Skip to content
QuickNewzToday Home
  • Home
  • Jobs
  • Govt Schemes
  • Education
  • Sports
  • Politics
  • Entertainment
  • Technology
  • Trending
  • Law
  • Science/Health
  • World
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Education
  • Sports
  • Politics
  • Entertainment
  • Technology
  • Trending
  • Law
  • Science/Health
  • World
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಇಂಜಿನಿಯರ್‌ಗಳಿಗೆ ಬಂಪರ್ ಲಾಟರಿ! NTPC ಯಲ್ಲಿ 515 ಹುದ್ದೆಗಳಿಗೆ ಅರ್ಜಿ ಆಹ್ವಾನ: ಗೇಟ್-2025 ಬರೆದವರಿಗೆ 1.4 ಲಕ್ಷ ಸಂಬಳದ ಸರ್ಕಾರಿ ಕೆಲಸ ಗ್ಯಾರಂಟಿ!

  • Picture of Gundijalu Shwetha By Gundijalu Shwetha
  • Published On: February 12, 2026
NTPC Recruitment 2026:ಇಂಜಿನಿಯರ್‌ಗಳಿಗೆ ಬಂಪರ್ ಲಾಟರಿ! NTPC ಯಲ್ಲಿ 515 ಹುದ್ದೆಗಳಿಗೆ ಅರ್ಜಿ ಆಹ್ವಾನ: ಗೇಟ್-2025 ಬರೆದವರಿಗೆ 1.4 ಲಕ್ಷ ಸಂಬಳದ ಸರ್ಕಾರಿ ಕೆಲಸ ಗ್ಯಾರಂಟಿ!

NTPC Recruitment 2026: ಎನ್‌ಟಿಪಿಸಿ (NTPC) ಲಿಮಿಟೆಡ್ ಗೇಟ್-2025 ಮೂಲಕ 515 ಇಂಜಿನಿಯರಿಂಗ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಿಎಸ್ ಪದವೀಧರರು ಫೆಬ್ರವರಿ 25, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅರ್ಹತೆ, ಸಂಬಳ ಮತ್ತು ವಯೋಮಿತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

📅 Last Date To Apply 25th February 2026

ಭಾರತದ ಪ್ರತಿಷ್ಠಿತ ಮಹಾರತ್ನ ಕಂಪನಿ ಮತ್ತು ಅತಿದೊಡ್ಡ ವಿದ್ಯುತ್ ಉತ್ಪಾದನಾ ಸಂಸ್ಥೆಯಾಗಿರುವ ಎನ್‌ಟಿಪಿಸಿ (NTPC Limited) ನಿಂದ ಇಂಜಿನಿಯರಿಂಗ್ ಮುಗಿಸಿದ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ಹೊರಬಿದ್ದಿದೆ. ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ, ಅದರಲ್ಲೂ ಕೈತುಂಬಾ ಸಂಬಳ ಮತ್ತು ಅತ್ಯುತ್ತಮ ಕೆಲಸದ ಭದ್ರತೆ ಬಯಸುವ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶ. ಎನ್‌ಟಿಪಿಸಿ ತನ್ನ ನೂತನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ‘ಇಂಜಿನಿಯರಿಂಗ್ ಎಕ್ಸಿಕ್ಯುಟಿವ್ ಟ್ರೈನಿ’ (EET-2025) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಗೇಟ್ ಪರೀಕ್ಷೆ (GATE-2025) ಬರೆದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಕುರಿತಾದ ಸಂಪೂರ್ಣ ಮಾಹಿತಿ, ಅರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ನೀಡಲಾಗಿದೆ.

WhatsApp Channel
Join Now
Telegram Channel
Join Now

ಎನ್‌ಟಿಪಿಸಿ ನೇಮಕಾತಿ: ಕನಸಿನ ಉದ್ಯೋಗಕ್ಕೆ ಬಾಗಿಲು ತೆರೆದಿದೆ!

GATE 2025 PSU Jobs: ಎನ್‌ಟಿಪಿಸಿ ಲಿಮಿಟೆಡ್ ಕೇವಲ ಒಂದು ಕಂಪನಿಯಲ್ಲ, ಇದು ಭಾರತದ ಶಕ್ತಿ ಸ್ತಂಭವಿದ್ದಂತೆ. 86 GW ಸ್ಥಾಪಿತ ಸಾಮರ್ಥ್ಯ ಹೊಂದಿರುವ ಈ ಸಂಸ್ಥೆ, 2032ರ ವೇಳೆಗೆ 149 GW ತಲುಪುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಬೃಹತ್ ಬೆಳವಣಿಗೆಯ ಭಾಗವಾಗಲು, ದೇಶದ ಪ್ರತಿಭಾನ್ವಿತ ಇಂಜಿನಿಯರ್‌ಗಳಿಗೆ ಎನ್‌ಟಿಪಿಸಿ ಆಹ್ವಾನ ನೀಡಿದೆ. ನೀವು ಇಂಜಿನಿಯರಿಂಗ್ ಪದವಿ ಮುಗಿಸಿ, ಗೇಟ್-2025 ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೆ, ನಿಮ್ಮ ಲೈಫ್ ಸೆಟಲ್ ಆದಂತೆಯೇ!

ಒಟ್ಟು 500ಕ್ಕೂ ಹೆಚ್ಚು ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

NTPC Recruitment 2026

ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?

ಎನ್‌ಟಿಪಿಸಿ ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಒಟ್ಟು ನಾಲ್ಕು ಪ್ರಮುಖ ವಿಭಾಗಗಳಲ್ಲಿ ಟ್ರೈನಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ಅದರ ವಿವರ ಇಲ್ಲಿದೆ:

  1. ಮೆಕ್ಯಾನಿಕಲ್ ಇಂಜಿನಿಯರಿಂಗ್ (Mechanical): ಅತಿ ಹೆಚ್ಚು ಅಂದರೆ ಬರೋಬ್ಬರಿ 210 ಹುದ್ದೆಗಳು ಖಾಲಿ ಇವೆ. ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಇದೊಂದು ಜಾಕ್ ಪಾಟ್ ಎಂದೇ ಹೇಳಬಹುದು.
  2. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ (Electrical): ಈ ವಿಭಾಗದಲ್ಲಿ 165 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
  3. ಎಲೆಕ್ಟ್ರಾನಿಕ್ಸ್ / ಇನ್ಸ್ಟ್ರುಮೆಂಟೇಶನ್ (Electronics/Instrumentation): ಈ ವಿಭಾಗದಲ್ಲಿ ಒಟ್ಟು 125 ಹುದ್ದೆಗಳು ಲಭ್ಯವಿವೆ.
  4. ಕಂಪ್ಯೂಟರ್ ಸೈನ್ಸ್ / ಐಟಿ (CS/IT): ಈ ವಿಭಾಗದಲ್ಲಿ 15 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಒಟ್ಟಾರೆಯಾಗಿ 515 ಹುದ್ದೆಗಳು ನಿಮ್ಮದಾಗಿಸಿಕೊಳ್ಳಲು ಕಾಯುತ್ತಿವೆ. (ಗಮನಿಸಿ: ಈ ಸಂಖ್ಯೆ ಎನ್‌ಟಿಪಿಸಿ ನಿರ್ಧಾರದ ಮೇಲೆ ಹೆಚ್ಚು ಕಡಿಮೆ ಆಗಬಹುದು).

NTPC EET 2025 Notification: Recruitment of EET-2025 through GATE-2025 against Advt. No.-14/24. The last date for online application is 25.02.2026. Please read the detailed Advt. and Guidelines posted here before applying.

ಶೈಕ್ಷಣಿಕ ಅರ್ಹತೆ ಏನು ಬೇಕು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೆಲವು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.

  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪೂರ್ಣಾವಧಿಯ ಇಂಜಿನಿಯರಿಂಗ್ ಪದವಿ (B.E. / B.Tech) ಪಡೆದಿರಬೇಕು.
  • ಪದವಿಯಲ್ಲಿ ಕನಿಷ್ಠ 65% ಅಂಕಗಳನ್ನು (General/EWS/OBC ಅಭ್ಯರ್ಥಿಗಳು) ಗಳಿಸಿರಬೇಕು.
  • ಒಂದು ವೇಳೆ ನೀವು SC, ST ಅಥವಾ PwBD (ವಿಕಲಚೇತನ) ವರ್ಗಕ್ಕೆ ಸೇರಿದವರಾಗಿದ್ದರೆ, ಕನಿಷ್ಠ 55% ಅಂಕ ಗಳಿಸಿದ್ದರೆ ಸಾಕು.
  • ಅತ್ಯಂತ ಮುಖ್ಯವಾದ ವಿಷಯವೆಂದರೆ, ಅಭ್ಯರ್ಥಿಗಳು GATE 2025 ಪರೀಕ್ಷೆಯನ್ನು ಬರೆದಿರಬೇಕು ಮತ್ತು ಅದರಲ್ಲಿ ಅರ್ಹತೆ ಪಡೆದಿರಬೇಕು. ಈ ನೇಮಕಾತಿಗೆ ಕೇವಲ 2025ರ ಗೇಟ್ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಹಳೆಯ ಸ್ಕೋರ್ ಕಾರ್ಡ್ (ಉದಾಹರಣೆಗೆ 2024 ಅಥವಾ 2023) ಇಲ್ಲಿ ನಡೆಯುವುದಿಲ್ಲ.

ಯಾವ ಬ್ರಾಂಚ್‌ನವರು ಯಾವ ಹುದ್ದೆಗೆ ಅರ್ಜಿ ಹಾಕಬಹುದು?

  • ಎಲೆಕ್ಟ್ರಿಕಲ್ ಹುದ್ದೆಗೆ: ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಪವರ್ ಸಿಸ್ಟಮ್ಸ್, ಪವರ್ ಇಂಜಿನಿಯರಿಂಗ್ ಮುಂತಾದ ಪದವಿ ಪಡೆದವರು.
  • ಮೆಕ್ಯಾನಿಕಲ್ ಹುದ್ದೆಗೆ: ಮೆಕ್ಯಾನಿಕಲ್, ಪ್ರೊಡಕ್ಷನ್, ಥರ್ಮಲ್, ಮೆಕ್ಯಾನಿಕಲ್ & ಆಟೊಮೇಷನ್ ಪದವೀಧರರು.
  • ಎಲೆಕ್ಟ್ರಾನಿಕ್ಸ್ ಹುದ್ದೆಗೆ: ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಶನ್, ಇನ್ಸ್ಟ್ರುಮೆಂಟೇಶನ್ ಪದವೀಧರರು.
  • ಸಿಎಸ್/ಐಟಿ ಹುದ್ದೆಗೆ: ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮೇಷನ್ ಟೆಕ್ನಾಲಜಿ ಪದವೀಧರರು.

ವಯಸ್ಸಿನ ಮಿತಿ (Age Limit)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವೇಳೆಗೆ (ಅಂದರೆ 25.02.2026 ಕ್ಕೆ) ಅಭ್ಯರ್ಥಿಗೆ 27 ವರ್ಷ ಮೀರಿರಬಾರದು. ಆದರೆ, ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ:

  • SC/ST ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ.
  • OBC (Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ.
  • ವಿಕಲಚೇತನರಿಗೆ (PwBD): 10 ವರ್ಷಗಳ ಸಡಿಲಿಕೆ (ಜಾತಿವಾರು ಇನ್ನೂ ಹೆಚ್ಚು ಸಿಗಲಿದೆ).

ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? (Selection Process)

ಇಲ್ಲಿ ಯಾವುದೇ ಪ್ರತ್ಯೇಕ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ (ಸಾಮಾನ್ಯವಾಗಿ ಗೇಟ್ ಆಧಾರಿತ ನೇಮಕಾತಿಯಲ್ಲಿ ನೇರ ಸಂದರ್ಶನ ಅಥವಾ ದಾಖಲೆ ಪರಿಶೀಲನೆ ಇರುತ್ತದೆ).

  1. ಮೊದಲಿಗೆ, ನೀವುಗಳಿಸಿದ GATE 2025 ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.
  2. ಶಾರ್ಟ್‌ಲಿಸ್ಟ್ ಆದವರನ್ನು ದಾಖಲೆ ಪರಿಶೀಲನೆಗೆ (Document Verification) ಕರೆಯಲಾಗುತ್ತದೆ.
  3. ದಾಖಲೆಗಳು ಸರಿಯಾಗಿದ್ದರೆ ಮತ್ತು ನೀವು ಕಂಪನಿಯ ಮೆಡಿಕಲ್ ಬೋರ್ಡ್ ನಡೆಸುವ ವೈದ್ಯಕೀಯ ಪರೀಕ್ಷೆಯಲ್ಲಿ (Medical Exam) ಫಿಟ್ ಆಗಿದ್ದರೆ, ನಿಮಗೆ ನೇರವಾಗಿ ‘ಆಫರ್ ಲೆಟರ್’ ನೀಡಲಾಗುತ್ತದೆ.
  4. ಎನ್‌ಟಿಪಿಸಿ ಯಲ್ಲಿ ಮೆಡಿಕಲ್ ಟೆಸ್ಟ್ ತುಂಬಾ ಕಟ್ಟುನಿಟ್ಟಾಗಿರುತ್ತದೆ. ಆರೋಗ್ಯದ ಮಾನದಂಡಗಳನ್ನು ಪೂರೈಸುವುದು ಕಡ್ಡಾಯ.

ಕೈತುಂಬಾ ಸಂಬಳ: ಪ್ಯಾಕೇಜ್ ವಿವರ (Salary)

ಎಲ್ಲರೂ ಎದುರು ನೋಡುವ ವಿಚಾರವೇ ಇದು. ಎನ್‌ಟಿಪಿಸಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ‘E1 ಗ್ರೇಡ್’ ನಲ್ಲಿ ನೇಮಿಸಿಕೊಳ್ಳಲಾಗುತ್ತದೆ.

  • ವೇತನ ಶ್ರೇಣಿ: ತಿಂಗಳಿಗೆ ರೂ. 40,000 ದಿಂದ 1,40,000 ವರೆಗೆ.
  • ಇದರ ಜೊತೆಗೆ ತುಟ್ಟಿ ಭತ್ಯೆ (DA), ಇತರೆ ಭತ್ಯೆಗಳು (Perquisites), ಟರ್ಮಿನಲ್ ಬೆನಿಫಿಟ್ಸ್ ಎಲ್ಲವೂ ಸೇರಿ ಆರಂಭದಲ್ಲೇ ಕೈತುಂಬಾ ಸಂಬಳ ಸಿಗಲಿದೆ.
  • ಆಯ್ಕೆಯಾದವರು ಒಂದು ವರ್ಷದ ತರಬೇತಿ (Training) ಪಡೆಯಬೇಕಾಗುತ್ತದೆ. ತರಬೇತಿ ಮುಗಿದ ನಂತರ ದೇಶದ ಯಾವುದೇ ಮೂಲೆಯಲ್ಲಿರುವ ಎನ್‌ಟಿಪಿಸಿ ಘಟಕಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಶಿಫ್ಟ್ ಕೆಲಸಕ್ಕೂ (ರಾತ್ರಿ ಪಾಳಿ ಸೇರಿದಂತೆ) ಸಿದ್ಧರಿರಬೇಕು.

ಸೇವಾ ಒಪ್ಪಂದ (Service Bond)

ಕೆಲಸಕ್ಕೆ ಸೇರುವ ಮುನ್ನ ನೀವು ಒಂದು ಬಾಂಡ್ ಬರೆದುಕೊಡಬೇಕಾಗುತ್ತದೆ. ಟ್ರೈನಿಂಗ್ ಮುಗಿದ ನಂತರ ಕನಿಷ್ಠ 3 ವರ್ಷಗಳ ಕಾಲ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತೇನೆ ಎಂದು ಒಪ್ಪಂದ ಮಾಡಿಕೊಳ್ಳಬೇಕು.

  • General/EWS/OBC ಅಭ್ಯರ್ಥಿಗಳಿಗೆ: ರೂ. 5,00,000/- (ಐದು ಲಕ್ಷ).
  • SC/ST/PwBD ಅಭ್ಯರ್ಥಿಗಳಿಗೆ: ರೂ. 2,50,000/- (ಎರಡುೂವರೆ ಲಕ್ಷ).

ಅರ್ಜಿ ಸಲ್ಲಿಸುವುದು ಹೇಗೆ? ( How to Apply for NTPC Recruitment 2026)

ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಆಗಿರುತ್ತದೆ. ಯಾವುದೇ ಪೇಪರ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

🔗 Official Notification 👉 Apply Online Click Here – Direct Link
  1. ವೆಬ್‌ಸೈಟ್ ಭೇಟಿ ನೀಡಿ: ಎನ್‌ಟಿಪಿಸಿ ಅಧಿಕೃತ ಕೆರಿಯರ್ ವೆಬ್‌ಸೈಟ್ careers.ntpc.co.in ಅಥವಾ www.ntpc.co.in ಗೆ ಹೋಗಿ.
  2. ರಿಜಿಸ್ಟ್ರೇಷನ್: ನಿಮ್ಮ GATE-2025 ರಿಜಿಸ್ಟ್ರೇಷನ್ ನಂಬರ್ ಬಳಸಿ ಲಾಗಿನ್ ಆಗಬೇಕು. ಗೇಟ್ ಅಡ್ಮಿಟ್ ಕಾರ್ಡ್ ಮೇಲೆ ಇರುವ ಹೆಸರೇ ಅರ್ಜಿಯಲ್ಲೂ ಇರುವಂತೆ ನೋಡಿಕೊಳ್ಳಿ.
  3. ಮಾಹಿತಿ ಭರ್ತಿ: ನಿಮ್ಮ ವೈಯಕ್ತಿಕ ವಿವರ, ಶೈಕ್ಷಣಿಕ ವಿವರಗಳನ್ನು ನಿಖರವಾಗಿ ತುಂಬಿ.
  4. ಅಪ್ಲೋಡ್: ಫೋಟೋ, ಸಹಿ, ಗೇಟ್ ಸ್ಕೋರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಇದ್ದರೆ), ಮತ್ತು ಇಂಜಿನಿಯರಿಂಗ್ ಮಾರ್ಕ್ಸ್ ಕಾರ್ಡ್‌ಗಳನ್ನು ಅಪ್ಲೋಡ್ ಮಾಡಬೇಕು.
  5. ಶುಲ್ಕ ಪಾವತಿ: ಜನರಲ್, EWS ಮತ್ತು OBC ಹುಡುಗರು ರೂ. 500 ಅರ್ಜಿ ಶುಲ್ಕ ಪಾವತಿಸಬೇಕು. ಇದನ್ನು ಆನ್‌ಲೈನ್ (ನೆಟ್ ಬ್ಯಾಂಕಿಂಗ್/ಕಾರ್ಡ್) ಅಥವಾ ಆಫ್‌ಲೈನ್ (ಎಸ್‌ಬಿಐ ಚಲನ್) ಮೂಲಕ ಕಟ್ಟಬಹುದು.
    • ವಿಶೇಷ ಸೂಚನೆ: ಮಹಿಳಾ ಅಭ್ಯರ್ಥಿಗಳಿಗೆ, SC/ST, ವಿಕಲಚೇತನರು ಮತ್ತು ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿಲ್ಲ (Free).
  6. ಪ್ರಿಂಟ್ ಔಟ್: ಅರ್ಜಿ ಸಲ್ಲಿಸಿದ ನಂತರ ಸಿಗುವ ರಿಜಿಸ್ಟ್ರೇಷನ್ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು (Important Dates)

ಈ ದಿನಾಂಕಗಳನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಮಾರ್ಕ್ ಮಾಡಿಟ್ಟುಕೊಳ್ಳಿ:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 11.02.2026
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25.02.2026

ಕೇವಲ 15 ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿದೆ. ಕೊನೆಯ ದಿನದವರೆಗೂ ಕಾಯಬೇಡಿ, ಸರ್ವರ್ ಬಿಜಿ ಆಗುವ ಸಾಧ್ಯತೆ ಇರುತ್ತದೆ. ಈಗಲೇ ಅರ್ಜಿ ಸಲ್ಲಿಸಿ.

ಪ್ರಮುಖ ಲಿಂಕ್ ಗಳು/Important Links:

ವಿವರ (Details)ಡೌನ್‌ಲೋಡ್ ಲಿಂಕ್ (Download Link)
NTPC Recruitment 2026
Official Notification PDF
ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
NTPC Recruitment 2026
Apply Online Direct Link
Apply Online Direct Link : ಇಲ್ಲಿ ಕ್ಲಿಕ್ ಮಾಡಿ
Last Date25/02/2026
ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿhttps://quicknewztoday.com/category/jobs/

ಇಂತಹ ಹೆಚ್ಚಿನ ಕೆಲಸದ ಮಾಹಿತಿಗಳಿಗಾಗಿ ನಮ್ಮ ಪುಟವನ್ನು ಫಾಲೋ ಮಾಡುತ್ತಿರಿ!

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • PNB Apprentice recruitment 2026: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2026ನೇ ಸಾಲಿನ 5138 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
  • RBI recruitment 2026: ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ನೇ ಸಾಲಿನ ಲೀಗಲ್ ಆಫೀಸರ್, ಮ್ಯಾನೇಜರ್ ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಅರ್ಜಿ ಆಹ್ವಾನ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

NTPC Recruitment 2026:ಇಂಜಿನಿಯರ್‌ಗಳಿಗೆ ಬಂಪರ್ ಲಾಟರಿ! NTPC ಯಲ್ಲಿ 515 ಹುದ್ದೆಗಳಿಗೆ ಅರ್ಜಿ ಆಹ್ವಾನ: ಗೇಟ್-2025 ಬರೆದವರಿಗೆ 1.4 ಲಕ್ಷ ಸಂಬಳದ ಸರ್ಕಾರಿ ಕೆಲಸ ಗ್ಯಾರಂಟಿ!

ಇಂಜಿನಿಯರ್‌ಗಳಿಗೆ ಬಂಪರ್ ಲಾಟರಿ! NTPC ಯಲ್ಲಿ 515 ಹುದ್ದೆಗಳಿಗೆ ಅರ್ಜಿ ಆಹ್ವಾನ: ಗೇಟ್-2025 ಬರೆದವರಿಗೆ 1.4 ಲಕ್ಷ ಸಂಬಳದ ಸರ್ಕಾರಿ ಕೆಲಸ ಗ್ಯಾರಂಟಿ!

National Horticulture Mission: ರೈತರಿಗೆ ಬಂಪರ್ ನ್ಯೂಸ್! ತೋಟಗಾರಿಕೆ ಬೆಳೆಗಳಿಗೆ ಶೇ. 100ರಷ್ಟು ಸಬ್ಸಿಡಿ: ಅರ್ಜಿ ಹಾಕುವುದು ಹೇಗೆ? ಯಾವೆಲ್ಲಾ ಬೆಳೆಗಳಿಗೆ ಸಿಗುತ್ತೆ ಧನಸಹಾಯ?

ರೈತರಿಗೆ ಬಂಪರ್ ನ್ಯೂಸ್! ತೋಟಗಾರಿಕೆ ಬೆಳೆಗಳಿಗೆ ಶೇ. 100ರಷ್ಟು ಸಬ್ಸಿಡಿ: ಅರ್ಜಿ ಹಾಕುವುದು ಹೇಗೆ? ಯಾವೆಲ್ಲಾ ಬೆಳೆಗಳಿಗೆ ಸಿಗುತ್ತೆ ಧನಸಹಾಯ?

Electricity Amendment Bill 2025 strike: ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ? ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಮಸೂದೆ 2025 ಹಿಂಪಡೆಯಲು ಆಗ್ರಹ; ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ!

ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ? ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಮಸೂದೆ 2025 ಹಿಂಪಡೆಯಲು ಆಗ್ರಹ; ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ!

Artificial Intelligence impact on jobs: 2030ರ ವೇಳೆಗೆ ಜಗತ್ತೇ ಬದಲಾಗಲಿದೆ! ನಿಮ್ಮ ಕೆಲಸಕ್ಕೆ ಕುತ್ತು ತರುತ್ತಾ ಎಐ? ನಿಮ್ಮ ಉದ್ಯೋಗ ಸೇಫ್ ಆಗಿದೆಯಾ? ಇಲ್ಲಿದೆ ಬೆಚ್ಚಿಬೀಳಿಸುವ ಸತ್ಯ

2030ರ ವೇಳೆಗೆ ಜಗತ್ತೇ ಬದಲಾಗಲಿದೆ! ನಿಮ್ಮ ಕೆಲಸಕ್ಕೆ ಕುತ್ತು ತರುತ್ತಾ ಎಐ? ನಿಮ್ಮ ಉದ್ಯೋಗ ಸೇಫ್ ಆಗಿದೆಯಾ? ಇಲ್ಲಿದೆ ಬೆಚ್ಚಿಬೀಳಿಸುವ ಸತ್ಯ

Voter list mapping Karnataka 2002: ಮತದಾರರೇ ಎಚ್ಚರ! 2002ರ ಹಳೆಯ ಪಟ್ಟಿಯೊಂದಿಗೆ ನಿಮ್ಮ ವೋಟರ್ ಐಡಿ ಮ್ಯಾಪಿಂಗ್ ಕಡ್ಡಾಯ: ನಿಮ್ಮ ಹೆಸರು ಡಿಲೀಟ್ ಆಗಬಾರದು ಅಂದ್ರೆ ಇಂದೇ ಕೆಲಸ ಮಾಡಿ!

ಮತದಾರರೇ ಎಚ್ಚರ! 2002ರ ಹಳೆಯ ಪಟ್ಟಿಯೊಂದಿಗೆ ನಿಮ್ಮ ವೋಟರ್ ಐಡಿ ಮ್ಯಾಪಿಂಗ್ ಕಡ್ಡಾಯ: ನಿಮ್ಮ ಹೆಸರು ಡಿಲೀಟ್ ಆಗಬಾರದು ಅಂದ್ರೆ ಇಂದೇ ಕೆಲಸ ಮಾಡಿ!

PrevPreviousರೈತರಿಗೆ ಬಂಪರ್ ನ್ಯೂಸ್! ತೋಟಗಾರಿಕೆ ಬೆಳೆಗಳಿಗೆ ಶೇ. 100ರಷ್ಟು ಸಬ್ಸಿಡಿ: ಅರ್ಜಿ ಹಾಕುವುದು ಹೇಗೆ? ಯಾವೆಲ್ಲಾ ಬೆಳೆಗಳಿಗೆ ಸಿಗುತ್ತೆ ಧನಸಹಾಯ?
PNB Apprentice recruitment 2026: ಡಿಗ್ರಿ ಮುಗಿಸಿದವರಿಗೆ ಗುಡ್ ನ್ಯೂಸ್! ಪಂಜಾಬ್ ನ್ಯಾಷನಲ್ ಬ್ಯಾಂಕ್‌ ನಲ್ಲಿ 5138 ಹುದ್ದೆಗಳಿಗೆ ಬೃಹತ್ ನೇಮಕಾತಿ! ಇಂದೇ ಅರ್ಜಿ ಹಾಕಿ

ಡಿಗ್ರಿ ಮುಗಿಸಿದವರಿಗೆ ಗುಡ್ ನ್ಯೂಸ್! ಪಂಜಾಬ್ ನ್ಯಾಷನಲ್ ಬ್ಯಾಂಕ್‌ ನಲ್ಲಿ 5138 ಹುದ್ದೆಗಳಿಗೆ ಬೃಹತ್ ನೇಮಕಾತಿ! ಇಂದೇ ಅರ್ಜಿ ಹಾಕಿ

8 February 2026
Read More »
RBI recruitment 2026: ಆರ್‌ಬಿಐನಲ್ಲಿ ಭರ್ಜರಿ ಉದ್ಯೋಗಾವಕಾಶ: ತಿಂಗಳಿಗೆ 1.5 ಲಕ್ಷ ರೂ. ಸಂಬಳದ 21 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಆರ್‌ಬಿಐನಲ್ಲಿ ಭರ್ಜರಿ ಉದ್ಯೋಗಾವಕಾಶ: ತಿಂಗಳಿಗೆ 1.5 ಲಕ್ಷ ರೂ. ಸಂಬಳದ 21 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

8 February 2026
Read More »
Coffee prices today:ಕಾಫಿ ಬೆಳೆಗಾರರಿಗೆ ಬಿಗ್ ಶಾಕ್! ರೋಬಸ್ಟಾ ಮತ್ತು ಅರೇಬಿಕಾ ಬೆಲೆ ಪಾತಾಳಕ್ಕೆ! ಬ್ರೆಜಿಲ್‌ನಲ್ಲಿ 66 ಮಿಲಿಯನ್ ಚೀಲ ಕಾಫಿ ಉತ್ಪಾದನೆ, ಮುಂದೇನು ಗತಿ?

ಕಾಫಿ ಬೆಳೆಗಾರರಿಗೆ ಬಿಗ್ ಶಾಕ್! ರೋಬಸ್ಟಾ ಮತ್ತು ಅರೇಬಿಕಾ ಬೆಲೆ ಪಾತಾಳಕ್ಕೆ! ಬ್ರೆಜಿಲ್‌ನಲ್ಲಿ 66 ಮಿಲಿಯನ್ ಚೀಲ ಕಾಫಿ ಉತ್ಪಾದನೆ, ಮುಂದೇನು ಗತಿ?

8 February 2026
Read More »
Page1 Page2 Page3 Page4 Page5 … Page63
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs