PM Kisan 20th Installment: ಪಿಎಂ ಕಿಸಾನ್ 20ನೇ ಕಂತು ಜುಲೈ 18ಕ್ಕೆ ಕರ್ನಾಟಕದ ರೈತರ ಖಾತೆಗೆ ಜಮೆ ಆಗುವ ನಿರೀಕ್ಷೆಯಿದೆ. ನಿಮ್ಮ ಆಧಾರ್, ಇ-ಕೆವೈಸಿ ಪರಿಶೀಲಿಸಿ ಮತ್ತು ಹಣ ಜಮೆಯಾಗಿದೆಯೇ ಎಂದು pmkisan.gov.in ನಲ್ಲಿ ಪರಿಶೀಲಿಸುವ ಮಾಡುವ ವಿಧಾನ ಮತ್ತು ಇತರ ಎಲ್ಲಾ ಮಾಹಿತಿಗಳನ್ನು ತಿಳಿಯಲು ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.
PM Kisan 20th Installment: ಪಿಎಂ ಕಿಸಾನ್ 20ನೇ ಕಂತು: ಕರ್ನಾಟಕದ ರೈತರಿಗೆ ಜುಲೈ 18ರಂದು ಹಣ ಜಮೆಯಾಗುವ ಸಾಧ್ಯತೆ!
ಬೆಂಗಳೂರು, ಜುಲೈ 17, 2025: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತು ದೇಶಾದ್ಯಂತದ ರೈತರ ಬ್ಯಾಂಕ್ ಖಾತೆಗಳಿಗೆ ನಾಳೆ, ಅಂದರೆ ಜುಲೈ 18, 2025 ರಂದು ನೇರವಾಗಿ ಜಮೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಕಂತು ಕರ್ನಾಟಕದ ರೈತರಿಗೂ ಅನ್ವಯಿಸುತ್ತದೆ. ಬಿಹಾರದ ಮೋತಿಹಾರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ₹2,000 ರೂ.ಗಳ ಈ ಕಂತನ್ನು 9.8 ಕೋಟಿಗೂ ಹೆಚ್ಚು ರೈತರಿಗೆ ವರ್ಗಾಯಿಸುವ ನಿರೀಕ್ಷೆಯಿದೆ.
ಕಂತು ವಿಳಂಬವಾದರೂ, ಹಣ ಜಮೆ ಖಚಿತ: ಪಿಎಂ-ಕಿಸಾನ್ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ ₹2,000 ಆರ್ಥಿಕ ನೆರವು ನೀಡಲಾಗುತ್ತದೆ. 19ನೇ ಕಂತನ್ನು ಫೆಬ್ರವರಿ 2025 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಜೂನ್‌ನಲ್ಲಿ ಬರಬೇಕಿದ್ದ PM Kisan 20th Installment: ಕಂತು ವಿಳಂಬವಾಗಿದ್ದರೂ, ಜುಲೈ 18 ರಂದು ಬಿಡುಗಡೆಯಾಗಲಿದೆ, ಇದು ರೈತರಲ್ಲಿ ಹೊಸ ಆಶಾಭಾವ ಮೂಡಿಸಿವೆ. ಡಿಬಿಟಿ (ನೇರ ಲಾಭ ವರ್ಗಾವಣೆ) ಮೂಲಕ ಹಣ ಜಮೆಯಾಗುವುದರಿಂದ, ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ರೈತರ ಖಾತೆಗೆ ಹಣ ತಲುಪುತ್ತದೆ.
PM Kisan 20th Installment: ಪಿಎಂ ಕಿಸಾನ್ 20ನೇ ಕಂತು ಕರ್ನಾಟಕದ ರೈತರು ತಮ್ಮ ಕಂತಿನ ಸ್ಥಿತಿ ಪರಿಶೀಲಿಸುವುದು ಹೇಗೆ?
ಕರ್ನಾಟಕದ ರೈತ ಭಾಂದವರೇ ನಿಮ್ಮ 20ನೇ ಕಂತು ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಈ ಕೆಳಗಿನ ವಿಧಾನಗಳಲ್ಲಿ ಪರಿಶೀಲಿಸಬಹುದು:
- ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://pmkisan.gov.in/
- ಮುಖಪುಟದಲ್ಲಿರುವ ‘ಫಾರ್ಮರ್ಸ್ ಕಾರ್ನರ್’ (Farmers Corner) ವಿಭಾಗದಲ್ಲಿ ‘ನೋ ಯುವರ್ ಸ್ಟೇಟಸ್’ (Know Your Status) ಆಯ್ಕೆಯನ್ನು ಕ್ಲಿಕ್ ಮಾಡಿ.
- ಹೊಸ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆ (Registration Number), ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯಲ್ಲಿ ಯಾವುದಾದರೂ ಒಂದನ್ನು ನಮೂದಿಸಿ.
- ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಿ, ನಂತರ ‘ಡೇಟಾ ಪಡೆಯಿರಿ’ (Get Data) ಅಥವಾ ‘ವರದಿ ಪಡೆಯಿರಿ’ (Get Report) ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಫಲಾನುಭವಿ ಸ್ಥಿತಿ, ಇಲ್ಲಿಯವರೆಗೆ ಜಮೆಯಾಗಿರುವ ಕಂತುಗಳ ವಿವರಗಳು ಮತ್ತು 20ನೇ ಕಂತಿನ ಜಮೆ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ.
ಪಿಎಂ ಕಿಸಾನ್ 20ನೇ ಕಂತು ಬರಬೇಕಾದ್ರೆ ರೈತರೇ ಕೆಳಗಿನ ಪ್ರಮುಖ ಸೂಚನೆಗಳನ್ನು ಗಮನಿಸಿ:
- ಇ-ಕೆವೈಸಿ ಕಡ್ಡಾಯ: ಪಿಎಂ-ಕಿಸಾನ್ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಕಂತು ಜಮೆಯಾಗುವುದಿಲ್ಲ. ನೀವು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಒಟಿಪಿ ಆಧಾರಿತ ಇ-ಕೆವೈಸಿ ಮಾಡಬಹುದು ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಬಹುದು.
- ಆಧಾರ್-ಬ್ಯಾಂಕ್ ಖಾತೆ ಲಿಂಕ್: ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಮತ್ತು ನಿಮ್ಮ ಖಾತೆಯಲ್ಲಿ ಡಿಬಿಟಿ ಆಯ್ಕೆ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಹಣ ಜಮೆಯಾಗಲು ಅತ್ಯಗತ್ಯ.
- ಫಲಾನುಭವಿ ಪಟ್ಟಿ ಪರಿಶೀಲನೆ: ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಪಿಎಂ ಕಿಸಾನ್ ಪೋರ್ಟಲ್‌ನಲ್ಲಿರುವ “ಡ್ಯಾಶ್‌ಬೋರ್ಡ್” ವಿಭಾಗದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ ಮತ್ತು ಪಂಚಾಯತ್ ಆಯ್ಕೆ ಮಾಡುವ ಮೂಲಕ ಇದನ್ನು ಪರಿಶೀಲಿಸಬಹುದು.
ಕರ್ನಾಟಕ ಸೇರಿದಂತೆ ದೇಶಾದ್ಯಂತದ ರೈತರು ಈ ಕಂತಿನ ಪ್ರಯೋಜನ ಪಡೆಯಲು ತಮ್ಮ ಎಲ್ಲಾ ವಿವರಗಳನ್ನು ನವೀಕೃತವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ನಾಳೆ ಕಂತು ಬಿಡುಗಡೆಯಾದ ಬಳಿಕ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಮರೆಯಬೇಡಿ.
👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
🔗Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
🔗Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್‌ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ
🔗(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button