RKDCC Bank Recruitment 2025: ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (RKDCC Bank) ನಿಂದ 70 ಹುದ್ದೆಗಳಿಗೆ (ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲ ವೃಂದ) ನೇಮಕಾತಿ ಅಧಿಸೂಚನೆ ಪ್ರಕಟ. ಶಾಖಾ ವ್ಯವಸ್ಥಾಪಕರು, ಸಹಾಯಕರ ಗ್ರೇಡ್-1 ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ, ಆಸಕ್ತರು ಡಿಸೆಂಬರ್ 22, 2025ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ (RKDCC ಬ್ಯಾಂಕ್)ದಲ್ಲಿ ಒಟ್ಟು 70 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯು ಕಲ್ಯಾಣ ಕರ್ನಾಟಕ ವೃಂದದ (HK) ಮತ್ತು ಉಳಿಕೆ ಮೂಲ ವೃಂದದ (Non-HK/RPC) ಹುದ್ದೆಗಳಿಗೆ ನಡೆಯುತ್ತಿದೆ.
ಹುದ್ದೆಗಳ ವಿವರ ಮತ್ತು ಒಟ್ಟು ಸಂಖ್ಯೆ: (RKDCC Bank Recruitment 2025 Vacancy Details)
RKDCC ಬ್ಯಾಂಕ್‌ನಲ್ಲಿ ಗ್ರೂಪ್ ‘ಎ’, ‘ಬಿ’ ಮತ್ತು ‘ಸಿ’ ಶ್ರೇಣಿಗಳಲ್ಲಿ ಹುದ್ದೆಗಳು ಲಭ್ಯವಿವೆ:
| ಹುದ್ದೆಯ ಪದನಾಮ | ಕಲ್ಯಾಣ ಕರ್ನಾಟಕ (HK) | ಉಳಿಕೆ ಮೂಲ ವೃಂದ (RPC) | ಒಟ್ಟು ಹುದ್ದೆಗಳು |
| ಶಾಖಾ ವ್ಯವಸ್ಥಾಪಕರು ಗ್ರೇಡ್-1 (ಗ್ರೂಪ್-ಎ) | 11 | 04 | 15 |
| ಸಹಾಯಕರ ಗ್ರೇಡ್-1 (ಗ್ರೂಪ್-ಬಿ) | 34 | 11 | 45 |
| ಅಟೆಂಡರ್ (ಗ್ರೂಪ್-ಸಿ) | 8 | 2 | 10 |
| ಒಟ್ಟು | 53 | 17 | 70 |
ಅರ್ಹತೆ, ವಯೋಮಿತಿ ಮತ್ತು ವೇತನ ಶ್ರೇಣಿ:
ಶೈಕ್ಷಣಿಕ ಅರ್ಹತೆ (Educational Qualification):
- ಶಾಖಾ ವ್ಯವಸ್ಥಾಪಕರು ಮತ್ತು ಸಹಾಯಕರ ಗ್ರೇಡ್-1: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಕನ್ನಡವನ್ನು ಓದುವ, ಬರೆಯುವ ಹಾಗೂ ಮಾತನಾಡುವ ಜ್ಞಾನ ಕಡ್ಡಾಯ.
- ಅಟೆಂಡರ್: ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ವಯೋಮಿತಿ (22-12-2025 ಕ್ಕೆ ಅನ್ವಯ)
- ಕನಿಷ್ಠ ವಯೋಮಿತಿ: 18 ವರ್ಷ.
- ಗರಿಷ್ಠ ವಯೋಮಿತಿ:
- ಸಾಮಾನ್ಯ ವರ್ಗ: 35 ವರ್ಷ (ಸರ್ಕಾರಿ ಆದೇಶದನ್ವಯ 38 ವರ್ಷಗಳವರೆಗೆ ಸಡಿಲಿಕೆ).
- SC/ST/ಪ್ರವರ್ಗ-1: 40 ವರ್ಷ (ಸಡಿಲಿಕೆಯೊಂದಿಗೆ 43 ವರ್ಷಗಳವರೆಗೆ).
ವೇತನ ಶ್ರೇಣಿ (ಸಂಕ್ಷಿಪ್ತ)
- ಶಾಖಾ ವ್ಯವಸ್ಥಾಪಕರು ಗ್ರೇಡ್-1: ₹61,300 ರಿಂದ ₹1,12,900 ವರೆಗೆ.
- ಸಹಾಯಕರು ಗ್ರೇಡ್-1: ₹44,425 ರಿಂದ ₹83,700 ವರೆಗೆ.
- ಅಟೆಂಡರ್: ₹37,500 ರಿಂದ ₹76,100 ವರೆಗೆ.
ಅರ್ಜಿ ಸಲ್ಲಿಕೆಯ ದಿನಾಂಕಗಳು ಮತ್ತು ಶುಲ್ಕ:
| ವಿವರ | ದಿನಾಂಕ |
| ಆನ್ಲೈನ್ ಅರ್ಜಿ ಪ್ರಾರಂಭ | ನವೆಂಬರ್ 21, 2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಡಿಸೆಂಬರ್ 22, 2025 (ಸಂಜೆ 5.30 ಗಂಟೆಯವರೆಗೆ) |
| ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ (ತಾತ್ಕಾಲಿಕ) | ಜನವರಿ 15, 2026 |
ಅರ್ಜಿ ಶುಲ್ಕ (Non-Refundable):
ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು UPI ಮೂಲಕ ಮಾತ್ರ ಪಾವತಿಸಬೇಕು.
| ವರ್ಗೀಕರಣ | ಶಾಖಾ ವ್ಯವಸ್ಥಾಪಕರು & ಸಹಾಯಕರು | ಅಟೆಂಡರ್ |
| ಸಾಮಾನ್ಯ/ಇತರೆ ವರ್ಗದವರು | ₹1600.00 | ₹1000.00 |
| ಪ.ಜಾತಿ/ಪ.ಪಂ./ಪ್ರವರ್ಗ-1/ಮಾಜಿ ಸೈನಿಕ/ಅಂಗವಿಕಲ | ₹800.00 | ₹500.00 |
ಸೂಚನೆ: ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಹಾಗೂ ಪ್ರತ್ಯೇಕ ಶುಲ್ಕ ಸಲ್ಲಿಸುವುದು ಕಡ್ಡಾಯ.
ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇಮಕಾತಿ ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:
ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯುತ್ತದೆ.
- ಲಿಖಿತ ಪರೀಕ್ಷೆ:
- ಶಾಖಾ ವ್ಯವಸ್ಥಾಪಕರು ಮತ್ತು ಸಹಾಯಕರ ಹುದ್ದೆಗಳಿಗೆ: 2 ಗಂಟೆಗಳ ಅವಧಿಯ 200 ಅಂಕಗಳ ಪರೀಕ್ಷೆ.
- ಅಟೆಂಡರ್ ಹುದ್ದೆಗೆ: 1 ಗಂಟೆಯ ಅವಧಿಯ 100 ಅಂಕಗಳ ಪರೀಕ್ಷೆ.
- ಪರೀಕ್ಷಾ ವಿಷಯಗಳು (ವ್ಯವಸ್ಥಾಪಕರು/ಸಹಾಯಕರು):
- ಕನ್ನಡ ಭಾಷೆ (50 ಅಂಕ)
- ಸಾಮಾನ್ಯ ಇಂಗ್ಲಿಷ್ (25 ಅಂಕ)
- ಸಾಮಾನ್ಯ ಜ್ಞಾನ (25 ಅಂಕ)
- ಸಹಕಾರಿ ವಿಷಯಗಳು (50 ಅಂಕ)
- ಭಾರತ ಸಂವಿಧಾನ (25 ಅಂಕ)
- ಬ್ಯಾಂಕು/ಸಂಸ್ಥೆಯ ಚಟುವಟಿಕೆಗಳು (25 ಅಂಕ)
- ಅಂತಿಮ ಆಯ್ಕೆ: ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇ. 85ಕ್ಕೆ ಇಳಿಸಿ, ಉಳಿದ ಶೇ. 15 ಅಂಕಗಳನ್ನು ಸಂದರ್ಶನಕ್ಕೆ ನೀಡಲಾಗುತ್ತದೆ (85:15 ಅನುಪಾತ).
- ಸಂದರ್ಶನ: ಲಿಖಿತ ಪರೀಕ್ಷೆಯಲ್ಲಿ ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಸಂಪರ್ಕ
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು:
- ಅರ್ಜಿ ಸಲ್ಲಿಸುವ ಲಿಂಕ್:
https://tascguru.com/raichur-dcc-bank/ - ಹೆಲ್ಪಲೈನ್ ಸಂಖ್ಯೆ (ತಾಂತ್ರಿಕ ತೊಂದರೆಗಳಿಗೆ): 8310460727
RDCCB NON HK Region Notification: Download Here
RDCCB-HK Region Notification: Download Here
ಪ್ರಮುಖ ಲಿಂಕ್ ಗಳು/Important Links:
| ವಿವರ (Details) | ಡೌನ್‌ಲೋಡ್ ಲಿಂಕ್ (Download Link) |
| ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (RKDCC Bank) ನಿಂದ 70 ಹುದ್ದೆಗಳಿಗೆ (ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲ ವೃಂದ) ನೇಮಕಾತಿ ಅಧಿಕೃತ ಅಧಿಸೂಚನೆ PDF (RKDCC Bank Recruitment 2025 Official Notification PDF ) | RDCCB NON HK Region Notification: Download Here RDCCB-HK Region Notification: Download Here |
| ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (RKDCC Bank) ನಿಂದ 70 ಹುದ್ದೆಗಳಿಗೆ (ಕಲ್ಯಾಣ ಕರ್ನಾಟಕ ಹಾಗೂ ಉಳಿಕೆ ಮೂಲ ವೃಂದ) ನೇಮಕಾತಿ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನೇರ ಲಿಂಕ್ (RKDCC Bank Recruitment 2025 Apply Online Here) | Apply online Here |
| ಕೊನೆಯ ದಿನಾಂಕ (Last Date) | 22-12-2025 |
| ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ | https://quicknewztoday.com/category/jobs/ |
Raichur Koppal DCC Bank, RKDCC Bank Recruitment, DCC Bank Jobs, ಕಲ್ಯಾಣ ಕರ್ನಾಟಕ ನೇಮಕಾತಿ, ಶಾಖಾ ವ್ಯವಸ್ಥಾಪಕರು, ಸಹಕಾರ ಬ್ಯಾಂಕ್ ಉದ್ಯೋಗ
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
Bank of Baroda Recruitment 2025: 50 ಮ್ಯಾನೇಜರ್ ಹುದ್ದೆಗಳಿಗೆ ಬೃಹತ್ ಅವಕಾಶ! ₹1.20 ಲಕ್ಷದವರೆಗೆ ವೇತನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button