ಈಗ 125 ದಿನಕ್ಕೆ ಏರಿಕೆ!
ಹಳೆಯ ಮನರೇಗಾ ಕಾಯ್ದೆಯಡಿ ಒಂದು ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 100 ದಿನಗಳ ಕೆಲಸ ಮಾತ್ರ ಸಿಗುತ್ತಿತ್ತು. ಆದರೆ ಹೊಸ ‘ವಿಬಿ-ಜಿ ರಾಮ್ ಜಿ’ ಯೋಜನೆಯಲ್ಲಿ ಇದನ್ನು ಶಾಸನಬದ್ಧವಾಗಿ 125 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಗ್ರಾಮೀಣ ಜನರಿಗೆ ಹೆಚ್ಚುವರಿಯಾಗಿ 25 ದಿನಗಳ ಕೆಲಸ ಸಿಗಲಿದ್ದು, ಆರ್ಥಿಕವಾಗಿ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತದೆ.
ಹೊಸ ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ (VB-G RAM G) ದಿನಕ್ಕೆ 382 ರೂಪಾಯಿ ಭರ್ಜರಿ ಕೂಲಿ!
ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ಕೆಲಸ ಮಾಡುವ ಗ್ರಾಮೀಣ ಕೂಲಿಕಾರರಿಗೆ ದಿನಕ್ಕೆ 382 ರೂ. ಗಳ ಕನಿಷ್ಠ ಕೂಲಿ ದರವನ್ನು ನಿಗದಿಪಡಿಸಲಾಗಿದೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ, ಈ ಕೂಲಿ ಮೊತ್ತವು ನೇರವಾಗಿ ಫಲಾನುಭವಿಯ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ (DBT ಮೂಲಕ) ಜಮೆಯಾಗುತ್ತದೆ.
ಹಳೇ ಜಾಬ್ ಕಾರ್ಡ್ ಕಥೆ ಏನು? ಹೊಸ ಕಾರ್ಡ್ ಸಿಗೋದು ಯಾವಾಗ?
ಬಹಳಷ್ಟು ಜನರಿಗೆ ಹಳೇ ನರೇಗಾ ಜಾಬ್ ಕಾರ್ಡ್ ರದ್ದಾಗುತ್ತಾ ಎಂಬ ಆತಂಕ ಇರಬಹುದು. ಆದರೆ ಹೆದರುವ ಅಗತ್ಯವಿಲ್ಲ! ಸರ್ಕಾರವು ಹೊಸ ‘ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್’ ವಿತರಿಸುವವರೆಗೆ, ನಿಮ್ಮ ಇ-ಕೆವೈಸಿ (e-KYC) ಪೂರ್ಣಗೊಂಡಿರುವ ಹಳೆಯ ಮನರೇಗಾ ಜಾಬ್ ಕಾರ್ಡ್‌ಗಳೇ ಮಾನ್ಯವಾಗಿರುತ್ತವೆ. ಯಾರ ಬಳಿ ಜಾಬ್ ಕಾರ್ಡ್ ಇಲ್ಲವೋ, ಅಂತಹ ಕುಟುಂಬಗಳು ನೇರವಾಗಿ ತಮ್ಮ ಗ್ರಾಮ ಪಂಚಾಯತಿಗೆ ಹೋಗಿ ಹೊಸ ಕಾರ್ಡ್‌ಗಾಗಿ ನೋಂದಣಿ ಮಾಡಿಕೊಳ್ಳಬಹುದು.
ಹಳೆಯ ಕಾಮಗಾರಿಗಳ ಮುಂದುವರಿಕೆಗೆ ಅವಕಾಶ
ಜುಲೈ 1ಕ್ಕಿಂತ ಮೊದಲು ಹಳೆಯ ಮನರೇಗಾ ಯೋಜನೆ (MGNREGA) ಅಡಿಯಲ್ಲಿ ಮಂಜೂರಾಗಿ ಬಾಕಿ ಉಳಿದಿರುವ ಅಥವಾ ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಹೊಸ ಕಾಯ್ದೆಯ ನಿಯಮಗಳ ಪ್ರಕಾರವೇ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪ್ರಗತಿಯಲ್ಲಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಯಾವುದೇ ತೊಂದರೆಯಿಲ್ಲದೆ ಪೂರ್ಣಗೊಳಿಸಬಹುದು.
ಯಾವ್ಯಾವ ವೈಯಕ್ತಿಕ ಕಾಮಗಾರಿಗಳಿಗೆ ಹಣ ಸಿಗುತ್ತೆ?
ಹಳೆಯ ನರೇಗಾ ಯೋಜನೆಯಲ್ಲಿದ್ದ ಬಹುತೇಕ ಉಪಯುಕ್ತ ವೈಯಕ್ತಿಕ ಕಾಮಗಾರಿಗಳನ್ನುಹೊಸ ವಿಬಿ-ಜಿ ರಾಮ್ ಜಿ (VB-G RAM G)ಯೋಜನೆಯಲ್ಲೂ ಮುಂದುವರಿಸಲಾಗಿದೆ. ರೈತರು ತಮ್ಮ ಸ್ವಂತ ಜಾಗದಲ್ಲಿ ಈ ಕೆಳಗಿನ ಕೆಲಸಗಳನ್ನು ಮಾಡಿಕೊಂಡು ಸರ್ಕಾರದಿಂದ ಹಣ ಪಡೆಯಬಹುದು:
- ಹೊಸ ನೀರಾವರಿ ಬಾವಿ ನಿರ್ಮಾಣ
- ದನದ ಹಟ್ಟಿ (ಹಸುಗಳ ಕೊಟ್ಟಿಗೆ) ನಿರ್ಮಾಣ
- ಕೋಳಿ ಶೆಡ್ ಮತ್ತು ಕುರಿ/ಮೇಕೆ ಶೆಡ್
- ಸೋಕ್ ಪಿಟ್ (ಇಂಗು ಗುಂಡಿ) ನಿರ್ಮಾಣ
- ಎರೆಹುಳು ಗೊಬ್ಬರದ ತೊಟ್ಟಿ (ವರ್ಮಿ ಕಾಂಪೋಸ್ಟ್)
- ಅಡಿಕೆ, ತೆಂಗು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳ ಅಭಿವೃದ್ಧಿ ಕಾಮಗಾರಿಗಳು. ಒಟ್ಟಾರೆಯಾಗಿ ಹಳ್ಳಿಗಳಲ್ಲಿ ಶಾಶ್ವತ ಆಸ್ತಿಗಳ ನಿರ್ಮಾಣ, ಜಲ ಸಂರಕ್ಷಣೆ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು 318 ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.
ಹಳೆಯ ಮನರೇಗಾ ಯೋಜನೆ (MGNREGA) ಮತ್ತು ಹೊಸ ವಿಬಿ-ಜಿ ರಾಮ್ ಜಿ ಯೋಜನೆ (VB-G RAM G) ನಡುವಿನ ವ್ಯತ್ಯಾಸ
| ವಿವರಗಳು | ಹಳೆಯ ಮನರೇಗಾ ಯೋಜನೆ (MGNREGA) | ಹೊಸ ವಿಬಿ-ಜಿ ರಾಮ್ ಜಿ ಯೋಜನೆ (VB-G RAM G) |
| ಉದ್ಯೋಗದ ದಿನಗಳು | ಒಂದು ವರ್ಷಕ್ಕೆ ಗರಿಷ್ಠ 100 ದಿನಗಳು | ವರ್ಷಕ್ಕೆ ಗರಿಷ್ಠ 125 ದಿನಗಳ ಖಾತರಿ |
| ದಿನದ ಕೂಲಿ ದರ | ಹಿಂದಿನ ನಿಗದಿತ ದರಗಳು | ದಿನಕ್ಕೆ 382 ರೂ. (ಪ್ರಸಕ್ತ ಸಾಲಿಗೆ) |
| ಹಾಜರಾತಿ ವ್ಯವಸ್ಥೆ | ಸಾಮಾನ್ಯ ಆನ್‌ಲೈನ್ ಹಾಜರಾತಿ | ಮುಖಚಹರೆ ಗುರುತಿಸುವಿಕೆ (Face Authentication) |
| ದೂರದ ಕೆಲಸಕ್ಕೆ ಭತ್ತೆ | ಸಾಮಾನ್ಯ ನಿಯಮಗಳಿದ್ದವು | 5 ಕಿ.ಮೀ ಗಿಂತ ದೂರವಿದ್ದರೆ ಶೇ. 10ರಷ್ಟು ಎಕ್ಸ್ಟ್ರಾ ಭತ್ತೆ |
| ಕಾಮಗಾರಿಗಳ ಸಂಖ್ಯೆ | ಸೀಮಿತ ಕಾಮಗಾರಿಗಳು | ಒಟ್ಟು 318 ವಿವಿಧ ಕಾಮಗಾರಿಗಳಿಗೆ ಅನುಮತಿ |
ಕೆಲಸದ ಸ್ಥಳದಲ್ಲಿ ಫೇಸ್ ಅಥೆಂಟಿಕೇಷನ್ ಕಡ್ಡಾಯ!
ಯೋಜನೆಯಲ್ಲಿ ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರ ತಡೆಯಲು ಎನ್‌ಎಂಎಂಎಸ್ (NMMS) ಆ್ಯಪ್ ಮೂಲಕ ಮುಖಚಹರೆ ಗುರುತಿಸುವಿಕೆ (Face Authentication) ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕೆಲಸ ಮಾಡುವ ಸ್ಥಳದಲ್ಲೇ ಮೊಬೈಲ್ ಮೂಲಕ ಕೂಲಿಕಾರರ ಮುಖದ ಫೋಟೋ ಪಡೆದು ಹಾಜರಾತಿ ಹಾಕಲಾಗುತ್ತದೆ.
ಇದನ್ನೂ ಓದಿ: ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಪ್ಡೇಟ್: ಇನ್ಮುಂದೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಸಿಗಲಿದೆ ಪಡಿತರ! ಆಹಾರ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ!
ಕೂಲಿಕಾರರಿಗೆ ಸಿಗುವ ವಿಶೇಷ ಸೌಲಭ್ಯಗಳು:
- ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ಸಣ್ಣ ಮಕ್ಕಳ ಆರೈಕೆಗೆ ಪ್ರತ್ಯೇಕ ಸ್ಥಳ ಒದಗಿಸಲಾಗುತ್ತದೆ.
- ಸಾಮಾನ್ಯವಾಗಿ ಕೂಲಿಕಾರರ ವಾಸಸ್ಥಳದಿಂದ 5 ಕಿ.ಮೀ. ವ್ಯಾಪ್ತಿಯಲ್ಲೇ ಕೆಲಸ ನೀಡಲಾಗುತ್ತದೆ.
- ಒಂದು ವೇಳೆ 5 ಕಿ.ಮೀ.ಗಿಂತ ದೂರದ ಪ್ರದೇಶದಲ್ಲಿ ಕೆಲಸ ನೀಡಿದರೆ, ಕೂಲಿಕಾರರು ಗಳಿಸಿದ ದಿನದ ಕೂಲಿಯ ಜೊತೆಗೆ ಹೆಚ್ಚುವರಿಯಾಗಿ ಶೇ. 10 ರಷ್ಟು ವೆಚ್ಚ ಭತ್ತೆಯನ್ನು (Travel Allowance) ನೀಡಲಾಗುತ್ತದೆ.
- ರೈತರ ಬಿತ್ತನೆ ಹಾಗೂ ಕೊಯಿಲಿನ ಅವಧಿಯಲ್ಲಿ ಕೃಷಿ ಕೆಲಸಗಳಿಗೆ ಕಾರ್ಮಿಕರ ಕೊರತೆಯಾಗಬಾರದು ಎಂಬ ಸದುದ್ದೇಶದಿಂದ, ಮುಖ್ಯ ಕೃಷಿ ಹಂಗಾಮಿನಲ್ಲಿ ಯಾವುದೇ ಸರ್ಕಾರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಿಲ್ಲ.
ಉದ್ಯೋಗ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? (How to Apply for Gram Panchayat jobs)
ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹಾಗೂ ಅಕುಶಲ ದೈಹಿಕ ಕೆಲಸ ಮಾಡಲು ಇಚ್ಚಿಸುವ ಪ್ರತಿಯೊಬ್ಬರೂ ತಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಲ್ಲಿ ಲಭ್ಯವಿರುವ ಲಿಖಿತ ‘ನಮೂನೆ-6’ ರ (Form-6) ಅರ್ಜಿಯನ್ನು ಭರ್ತಿ ಮಾಡಿ ನೀಡುವುದರ ಮೂಲಕ ತಕ್ಷಣವೇ ಕೆಲಸದ ಬೇಡಿಕೆ ಇಡಬಹುದು. ಕೂಡಲೇ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಈ ಹೊಸ ಯೋಜನೆಯ ಸದುಪಯೋಗ ಪಡೆದುಕೊಳ್ಳಿ!
ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ, ಕುಟುಂಬದವರಿಗೆ ಮತ್ತು ವಾಟ್ಸಾಪ್ ಗ್ರೂಪ್‌ಗಳಿಗೆ ಈಗಲೇ ಶೇರ್ ಮಾಡಿ ಜಾಗೃತರನ್ನಾಗಿಸಿ!
Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Buttons