ಕರ್ನಾಟಕ ಕಂದಾಯ ಇಲಾಖೆಯು ರೈತರಿಗೆ ಮಹತ್ವದ ಸುಧಾರಣೆ ತಂದಿದೆ. ಇನ್ನು ಮುಂದೆ ಪಹಣಿ (RTC) ಜೊತೆಗೆ ಪೋಡಿ ನಕ್ಷೆ (Podi Nakashe), ಆಕಾರ್ ಬಂದ್ (Aakar Bandh) ಮತ್ತು ಮ್ಯುಟೇಶನ್ (Mutation) ದಾಖಲೆಗಳನ್ನು ಕೇವಲ ಒಂದೇ ಪುಟದಲ್ಲಿ ಡಿಸೆಂಬರ್‌ನಿಂದ ಪಡೆಯಿರಿ. ಮಧ್ಯವರ್ತಿಗಳ ಹಾವಳಿ ಮತ್ತು ಅನಗತ್ಯ ವೆಚ್ಚಕ್ಕೆ ಸಂಪೂರ್ಣ ಕಡಿವಾಣ. ಭೂ ದಾಖಲೆ ಏಕೀಕರಣ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ತಿಳಿಯಿರಿ.
ರೈತ ಸಮುದಾಯಕ್ಕೆ ಬೃಹತ್ ಅನುಕೂಲವಾಗುವಂತೆ ರಾಜ್ಯ ಕಂದಾಯ ಇಲಾಖೆಯು ಐತಿಹಾಸಿಕ ಸುಧಾರಣೆಗೆ ಮುಂದಾಗಿದೆ. ಇನ್ನು ಮುಂದೆ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ನಾಲ್ಕು ಮಹತ್ವದ ದಾಖಲೆಗಳನ್ನು (ಪಹಣಿ (RTC), ಪೋಡಿ ನಕ್ಷೆ (Phodi Map), ಆಕಾರ್ ಬಂದ್ (Aakar Bandh) ಮತ್ತು ಮ್ಯುಟೇಶನ್ (Mutation)) ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡುವ ಕಷ್ಟ ತಪ್ಪಲಿದೆ. ಈ ಎಲ್ಲ ದಾಖಲೆಗಳನ್ನು ಒಂದೇ ಪುಟದಲ್ಲಿ ಮುದ್ರಿಸಿ, ಒಂದೇ ಬಾರಿಗೆ ರೈತರ ಕೈಗೆ ತಲುಪಿಸುವ ವ್ಯವಸ್ಥೆಯನ್ನು ಡಿಸೆಂಬರ್‌ನಿಂದ ಜಾರಿಗೆ ತರಲು ಇಲಾಖೆ ಸಿದ್ಧತೆ ನಡೆಸಿದೆ.
ಸುಧಾರಣೆಯ ಹಿಂದಿನ ಮುಖ್ಯ ಕಾರಣ ಮತ್ತು ಗುರಿ:
ಪ್ರಸ್ತುತ ವ್ಯವಸ್ಥೆಯಲ್ಲಿ ರೈತರು ಕೇವಲ ಪಹಣಿ (RTC) ಪಡೆಯಲು ನಾಡ ಕಚೇರಿ, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ₹25 ಶುಲ್ಕ ನೀಡಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಜಮೀನಿನ ಇತರ ಪ್ರಮುಖ ದಾಖಲೆಗಳಾದ:
- ಪೋಡಿ ನಕ್ಷೆ (Podi Nakashe): ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕರ (ADLR) ಕಚೇರಿ, ತಾಲ್ಲೂಕು ಕೇಂದ್ರ.
- ಆಕಾರ್ ಬಂದ್ (Aakar Bandh): ಭೂಮಿಯ ವಿಸ್ತೀರ್ಣ, ಬೆಳೆ, ‘ಎ-ಖರಾಬು’, ‘ಬಿ-ಖರಾಬು’ ವಿವರಗಳಿಗಾಗಿ ತಹಸೀಲ್ದಾರ್ ಕಚೇರಿ.
- ಮ್ಯುಟೇಶನ್ (Mutation): ಮಾಲೀಕತ್ವ ಬದಲಾವಣೆ, ವರ್ಗಾವಣೆ ವಿವರಗಳಿಗಾಗಿ ಉಪನೋಂದಣಾಧಿಕಾರಿ ಕಚೇರಿ.
ಈ ಪ್ರತಿಯೊಂದು ದಾಖಲೆಗಾಗಿ ರೈತರು ಸರ್ವೆ, ತಹಸೀಲ್ದಾರ್ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಪ್ರತ್ಯೇಕವಾಗಿ ಅಲೆದಾಡಬೇಕಿತ್ತು. ಈ ಅಲೆದಾಟದಿಂದ ಸಮಯ ವ್ಯರ್ಥ, ಅನಗತ್ಯ ಹಣದ ಖರ್ಚು ಮತ್ತು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಈ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ‘ಭೂಮಿ-2’ ಆವೃತ್ತಿಯಡಿ ಈ ವಿನೂತನ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ.
ರೈತರಿಗೆ ಆಗುವ ಪ್ರಮುಖ ಅನುಕೂಲಗಳು:
ಈ ಹೊಸ ವ್ಯವಸ್ಥೆಯು ರೈತರಿಗೆ ಹಲವು ರೀತಿಯಲ್ಲಿ ಸಹಾಯಕವಾಗಲಿದೆ:
- ಮಧ್ಯವರ್ತಿಗಳಿಗೆ ಬ್ರೇಕ್: ಮಧ್ಯವರ್ತಿಗಳ ಹಾವಳಿ ಮತ್ತು ಅನಗತ್ಯ ವೆಚ್ಚಗಳಿಗೆ ಸಂಪೂರ್ಣ ಕಡಿವಾಣ.
- ಸಮಯ ಉಳಿತಾಯ: ಎಲ್ಲ ದಾಖಲೆಗಳನ್ನು ಪಡೆಯಲು ಕನಿಷ್ಠ 20-30 ದಿನ ಕಾಯುವ ಅವಶ್ಯಕತೆಯಿಂದ ಮುಕ್ತಿ.
- ಕಚೇರಿ ಅಲೆದಾಟಕ್ಕೆ ಮುಕ್ತಿ: ಸರ್ವೆ, ತಹಸೀಲ್ದಾರ್, ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಪದೇ ಪದೇ ಸುತ್ತಾಡಬೇಕಿಲ್ಲ.
- ವೆಚ್ಚ ಕಡಿತ: ಪ್ರತಿ ದಾಖಲೆಗೂ ಪ್ರತ್ಯೇಕ ಶುಲ್ಕ ಮತ್ತು ಇತರೆ ವೆಚ್ಚಗಳ ಅಗತ್ಯವಿಲ್ಲ.
- ದಕ್ಷತೆ: ರೈತರಿಗೆ ಸಮಯ, ಹಣ ಮತ್ತು ಶ್ರಮವೂ ಉಳಿತಾಯವಾಗಲಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಪಹಣಿ ಡಿಜಿಟಲೀಕರಣಕ್ಕಾಗಿ ರೂಪುಗೊಂಡ ‘ಭೂಮಿ’ ತಂತ್ರಾಂಶ ಬಳಕೆ ಆರಂಭವಾಗಿ 25 ವರ್ಷಗಳಾಗಿದ್ದು, ‘ಭೂಮಿ-2’ ಆವೃತ್ತಿಯಡಿ ಪಹಣಿ ಜತೆಗೆ ಆಕಾರ ಬಂದ್, ಮ್ಯುಟೇಶನ್, ಪೋಡಿ ನಕ್ಷೆಯನ್ನು ಕಂಪ್ಯೂಟರ್‌ನ ಒಂದು ಗುಂಡಿ ಒತ್ತುವ ಮೂಲಕ ಒಮ್ಮೆಗೇ ಸಿಗುವ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಹೊಸ ತಾಂತ್ರಿಕ ವ್ಯವಸ್ಥೆಯ ವಿವರ:
- ಏಕೀಕರಣ: ರೈತರು ಪಹಣಿಗೆ ಅರ್ಜಿ ಸಲ್ಲಿಸಿದರೆ, ಪಹಣಿ ದಾಖಲೆಯ ಹಿಂಭಾಗದಲ್ಲಿ ಪೋಡಿ ನಕ್ಷೆ, ಆಕಾರ್ ಬಂದ್ ಮತ್ತು ಮ್ಯುಟೇಶನ್ ದಾಖಲೆಯನ್ನು ಮುದ್ರಿಸಿ ಒಂದೇ ಹಾಳೆಯಲ್ಲಿ ನೀಡಲಾಗುತ್ತದೆ.
- ಪೋಡಿ ನಕ್ಷೆ ಸಿದ್ಧತೆ: ಶೇ.80ರಷ್ಟು ಪೋಡಿ ನಕ್ಷೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಪೋಡಿ ನಕ್ಷೆ ಸಿದ್ಧವಾಗದಿದ್ದರೂ ಕೂಡ ಗ್ರಾಮ ನಕ್ಷೆಯಲ್ಲೇ ಸರ್ವೆ ಸಂಖ್ಯೆ ಇತರೆ ಮಾಹಿತಿ ಮುದ್ರಿಸಿ ನೀಡಲು ನಿರ್ಧರಿಸಲಾಗಿದೆ.
- ಆಟೋ ಮ್ಯುಟೇಶನ್: ಮಾಲೀಕತ್ವ ಬದಲಾವಣೆ ವಿವರವಿರುವ ಮ್ಯುಟೇಶನ್ ದಾಖಲೆಯನ್ನು ಸ್ವಯಂಚಾಲಿತವಾಗಿ ಪಡೆಯುವ ಆಟೋ ಮ್ಯುಟೇಶನ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಇದನ್ನು ತಕ್ಷಣವೇ ಪಡೆಯಲು ಅವಕಾಶವಿದೆ.
- ಭವಿಷ್ಯದ ಯೋಜನೆ: ಮುಂದೆ ಋಣಭಾರ ಪ್ರಮಾಣ ಪತ್ರ (Encumbrance Certificate – EC) ದಾಖಲೆಯನ್ನು ಸಹ ಇದರೊಂದಿಗೆ ಒಟ್ಟಿಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಅಟಲ್ ಜನಸ್ನೇಹಿ ಕೇಂದ್ರದ ನಿರ್ದೇಶಕ ಎಂ.ಎಸ್. ದಿವಾಕರ ಅವರು, ನಾಲ್ಕು ಮಹತ್ವದ ದಾಖಲೆಗಳಿಗೆ ಜನ ನಾನಾ ಕಚೇರಿ ಸುತ್ತಾಡುವುದನ್ನು ತಪ್ಪಿಸಿ ಸಮೀಪದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ನಾಡ ಕಚೇರಿ, ಕರ್ನಾಟಕ ಒನ್ ಕೇಂದ್ರಗಳಲ್ಲೇ ಪಡೆಯುವ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.
Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ
(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
DL, RC ಪಡೆಯಲು RTO ಕಚೇರಿಗೆ ಹೋಗಬೇಕಾಗಿಲ್ಲ! ಇನ್ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಮನೆಗೆ ಬರಲಿದೆ ಸ್ಮಾರ್ಟ್ ಕಾರ್ಡ್ಗಳು!
Bhoosuraksha Yojana: ಇನ್ನೂ ಭೂ ದಾಖಲೆಗಾಗಿ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ ಎಲ್ಲವೂ ಆನ್ಲೈನ್ನಲ್ಲಿ ಲಭ್ಯ!
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button