SSC MTS Havaldar Recruitment 2025: SSLC ಪಾಸಾದವರಿಗೆ ಗುಡ್‌ನ್ಯೂಸ್: ಕನ್ನಡದಲ್ಲೇ ಪರೀಕ್ಷೆ ಬರೆದು ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಿರಿ!

SSC MTS Havaldar Recruitment 2025: SSLC ಪಾಸಾದವರಿಗೆ ಗುಡ್‌ನ್ಯೂಸ್: ಕನ್ನಡದಲ್ಲೇ ಪರೀಕ್ಷೆ ಬರೆದು ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಿರಿ!
Share and Spread the love

SSC MTS Havaldar Recruitment 2025: ಎಸ್‌ಎಸ್‌ಸಿ ಎಂಟಿಎಸ್ ಹಾಗೂ ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ, ಕನ್ನಡದಲ್ಲೇ ಪರೀಕ್ಷೆ ಬರೆದು ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಿರಿ. ಜು.24 ಕೊನೆ ದಿನ!

Follow Us Section

ಬೆಂಗಳೂರು, ಜುಲೈ 04, 2025: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2025ನೇ ಸಾಲಿನ ಮಲ್ಟಿ ಟಾಸ್ಕಿಂಗ್ ಸ್ಟಾಫ್- ನಾನ್ ಟೆಕ್ನಿಕಲ್ (ಎಂಟಿಎಸ್) ಹಾಗೂ ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಸಿಬ್ಬಂದಿ ಆಯ್ಕೆ ಆಯೋಗವು (ಎಸ್‌ಎಸ್‌ಸಿ) ಅಧಿಸೂಚನೆಯನ್ನು ಪ್ರಕಟಿಸಿದೆ. ಕನಿಷ್ಠ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಉತ್ತೀರ್ಣರಾದ ಅಭ್ಯರ್ಥಿಗಳು ಕನ್ನಡದಲ್ಲಿಯೇ ಪರೀಕ್ಷೆ ಬರೆದು ಉತ್ತಮ ವೇತನದ ಕೇಂದ್ರ ಸರ್ಕಾರಿ ಉದ್ಯೋಗವನ್ನು ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ.

SSC MTS Havaldar Recruitment 2025: ಹುದ್ದೆಗಳ ವಿವರ ಮತ್ತು ನಿರೀಕ್ಷೆ:

ಪ್ರಸ್ತುತ ಅಧಿಸೂಚನೆಯಲ್ಲಿ 1075 ಹವಾಲ್ದಾರ್ ಹುದ್ದೆಗಳ ಸಂಖ್ಯೆಯನ್ನು ಮಾತ್ರ ನಮೂದಿಸಲಾಗಿದ್ದು, ಎಂಟಿಎಸ್ ಹುದ್ದೆಗಳ ಸಂಖ್ಯೆಯನ್ನು ಇನ್ನಷ್ಟೇ ತಿಳಿಸಬೇಕಿದೆ. ಕಳೆದ ಬಾರಿ ಎಂಟಿಎಸ್‌ನ 4,887 ಹಾಗೂ 3,439 ಹವಾಲ್ದಾರ್ ಹುದ್ದೆಗಳನ್ನು ಒಳಗೊಂಡಂತೆ ಒಟ್ಟು 8,326 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿತ್ತು. ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಹುದ್ದೆಗಳ ಲಭ್ಯತೆ ನಿರೀಕ್ಷಿಸಲಾಗಿದೆ.

SSC MTS Havaldar Recruitment 2025: ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷೆ ಹೇಗಿರುತ್ತೆ?

ಈ ಹುದ್ದೆಗಳ ನೇಮಕಾತಿಗೆ ಕಂಪ್ಯೂಟರ್ ಆಧಾರಿತ ಒಂದೇ ಹಂತದ ಪರೀಕ್ಷೆಯನ್ನು (CBE) ನಡೆಸಲಾಗುತ್ತದೆ. ಹವಾಲ್ದಾರ್ ಹುದ್ದೆಗಳಿಗೆ ಮಾತ್ರ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಬಳಿಕ ದೈಹಿಕ ಸಹಿಷ್ಣುತೆ ಪರೀಕ್ಷೆ (Physical Efficiency Test – PET) ಇರಲಿದೆ. ಸಾಮಾನ್ಯ ಜ್ಞಾನ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಕೊಂಚ ಹಿಡಿತವಿದ್ದರೆ ಪರೀಕ್ಷೆ ಸರಳವಾಗಲಿದೆ.

ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಕನ್ನಡ ಸೇರಿ ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದೆ:

  • ಮೊದಲ ಭಾಗ (Session-I): ನ್ಯೂಮರಿಕ್ ಮ್ಯಾಥಮ್ಯಾಟಿಕ್ ಎಬಿಲಿಟಿ, ರೀಸನಿಂಗ್ ಹಾಗೂ ಪ್ರಾಬ್ಲಂ ಸಾಲ್ವಿಂಗ್ ಎಬಿಲಿಟಿಯ ಒಟ್ಟು 40 ಪ್ರಶ್ನೆಗಳಿಗೆ 120 ಅಂಕಗಳಿರುತ್ತವೆ. ಇದಕ್ಕೆ ಉತ್ತರಿಸಲು 45 ನಿಮಿಷಗಳನ್ನು ನೀಡಲಾಗುತ್ತದೆ. ಈ ವಿಭಾಗದಲ್ಲಿ ಯಾವುದೇ ನಕಾರಾತ್ಮಕ ಅಂಕಗಳು (Negative Marking) ಇರುವುದಿಲ್ಲ.
  • ಎರಡನೇ ಭಾಗ (Session-II): ಸಾಮಾನ್ಯ ಜ್ಞಾನ ಹಾಗೂ ಇಂಗ್ಲಿಷ್ ಭಾಷೆ ಮತ್ತು ಗ್ರಹಿಸುವಿಕೆಯ ಒಟ್ಟು 50 ಪ್ರಶ್ನೆಗಳಿಗೆ 150 ಅಂಕಗಳಿರುತ್ತವೆ. ಇದಕ್ಕೂ 45 ನಿಮಿಷಗಳನ್ನು ನೀಡಲಾಗುತ್ತದೆ. ಈ ವಿಭಾಗದಲ್ಲಿ ತಪ್ಪು ಉತ್ತರಗಳಿಗೆ 1 ಅಂಕ ಕಡಿತಗೊಳಿಸಲಾಗುತ್ತದೆ (Negative Marking).

SSC MTS Havaldar Recruitment 2025: ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ssc.gov.in ನಲ್ಲಿ ‘ಒಂದು ಬಾರಿಯ ನೋಂದಣಿ’ (One-Time Registration) ಮಾಡಿಕೊಳ್ಳತಕ್ಕದ್ದು. ಇದಕ್ಕೆ ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯೆಯನ್ನು ಅನುಸರಿಸಲು ಸೂಚಿಸಲಾಗಿದೆ.

  • ಅರ್ಜಿ ಶುಲ್ಕ: 100 ರೂ. ಎಸ್‌ಸಿ, ಎಸ್‌ಟಿ, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ ಶುಲ್ಕದಲ್ಲಿ ವಿನಾಯ್ತಿ ನೀಡಲಾಗಿದೆ.
  • ಅರ್ಜಿಯಲ್ಲಿ ತಿದ್ದುಪಡಿಗೆ ಅವಕಾಶ: ಜುಲೈ 29 ರಿಂದ 31ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಲಾಗುತ್ತದೆ.
  • ತಿದ್ದುಪಡಿ ಶುಲ್ಕ: ಮೊದಲ ಬಾರಿ ತಿದ್ದುಪಡಿಗೆ 200 ರೂ. ಹಾಗೂ ಎರಡನೇ ಬಾರಿಯ ತಿದ್ದುಪಡಿಗೆ 500 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಕೊನೆಯ ಬಾರಿ ತಿದ್ದುಪಡಿಯಾದ ಅರ್ಜಿಯನ್ನೇ ಮಾನ್ಯ ಮಾಡಲಾಗುತ್ತದೆ.

SSC MTS Havaldar Recruitment 2025: ವಿದ್ಯಾರ್ಹತೆ ಮತ್ತು ವಯೋಮಿತಿ:

  • ವಿದ್ಯಾರ್ಹತೆ: ಕನಿಷ್ಠ 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಪಾಸಾದವರು ಇಲ್ಲವೇ ತತ್ಸಮಾನ ವಿದ್ಯಾರ್ಹತೆಯನ್ನು 2025ರ ಆಗಸ್ಟ್ 1ಕ್ಕೆ ಪಡೆದುಕೊಂಡಿರುವವರು ಎಂಟಿಎಸ್ ಮತ್ತು ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
  • ವಯೋಮಿತಿ:
    • ಕೆಲವು ಎಂಟಿಎಸ್ ಹುದ್ದೆಗಳಿಗೆ ಮತ್ತು ಹವಾಲ್ದಾರ್ ಹುದ್ದೆಗಳಿಗೆ 2025ರ ಆಗಸ್ಟ್ 1ಕ್ಕೆ ಅನ್ವಯಿಸುವಂತೆ 18-25 ವರ್ಷದೊಳಗಿನವರಾಗಿರಬೇಕು (ಅಂದರೆ 02.08.1998 ಮತ್ತು 01.08.2007 ರ ನಡುವೆ ಜನಿಸಿರಬೇಕು).
    • ಇತರೆ ಎಂಟಿಎಸ್ ಹುದ್ದೆಗಳಿಗೆ ಮತ್ತು ಹವಾಲ್ದಾರ್ ಹುದ್ದೆಗಳಿಗೆ 18-27 ವರ್ಷದೊಳಗಿನವರಾಗಿರಬೇಕು (ಅಂದರೆ 02.08.1998 ಮತ್ತು 01.08.2007 ರ ನಡುವೆ ಜನಿಸಿರಬೇಕು).
  • ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ/ಪಂಗಡದವರಿಗೆ 5 ವರ್ಷ ಮತ್ತು ಅಂಗವಿಕಲರಿಗೆ 15 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರದಲ್ಲಿ ಉಲ್ಲೇಖವಾಗಿರುವ ಜನ್ಮದಿನಾಂಕವನ್ನೇ ವಯೋಮಿತಿ ನಿರ್ಧಾರಕ್ಕೆ ಪರಿಗಣಿಸಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜುಲೈ 24, 2025
  • ಶುಲ್ಕ ಪಾವತಿಗೆ ಕೊನೆಯ ದಿನ: ಜುಲೈ 25, 2025
  • ಅರ್ಜಿ ತಿದ್ದುಪಡಿಗೆ ಅವಕಾಶ: ಜುಲೈ 29-31, 2025
  • ಆನ್‌ಲೈನ್ ಪರೀಕ್ಷೆ ದಿನಾಂಕ: ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 24, 2025

ಪ್ರವೇಶಪತ್ರ:

ಪರೀಕ್ಷೆಗೆ 10 ದಿನ ಮುಂಚೆ ಪರೀಕ್ಷೆ ನಡೆಯುವ ನಗರ ಮತ್ತು ಪರೀಕ್ಷಾ ಕೇಂದ್ರದ ಮಾಹಿತಿ ಬಿಡುಗಡೆ ಮಾಡಲಾಗುತ್ತದೆ. ಪ್ರವೇಶಪತ್ರವನ್ನು ಪರೀಕ್ಷೆಗೆ 2-3 ದಿನ ಮುಂಚೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.


🔗Important Links /Dates:

SSC MTS Havaldar Recruitment 2025 official Website/ಎಸ್‌ಎಸ್‌ಸಿ ಎಂಟಿಎಸ್ ಹಾಗೂ ಹವಾಲ್ದಾರ್ ಹುದ್ದೆ ಅಧಿಕೃತ ವೆಬ್‌ಸೈಟ್Official Website: Click Here
Apply On-line Here: Click Here
SSC MTS Havaldar Recruitment 2025
Detailed Advertisement/
ಎಸ್‌ಎಸ್‌ಸಿ ಎಂಟಿಎಸ್ ಹಾಗೂ ಹವಾಲ್ದಾರ್ ಹುದ್ದೆಗಳ ಅಧಿಸೂಚನೆ
Click Here for Notification
Last Date24/07/2025

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!

🔗SSC CHSL Recruitment 2025: ಪಿಯುಸಿ ಪಾಸಾದವರಿಗೆ ಸುವರ್ಣಾವಕಾಶ: 3131 LDC, JSA & DEO ಹುದ್ದೆಗಳಿಗೆ ಅರ್ಜಿ ಆಹ್ವಾನ!

🔗AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

🔗MECL Recruitment 2025: ಗಣಿ ಕ್ಷೇತ್ರದಲ್ಲಿ ವೃತ್ತಿ ಅವಕಾಶ:108 ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

🔗Indian Air Force Agniveer 2025:ನಿಮ್ಮ ಕನಸು ನನಸಾಗಿಸಿ: ಭಾರತೀಯ ವಾಯುಪಡೆಯ ಅಗ್ನಿವೀರ ವಾಯು ನೇಮಕಾತಿ ಅಧಿಸೂಚನೆ ಪ್ರಕಟ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇

Follow Us Section
Share and Spread the love
Gundijalu Shwetha  के बारे में
Gundijalu Shwetha ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ. Read More
For Feedback - quicknewztoday@gmail.com