SSLC 2-3 Exam:2025: SSLC ಪರೀಕ್ಷೆ 2 ಮತ್ತು 3ರ ವೇಳಾಪಟ್ಟಿ ಪ್ರಕಟ – SSLC ಫಲಿತಾಂಶದಲ್ಲಿ ‘fail’ ಆದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ!

SSLC 2-3 Exam:2025: SSLC ಪರೀಕ್ಷೆ 2 ಮತ್ತು 3ರ ವೇಳಾಪಟ್ಟಿ ಪ್ರಕಟ – SSLC ಫಲಿತಾಂಶದಲ್ಲಿ 'fail' ಆದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ!
Share and Spread the love

SSLC 2-3 Exam:2025: SSLC ಪರೀಕ್ಷೆ 2 ಮತ್ತು 3ರ ವೇಳಾಪಟ್ಟಿ ಪ್ರಕಟ – SSLC ಫಲಿತಾಂಶದಲ್ಲಿ ‘fail’ ಆದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ! ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

ಬೆಂಗಳೂರು: 2025ನೇ ಸಾಲಿನ SSLC ಪರೀಕ್ಷೆ-1 ಫಲಿತಾಂಶ ಮೇ 2 ರಂದು ಪ್ರಕಟವಾಗಿದ್ದು, ಶೇ.66.14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಳಿದ ಶೇ.33.86% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಅವರಿಗಾಗಿ ಕರ್ನಾಟಕ ಸರ್ಕಾರದಿಂದ ಭಾರೀ ಉತ್ತಮವಾದ ಪರಿಹಾರವೊಂದು ಪ್ರಕಟವಾಗಿದೆ. ಸರ್ಕಾರ SSLC ಪರೀಕ್ಷೆ 2 ಮತ್ತು ಪರೀಕ್ಷೆ 3 ಎಂಬ ಮತ್ತೆರಡು ಅವಕಾಶಗಳನ್ನು ನೀಡಿದ್ದು, ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟ ಮಾಹಿತಿ ನೀಡಿದ್ದಾರೆ.

Follow Us Section

ಒಂದೇ ಶೈಕ್ಷಣಿಕ ವರ್ಷದಲ್ಲಿ ಮೂರು ಪರೀಕ್ಷೆಗಳ ಅವಕಾಶ

ಈ ವರ್ಷ SSLC ಪರೀಕ್ಷೆ-1ದಲ್ಲಿ ತೃಪ್ತಿಕರ ಅಂಕ ಪಡೆಯದೆ ಫೇಲ್ ಆದ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳು ಒಂದೇ ಶೈಕ್ಷಣಿಕ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವಂತಾಗಿದೆ. ಇದು ವಿದ್ಯಾರ್ಥಿಗಳಿಗೆ ದೊಡ್ಡ ಅನುಕೂಲವಾಗಲಿದ್ದು, ಶೈಕ್ಷಣಿಕ ಜೀವನದಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳುವ ಮೂಲಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: ಕರ್ನಾಟಕ SSLC ಫಲಿತಾಂಶ 2025: ರಿಲೀಸ್ ಅಪ್ಡೇಟ್ಸ್, ವೆಬ್‌ಸೈಟ್, ಡೌನ್‌ಲೋಡ್ ವಿಧಾನ – ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲಿದೆ

‘Fail’ ಎಂಬ ಪದವಿಲ್ಲ – ‘Progressing’ ಎಂದೇ ಉಪಯೋಗ

ಪರೀಕ್ಷೆ-1ನಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪರೀಕ್ಷೆ 2 ಮತ್ತು 3 ಬರೆಯುವವರೆಗೆ ಅವರ ಡಿಜಿಟಲ್ ಅಂಕಪಟ್ಟಿಯಲ್ಲಿ “Fail” ಎಂದು ನಮೂದಿಸಲಾಗದು. ಬದಲಿಗೆ “Progressing” ಎಂದು ಮಾತ್ರ ಉಲ್ಲೇಖಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳ ಮನೋಬಲ ಕುಂದದಂತೆ ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಂಡಿದೆ.

SSLC 2-3 Exam:2025 SSLC ಪರೀಕ್ಷೆ-2(26-05-2025 ರಿಂದ 02-06-2025):

ದಿನಾಂಕವಿಷಯಗಳು
26-05-2025ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ಇತ್ಯಾದಿ)
27-05-2025ಗಣಿತ / ಸಮಾಜ ಶಾಸ್ತ್ರ
28-05-2025ದ್ವಿತೀಯ ಭಾಷೆ (ಇಂಗ್ಲಿಷ್ / ಕನ್ನಡ)
29-05-2025ಸಮಾಜ ವಿಜ್ಞಾನ
30-05-2025ತೃತೀಯ ಭಾಷೆ (ಹಿಂದಿ, ಅರೇಬಿಕ್, ತುಳು, ಉರ್ದು ಇತ್ಯಾದಿ)
31-05-2025ರಾಜ್ಯ ಶಾಸ್ತ್ರ / ಸಂಗೀತ
02-06-2025ಜಿಟಿಎಸ್ ಮತ್ತು vocational ವಿಷಯಗಳು

SSLC 2-3 Exam:2025 SSLC ಪರೀಕ್ಷೆ-3 (23-06-2025 ರಿಂದ 30-06-2025):

ಪರೀಕ್ಷೆ-2 ಬಳಿಕವೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ SSLC ಪರೀಕ್ಷೆ-3 ಆಯ್ಕೆ ನೀಡಲಾಗಿದೆ. ಇದರ ಸಂಪೂರ್ಣ ಟೈಮಟೇಬಲ್ ಈ ಕೆಳಗಿನಂತಿವೆ.

SSLC 2-3 Exam:2025: SSLC ಪರೀಕ್ಷೆ 2 ಮತ್ತು 3ರ ವೇಳಾಪಟ್ಟಿ ಪ್ರಕಟ – SSLC ಫಲಿತಾಂಶದಲ್ಲಿ ‘fail’ ಆದ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ!

SSLC 2-3 Exam:2025 ನೋಂದಣಿ ಪ್ರಕ್ರಿಯೆ:

ಪರೀಕ್ಷೆ-2 ಬರೆಯಲು ಇಚ್ಛಿಸುವ ಅಭ್ಯರ್ಥಿಗಳು 03-05-2025 ರಿಂದ 10-05-2025ರೊಳಗೆ ತಮ್ಮ ಶಾಲೆಗಳ ಮೂಲಕ ಅಥವಾ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ಉಚಿತ SSLC 2-3 Exam ನೋಂದಣಿ ಅವಕಾಶ

ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿರುವ ಪ್ರೆಷರ್‌ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತ ನೋಂದಣಿಗೆ ಅವಕಾಶ ನೀಡಿದೆ.

ನೋಂದಣಿಗೆ ಅಂತಿಮ ದಿನಾಂಕ:
ಪರೀಕ್ಷೆ-2ಕ್ಕೆ ನೋಂದಣಿ ಸಲ್ಲಿಸಲು 2025ರ ಮೇ 10ರವರೆಗೆ ಅವಕಾಶವಿದೆ.

ಪರೀಕ್ಷೆಗಳ ದಿನಾಂಕಗಳು:

  • ಪರೀಕ್ಷೆ-2: 2025ರ ಮೇ 26 ರಿಂದ ಜೂನ್ 2ರವರೆಗೆ
  • ಪರೀಕ್ಷೆ-3: 2025ರ ಜೂನ್ 23 ರಿಂದ ಜೂನ್ 30ರವರೆಗೆ

ಈ ಉಚಿತ ನೋಂದಣಿ ಸೌಲಭ್ಯವು ಕೇವಲ ಪ್ರಥಮ ಬಾರಿ ಪರೀಕ್ಷೆ ಬರೆವ (ಪ್ರೆಷರ್) ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಶಾಲಾ ಮುಖ್ಯಸ್ಥರನ್ನು ಸಂಪರ್ಕಿಸಿ.

ವಿದ್ಯಾರ್ಥಿಗಳಿಗೆ SSLC 2-3 Exam:2025 ಯೋಜನೆಯ ಪ್ರಯೋಜನಗಳು:

  • ಪುನರ್ ಪರೀಕ್ಷೆಯ ಅವಕಾಶದಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
  • ಹೆಚ್ಚಿನ ಅಂಕ ಗಳಿಸಲು ಇನ್ನೊಂದು ಪ್ರಯತ್ನ ಸಿಗುವಂತಾಗುತ್ತದೆ.
  • ಡ್ರಾಪ್ ಆಗದೆ ಶೈಕ್ಷಣಿಕ ವರ್ಷ ಮುಂದುವರಿಸಬಹುದಾದ ಅವಕಾಶ ನೀಡಿದಂತಾಗುತ್ತದೆ.
  • ಸರ್ಕಾರಿ ಪರಿಕ್ಷೆಗಳಿಗೆ ಅರ್ಹತೆ ಉಳಿದಂತಾಗುತ್ತದೆ.

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

ಇಂತಹ ಶಿಕ್ಷಣ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs