Panchamitra WhatsApp Chat: ಪಂಚಮಿತ್ರ ಸೇವೆ WhatsApp ಮೂಲಕ ನೇರವಾಗಿ ನಿಮ್ಮ ಗ್ರಾಮಪಂಚಾಯಿತಿಯ 15+ ಸರ್ಕಾರಿ ಸೇವೆಗಳನ್ನು ಪಡೆಯಿರಿ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಬೆಂಗಳೂರು, ಮೇ 17: ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸುಲಭ, ತ್ವರಿತ ಹಾಗೂ ಲಾಭದಾಯಕವಾದ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸ “ಪಂಚಮಿತ್ರ” ವಾಟ್ಸಪ್ ಸೇವೆಯನ್ನು ಆರಂಭಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ತಂತ್ರಜ್ಞಾನ ಸ್ನೇಹಿ ಸೇವೆಯನ್ನು ಜಾರಿಗೆ ತಂದಿದ್ದು, ಈಗ ಮುಂದೆ ಕಚೇರಿಗೆ ಹೋಗದೆ ನೇರವಾಗಿ ವಾಟ್ಸಪ್‌ನಲ್ಲಿಯೇ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ.
Panchamitra WhatsApp Chat: ಪಂಚಮಿತ್ರ ಸೇವೆ ಏನು? ಹೇಗೆ ಬಳಸಬಹುದು?
ಈ ಹೊಸ ಸೇವೆಯ ಮೂಲಕ ಗ್ರಾಮಪಂಚಾಯಿತಿ ಸಂಬಂಧಿತ ವಿವಿಧ ಅರ್ಜಿ ಸಲ್ಲಿಕೆಗಳು ಹಾಗೂ ದೂರುಗಳ ನೋಂದಣಿ ಮನೆಮಾಲಿಕರ ಕೈಯಲ್ಲೇ ಇರುವ ವಾಟ್ಸಪ್ ಮೂಲಕವೇ ಸಾಧ್ಯವಾಗಲಿದೆ. ಈ ಸೇವೆಯನ್ನು ಬಳಸಲು, ನೀವು ಕೇವಲ ನಿಮ್ಮ ಮೊಬೈಲ್‌ನಿಂದ 8277506000 ಸಂಖ್ಯೆಗೆ “HI” ಎಂದು ವಾಟ್ಸಪ್ ಮೆಸೇಜ್ ಕಳುಹಿಸಬೇಕು.
ಇದನ್ನೂ ಓದಿ:(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
Panchamitra WhatsApp Chat: ಹಂತ ಹಂತದ ಮಾರ್ಗದರ್ಶನ:
- “HI” ಎಂದು ವಾಟ್ಸಪ್ ಮಾಡಿ:
8277506000 ಗೆ “HI” ಎಂದು ಮೆಸೇಜ್ ಕಳುಹಿಸಿ ಚಾಟ್ ಪ್ರಾರಂಭಿಸಿ. - ನಿಮ್ಮ ಪ್ರದೇಶದ ವಿವರ ನೀಡಿ:
ನಿಮ್ಮ ಜಿಲ್ಲೆ, ತಾಲೂಕು, ಮತ್ತು ಗ್ರಾಮ ಆಯ್ಕೆಮಾಡಿ. - ಸೇವೆಯನ್ನು ಆರಿಸಿ:
ಲಭ್ಯವಿರುವ ಸೇವೆಗಳ ಪಟ್ಟಿ ಬರುವಾಗ, ನಿಮಗೆ ಬೇಕಾದ ಸೇವೆ ಅಥವಾ ದೂರು ಆಯ್ಕೆಮಾಡಿ. - ವಿವರಗಳನ್ನು ತುಂಬಿ ಸಲ್ಲಿಸಿ:
ಅಗತ್ಯ ಮಾಹಿತಿ ನೀಡಿ, ನಂತರ ರೆಫರೆನ್ಸ್ ನಂಬರ್ ಪಡೆಯಿರಿ.

Panchamitra WhatsApp Chat: ಲಭ್ಯವಿರುವ ಪ್ರಮುಖ ಸೇವೆಗಳು:
- ಕಟ್ಟಡ ನಿರ್ಮಾಣ ಪರವಾನಗಿ
- ಹೊಸ ನೀರು ಸರಬರಾಜು ಸಂಪರ್ಕ
- ಕುಡಿಯುವ ನೀರಿನ ನಿರ್ವಹಣೆ
- ಬೀದಿ ದೀಪ ದುರಸ್ತಿ
- ವ್ಯಾಪಾರ ಪರವಾನಗಿ
- ರಸ್ತೆ ಅಗೆಯುವ ಅನುಮತಿ
- ಶೌಚಾಲಯ ನಿರ್ಮಾಣ ಸಂಬಂಧಿತ ಅರ್ಜಿಗಳು
- ನರೇಗಾ ಜಾಬ್ ಕಾರ್ಡ್ ವಿತರಣೆ
- ಕೈಗಾರಿಕಾ ಅಥವಾ ಕೃಷಿ ಘಟಕ ಅನುಮತಿ
- ದೂರಸಂಪರ್ಕ ಗೋಪುರ ಅಥವಾ ಓವರ್‌ಹೆಡ್/ಅಂಡರ್‌ಗ್ರೌಂಡ್ ಕೇಬಲ್ ಅನುಮತಿ
- ಗ್ರಾಮಸಭೆ ಮಾಹಿತಿಗಳು
- ಶುದ್ಧತೆ ಸೇವೆಗಳ ದೂರು
- ರಸ್ತೆ ಮತ್ತು ಸಾರಿಗೆ ಸಮಸ್ಯೆಗಳು
- ಇತರೆ ಸರ್ಕಾರಿ ಯೋಜನೆಗಳ ಅರ್ಜಿ
ವಾಟ್ಸಪ್ ಬಳಸಲಾಗದವರಿಗೆ ಸಹ ಆಯ್ಕೆ:
ವಾಟ್ಸಪ್ ಸೇವೆಯನ್ನು ಬಳಸಲಾಗದವರು ನೇರವಾಗಿ 8277506000 ಗೆ ಕರೆಮಾಡಿ ಸಹಾಯ ಪಡೆಯಬಹುದು. trained voice support ಮೂಲಕವೂ ಸೇವೆ ಲಭ್ಯವಿದೆ.
Panchamitra WhatsApp Chat: ಸೇವೆಯ ಉಪಯೋಗಗಳು:
- ✅ ಕಚೇರಿಗೆ ಭೇಟಿ ನೀಡದೆ ಮನೆಯಲ್ಲೇ ಸೇವೆ
- ✅ ತ್ವರಿತ ಅರ್ಜಿ ಪ್ರಕ್ರಿಯೆ
- ✅ ಎಲ್ಲಾ ದೂರುಗಳಿಗೆ ಟ್ರ್ಯಾಕಿಂಗ್ ವ್ಯವಸ್ಥೆ
- ✅ ನಿಖರ ಮಾಹಿತಿ ಮತ್ತು ಪಾರದರ್ಶಕ ಸೇವೆ
- ✅ ಗ್ರಾಮೀಣ ನಾಗರಿಕರ ಸಮಯ ಮತ್ತು ಹಣದ ಉಳಿತಾಯ
ಈ Panchamitra WhatsApp Chat ಸೇವೆಯ ಮೂಲಕ ಗ್ರಾಮೀಣ ಕರ್ನಾಟಕದ ನಾಗರಿಕರು ತಮ್ಮ ಸಮಸ್ಯೆಗಳಿಗೆ ಮನೆಮಂದೆ ಪರಿಹಾರ ಪಡೆಯುವ ಅವಕಾಶವನ್ನು ಹೊಂದಿದ್ದು, ಇದು ನಿಜಕ್ಕೂ ಡಿಜಿಟಲ್ ಕ್ರಾಂತಿಯತ್ತ ಒಂದು ಮಹತ್ವದ ಹೆಜ್ಜೆಯಾಗಿದೆ
👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
🔗PMJJBY/PMSBY/APY: ₹436 ಪಾವತಿಸಿ ₹2 ಲಕ್ಷ ಪಡೆಯಿರಿ – ಮೇ 31ರೊಳಗೆ ಈ ವಿಮೆಗಳನ್ನು ಮಾಡಿಸಲು ಮರೆಯಬೇಡಿ!
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇