Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ!

Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ!
Share and Spread the love

Sub Registrar Office: ಕರ್ನಾಟಕದಲ್ಲಿ ಇನ್ನುಮುಂದೆ 2ನೇ, 4ನೇ ಶನಿವಾರ ಮತ್ತು ಭಾನುವಾರಗಳಲ್ಲೂ ತೆರೆಯಲಿದೆ– ಸರ್ಕಾರದಿಂದ ಹೊಸ ನಿಯಮ ಜಾರಿ! ಇಲ್ಲಿದೆ ಅದರ ಸಂಪೂರ್ಣ ಮಾಹಿತಿ.

ಬೆಂಗಳೂರು, ಮೇ 21: ಕರ್ನಾಟಕದ ಸಾರ್ವಜನಿಕರಿಗೆ ಸದುಪಯೋಗವಾಗುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇನ್ನುಮುಂದೆ ರಾಜ್ಯದ ಉಪ ನೋಂದಣಿ (Sub Registrar office) ಕಚೇರಿಗಳು ರಜೆ ದಿನಗಳಾದ 2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರಗಳಲ್ಲೂ ಕಾರ್ಯನಿರ್ವಹಿಸಲಿವೆ. ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

Follow Us Section

ಈ ಕ್ರಮದ ಮೂಲಕ ಉದ್ಯೋಗದಲ್ಲಿರುವ ಸಾರ್ವಜನಿಕರು ತಮ್ಮ ದಾಖಲೆ ನೋಂದಣಿಯನ್ನು ರಜೆ ದಿನಗಳಲ್ಲಿ ಸಹ ಸುಲಭವಾಗಿ ಮುಗಿಸಿಕೊಳ್ಳುವ ಅವಕಾಶ ದೊರಕಲಿದೆ. ಬಹುತೇಕ ಜನರು ತಮ್ಮ ಕೆಲಸದ ಸಮಯದಲ್ಲಿ ಕಚೇರಿಗೆ ಹೋಗಲು ಸಾಧ್ಯವಿಲ್ಲದೆ, ದಾಖಲೆ ಕಾರ್ಯಗಳು ವಿಳಂಬವಾಗುತ್ತಿದ್ದರು. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಈ ಹಿಂದೆ 2023ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ನೋಂದಣಿ ಕಾಯ್ದೆ 1965ರ ನಿಯಮ 5ರಲ್ಲಿ ತಿದ್ದುಪಡಿ ತರಲಾಯಿತು. ಆ ತಿದ್ದುಪಡಿಯ ಪ್ರಕಾರ ರಜೆ ದಿನಗಳಲ್ಲಿಯೂ ಸೇವೆ ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ನಂತರ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಈ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇದೀಗ ಸೇವೆಯನ್ನು ಪುನರಾರಂಭಿಸಲು ಸರಕಾರದಿಂದ ಅಡಿಟ್ ಆದೇಶ ಹೊರಬಿದ್ದಿದೆ.

ಇದೀಗ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊಸ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಉಪ ನೋಂದಣಿ (Sub Registrar Office) ಕಚೇರಿಯನ್ನು ರಜೆ ದಿನಗಳಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಈ ಕೆಲಸದ ಬದಲಿಗೆ ಅದೆ ಕಚೇರಿಗೆ ಮುಂದಿನ ಮಂಗಳವಾರ ರಜೆಯಾಗಿ ಘೋಷಿಸಲಾಗುತ್ತದೆ.

ಇದನ್ನೂ ಓದಿ: Panchamitra WhatsApp Chat: ಪಂಚಮಿತ್ರ ಸೇವೆ WhatsApp ಮೂಲಕ ನೇರವಾಗಿ ನಿಮ್ಮ ಗ್ರಾಮಪಂಚಾಯಿತಿಯ 15+ ಸರ್ಕಾರಿ ಸೇವೆಗಳನ್ನು ಪಡೆಯಿರಿ!

ಎನಿವೇರ್ ರಿಜಿಸ್ಟ್ರೇಷನ್ ತಂತ್ರಜ್ಞಾನ – ಜನತೆಗೆ ಅನುಕೂಲ

ಈಗಾಗಲೇ ಎನಿವೇರ್ ರಿಜಿಸ್ಟ್ರೇಷನ್ ವ್ಯವಸ್ಥೆ ಜಾರಿಯಲ್ಲಿದೆ. ಅದರ ಪರಿಣಾಮವಾಗಿ ಸಾರ್ವಜನಿಕರು ತಮ್ಮ ಅನೂಕೂಲತೆಯ ಪ್ರಕಾರ ಯಾವುದೇ ಕಾರ್ಯನಿರ್ವಹಣೆಯ ದಿನದಲ್ಲಿ ಸ್ಲಾಟ್ ಬುಕ್ ಮಾಡಿಕೊಂಡು ದಾಖಲೆ ನೋಂದಣೆ ಮಾಡಿಸಿಕೊಳ್ಳಬಹುದು. ಯಾವ ಕಚೇರಿ ಯಾವ ದಿನ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ.

34 ಜಿಲ್ಲಾ ಕಚೇರಿಗಳಲ್ಲಿ ಕ್ರಮಬದ್ಧ ಸೇವೆ

ರಾಜ್ಯದಲ್ಲಿ ಒಟ್ಟು 34 ಜಿಲ್ಲಾ ನೋಂದಣಿ ಕಚೇರಿಗಳಿದ್ದು, ಪ್ರತಿಯೊಂದರಲ್ಲಿ 5 ರಿಂದ 8 ಉಪ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಉಪ ನೋಂದಣಿ ಕಚೇರಿಯನ್ನು ರಜೆ ದಿನಗಳಲ್ಲಿ ತೆರೆದಿಡಲು ಕ್ರಮ ಕೈಗೊಳ್ಳಲಾಗಿದೆ

ಅಧಿಕಾರಿಗಳ ಹೇಳಿಕೆ:
“ಕುಟುಂಬದ ಸದಸ್ಯರೆಲ್ಲರೂ ಕಾರ್ಯನಿಮಿತ್ತ ಸೇರಬೇಕಾದ ಸಂದರ್ಭದಲ್ಲಿ ರಜೆ ಸಿಗುತ್ತಿರಲಿಲ್ಲ. ಈ ತೊಂದರೆ ನಿವಾರಣೆಯಾಗಿ, ಜಿಲ್ಲೆಗೊಂದು ಉಪ ನೋಂದಣಿ ಕಚೇರಿ ತೆರೆಯುವಂತೆ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಸೇವೆ ಸುಗಮವಾಗಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಸೇವೆಗಾಗಿ ಅಧಿಕೃತ ವೆಬ್‌ಸೈಟ್‌:
https://igr.karnataka.gov.in

ಸಾರ್ವಜನಿಕರಿಗೆ ಅನುಕೂಲ:
ಇದರಿಂದ ಉದ್ಯೋಗಸ್ಥರು ಮತ್ತು ಕುಟುಂಬದ ಸದಸ್ಯರು ರಜೆ ದಿನವನ್ನೇ ಆಯ್ಕೆಮಾಡಿಕೊಂಡು ಅವರ ದಾಖಲೆಗಳನ್ನು ನೋಂದಾಯಿಸಲು ಸಾಧ್ಯವಾಗುತ್ತದೆ. ಕಳೆದ ಕೆಲ ವರ್ಷಗಳಿಂದ ರಜೆ ದಿನಗಳಲ್ಲಿ ನೋಂದಣಿ ಸೇವೆ ಇಲ್ಲದ ಕಾರಣ, ನೌಕರರು ಕೆಲಸದ ದಿನವೇ ರಜೆ ತೆಗೆದುಕೊಂಡು ಕಚೇರಿಗೆ ಬರುವ ಅವಶ್ಯಕತೆ ಇತ್ತು.

👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ

🔗ಉದ್ಯೋಗಿನಿ ಯೋಜನೆ (Udyogini Scheme)2025: ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ ಮತ್ತು 50% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ!

🔗Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!

🔗(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?

🔗PMJJBY/PMSBY/APY: ₹436 ಪಾವತಿಸಿ ₹2 ಲಕ್ಷ ಪಡೆಯಿರಿ – ಮೇ 31ರೊಳಗೆ ಈ ವಿಮೆಗಳನ್ನು ಮಾಡಿಸಲು ಮರೆಯಬೇಡಿ!

ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Share and Spread the love

Leave a Reply

Your email address will not be published. Required fields are marked *

ಮುಖಪುಟ ಉದ್ಯೋಗ ಶಿಕ್ಷಣ English Blogs