Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಪ್ರತಿ ವರ್ಷ ₹48 ಸಾವಿರ ಸಿಗುವ ONGC ಸ್ಕಾಲರ್‌ಶಿಪ್‌ಗೆ ಕೂಡಲೇ ಅರ್ಜಿ ಹಾಕಿ!

  • Picture of Gundijalu Shwetha By Gundijalu Shwetha
  • Published On: May 4, 2026
ONGC Scholarship 2026: ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಪ್ರತಿ ವರ್ಷ ₹48 ಸಾವಿರ ಸಿಗುವ ONGC ಸ್ಕಾಲರ್‌ಶಿಪ್‌ಗೆ ಕೂಡಲೇ ಅರ್ಜಿ ಹಾಕಿ!

ONGC Scholarship 2026: ಡಿಗ್ರಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್! ನೀವು ಇಂಜಿನಿಯರಿಂಗ್ (Engineering), ಎಂಬಿಬಿಎಸ್ (MBBS) ಅಥವಾ ಎಂಬಿಎ (MBA) ಓದುತ್ತಿದ್ದೀರಾ? ಹಾಗಾದ್ರೆ ಓಎನ್‌ಜಿಸಿ (ONGC) ಕಡೆಯಿಂದ ಪ್ರತಿ ವರ್ಷ ಬರೋಬ್ಬರಿ ₹48,000 ಸ್ಕಾಲರ್‌ಶಿಪ್ ಪಡೆಯುವ ಅವಕಾಶ ಇಲ್ಲಿದೆ! ಸಾಮಾನ್ಯ ವರ್ಗ, ಒಬಿಸಿ, ಎಸ್‌ಸಿ/ಎಸ್‌ಟಿ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮೇ 15, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಯಾರೆಲ್ಲಾ ಅರ್ಹರು? ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

📅 Last Date to Apply Online 15-May-2026

ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಪ್ರತಿ ವರ್ಷ ₹48,000 ಸಿಗುವ ONGC ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ!

ಓದಬೇಕು ಅನ್ನೋ ಆಸೆ ಇದ್ರೂ, ಕಾಲೇಜು ಫೀಸ್ ಕಟ್ಟೋಕೆ ದುಡ್ಡಿಲ್ಲ ಅಂತ ಎಷ್ಟೋ ಬಡ ವಿದ್ಯಾರ್ಥಿಗಳು ತಮ್ಮ ಕನಸನ್ನು ಅರ್ಧದಲ್ಲೇ ಕೈಬಿಡುತ್ತಾರೆ. ಆದರೆ ಇನ್ಮುಂದೆ ಹಣಕಾಸಿನ ತೊಂದರೆ ನಿಮ್ಮ ಓದಿಗೆ ಅಡ್ಡಿಯಾಗಬಾರದು. ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಒಂದಾದ ಓಎನ್‌ಜಿಸಿ (ONGC Foundation) ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಂಪರ್ ಸ್ಕಾಲರ್‌ಶಿಪ್ ಘೋಷಿಸಿದೆ.

WhatsApp Channel
Join Now
Telegram Channel
Join Now

ನೀವು ಇಂಜಿನಿಯರಿಂಗ್ (Engineering), ಎಂಬಿಬಿಎಸ್ (MBBS), ಎಂಬಿಎ (MBA) ಅಥವಾ ಜಿಯಾಲಜಿ/ಜಿಯೋಫಿಸಿಕ್ಸ್‌ನಲ್ಲಿ ಮಾಸ್ಟರ್ಸ್ ಮಾಡುತ್ತಿದ್ದರೆ, ಈ ONGC Scholarship 2026 ನಿಮಗೆ ಒಂದು ದೊಡ್ಡ ಆಶಾಕಿರಣವಾಗಿದೆ. ಈ ಸ್ಕಾಲರ್‌ಶಿಪ್ ಅಡಿಯಲ್ಲಿ ಪ್ರತಿ ವರ್ಷ ಬರೋಬ್ಬರಿ 48,000 ರೂಪಾಯಿಗಳ (ತಿಂಗಳಿಗೆ ₹4000 ರಂತೆ) ಆರ್ಥಿಕ ನೆರವು ಸಿಗಲಿದೆ!. Engineering scholarship

2025-26ನೇ ಸಾಲಿನ ONGC ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಮೇ 15, 2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸಾಮಾನ್ಯ ವರ್ಗ (General/EWS), ಇತರೆ ಹಿಂದುಳಿದ ವರ್ಗ (OBC), ಪರಿಶಿಷ್ಟ ಜಾತಿ/ಪಂಗಡ (SC/ST) ಸೇರಿದಂತೆ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಬಹುದು. ಬನ್ನಿ, ಈ ಬಂಪರ್ ಸ್ಕಾಲರ್‌ಶಿಪ್‌ಗೆ ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ ಎಂಬ ಕಂಪ್ಲೀಟ್ ಡೀಟೇಲ್ಸ್ ತಿಳಿಯೋಣ.

ONGC Scholarship 2026: ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಪ್ರತಿ ವರ್ಷ ₹48 ಸಾವಿರ ಸಿಗುವ ONGC ಸ್ಕಾಲರ್‌ಶಿಪ್‌ಗೆ ಕೂಡಲೇ ಅರ್ಜಿ ಹಾಕಿ!

ಪ್ರಮುಖ ದಿನಾಂಕಗಳು (Important Dates of ONGC Scholarship 2026)

ವಿದ್ಯಾರ್ಥಿಗಳು ಈ ಕೆಳಗಿನ ದಿನಾಂಕಗಳನ್ನು ಕಡ್ಡಾಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಏಪ್ರಿಲ್ 1, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15, 2026
  • ಫಲಿತಾಂಶ ಪ್ರಕಟಣೆ: ಜೂನ್ 2026

ಎಷ್ಟು ಜನರಿಗೆ ಸ್ಕಾಲರ್‌ಶಿಪ್ ಸಿಗುತ್ತೆ? (Scholarship Distribution)

ಓಎನ್‌ಜಿಸಿ ಫೌಂಡೇಶನ್ ದೇಶಾದ್ಯಂತ ಒಟ್ಟು 2,000 ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ನೀಡುತ್ತದೆ. ಇದರಲ್ಲಿ ಎಸ್‌ಸಿ/ಎಸ್‌ಟಿಗೆ 1000, ಒಬಿಸಿಗೆ 500 ಹಾಗೂ ಸಾಮಾನ್ಯ (EWS) ವರ್ಗದ ವಿದ್ಯಾರ್ಥಿಗಳಿಗೆ 500 ಸ್ಕಾಲರ್‌ಶಿಪ್ ಮೀಸಲಿಡಲಾಗಿದೆ.

ವಿಶೇಷವೆಂದರೆ, ಇದರಲ್ಲಿ ಶೇಕಡಾ 50 ರಷ್ಟು (ಅರ್ಧದಷ್ಟು) ಸ್ಕಾಲರ್‌ಶಿಪ್‌ಗಳನ್ನು ಕೇವಲ ಹುಡುಗಿಯರಿಗೆ (Female Students) ಮೀಸಲಿಡಲಾಗಿದೆ!.

ಯಾವ ಕೋರ್ಸ್‌ಗೆ ಎಷ್ಟು ಸ್ಕಾಲರ್‌ಶಿಪ್?

ಕೋರ್ಸ್ ಹೆಸರು (Course)ಎಸ್‌ಸಿ/ಎಸ್‌ಟಿ (SC/ST)ಒಬಿಸಿ (OBC)ಸಾಮಾನ್ಯ (EWS)ಒಟ್ಟು
ಇಂಜಿನಿಯರಿಂಗ್ (Engineering)5003003001100
ಎಂಬಿಬಿಎಸ್ (MBBS)905050190
ಎಂಬಿಎ (MBA)1405050240
ಮಾಸ್ಟರ್ಸ್ ಇನ್ ಜಿಯಾಲಜಿ270100100470

ನಮ್ಮ ಕರ್ನಾಟಕ ರಾಜ್ಯವು ‘ದಕ್ಷಿಣ ವಲಯ’ (South Zone) ದಡಿ ಬರುತ್ತದೆ. ದಕ್ಷಿಣ ವಲಯಕ್ಕೆ ಒಟ್ಟು 400 ಸ್ಕಾಲರ್‌ಶಿಪ್‌ಗಳನ್ನು ಹಂಚಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು? (Eligibility Criteria for ONGC Scholarship 2026)

ನೀವು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಬೇಕಾದರೆ ಈ ಕೆಳಗಿನ ಷರತ್ತುಗಳನ್ನು ಪೂರೈಸಿರಬೇಕು:

ಸಾಮಾನ್ಯ ಅರ್ಹತೆಗಳು:

  1. ಭಾರತೀಯ ನಾಗರಿಕರಾಗಿರಬೇಕು ಮತ್ತು ಭಾರತದಲ್ಲೇ ಓದುತ್ತಿರಬೇಕು.
  2. ಅಭ್ಯರ್ಥಿಯ ವಯಸ್ಸು ಆಗಸ್ಟ್ 1, 2025 ಕ್ಕೆ 30 ವರ್ಷ ಮೀರಿರಬಾರದು.
  3. ಎಐಸಿಟಿಇ (AICTE), ಯುಜಿಸಿ (UGC) ಅಥವಾ ಮೆಡಿಕಲ್ ಕೌನ್ಸಿಲ್ (MCI) ಇಂದ ಮಾನ್ಯತೆ ಪಡೆದ ಕಾಲೇಜಿನಲ್ಲಿ ಇಂಜಿನಿಯರಿಂಗ್, ಎಂಬಿಬಿಎಸ್, ಎಂಬಿಎ ಅಥವಾ ಜಿಯಾಲಜಿಯಲ್ಲಿ ಮೊದಲ ವರ್ಷದ (First Year) ರೆಗ್ಯುಲರ್ ಕೋರ್ಸ್ ಓದುತ್ತಿರಬೇಕು. (ಪಾರ್ಟ್-ಟೈಮ್, ಡಿಸ್ಟೆನ್ಸ್ ಎಜುಕೇಶನ್ ಮಾಡುವಂತಿಲ್ಲ).
  4. ಅಂಕಗಳು: ಇಂಜಿನಿಯರಿಂಗ್/ಎಂಬಿಬಿಎಸ್ ವಿದ್ಯಾರ್ಥಿಗಳು ಪಿಯುಸಿಯಲ್ಲಿ (12th) ಕನಿಷ್ಠ 60% ಅಂಕ ಪಡೆದಿರಬೇಕು. ಎಂಬಿಎ ವಿದ್ಯಾರ್ಥಿಗಳು ಡಿಗ್ರಿಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು.
  5. ಬೇರೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಸ್ಕಾಲರ್‌ಶಿಪ್ ಪಡೆಯುತ್ತಿರಬಾರದು.

ಆದಾಯದ ಮಿತಿ (Income Limit):

  • SC/ST ವಿದ್ಯಾರ್ಥಿಗಳಿಗೆ: ಕುಟುಂಬದ ವಾರ್ಷಿಕ ಆದಾಯ ₹4.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • OBC ವಿದ್ಯಾರ್ಥಿಗಳಿಗೆ: ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು (ನಾನ್-ಕ್ರೀಮಿ ಲೇಯರ್).
  • General (EWS) ವಿದ್ಯಾರ್ಥಿಗಳಿಗೆ: ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು. (ಬಿಪಿಎಲ್-BPL ಕಾರ್ಡ್ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ).

ಅರ್ಜಿ ಸಲ್ಲಿಸುವುದು ಹೇಗೆ? (How to Apply Online for ONGC Scholarship 2026 )

👉 Click Here to Apply online ONGC Scholarship 2026

ONGC Scholarship 2026ಗೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೀತಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೆ.

  1. ಮೊದಲು ONGC ಯ ಅಧಿಕೃತ ವೆಬ್‌ಸೈಟ್ ongcscholar.org ಗೆ ಭೇಟಿ ನೀಡಿ.
  2. ನಿಮ್ಮ ಜಾತಿ ವರ್ಗವನ್ನು (SC/ST, OBC, General) ಆಯ್ಕೆ ಮಾಡಿಕೊಂಡು ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ತುಂಬಿ.
  3. ನಿಮ್ಮ ಹೆಸರು, ಕಾಲೇಜು ವಿವರ, ಬ್ಯಾಂಕ್ ಅಕೌಂಟ್ ಡೀಟೇಲ್ಸ್ (IFSC ಕೋಡ್ ಸಮೇತ) ಸರಿಯಾಗಿ ಹಾಕಿ.
  4. ಫೋಟೋ, ಮಾರ್ಕ್ಸ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕಾಲೇಜಿನ ಅಡ್ಮಿಷನ್ ಲೆಟರ್ ಗಳನ್ನು ಅಪ್ಲೋಡ್ ಮಾಡಿ ಫೈನಲ್ ಸಬ್ಮಿಟ್ ಕೊಡಿ.
  5. ಮುಖ್ಯವಾದ ಹಂತ: ಆನ್‌ಲೈನ್‌ನಲ್ಲಿ ಸಬ್ಮಿಟ್ ಮಾಡಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಂಡು, ಅದರ ಜೊತೆಗೆ ಎಲ್ಲಾ ದಾಖಲೆಗಳ ಜೆರಾಕ್ಸ್ ಸೇರಿಸಿ ನಿಮ್ಮ ಕಾಲೇಜಿನ ಪ್ರಿನ್ಸಿಪಾಲ್ (Head/Principal) ಬಳಿ ಸಹಿ ಮತ್ತು ಸೀಲು (Attestation) ಹಾಕಿಸಬೇಕು.
  6. ಈ ಅಟೆಸ್ಟೆಡ್ ಕಾಪಿಯನ್ನು ONGC ಯ ಪ್ರಾದೇಶಿಕ ಕಚೇರಿಗೆ ಅಂಚೆ (Post) ಮೂಲಕ ಕಳುಹಿಸಬೇಕು. ಕರ್ನಾಟಕದ ವಿದ್ಯಾರ್ಥಿಗಳು ಚೆನ್ನೈನಲ್ಲಿರುವ ಸೌತ್ ಝೋನ್ ಕಚೇರಿಗೆ ಕಳುಹಿಸಬೇಕು. (ವಿಳಾಸ: ONGC, Thalamuthu Natarajan Bldg. (CMDA Tower-I) No.1, Gandhi Irwin Road, Egmore, Chennai – 600008).

ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ? (Selection Process of ONGC Scholarship 2026 )

ಇಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ. ಕೇವಲ ಮೆರಿಟ್ (Merit) ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪಿಯುಸಿ ಅಥವಾ ಡಿಗ್ರಿಯಲ್ಲಿ ಹೆಚ್ಚು ಅಂಕ ಪಡೆದ ಬಡ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಸಿಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ.

ಕೋರ್ಸ್ ಮುಗಿಯುವವರೆಗೂ ಪ್ರತಿ ವರ್ಷ ಸ್ಕಾಲರ್‌ಶಿಪ್ ರಿನ್ಯೂವಲ್ (Renewal) ಮಾಡಿಕೊಳ್ಳಲು ಅವಕಾಶವಿದೆ, ಆದರೆ ಪ್ರತಿ ವರ್ಷ ಕನಿಷ್ಠ 60% ಅಂಕಗಳನ್ನು ಪಡೆಯುವುದು ಕಡ್ಡಾಯ.

ಬಡತನದ ಬೇಗೆಯಲ್ಲಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಈ ₹48,000 ದೊಡ್ಡ ಮೊತ್ತ. ಹೀಗಾಗಿ ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕಾಲೇಜು ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲು ಮರೆಯದಿರಿ. ಆಲ್ ದ ಬೆಸ್ಟ್!

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • CRPF Recruitment 2026:  Last Date:19/05/2026
  • KEA Agriculture Recruitment 2026 : Last Date: 10/05/2026
  • KSLSA Recruitment 2026: Last Date: 08/05/2026

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

ISRO URSC JRF recruitment 2026: ಬೆಂಗಳೂರಿನ ಇಸ್ರೋ (ISRO) ಕೇಂದ್ರದಲ್ಲಿ ಪರೀಕ್ಷೆ ಇಲ್ಲದೆ ನೇರ ಕೆಲಸ: JRF ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರಿನಲ್ಲೇ ಪೋಸ್ಟಿಂಗ್!

ಬೆಂಗಳೂರಿನ ಇಸ್ರೋ (ISRO) ಕೇಂದ್ರದಲ್ಲಿ ಪರೀಕ್ಷೆ ಇಲ್ಲದೆ ನೇರ ಕೆಲಸ: JRF ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರಿನಲ್ಲೇ ಪೋಸ್ಟಿಂಗ್!

KEA AO AAO recruitment 2026: KEA ಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: ಕೃಷಿ ಅಧಿಕಾರಿ (AO/ AAO) ಅರ್ಜಿ ದಿನಾಂಕ ವಿಸ್ತರಣೆ! B.E ಓದಿದವರಿಗೂ ಬಂಪರ್ ಲಾಟರಿ!

KEA ಯಿಂದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: ಕೃಷಿ ಅಧಿಕಾರಿ (AO/ AAO) ಅರ್ಜಿ ದಿನಾಂಕ ವಿಸ್ತರಣೆ! B.E ಓದಿದವರಿಗೂ ಬಂಪರ್ ಲಾಟರಿ!

KSP recruitment 2026: PUC/ITI/Diploma ಪಾಸ್ ಆದವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ವೃಂದದ 1600 ಕಾನ್ಸ್‌ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ!

PUC/ITI/Diploma ಪಾಸ್ ಆದವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ವೃಂದದ 1600 ಕಾನ್ಸ್‌ಟೇಬಲ್ ಹುದ್ದೆಗಳ ಬೃಹತ್ ನೇಮಕಾತಿ!

Tumkur Home Guards recruitment 2026: 10ನೇ ತರಗತಿ ಪಾಸ್ ಆಗಿದ್ದೀರಾ? ಪೊಲೀಸ್ ಇಲಾಖೆ ವತಿಯಿಂದ ಗೃಹರಕ್ಷಕ ದಳದಲ್ಲಿ 234 ಹುದ್ದೆಗಳ ಬೃಹತ್ ನೇಮಕಾತಿ!

10ನೇ ತರಗತಿ ಪಾಸ್ ಆಗಿದ್ದೀರಾ? ಪೊಲೀಸ್ ಇಲಾಖೆ ವತಿಯಿಂದ ಗೃಹರಕ್ಷಕ ದಳದಲ್ಲಿ 234 ಹುದ್ದೆಗಳ ಬೃಹತ್ ನೇಮಕಾತಿ!

Meta Paid Subscriptions: WhatsApp, Instagram, Facebook ಉಚಿತ ಸೇವೆಗೆ ಬ್ರೇಕ್? ಹೊಸ ಪ್ರೀಮಿಯಂ ಫೀಚರ್ಸ್ ಪಡೆಯಲು ಇನ್ಮುಂದೆ ತಿಂಗಳಿಗೆ ಹಣ ಕಟ್ಟಲೇಬೇಕು!

WhatsApp, Instagram, Facebook ಉಚಿತ ಸೇವೆಗೆ ಬ್ರೇಕ್? ಹೊಸ ಪ್ರೀಮಿಯಂ ಫೀಚರ್ಸ್ ಪಡೆಯಲು ಇನ್ಮುಂದೆ ತಿಂಗಳಿಗೆ ಹಣ ಕಟ್ಟಲೇಬೇಕು!

PrevPreviousಡಿಪ್ಲೊಮಾ ಪಾಸ್ ಆದವರಿಗೆ BEL ನಲ್ಲಿ 43 ಬಂಪರ್ ಹುದ್ದೆಗಳು: ತಿಂಗಳಿಗೆ 1.20 ಲಕ್ಷದವರೆಗೆ ಸಂಬಳ! ಇಂದೇ ಅರ್ಜಿ ಹಾಕಿ!
NextB.E/B.Tech ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಯಾವುದೇ ಎಕ್ಸಾಮ್ ಇಲ್ಲದೆ DRDO ದಲ್ಲಿ ಪೇಡ್ ಇಂಟರ್ನ್‌ಶಿಪ್! 30ಸಾವಿರ ಸ್ಟೈಪೆಂಡ್‌!Next
KVAFSU Recruitment 2026: ವೆಟರ್ನರಿ ಯೂನಿವರ್ಸಿಟಿಯಲ್ಲಿ ಬೃಹತ್ ನೇಮಕಾತಿ: 96 ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ವೆಟರ್ನರಿ ಯೂನಿವರ್ಸಿಟಿಯಲ್ಲಿ ಬೃಹತ್ ನೇಮಕಾತಿ: 96 ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

27 May 2026
Read More »
HOCL Apprentice Recruitment 2026: B.E/B.Tech/Diploma/ITI ಓದಿದವರಿಗೆ ಭರ್ಜರಿ ಗುಡ್ ನ್ಯೂಸ್: ಎಚ್‌ಒಸಿಎಲ್ (HOCL) ನಲ್ಲಿ 30+ ಹುದ್ದೆಗಳಿಗೆ ನೇಮಕಾತಿ!

B.E/B.Tech/Diploma/ITI ಓದಿದವರಿಗೆ ಭರ್ಜರಿ ಗುಡ್ ನ್ಯೂಸ್: ಎಚ್‌ಒಸಿಎಲ್ (HOCL) ನಲ್ಲಿ 30+ ಹುದ್ದೆಗಳಿಗೆ ನೇಮಕಾತಿ!

25 May 2026
Read More »
FID Number: ಬೆಳೆ ವಿಮೆಗೆ FID ನಂಬರ್ ಕಡ್ಡಾಯ: ನಿಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಜೋಡಣೆ ಮಾಡಿಸುವುದು ಹೇಗೆ?

ಬೆಳೆ ವಿಮೆಗೆ FID ನಂಬರ್ ಕಡ್ಡಾಯ: ನಿಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಜೋಡಣೆ ಮಾಡಿಸುವುದು ಹೇಗೆ?

25 May 2026
Read More »
Page1 … Page8 Page9 Page10 Page11 Page12 … Page144
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs