Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರಿ ಕೆಲಸ: SSB ಯಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ!

  • Picture of Gundijalu Shwetha By Gundijalu Shwetha
  • Published On: May 12, 2026
SSB Constable Recruitment 2026: ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರಿ ಕೆಲಸ: SSB ಯಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ!

SSB Constable Recruitment 2026: ಸಶಸ್ತ್ರ ಸೀಮಾ ಬಲ (SSB) 2026ನೇ ಸಾಲಿನ ಸ್ಪೋರ್ಟ್ಸ್ ಕೋಟಾದಡಿ 404 ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಕ್ರೀಡಾಪಟುಗಳಿಗೆ ಇದೊಂದು ಸುವರ್ಣಾವಕಾಶ. ಅರ್ಜಿ ಸಲ್ಲಿಕೆ ವಿಧಾನ, ಅರ್ಹತೆ ಮತ್ತು ಇತರ ಸಂಪೂರ್ಣ ಮಾಹಿತಿ ಇಲ್ಲಿದೆ.

📅 Last Date for Apply Online 07.06.2026

ಕ್ರೀಡಾಪಟುಗಳಿಗೆ ಭರ್ಜರಿ ಗುಡ್ ನ್ಯೂಸ್: ಸಶಸ್ತ್ರ ಸೀಮಾ ಬಲ (SSB) ದಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ!

ದೇಶಕ್ಕಾಗಿ ಆಡಬೇಕು, ಮೆಡಲ್ ಗೆಲ್ಲಬೇಕು ಎಂದು ಹಗಲಿರುಳು ಬೆವರು ಸುರಿಸಿ ಪ್ರಾಕ್ಟೀಸ್ ಮಾಡುವ ಕ್ರೀಡಾಪಟುಗಳಿಗೆ ಒಂದು ಹಂತದ ನಂತರ ‘ಮುಂದೇನು?’ ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದರೂ ಹೊಟ್ಟೆಪಾಡಿಗೆ, ಭವಿಷ್ಯದ ಭದ್ರತೆಗೆ ಒಂದು ಒಳ್ಳೆ ಕೆಲಸ ಬೇಕೇ ಬೇಕು. ಇಂತಹ ಪ್ರತಿಭಾವಂತ ಕ್ರೀಡಾಪಟುಗಳ ಭವಿಷ್ಯವನ್ನು ಉಜ್ವಲಗೊಳಿಸಲು ಮತ್ತು ಅವರಿಗೆ ಸಮಾಜದಲ್ಲಿ ಒಂದು ಗೌರವಯುತ ಸ್ಥಾನಮಾನ ಕಲ್ಪಿಸಿಕೊಡಲು ಕೇಂದ್ರ ಸರ್ಕಾರವು ‘ಸ್ಪೋರ್ಟ್ಸ್ ಕೋಟಾ’ (Sports Quota) ದಡಿ ಉದ್ಯೋಗಾವಕಾಶಗಳನ್ನು ನೀಡುತ್ತಲೇ ಬಂದಿದೆ.

WhatsApp Channel
Join Now
Telegram Channel
Join Now

ಇದೀಗ ಇಂತಹ ಕ್ರೀಡಾಪಟುಗಳಿಗೆ ಬಹುದೊಡ್ಡ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಭಾರತ ಸರ್ಕಾರದ ಗೃಹ ಸಚಿವಾಲಯದ (Ministry of Home Affairs) ಅಧೀನದಲ್ಲಿ ಅತ್ಯಂತ ಹೆಮ್ಮೆಯಿಂದ ಕಾರ್ಯನಿರ್ವಹಿಸುತ್ತಿರುವ ‘ಸಶಸ್ತ್ರ ಸೀಮಾ ಬಲ’ (Sashastra Seema Bal – SSB) ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

SSB Constable Recruitment 2026 ರ ಅಡಿಯಲ್ಲಿ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 404 ‘ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ)’ [Constable – GD] ಹುದ್ದೆಗಳನ್ನು ಸ್ಪೋರ್ಟ್ಸ್ ಕೋಟಾದಡಿ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಈ Govt Jobs for Sportspersons ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

SSB Constable Recruitment 2026: ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರಿ ಕೆಲಸ: SSB ಯಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ!

ಈ ಬಂಪರ್ ನೇಮಕಾತಿಯ ಸಂಪೂರ್ಣ ವಿವರಗಳನ್ನು, ಅರ್ಜಿ ಸಲ್ಲಿಸಲು ಬೇಕಾದ ಕ್ರೀಡಾ ಅರ್ಹತೆಗಳೇನು? ಯಾವೆಲ್ಲಾ ಕ್ರೀಡೆಗಳಿಗೆ ಅವಕಾಶವಿದೆ? ಫೋಟೋ ಮತ್ತು ಸಹಿ ಅಪ್ಲೋಡ್ ಮಾಡುವಾಗ ನೀವು ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಅನ್ನು ಇಲ್ಲಿ ಅತ್ಯಂತ ಸರಳವಾಗಿ ವಿವರಿಸಲಾಗಿದೆ.

Advertisement for the post of Constable (General Duty) under Sports Quota in SSB

Advertisement CTGD SQ 2026/Download

ಯಾವ ಹುದ್ದೆ? ಎಷ್ಟು ಖಾಲಿ ಇವೆ? (Vacancy Details)

ಸಶಸ್ತ್ರ ಸೀಮಾ ಬಲ (SSB) ದಲ್ಲಿ ಜನರಲ್ ಸೆಂಟ್ರಲ್ ಸರ್ವೀಸ್, ಗ್ರೂಪ್ ‘ಸಿ’ (ನಾನ್-ಗೆಜೆಟೆಡ್, ನಾನ್-ಮಿನಿಸ್ಟೀರಿಯಲ್) ಕಾಂಬ್ಯಾಟೈಸ್ಡ್ ವಿಭಾಗದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

  • ಹುದ್ದೆಯ ಹೆಸರು: ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಸ್ಪೋರ್ಟ್ಸ್ ಕೋಟಾ 2026.
  • ಒಟ್ಟು ಖಾಲಿ ಹುದ್ದೆಗಳು: ಬರೋಬ್ಬರಿ 404 ಹುದ್ದೆಗಳು ಖಾಲಿ ಇವೆ.

ಆಯ್ಕೆಯಾದ ಅಭ್ಯರ್ಥಿಗಳು ಭಾರತದಾದ್ಯಂತ ಅಥವಾ ವಿದೇಶದಲ್ಲಿ ಎಲ್ಲಿ ಬೇಕಾದರೂ ಸೇವೆ ಸಲ್ಲಿಸಲು ಸಿದ್ಧರಿರಬೇಕು. ಇದೊಂದು ತಾತ್ಕಾಲಿಕ ಹುದ್ದೆಯಾಗಿದ್ದರೂ, ಮುಂದಿನ ದಿನಗಳಲ್ಲಿ ಕಾಯಂಗೊಳ್ಳುವ (likely to be continued) ಸಂಪೂರ್ಣ ಸಾಧ್ಯತೆಗಳಿರುತ್ತವೆ.

SSB Constable Recruitment 2026: ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರಿ ಕೆಲಸ: SSB ಯಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ!

ಯಾವೆಲ್ಲಾ ಕ್ರೀಡೆಗಳಿಗೆ ಅವಕಾಶವಿದೆ? (Eligible Sports Disciplines)

ಕೇವಲ ಕ್ರಿಕೆಟ್ ಆಡಿದರಷ್ಟೇ ಕ್ರೀಡೆಯಲ್ಲ, ನಮ್ಮ ದೇಶದಲ್ಲಿ ಅದೆಷ್ಟೋ ಗ್ರಾಮೀಣ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಿವೆ. ಈ Sports Quota Jobs ಅಡಿಯಲ್ಲಿ ಹಲವು ಕ್ರೀಡಾ ವಿಭಾಗಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಿಡಲಾಗಿದೆ. ಅಧಿಸೂಚನೆಯಲ್ಲಿ ತಿಳಿಸಿರುವ ಕೆಲವು ಪ್ರಮುಖ ಕ್ರೀಡೆಗಳ ವಿವರ ಇಲ್ಲಿದೆ:

  • ಆರ್ಚರಿ (Archery – ಬಿಲ್ಲುಗಾರಿಕೆ): ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ರಿಕರ್ವ್ (Recurve), ಕಾಂಪೌಂಡ್ (Compound), ಮತ್ತು ಇಂಡಿಯನ್ ರೌಂಡ್ (Indian round) ಕೆಟಗರಿಗಳಿಗೆ ಅವಕಾಶವಿದೆ.
  • ಅಥ್ಲೆಟಿಕ್ಸ್ (Athletics): ಪುರುಷರ ವಿಭಾಗದಲ್ಲಿ 100 ಮೀಟರ್ ಓಟ ಸೇರಿದಂತೆ ಇನ್ನಿತರ ಅಥ್ಲೆಟಿಕ್ಸ್ ವಿಭಾಗಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.

(ಇದೇ ರೀತಿ ಇತರ ಹಲವು ಒಲಿಂಪಿಕ್ ಮತ್ತು ರಾಷ್ಟ್ರೀಯ ಕ್ರೀಡೆಗಳಿಗೂ ಅವಕಾಶವಿದ್ದು, ಅಭ್ಯರ್ಥಿಗಳು ಸಂಪೂರ್ಣ ಪಟ್ಟಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಬಹುದು).

ಅರ್ಜಿ ಸಲ್ಲಿಸಲು ಬೇಕಾದ ರಾಷ್ಟ್ರೀಯತೆ ಮತ್ತು ಕ್ರೀಡಾ ಅರ್ಹತೆ (Eligibility)

  • ರಾಷ್ಟ್ರೀಯತೆ: ಭಾರತೀಯ ನಾಗರಿಕರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಆದರೆ ವಿಶೇಷ ನಿಯಮದನ್ವಯ ನೇಪಾಳ ಅಥವಾ ಭೂತಾನ್ ಪ್ರಜೆಗಳೂ ಸಹ ಸೇನೆಗೆ ಸೇರಲು ಅವಕಾಶ ಕಲ್ಪಿಸಲಾಗಿದೆ.
  • ಕ್ರೀಡಾ ಅರ್ಹತೆ: ಅಭ್ಯರ್ಥಿಗಳು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಖೇಲೋ ಇಂಡಿಯಾ ಯೂತ್ ಗೇಮ್ಸ್, ಖೇಲೋ ಇಂಡಿಯಾ ವಿಂಟರ್ ಗೇಮ್ಸ್, ಅಥವಾ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಸೇರಿದಂತೆ ಮಾನ್ಯತೆ ಪಡೆದ ರಾಜ್ಯ, ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದಿರಬೇಕು ಅಥವಾ ಉತ್ತಮ ಪ್ರದರ್ಶನ ನೀಡಿರಬೇಕು. ಸಂಬಂಧಪಟ್ಟ ಕ್ರೀಡಾ ಪ್ರಾಧಿಕಾರದಿಂದ ಪಡೆದ ಅಧಿಕೃತ ಕ್ರೀಡಾ ಪ್ರಮಾಣಪತ್ರ (Sports Certificate) ಕಡ್ಡಾಯವಾಗಿದೆ.

ಅರ್ಜಿ ರಿಜೆಕ್ಟ್ ಆಗಬಾರದು ಅಂದ್ರೆ ಫೋಟೋ ಮತ್ತು ಸಹಿ ಹೀಗಿರಬೇಕು! (Strict Rules for Photo & Signature)

ಹೆಚ್ಚಿನ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಫೋಟೋ ಮತ್ತು ಸಹಿಯನ್ನು ಸರಿಯಾಗಿ ಅಪ್ಲೋಡ್ ಮಾಡದೆ ಎಡವುತ್ತಾರೆ, ಇದರಿಂದ ಅವರ ಅರ್ಜಿ ತಿರಸ್ಕೃತಗೊಳ್ಳುತ್ತದೆ (Reject). ಈ ಬಗ್ಗೆ SSB ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ:

ಫೋಟೋ ಹೇಗಿರಬೇಕು? (Photograph Specifications):

  • ಫೋಟೋ ಬಹಳ ಸ್ಪಷ್ಟವಾಗಿರಬೇಕು ಮತ್ತು ಇತ್ತೀಚಿನದ್ದಾಗಿರಬೇಕು (Date ನಮೂದಿಸಿದ್ದರೆ ಉತ್ತಮ).
  • ತೀರಾ ಹತ್ತಿರದಿಂದ (Too close) ತೆಗೆದ ಫೋಟೋ, ಕಪ್ಪು ಕನ್ನಡಕ (With goggles) ಹಾಕಿಕೊಂಡಿರುವ ಫೋಟೋ, ಅಥವಾ ಟೋಪಿ/ಕ್ಯಾಪ್ (With hat/cap) ಹಾಕಿಕೊಂಡಿರುವ ಫೋಟೋಗಳನ್ನು ಅಪ್ಲೋಡ್ ಮಾಡಬಾರದು.
  • ಫೋಟೋ ಬ್ಲರ್ (Blur) ಆಗಿರಬಾರದು, ತೀರಾ ಕತ್ತಲಲ್ಲಿ (Too dark) ತೆಗೆದಿರಬಾರದು, ಅಥವಾ ತಲೆಕೆಳಗಾಗಿ (Inverted) ಇರಬಾರದು.
  • ಪಕ್ಕಕ್ಕೆ ಮುಖ ಮಾಡಿರುವ (Facing sideways) ಅಥವಾ ಸ್ಪೆಕ್ಟ್ಸ್/ಕನ್ನಡಕ (With spectacles) ಹಾಕಿರುವ ಫೋಟೋಗಳನ್ನು ಸಹ ಸ್ವೀಕರಿಸಲಾಗುವುದಿಲ್ಲ.

ಸಹಿ ಹೇಗಿರಬೇಕು? (Signature Specifications):

  • ಅಭ್ಯರ್ಥಿಯ ಸಹಿಯು ಕಡ್ಡಾಯವಾಗಿ ಕಪ್ಪು (Black) ಅಥವಾ ಕಡು ನೀಲಿ (Dark Blue) ಬಣ್ಣದ ಇಂಕ್ ಪೆನ್ ನಿಂದಲೇ ಮಾಡಿರಬೇಕು. ಬೇರೆ ಬಣ್ಣದ ಇಂಕ್ ಬಳಸಿದರೆ ಅರ್ಜಿ ರಿಜೆಕ್ಟ್ ಆಗುತ್ತದೆ.
  • ಸಹಿಯ ಫೈಲ್ ಸೈಜ್ ಕನಿಷ್ಠ 3 KB ಯಿಂದ ಗರಿಷ್ಠ 1 MB ಒಳಗೆ ಇರಬೇಕು.
  • ಅರ್ಜಿದಾರರು ಮಾತ್ರವೇ ಸಹಿ ಮಾಡಿರಬೇಕು, ಬೇರೆಯವರು ಮಾಡುವಂತಿಲ್ಲ.
  • ಬಾಕ್ಸ್‌ನಿಂದ ಹೊರಗೆ ಸಹಿ ಮಾಡುವುದು, ಡಾರ್ಕ್ ಬ್ಯಾಕ್‌ಗ್ರೌಂಡ್ ಮೇಲೆ ಸಹಿ ಮಾಡುವುದು, ಅಥವಾ ಟೈಪಿಂಗ್ ಮೂಲಕ ಸಹಿ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
  • ಮುಂದಿನ ನೇಮಕಾತಿಯ ಯಾವುದೇ ಹಂತದಲ್ಲಿ ಅಭ್ಯರ್ಥಿಯ ಸಹಿಯು ಮ್ಯಾಚ್ ಆಗದಿದ್ದರೆ, ಆತನನ್ನು ತಕ್ಷಣವೇ ಡಿಸ್ಕ್ವಾಲಿಫೈ (Disqualified) ಮಾಡಲಾಗುತ್ತದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (SSB Constable GD Apply Online)

ಈ ಬಂಪರ್ Central Govt Jobs 2026 ಗೆ ಅರ್ಜಿ ಸಲ್ಲಿಸಲು ಬಯಸುವ ಕ್ರೀಡಾಪಟುಗಳು ಕೇವಲ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ (ಆಫ್‌ಲೈನ್ ಅಥವಾ ಪೋಸ್ಟ್) ಮಾದರಿಯಲ್ಲಿ ಅರ್ಜಿ ಕಳುಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.

🔗 Advertisement no : 541/RC/SSB/CT(GD)SQ-2025/2026 – Post of CONSTABLE (GENERAL DUTY) UNDER SPORTS QUOTA FOR THE YEAR 2025/2026 👉 Click Here for online SSB Constable GD under Sports Quota- Direct Link
  1. ಮೊದಲಿಗೆ ಸಶಸ್ತ್ರ ಸೀಮಾ ಬಲ(SSB) ದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.Advertisement no : 541/RC/SSB/CT(GD)SQ-2025/2026-Post of CONSTABLE (GENERAL DUTY) UNDER SPORTS QUOTA FOR THE YEAR 2025/2026
  2. ಅಲ್ಲಿರುವ ‘Recruitment‘ ಅಥವಾ ‘Sports Quota Constable GD 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಮೂಲ ವಿವರಗಳನ್ನು, ಕ್ರೀಡಾ ಸಾಧನೆಯ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
  4. ಮೇಲೆ ತಿಳಿಸಿದ ನಿಯಮಗಳ ಪ್ರಕಾರವೇ ನಿಮ್ಮ ಫೋಟೋ, ಸಹಿ, ಮತ್ತು ಕ್ರೀಡಾ ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡಿ.
  5. ಆನ್‌ಲೈನ್ ಪೇಮೆಂಟ್ ಗೇಟ್‌ವೇ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ, ಫೈನಲ್ ಸಬ್ಮಿಟ್ ಕೊಡಿ.

ಪ್ರಮುಖ ದಿನಾಂಕಗಳು (Important Dates)

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ದಿನಾಂಕಗಳನ್ನು ಕಡ್ಡಾಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಅರ್ಜಿಗಳನ್ನು ಕೇವಲ ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು.

  • ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಪ್ರಾರಂಭ ದಿನಾಂಕ (Start Date to Apply Online): 09-05-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last Date to Apply Online): 07-June-2026

ಕ್ರೀಡೆಯನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಕ್ರೀಡಾಪಟುಗಳಿಗೆ ಇದೊಂದು ಲಾಟರಿ ಇದ್ದಂತೆ. ದೇಶದ ಗಡಿ ಕಾಯುವ ಪವಿತ್ರವಾದ ಕೆಲಸದ ಜೊತೆಗೆ, ನಿಮ್ಮ ಕ್ರೀಡಾ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳಲು ಸೇನೆಯು ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತದೆ. ಸಮಯವನ್ನು ವ್ಯರ್ಥ ಮಾಡದೆ, ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಆಲ್ ದ ಬೆಸ್ಟ್!

ಪ್ರಮುಖ ಲಿಂಕ್ ಗಳು/Important Links:

ವಿವರ (Details)ಡೌನ್‌ಲೋಡ್ ಲಿಂಕ್ (Download Link)
SSB Constable Recruitment 2026
Official Notification PDF
ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
SSB Constable Recruitment 2026
Apply Online Direct Link
Apply Online Direct Link : ಇಲ್ಲಿ ಕ್ಲಿಕ್ ಮಾಡಿ
Last Date 07/06/2026
ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿhttps://quicknewztoday.com/category/jobs/
Tags: Armed forces jobs Karnataka, Central Govt Jobs 2026, Govt Jobs for Sportspersons, Khelo India participants jobs, Sashastra Seema Bal vacancy, Sports Quota Jobs in Kannada, SSB Constable GD Apply Online, SSB Constable Recruitment 2026

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • CRPF Recruitment 2026:  Last Date:19/05/2026
  • ONGC Scholarship 2026 : Last Date:15.05.2026
  • CESC Mysore Apprentice Recruitment 2026: Last Date: 29.05.2026

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ / ವಿದ್ಯಾರ್ಥಿವೇತನದ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now

Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

NEET UG 2026 Cancelled: ಮೇ 3 ರಂದು ನಡೆದಿದ್ದ NEET-UG 2026 ಪರೀಕ್ಷೆ ರದ್ದು! ಕೇಂದ್ರ ಸರ್ಕಾರದಿಂದ ಸಿಬಿಐ ತನಿಖೆಗೆ ಆದೇಶ!

ಮೇ 3 ರಂದು ನಡೆದಿದ್ದ NEET-UG 2026 ಪರೀಕ್ಷೆ ರದ್ದು! ಕೇಂದ್ರ ಸರ್ಕಾರದಿಂದ ಸಿಬಿಐ ತನಿಖೆಗೆ ಆದೇಶ!

SSB Constable Recruitment 2026: ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರಿ ಕೆಲಸ: SSB ಯಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ!

ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರಿ ಕೆಲಸ: SSB ಯಲ್ಲಿ 404 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ!

MCL Recruitment 2026: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಕೋಲ್ ಇಂಡಿಯಾದ ಕೇಂದ್ರ ಸರ್ಕಾರಿ ಕೆಲಸ! ಮಹಾನದಿ ಕೋಲ್ ಫೀಲ್ಡ್ಸ್ (MCL - Coal India) ನಲ್ಲಿ ಬಂಪರ್ ನೇಮಕಾತಿ!

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಕೋಲ್ ಇಂಡಿಯಾದ ಕೇಂದ್ರ ಸರ್ಕಾರಿ ಕೆಲಸ! ಮಹಾನದಿ ಕೋಲ್ ಫೀಲ್ಡ್ಸ್ (MCL – Coal India) ನಲ್ಲಿ ಬಂಪರ್ ನೇಮಕಾತಿ!

KPTCL Internship: B.E/Degree ವಿದ್ಯಾರ್ಥಿಗಳಿಗೆ KPTCL ನಲ್ಲಿ15 ದಿನಗಳಿಂದ 6 ತಿಂಗಳವರೆಗೆ ಇಂಟರ್ನ್‌ಶಿಪ್ ಮಾಡಲು ಭರ್ಜರಿ ಅವಕಾಶ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

B.E/Degree ವಿದ್ಯಾರ್ಥಿಗಳಿಗೆ KPTCL ನಲ್ಲಿ 15 ದಿನಗಳಿಂದ 6 ತಿಂಗಳವರೆಗೆ ಇಂಟರ್ನ್‌ಶಿಪ್ ಮಾಡಲು ಭರ್ಜರಿ ಅವಕಾಶ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

CESC Mysore Apprentice Recruitment 2026: B.E/B.Tech/Diploma/Any Degree ಪಾಸ್ ಆದವರಿಗೆ ಸಿಹಿ ಸುದ್ದಿ: ಪರೀಕ್ಷೆ ಇಲ್ಲದೆ CESC ಮೈಸೂರಿನಲ್ಲಿ ಬಂಪರ್ ನೇಮಕಾತಿ!

B.E/B.Tech/Diploma/Any Degree ಪಾಸ್ ಆದವರಿಗೆ ಸಿಹಿ ಸುದ್ದಿ: ಪರೀಕ್ಷೆ ಇಲ್ಲದೆ CESC ಮೈಸೂರಿನಲ್ಲಿ ಬಂಪರ್ ನೇಮಕಾತಿ!

PrevPreviousನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಕೋಲ್ ಇಂಡಿಯಾದ ಕೇಂದ್ರ ಸರ್ಕಾರಿ ಕೆಲಸ! ಮಹಾನದಿ ಕೋಲ್ ಫೀಲ್ಡ್ಸ್ (MCL – Coal India) ನಲ್ಲಿ ಬಂಪರ್ ನೇಮಕಾತಿ!
Nextಮೇ 3 ರಂದು ನಡೆದಿದ್ದ NEET-UG 2026 ಪರೀಕ್ಷೆ ರದ್ದು! ಕೇಂದ್ರ ಸರ್ಕಾರದಿಂದ ಸಿಬಿಐ ತನಿಖೆಗೆ ಆದೇಶ!Next
CBIC Recruitment 2026: ಕೇಂದ್ರ ಸರ್ಕಾರಿ ನೌಕರಿ: ಸಿಬಿಐಸಿ (CBIC) ಯಲ್ಲಿ 172 ಅಧಿಕಾರಿಗಳ ಹುದ್ದೆಗೆ ಬಂಪರ್ ನೇಮಕಾತಿ!

ಕೇಂದ್ರ ಸರ್ಕಾರಿ ನೌಕರಿ: ಸಿಬಿಐಸಿ (CBIC) ಯಲ್ಲಿ 172 ಅಧಿಕಾರಿಗಳ ಹುದ್ದೆಗೆ ಬಂಪರ್ ನೇಮಕಾತಿ!

30 March 2026
Read More »
Air Force School Jalahalli Recruitment 2026: ಡಿಗ್ರಿ/ಬಿ.ಇಡಿ (B.Ed) ಮುಗಿಸಿದವರಿಗೆ ಗುಡ್ ನ್ಯೂಸ್! ಬೆಂಗಳೂರಿನ ಜಾಲಹಳ್ಳಿ ಏರ್ ಫೋರ್ಸ್ ಶಾಲೆಯಲ್ಲಿ ಶಿಕ್ಷಕರ ನೇಮಕಾತಿ: ಇಂದೇ ಅರ್ಜಿ ಹಾಕಿ!

ಡಿಗ್ರಿ/ಬಿ.ಇಡಿ (B.Ed) ಮುಗಿಸಿದವರಿಗೆ ಗುಡ್ ನ್ಯೂಸ್! ಬೆಂಗಳೂರಿನ ಜಾಲಹಳ್ಳಿ ಏರ್ ಫೋರ್ಸ್ ಶಾಲೆಯಲ್ಲಿ ಶಿಕ್ಷಕರ ನೇಮಕಾತಿ: ಇಂದೇ ಅರ್ಜಿ ಹಾಕಿ!

29 March 2026
Read More »
Kalaburagi Recruitment 2026: ಓದಲಿಲ್ಲ ಅಂತ ಚಿಂತೆ ಬೇಡ! ಕನ್ನಡ ಬಂದರೆ ಸಾಕು: 42 ಪೌರಕಾರ್ಮಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ!

ಓದಲಿಲ್ಲ ಅಂತ ಚಿಂತೆ ಬೇಡ! ಕನ್ನಡ ಬಂದರೆ ಸಾಕು: 42 ಪೌರಕಾರ್ಮಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ!

29 March 2026
Read More »
Page1 … Page19 Page20 Page21 Page22 Page23 … Page128
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs