Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಬಡ ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಇಂಜಿನಿಯರಿಂಗ್ ಓದಲು Panasonic ಸಂಸ್ಥೆಯಿಂದ ₹70250 ಸ್ಕಾಲರ್‌ಶಿಪ್!

  • Picture of Gundijalu Shwetha By Gundijalu Shwetha
  • Published On: August 6, 2026
Panasonic Ratti Chhatr Scholarship 2026: ಬಡ ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಇಂಜಿನಿಯರಿಂಗ್ ಓದಲು Panasonic ಸಂಸ್ಥೆಯಿಂದ ₹70250 ಸ್ಕಾಲರ್‌ಶಿಪ್!

Panasonic Ratti Chhatr Scholarship 2026: ಭಾರತದ ಯಾವುದೇ ಐಐಟಿ (IIT) ಯಲ್ಲಿ ಬಿ.ಇ ಅಥವಾ ಬಿ.ಟೆಕ್ ಮೊದಲ ವರ್ಷ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಪ್ಯಾನಾಸೋನಿಕ್ ಸಂಸ್ಥೆಯಿಂದ ವಾರ್ಷಿಕ 70,250 ರೂ. ಸ್ಕಾಲರ್‌ಶಿಪ್ ನೀಡಲಾಗುತ್ತಿದೆ. ಅರ್ಹತೆ, ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಕೊನೆಯ ದಿನಾಂಕ: 20 ಆಗಸ್ಟ್ 2026.

📅 Last Date for Apply Online 20.08.2026

B.E/ B.Tech ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಪ್ಯಾನಾಸೋನಿಕ್‌ನಿಂದ ಸಿಗಲಿದೆ ವಾರ್ಷಿಕ ₹70,250 ಸ್ಕಾಲರ್‌ಶಿಪ್!

ನಮಸ್ಕಾರ ಸ್ನೇಹಿತರೇ, ಇಂಜಿನಿಯರಿಂಗ್ ಓದಬೇಕು, ಅದರಲ್ಲೂ ದೇಶದ ಪ್ರತಿಷ್ಠಿತ ಐಐಟಿ (IIT – Indian Institute of Technology) ಯಲ್ಲಿ ಸೀಟು ಗಿಟ್ಟಿಸಿಕೊಳ್ಳಬೇಕು ಅನ್ನೋದು ಲಕ್ಷಾಂತರ ವಿದ್ಯಾರ್ಥಿಗಳ ದೊಡ್ಡ ಕನಸಾಗಿರುತ್ತದೆ. ಆದರೆ, ಕಷ್ಟಪಟ್ಟು ಎಂಟ್ರೆನ್ಸ್ ಎಕ್ಸಾಮ್ ಪಾಸ್ ಮಾಡಿ ಸೀಟು ಸಿಕ್ರೂ ಕೂಡ, ಅಲ್ಲಿನ ಫೀಸ್ ಕಟ್ಟಲು ಎಷ್ಟೋ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಪರದಾಡುತ್ತವೆ. ಇಂತಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಪ್ಯಾನಾಸೋನಿಕ್ (Panasonic) ಸಂಸ್ಥೆಯು ಅದ್ಭುತವಾದ ಸ್ಕಾಲರ್‌ಶಿಪ್ ಒಂದನ್ನು ಘೋಷಣೆ ಮಾಡಿದೆ. ಅದೇ Panasonic Ratti Chhatr Scholarship 2026.

WhatsApp Channel
Join Now
Telegram Channel
Join Now

ಹೌದು, ಐಐಟಿಯಲ್ಲಿ ಮೊದಲ ವರ್ಷದ ಬಿ.ಇ ಅಥವಾ ಬಿ.ಟೆಕ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಉದ್ದೇಶದಿಂದ ಪ್ಯಾನಾಸೋನಿಕ್ ಲೈಫ್ ಸಲ್ಯೂಷನ್ಸ್ ಇಂಡಿಯಾ (PLSIND) ಈ ಯೋಜನೆಯನ್ನು ಜಾರಿಗೆ ತಂದಿದೆ. ಬನ್ನಿ, ಈ ಬೆಸ್ಟ್ Scholarship for IIT students ನ ಬಗ್ಗೆ, ಯಾರೆಲ್ಲಾ ಅರ್ಜಿ ಹಾಕಬಹುದು, ಏನೆಲ್ಲಾ ದಾಖಲೆಗಳು ಬೇಕು ಅನ್ನೋದನ್ನ ಸಂಪೂರ್ಣವಾಗಿ, ಸರಳವಾಗಿ ತಿಳಿದುಕೊಳ್ಳೋಣ.

ಏನಿದು ಪ್ಯಾನಾಸೋನಿಕ್ ರಟ್ಟಿ ಛಾತ್ರ್ ಸ್ಕಾಲರ್‌ಶಿಪ್ (Panasonic Ratti Chhatr Scholarship 2026)?

ಪ್ಯಾನಾಸೋನಿಕ್ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಜಗತ್ತಿನಾದ್ಯಂತ ದೊಡ್ಡ ಹೆಸರು ಮಾಡಿರುವ ಕಂಪನಿ. ಈ ಕಂಪನಿಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿಯಲ್ಲಿ 2009 ರಿಂದಲೇ ಈ ‘ರಟ್ಟಿ ಛಾತ್ರ್’ ಸ್ಕಾಲರ್‌ಶಿಪ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಹಣದ ತೊಂದರೆಯಿಂದ ಯಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತನಾಗಬಾರದು ಹಾಗೂ ಅವರು ದೇಶದ ಭವಿಷ್ಯದ ನಾಯಕರಾಗಿ ಬೆಳೆಯಬೇಕು ಅನ್ನೋದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಇದು ಭಾರತದ ಅತ್ಯುತ್ತಮ Engineering Scholarship in India ಗಳಲ್ಲಿ ಒಂದಾಗಿದೆ.

ಯಾರೆಲ್ಲಾ ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಬಹುದು? (ಅರ್ಹತೆಗಳು)

ಈ ಸ್ಕಾಲರ್‌ಶಿಪ್ ಎಲ್ಲರಿಗೂ ಸಿಗುವುದಿಲ್ಲ, ಇದಕ್ಕೆ ಕೆಲವು ನಿಗದಿತ ಅರ್ಹತೆಗಳನ್ನು ಕೇಳಲಾಗಿದೆ:

  • ಭಾರತದ ಯಾವುದೇ ಐಐಟಿಯಲ್ಲಿ (IIT) 2026-27ನೇ ಸಾಲಿಗೆ ಬಿ.ಇ (B.E) ಅಥವಾ ಬಿ.ಟೆಕ್ (B.Tech) ಕೋರ್ಸ್‌ನ ಮೊದಲನೇ ವರ್ಷಕ್ಕೆ ಅಡ್ಮಿಷನ್ ಪಡೆದಿರಬೇಕು.
  • ವಿದ್ಯಾರ್ಥಿಯು 12ನೇ ತರಗತಿಯಲ್ಲಿ (ಪಿಯುಸಿ) ಶೇ. 75% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು.
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 8 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು.
  • ಇದು ಕೇವಲ 2026-27ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
  • ವಿಕಲಚೇತನ ವಿದ್ಯಾರ್ಥಿಗಳಿಗೆ (PwD) ಆಯ್ಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ.
  • (ಗಮನಿಸಿ: ಬಡ್ಡಿ4ಸ್ಟಡಿ ಹಾಗೂ ಪ್ಯಾನಾಸೋನಿಕ್ ಕಂಪನಿಯ ಉದ್ಯೋಗಿಗಳ ಮಕ್ಕಳಿಗೆ ಈ ಅವಕಾಶವಿಲ್ಲ).

ಎಷ್ಟು ಹಣ ಸಿಗುತ್ತದೆ? (ಬೆನಿಫಿಟ್ಸ್)

ಈ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಿಗುವ ಆರ್ಥಿಕ ನೆರವಿನ ವಿವರ ಇಲ್ಲಿದೆ:

ವಿವರಣೆಮಾಹಿತಿ
ವಿದ್ಯಾರ್ಥಿವೇತನದ ಮೊತ್ತಪ್ರತಿ ವರ್ಷಕ್ಕೆ ₹ 70,250 ರೂ.
ಅವಧಿ2028 ರವರೆಗೆ (ಮುಂದೆ ವಿಸ್ತರಣೆಯಾಗುವ ಸಾಧ್ಯತೆ ಇದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ20-ಆಗಸ್ಟ್-2026

ಅರ್ಜಿ ಸಲ್ಲಿಸಲು ಬೇಕಾಗುವ ಕಡ್ಡಾಯ ದಾಖಲೆಗಳು

ಅರ್ಜಿ ಹಾಕುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ:

  • 12ನೇ ತರಗತಿಯ ಮಾರ್ಕ್ಸ್ ಕಾರ್ಡ್ (2025-26 ನೇ ಬ್ಯಾಚ್).
  • ಸರ್ಕಾರಿ ಗುರುತಿನ ಚೀಟಿ (ಮರೆಮಾಚಲಾದ/Masked ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪ್ಯಾನ್ ಕಾರ್ಡ್).
  • ಐಐಟಿಯಿಂದ ಪಡೆದ ಅಡ್ಮಿಷನ್ ಲೆಟರ್ (Admission letter).
  • ಮೊದಲ ಸೆಮಿಸ್ಟರ್‌ನ ಫೀಸ್ ರಶೀದಿ.
  • ಬ್ಯಾಂಕ್ ಅಕೌಂಟ್ ಡೀಟೇಲ್ಸ್ (ಪಾಸ್ ಬುಕ್ ಕಾಪಿ).
  • ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋ.
  • ಕುಟುಂಬದ ಆದಾಯ ಪ್ರಮಾಣಪತ್ರ (ಇದರಲ್ಲಿ ಯಾವುದಾದರೂ ಒಂದು: ಫಾರ್ಮ್ 16, ತಹಸೀಲ್ದಾರ್ ನೀಡಿದ ಆದಾಯ ಪತ್ರ, ಕಳೆದ 3 ತಿಂಗಳ ಸ್ಯಾಲರಿ ಸ್ಲಿಪ್, ಅಥವಾ ಐಟಿಆರ್ ಸ್ಟೇಟ್‌ಮೆಂಟ್).

(ಗಮನಿಸಿ: ಅಡ್ಮಿಷನ್ ಲೆಟರ್ ಮತ್ತು ಫೀಸ್ ರಶೀದಿ ಎರಡನ್ನೂ ಕಡ್ಡಾಯವಾಗಿ ಅಪ್‌ಲೋಡ್ ಮಾಡಲೇಬೇಕು).

ಅರ್ಜಿ ಸಲ್ಲಿಸುವುದು ಹೇಗೆ? (How to Apply for Panasonic Ratti Chhatr Scholarship 2026)

ಇದೊಂದು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆಯಾಗಿದ್ದು, ನೀವು ಮನೆಯಲ್ಲೇ ಕುಳಿತು Online Scholarship Apply ಮಾಡಬಹುದು.

📅 Last Date for Apply Online 20.08.2026
👉Click Here to apply ONLINE for Panasonic Ratti Chhatr Scholarship Program 2026-27
  1. ಮೊದಲಿಗೆ Buddy4Study Scholarship ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಲ್ಲಿ ನಿಮ್ಮ ಇಮೇಲ್, ಮೊಬೈಲ್ ನಂಬರ್ ಅಥವಾ ಗೂಗಲ್ ಐಡಿ ಬಳಸಿ ರಿಜಿಸ್ಟರ್ ಆಗಿ, ನಂತರ ಲಾಗಿನ್ ಮಾಡಿ.
  3. ಲಾಗಿನ್ ಆದ ಮೇಲೆ ‘Panasonic Ratti Chhatr Scholarship Program 2026-27’ ಪೇಜ್ ಓಪನ್ ಆಗುತ್ತದೆ.
  4. ಅಲ್ಲಿ ಕಾಣುವ ‘Start Application’ ಬಟನ್ ಮೇಲೆ ಕ್ಲಿಕ್ ಮಾಡಿ.
  5. ಆನ್‌ಲೈನ್ ಫಾರ್ಮ್‌ನಲ್ಲಿ ಕೇಳಿರುವ ನಿಮ್ಮ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ತುಂಬಿ.
  6. ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
  7. ಟರ್ಮ್ಸ್ ಅಂಡ್ ಕಂಡೀಷನ್ಸ್ ಒಪ್ಪಿಕೊಂಡು ‘Preview’ ಮೇಲೆ ಕ್ಲಿಕ್ ಮಾಡಿ.
  8. ನೀವು ತುಂಬಿರುವ ಮಾಹಿತಿ ಎಲ್ಲಾ ಸರಿಯಾಗಿದೆಯಾ ಎಂದು ಒಮ್ಮೆ ಚೆಕ್ ಮಾಡಿಕೊಂಡು, ಕೊನೆಯದಾಗಿ ‘Submit’ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.

Read More Educational Scholarship News/ ಇನ್ನಷ್ಟು ವಿದ್ಯಾರ್ಥಿವೇತನ ಸುದ್ದಿ ಓದಿ:

  • 1ನೇ ತರಗತಿಯಿಂದ ಡಿಗ್ರಿ ವರೆಗೆ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್‌ನಿಂದ ಸಿಗಲಿದೆ 75000 ರೂ. ವರೆಗೆ ಸ್ಕಾಲರ್‌ಶಿಪ್!
  • ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ! SSP Scholarship 2026-27 ಅರ್ಜಿ ಸಲ್ಲಿಕೆ ಆರಂಭ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

KSRLPS Recruitment 2026: ಪರೀಕ್ಷೆ ಇಲ್ಲದೆ ನೇರ ನೇಮಕಾತಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ KSRLPS ಇಲಾಖೆಯಲ್ಲಿ 14 ಹುದ್ದೆಗಳ ಭರ್ಜರಿ ಆಫರ್!

ಪರೀಕ್ಷೆ ಇಲ್ಲದೆ ನೇರ ನೇಮಕಾತಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ KSRLPS ಇಲಾಖೆಯಲ್ಲಿ 14 ಹುದ್ದೆಗಳ ಭರ್ಜರಿ ಆಫರ್!

Panasonic Ratti Chhatr Scholarship 2026: ಬಡ ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಇಂಜಿನಿಯರಿಂಗ್ ಓದಲು Panasonic ಸಂಸ್ಥೆಯಿಂದ ₹70250 ಸ್ಕಾಲರ್‌ಶಿಪ್!

ಬಡ ವಿದ್ಯಾರ್ಥಿಗಳಿಗೆ ಬಂಪರ್ ಆಫರ್: ಇಂಜಿನಿಯರಿಂಗ್ ಓದಲು Panasonic ಸಂಸ್ಥೆಯಿಂದ ₹70250 ಸ್ಕಾಲರ್‌ಶಿಪ್!

HDFC Parivartan ECSS Programme 2026-27: 1ನೇ ತರಗತಿಯಿಂದ ಡಿಗ್ರಿ ವರೆಗೆ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್‌ನಿಂದ ಸಿಗಲಿದೆ 75000 ರೂ. ವರೆಗೆ ಸ್ಕಾಲರ್‌ಶಿಪ್!

1ನೇ ತರಗತಿಯಿಂದ ಡಿಗ್ರಿ ವರೆಗೆ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್‌ನಿಂದ ಸಿಗಲಿದೆ 75000 ರೂ. ವರೆಗೆ ಸ್ಕಾಲರ್‌ಶಿಪ್!

KEA Land Surveyor Recruitment 2026: KEA ಯಿಂದ 750 'ಭೂಮಾಪಕ' ಹುದ್ದೆಗಳ ನೇಮಕಾತಿಗೆ ಅರ್ಜಿ ದಿನಾಂಕ ವಿಸ್ತರಣೆ: BE/ B.Sc/Diploma ಪಾಸಾದವರು ಕೂಡ ಅಪ್ಲೈ ಮಾಡಿ!

KEA ಯಿಂದ 750 ‘ಭೂಮಾಪಕ’ ಹುದ್ದೆಗಳ ನೇಮಕಾತಿಗೆ ಅರ್ಜಿ ದಿನಾಂಕ ವಿಸ್ತರಣೆ: BE/ B.Sc/Diploma ಪಾಸಾದವರು ಕೂಡ ಅಪ್ಲೈ ಮಾಡಿ!

IBPS CSA Recruitment 2026: ಡಿಗ್ರಿ ಮುಗಿಸಿದವರಿಗೆ ಸುವರ್ಣಾವಕಾಶ: 11 ಪ್ರಮುಖ ಬ್ಯಾಂಕುಗಳಲ್ಲಿ 11403 ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳ ಭರ್ತಿ!

ಡಿಗ್ರಿ ಮುಗಿಸಿದವರಿಗೆ ಸುವರ್ಣಾವಕಾಶ: 11 ಪ್ರಮುಖ ಬ್ಯಾಂಕುಗಳಲ್ಲಿ 11403 ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳ ಭರ್ತಿ!

PrevPrevious1ನೇ ತರಗತಿಯಿಂದ ಡಿಗ್ರಿ ವರೆಗೆ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್‌ನಿಂದ ಸಿಗಲಿದೆ 75000 ರೂ. ವರೆಗೆ ಸ್ಕಾಲರ್‌ಶಿಪ್!
Nextಪರೀಕ್ಷೆ ಇಲ್ಲದೆ ನೇರ ನೇಮಕಾತಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ KSRLPS ಇಲಾಖೆಯಲ್ಲಿ 14 ಹುದ್ದೆಗಳ ಭರ್ಜರಿ ಆಫರ್!Next
RailTel Apprentice 2026: BE/B.Tech/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ರೈಲ್ವೆ ಅಪ್ರೆಂಟಿಸ್ ಕೆಲಸ!

BE/B.Tech/Diploma ಅಭ್ಯರ್ಥಿಗಳಿಗೆ ಸುವರ್ಣಾವಕಾಶ! ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ರೈಲ್ವೆ ಅಪ್ರೆಂಟಿಸ್ ಕೆಲಸ!

4 August 2026
Read More »
ISRO Recruitment 2026: ಬೆಂಗಳೂರು/ಹಾಸನ ಸೇರಿದಂತೆ ಇಸ್ರೋದಲ್ಲಿ ಬಂಪರ್ ಉದ್ಯೋಗಾವಕಾಶ: BE/B.Tech ಮುಗಿಸಿದವರಿಗೆ 92 ಸೈಂಟಿಸ್ಟ್/ ಇಂಜಿನಿಯರ್ ಹುದ್ದೆ!

ಬೆಂಗಳೂರು/ಹಾಸನ ಸೇರಿದಂತೆ ಇಸ್ರೋದಲ್ಲಿ ಬಂಪರ್ ಉದ್ಯೋಗಾವಕಾಶ: BE/B.Tech ಮುಗಿಸಿದವರಿಗೆ 92 ಸೈಂಟಿಸ್ಟ್/ ಇಂಜಿನಿಯರ್ ಹುದ್ದೆ!

1 August 2026
Read More »
Union Bank Recruitment 2026: ಯೂನಿಯನ್ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ: 395 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ವಾರ್ಷಿಕ 47 ಲಕ್ಷದವರೆಗೆ ಪ್ಯಾಕೇಜ್!

ಯೂನಿಯನ್ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ: 395 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ವಾರ್ಷಿಕ 47 ಲಕ್ಷದವರೆಗೆ ಪ್ಯಾಕೇಜ್!

25 July 2026
Read More »
Page1 Page2 Page3 Page4 … Page165
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs