IPL 2025: RCB vs CSK: 16 ವರ್ಷಗಳ ಬಳಿಕ ಚೆಪಾಕ್‌ನಲ್ಲಿ RCB ಗೆ ಐತಿಹಾಸಿಕ ಜಯ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
ಚೆನ್ನೈ: ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐತಿಹಾಸಿಕ ಸಾಧನೆ ಮಾಡಿದೆ. 2008ರ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದೆ. 50 ರನ್‌ಗಳ ಭರ್ಜರಿ ಜಯದೊಂದಿಗೆ RCB ತನ್ನ ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡಿದೆ.
✌ in ✌ for @RCBTweets 🥳
— IndianPremierLeague (@IPL) March 28, 2025
Plenty to celebrate for Royal Challengers Bengaluru as they beat #CSK and add 2️⃣ more points to their account! 🙌🙌
Scorecard ▶ https://t.co/I7maHMwxDS #TATAIPL | #CSKvRCB pic.twitter.com/WnXJJhTuVM
ಪಂದ್ಯದ ಪ್ರಮುಖ ಹಂತಗಳು:
- RCB ಮೊದಲು ಬ್ಯಾಟಿಂಗ್ ಮಾಡಿ 196/7 ರನ್ ಗಳಿಸಿತು.
- ನಾಯಕ ರಜತ್ ಪಾಟೀದಾರ್ 51 ರನ್‌ಗಳ ಆಕರ್ಷಕ ಇನಿಂಗ್ಸ್ ಆಡಿದರು.
- ಕೊನೆಯಲ್ಲಿ ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಮಾಡಿ 22 ರನ್ ಗಳಿಸಿದರು.
- ಬೌಲಿಂಗ್‌ನಲ್ಲಿ RCBನ ಯಶ್ ದಯಾಳ್ ಮತ್ತು ಜೋಷ್ ಹೇಜಲ್‌ವುಡ್ ಅತ್ಯುತ್ತಮ ಪ್ರದರ್ಶನ ನೀಡಿದರು.
- CSK ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 146/8 ರನ್‌ಗಳಿಸಲು ಸಾಧ್ಯವಾಯಿತು.
RCBನ ಟಾಪ್ ಆಟಗಾರರು: ರಾಜತ್ ಪಾಟಿದಾರ್ (51 ರನ್ 32 ಎಸೆತಗಳಲ್ಲಿ) ಮತ್ತು ಫಿಲ್ ಸಾಲ್ಟ್ (32 ರನ್ 16 ಎಸೆತಗಳಲ್ಲಿ) ಉತ್ತಮ ಶುರು ನೀಡಿದರು.
ಕೊನೆಯಲ್ಲಿ ಟಿಮ್ ಡೇವಿಡ್‌ನ ಸ್ಫೋಟಕ ಬ್ಯಾಟಿಂಗ್: 8 ಎಸೆತಗಳಲ್ಲಿ 22* ರನ್ ಬಾರಿಸಿ ಕೊನೆಯ ಓವರ್‌ಗಳಲ್ಲಿ RCB ಗೆ ಬಲ ತುಂಬಿದರು. RCB ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 196/7 ರನ್ ಗಳಿಸಿ, CSK ಗೆ 197 ರನ್ ಗುರಿ ನೀಡಿತ್ತು.
CSKನ ಪ್ರಮುಖ ಬೌಲರ್‌ಗಳು: ನೂರ್ ಅಹ್ಮದ್ (2 ವಿಕೆಟ್), ಮಥೀಶಾ ಪಥಿರಾನಾ (2 ವಿಕೆಟ್), ರವಿಚಂದ್ರನ್ ಅಶ್ವಿನ್ (1 ವಿಕೆಟ್) RCBನ ಬ್ಯಾಟಿಂಗ್ ನಿಯಂತ್ರಿಸಲು ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 196 ರನ್ ಚೇಸಿಂಗ್‌ನಲ್ಲಿ ತೀವ್ರ ಹೋರಾಟ ನಡೆಸಿದರೂ 131 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ RCB ಚೆಪಾಕ್ ಕ್ರೀಡಾಂಗಣದಲ್ಲಿ 16 ವರ್ಷಗಳ ನಿರೀಕ್ಷೆಗೆ ತೆರೆ ಎಳೆದು ಐತಿಹಾಸಿಕ ಜಯ ಸಾಧಿಸಿದೆ.
ಚೇಪಾಕನಲ್ಲಿ ಮಂಕಾದ CSK ಬ್ಯಾಟಿಂಗ್:
CSK ಇನಿಂಗ್ಸ್ ಆರಂಭದಲ್ಲೇ ತತ್ತರಿಸಿ ಹೋದರು. ನಾಯಕ ರುತುರಾಜ್ ಗೈಕ್ವಾಡ್ (0) ಡಕೌಟ್ ಆದರು. ರಚಿನ್ ರವೀಂದ್ರ (41) ಒಬ್ಬರೇ ನಿಭಾಯಿಸಿದರೂ, ಉಳಿದ ಆಟಗಾರರು ದೊಡ್ಡ ಪಾರ್ಟ್ನರ್‌ಶಿಪ್ ಮಾಡಲಿಲ್ಲ. ಶಿವಮ್ ದುಬೆ (19) ಮತ್ತು ರವೀಂದ್ರ ಜಡೇಜಾ (25) , ಧೋನಿ (30*) ಹೊಡೆದು ಹೋರಾಟ ನಡೆಸಿದರು CSK ಗೆಲ್ಲಲು ಸಾಧ್ಯವಾಗಲಿಲ್ಲ. CSK ತನ್ನ ಇನ್ನಿಂಗ್ಸ್‌ನಲ್ಲಿ ಕೇವಲ 146/8 ರನ್‌ಗಳಿಸಲು ಸಾಧ್ಯವಾಯಿತು.
A never ending story 😊
— IndianPremierLeague (@IPL) March 28, 2025
Last over 🤝 MS Dhoni superhits 🔥
Scorecard ▶ https://t.co/I7maHMwxDS #TATAIPL | #CSKvRCB | @ChennaiIPL pic.twitter.com/j5USqXvf7r

RCB ಬೌಲರ್‌ಗಳ ಸೂಪರ್ಬ್ ಪ್ರದರ್ಶನ:
- ಜೋಶ್ ಹೇಜಲ್‌ವುಡ್ 2 ವಿಕೆಟ್ ಪಡೆದರು CSK ಗೆ ಆರಂಭದಲ್ಲೇ ಆಘಾತ ನೀಡಿದರು
- ಲಿಯಾಂ ಲಿವಿಂಗ್‌ಸ್ಟೋನ್, ಭುವನೇಶ್ವರ್ ಕುಮಾರ್, ಯಶ್ ದಯಾಲ್ ಪ್ರಭಾವಿ ಬೌಲಿಂಗ್ ಮಾಡಿ CSKನನ್ನು ತಗ್ಗಿಸಿದರು.
ಈ ಗೆಲುವಿನಿಂದ RCB ತಮ್ಮ ಐಪಿಎಲ್ 2025 ಆವೃತ್ತಿಯನ್ನು ಗೆಲುವಿನ ಓಟ ಆರಂಭಿಸಿದೆ.

16 ವರ್ಷಗಳ ಬಳಿಕ ಚೆಪಾಕ್‌ನಲ್ಲಿ RCB ಗೆ ಐತಿಹಾಸಿಕ ಜಯ!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೊನೆಯ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಮೇ 21, 2008 ರಂದು ಜಯ ಸಾಧಿಸಿತು. ಆ ಪಂದ್ಯದಲ್ಲಿ RCB ಕೇವಲ 126 ರನ್‌ಗಳ ಗುರಿ ನೀಡಿದ್ದು, CSK ತಂಡವನ್ನು 112/8 ರನ್‌ಗಳಿಗೆ ನಿರ್ಬಂಧಿಸಿತು ಮತ್ತು 14 ರನ್‌ಗಳ ಗೆಲುವು ಸಾಧಿಸಿತು
ಆ ಪಂದ್ಯದಿಂದ ಬಳಿಕ, RCB ಚೆನ್ನೈನಲ್ಲಿ CSK ವಿರುದ್ಧ ಗೆಲುವನ್ನು ದಾಖಲಿಸಲು ಪರಾಕಾಷ್ಠೆ ಮಾಡಿದೆ. ಈ ವರೆಗೆ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ CSK ಮತ್ತು RCB ನಡುವಿನ 8 ಐಪಿಎಲ್ ಪಂದ್ಯಗಳಲ್ಲಿ, CSK 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ
RCB-CSK ನಡುವಿನ ಚೆನ್ನೈನಲ್ಲಿನ ಕೊನೆಯ ಪಂದ್ಯ ಮಾರ್ಚ್ 23, 2019 ರಂದು ಆಯೋಜನೆಯಾಗಿತ್ತು. ಆ ಪಂದ್ಯದಲ್ಲಿ RCB ಕೇವಲ 70 ರನ್‌ಗಳಿಗೆ ಆಲೌಟ್ ಆಯಿತು. ನಂತರ CSK ಸುಲಭವಾಗಿ ಗುರಿ ಬೆನ್ನಟ್ಟಿದ್ದು 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
Read More Sports News/ ಇನ್ನಷ್ಟು ಕ್ರೀಡೆ ಸುದ್ದಿ ಓದಿ
IPL 2025: LSG Vs SRH, ಲಕ್ನೋ ಸೂಪರ್ ಜೈಯಂಟ್ಸ್ ಭರ್ಜರಿ ಪ್ರದರ್ಶನ, 5 ವಿಕೆಟ್ ಗಳಿಂದ ಗೆಲುವು
ಇಂದು RCB ಚೆನ್ನೈನಲ್ಲಿ CSK ವಿರುದ್ಧ 50 ರನ್ ಗಳಿಂದ ಗೆದ್ದು. ಈ ವರ್ಷದ ಐಪಿಎಲ್‌ನಲ್ಲಿ RCB ಈ ಇತಿಹಾಸವನ್ನು ಬದಲಾಯಿಸಿದೆ
RCB ಅಭಿಮಾನಿಗಳ ಸಂಭ್ರಮ:
ಈ ಗೆಲುವಿನಿಂದ RCB ಈ ಬಾರಿ ಕಪ್ ಗೆಲುವು ಅಭಿಯಾನ ಸುರು ಎಂದು ಸಂಭ್ರಮಿಸಿದ್ದಾರೆ. ಈ ಐತಿಹಾಸಿಕ ಜಯವನ್ನು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸುವ ಒಂದು ದೊಡ್ಡ ಸಾಧನೆ.
2 thoughts on “IPL 2025: RCB vs CSK: 16 ವರ್ಷಗಳ ಬಳಿಕ ಚೆಪಾಕ್‌ನಲ್ಲಿ RCB ಗೆ ಐತಿಹಾಸಿಕ ಜಯ!”