ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ! ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುವ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಪ್ರತಿದಿನವೂ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಈ ದೇವಾಲಯದಲ್ಲಿ ದರ್ಶನ ಪಡೆಯಲು ಭಕ್ತರು ಅದಕ್ಕೋಸ್ಕರ ಮುಂಚಿತವಾಗಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಬೇಕಾದ ಅಗತ್ಯವಿದೆ. ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ) ಯು ಈಗಾಗಲೇ ಮೂರು ತಿಂಗಳ ಮುಂಚಿತವಾಗಿಯೇ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ಆದರೆ, ಈ ಟಿಕೆಟ್‌ಗಳು ಕೇವಲ ಐದು ನಿಮಿಷಗಳಲ್ಲಿ ಸಂಪೂರ್ಣವಾಗಿ ಬುಕ್ ಆಗಿ ಹೋಗುತ್ತಿರುವುದು, ಭಕ್ತರಲ್ಲಿ ತಿರುಪತಿ ದರ್ಶನದ ಉತ್ಸಾಹ ಎಷ್ಟು ಅಧಿಕ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುವ ಭಕ್ತರಷ್ಟೇ ಅಲ್ಲದೆ, ಯಾವುದೇ ಬುಕ್ಕಿಂಗ್ ಇಲ್ಲದೇ ನೇರವಾಗಿ ತಿರುಪತಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ, ದೇವಾಲಯದ ಆಧುನಿಕ ವ್ಯವಸ್ಥೆಗಳು ಇದ್ದರೂ ಸಹ, ಹಲವೊಮ್ಮೆ ಭಕ್ತರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕಾಯುವ ಅನಿವಾರ್ಯತೆ ಎದುರಾಗುತ್ತಿದೆ. ವಿಶೇಷ ಹಬ್ಬಗಳು, ಪ್ರತ್ಯೇಕ ಸೇವೆಗಳ ಸಂದರ್ಭದಲ್ಲಿ ಈ ಸಮಸ್ಯೆ ಇನ್ನಷ್ಟು ತೀವ್ರಗೊಳ್ಳುತ್ತದೆ. ಕೆಲವೊಮ್ಮೆ ಭಕ್ತರು ದಿನಪೂರ್ತಿ ಕ್ಯೂನಲ್ಲಿ ನಿಲ್ಲಬೇಕಾದ ಸ್ಥಿತಿಯೂ ಉಂಟಾಗುತ್ತದೆ.
ಈ ದೈಹಿಕ ತೊಂದರೆ ಮತ್ತು ಸಮಯದ ನಷ್ಟವನ್ನು ತಡೆಯುವ ಉದ್ದೇಶದಿಂದ, ಟಿಟಿಡಿ ಹೊಸ ಆಡಳಿತ ಮಂಡಳಿಯು ಭಕ್ತರಿಗೆ ಇನ್ನಷ್ಟು ಸುಲಭವಾದ, ವೇಗದ ಮತ್ತು ಡಿಜಿಟಲ್ ಸೇವೆಯನ್ನು ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ, ದರ್ಶನ ಟಿಕೆಟ್‌ಗಳ ಬುಕ್ಕಿಂಗ್, ವಸತಿ ಸೌಲಭ್ಯಗಳ ಹಂಚಿಕೆ ಸೇರಿದಂತೆ ವಿವಿಧ ಪ್ರಮುಖ ಸೇವೆಗಳನ್ನು ವಾಟ್ಸ್ಆ್ಯಪ್ ಪ್ಲಾಟ್‌ಫಾರ್ಮ್‌ನಲ್ಲಿಯೇ ಒದಗಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಸೇವೆಯು ಭಕ್ತರು ತಮ್ಮ ಮೊಬೈಲ್ ಮೂಲಕ ‘Hi’ ಎಂಬ ಮೆಸೆಜ್ ಕಳುಹಿಸುವ ಮೂಲಕವೇ ಆರಂಭವಾಗುತ್ತದೆ. ಅಲ್ಲಿ ಅವರಿಗೆ ಹಲವು ಆಯ್ಕೆಗಳು ಲಭ್ಯವಾಗುತ್ತವೆ ಮತ್ತು ಬೇಕಾದ ಸೇವೆಗಳನ್ನು ತಕ್ಷಣವೇ ಬಳಸಬಹುದಾಗಿದೆ.

ಇದು ಭಕ್ತರ ಅನುಭವವನ್ನು ಮತ್ತಷ್ಟು ಸುಧಾರಿಸುವ ಮತ್ತು ತಿರುಪತಿ ದರ್ಶನದ ವ್ಯವಸ್ಥೆಯನ್ನು ಸುಗಮಗೊಳಿಸುವ ಮಹತ್ವದ ಹೆಜ್ಜೆಯಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಡಿಜಿಟಲ್ ಸೇವೆಗಳನ್ನು ತರಲು ಸರ್ಕಾರ ಮುಂದಾಗಿದೆ.
ಭಕ್ತರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿ ದೊಡ್ಡ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ತಿರುಪತಿಯ ವೆಂಕಟೇಶ್ವರನ ದರ್ಶನ, ವಸತಿ ಸೌಲಭ್ಯ ಸೇರಿದಂತೆ 15ಕ್ಕೂ ಹೆಚ್ಚು ಸೇವೆಗಳನ್ನು ವಾಟ್ಸ್ಆ್ಯಪ್ ಮೂಲಕವೇ ಪಡೆಯಬಹುದಾಗಿದೆ. ಈ ಹೊಸ ವ್ಯವಸ್ಥೆಯಿಂದ ಭಕ್ತರಿಗೆ ದೀರ್ಘ ಕಾಲ ಕ್ಯೂನಲ್ಲಿ ನಿಲ್ಲುವ ತೊಂದರೆಯಿಂದ ರಕ್ಷಣೆಯಾಗಲಿದೆ.
ಟಿಟಿಡಿ ಸೇವೆಗಳನ್ನು ವಾಟ್ಸ್ಆ್ಯಪ್ ಮೂಲಕ ಪಡೆಯುವ ವಿಧಾನ:
- ನಿಮ್ಮ ಮೊಬೈಲ್‌ನಲ್ಲಿ 9552300009 ಸಂಖ್ಯೆಯನ್ನು “TTD Service” ಅಥವಾ ಇಚ್ಛೆಯ ಬೇರೆ ಯಾವುದಾದರೂ ಹೆಸರಿನಿಂದ ಸೇವ್ ಮಾಡಿಕೊಳ್ಳಿ.
- ಆ ಸಂಖ್ಯೆಗೆ ವಾಟ್ಸ್ಆ್ಯಪ್‌ನಲ್ಲಿ “Hi” ಎಂಬ ಸಂದೇಶ ಕಳುಹಿಸಿ.
- ನಿಮ್ಮ ಭಾಷೆ ತೆಲುಗು ಅಲ್ಲದೇ ಬೇರೆಯಾಗಿದ್ದರೆ ಟೈಪ್ “EN” Type EN for English language
- Language changed successfully ಎಂದು ಮೆಸೇಜ್ ಬರುತ್ತದೆ.
- ಪ್ರತಿಯಾಗಿ, ನಿಮಗೆ ಎರಡು ಸಂದೇಶಗಳು ಬರಲಿವೆ:
- “ಆಂಧ್ರ ಪ್ರದೇಶ ಸರ್ಕಾರಿ ನಾಗರಿಕ ಸಹಾಯಕ ಸೇವೆಗೆ ಸ್ವಾಗತ. ನಿಮ್ಮ ಅನುಕೂಲತೆ ನಮ್ಮ ಆದ್ಯತೆಯಾಗಿದೆ. ದಯವಿಟ್ಟು ನಿಮಗೆ ಅಗತ್ಯವಿರುವ ನಾಗರಿಕ ಸೇವೆಯನ್ನು ಆರಿಸಿ.”
- ನಂತರ, ಟಿಟಿಡಿ ವತಿಯಿಂದ ಲಭ್ಯವಿರುವ ಸೇವೆಗಳ ಪಟ್ಟಿ (Services) ಬರುತ್ತದೆ.
- ದೇವಾಲಯ ದರ್ಶನ ಟಿಕೆಟ್ ಬುಕಿಂಗ್:
ಆಂಧ್ರಪ್ರದೇಶದ ವಿವಿಧ ಪ್ರಸಿದ್ಧ ದೇವಾಲಯಗಳಿಗೆ ದರ್ಶನ ಟಿಕೆಟ್ ಪಡೆಯಿರಿ. - ವಿಶೇಷ ಸೇವಾ ಬುಕಿಂಗ್‌ಗಳು:
ದೈವಿಕ ಆಶೀರ್ವಾದಕ್ಕಾಗಿ ವಿಶೇಷ ಪೂಜೆಗಳು,ಅರ್ಚನೆ ಮತ್ತು ಸೇವೆಗಳನ್ನು ಬುಕ್ ಮಾಡಬಹುದು. - ವಸತಿ ಬುಕಿಂಗ್:
ದೇವಾಲಯದ ಸಮೀಪ ಇರುವ ವಸತಿಗಾಗಿ ಟಿಕೆಟ್ ಬುಕ್ ಮಾಡಿ, ತೊಂದರೆ ರಹಿತವಾಗಿ ವಾಸಿಸಲು ಅವಕಾಶ ಪಡೆಯಿರಿ. - ನಿಮಗೆ ಬೇಕಾದ ಸೇವೆಯ ಆಪ್ಶನ್ ಆಯ್ಕೆಮಾಡಿ, ಟಿಕೆಟ್ ಅಥವಾ ಸೇವೆ ಬುಕಿಂಗ್ ಮಾಡಿ ಮತ್ತು ಅಲ್ಲಿಯೇ ಪೇಮೆಂಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಇದರ ಹೊರತಾಗಿ, ಟಿಟಿಡಿ ವಾಟ್ಸ್ಆ್ಯಪ್ ಸೇವೆಯಲ್ಲಿ ಇನ್ನೂ ನಾಲ್ಕು ಮುಖ್ಯ ಸೇವೆಗಳು ಲಭ್ಯವಿದ್ದು, ಅವುಗಳ ವಿವರ ಇಲ್ಲಿದೆ:
- ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಥಿತಿ (Slotted Sarvadarshan Live Status):
- ತಿರುಪತಿಯಲ್ಲಿ ಸ್ಲಾಟೆಡ್ ಸರ್ವದರ್ಶನ ಟೋಕನ್‌ಗಳ ಲಭ್ಯತೆ ಮತ್ತು ನೀಡಲಾದ ಕೋಟಾಗಳ ಬಗ್ಗೆ ನವೀಕರಿತ ಮಾಹಿತಿಯನ್ನು ಪಡೆಯಬಹುದು.
- ಸರ್ವದರ್ಶನ ಲೈವ್ ಸ್ಥಿತಿ (Sarvadarshan Live Status):
- ವೈಕುಂಠಂ ಕ್ಯೂ ಕಾಂಪ್ಲೆಕ್ಸ್-2 ರಲ್ಲಿರುವ ವಿಭಿನ್ನ ಕ್ಯೂ ಕಂಪಾರ್ಟ್‌ಮೆಂಟ್‌ಗಳ ಮಾಹಿತಿ, ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಕಾಯುತ್ತಿರುವ ಭಕ್ತರ ಸಂಖ್ಯೆ ಹಾಗೂ ಅಂದಾಜು ಕಾಯುವ ಸಮಯದ ಬಗ್ಗೆ ಲೈವ್ ಅಪ್‌ಡೇಟ್‌ಗಳನ್ನು ಪಡೆಯಬಹುದು.
- ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಥಿತಿ (Sri Vani Trust Live Status): ತಿರುಮಲದಲ್ಲಿ ಲಭ್ಯವಿರುವ ಶ್ರೀ ವಾಣಿ ಟ್ರಸ್ಟ್ ಲಭ್ಯತೆ, ದರ ಮತ್ತು ಬುಕ್ಕಿಂಗ್ ಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬಹುದು.
- ಮುಂಗಡ ಠೇವಣಿ ಮರುಪಾವತಿ ಲೈವ್ ಸ್ಥಿತಿ (Advance Deposit Refund Live Status): ಕೊಠಡಿಗಳ ಹಂಚಿಕೆಗೆ ನೀಡಿದ ಮುಂಗಡ ಠೇವಣಿಯ ಮರುಪಾವತಿ ಸ್ಥಿತಿಯನ್ನು ವೀಕ್ಷಿಸಬಹುದು.
More News/ ಇನ್ನಷ್ಟು ಸುದ್ದಿ ಓದಿ:
ತಿರುಪತಿ ದೇವಸ್ಥಾನಕ್ಕೆ ಬೆಂಗಳೂರು ಭಕ್ತನ ವಿಶಿಷ್ಟ ದಾನ: ಅನ್ನಸೇವೆಗೆ 2 ಲಘು ವಾಹನಗಳ ದೇಣಿಗೆ
ಈ ಸೇವೆ ಯಾಕೆ ಮಹತ್ವದದ್ದು?
ಪ್ರತಿದಿನ ಲಕ್ಷಾಂತರ ಭಕ್ತರು ತಿರುಪತಿ ದರ್ಶನಕ್ಕಾಗಿ ಆಗಮಿಸುತ್ತಾರೆ. ಆನ್‌ಲೈನ್ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಕೊನೆಗೊಳ್ಳುತ್ತವೆ. ಅತಿಥಿಗಳ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, TTD ಈ ಹೊಸ ವ್ಯವಸ್ಥೆಯ ಮೂಲಕ ಟಿಕೆಟ್ ಬುಕ್ಕಿಂಗ್, ವಸತಿ ಹಂಚಿಕೆ, ದರ್ಶನ ಸ್ಥಿತಿ ಹೀಗೆ ಎಲ್ಲ ಮಾಹಿತಿಯನ್ನು ಸುಲಭವಾಗಿ ನೀಡುತ್ತಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಪೋರ್ಟ್:
ಇತ್ತೀಚೆಗಷ್ಟೆ ತಿರುಪತಿಗೆ ಭೇಟಿ ನೀಡಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತೀರ್ಥಯಾತ್ರೆ ಅನುಭವವನ್ನು ಸುಧಾರಿಸಲು ಈ ಸೇವೆಗೆ ಹಸಿರು ನಿಶಾನೆ ತೋರಿಸಿದ್ದರು. ಇದನ್ನು ಮೊದಲು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗಿದ್ದು, ಈಗ ಅಧಿಕೃತವಾಗಿ ಆರಂಭವಾಗಿದೆ.
ನಿಮಗೂ ದರ್ಶನ ಸುಲಭವಾಗಲಿ:
ಇನ್ನು ಮುಂದೆ ತಿರುಪತಿಗೆ ಹೋಗುವ ಮುನ್ನವೇ ನಿಮ್ಮ ಮೊಬೈಲ್‌ನಲ್ಲಿ ದರ್ಶನ ಟಿಕೆಟ್, ವಸತಿ ಬುಕ್ ಮಾಡಿ, ಕ್ಯೂನಲ್ಲಿ ನಿಲ್ಲುವ ತೊಂದರೆ ಇಲ್ಲದ ತೀರ್ಥಯಾತ್ರೆ ಅನುಭವಿಸಬಹುದು.
ಟಿಟಿಡಿಯ ಈ ಹೊಸ ಸೇವೆ ಭಕ್ತರಲ್ಲಿ ಹರ್ಷ ಉಂಟುಮಾಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಡಿಜಿಟಲ್ ಸುಧಾರಣೆಗಳನ್ನು ತರಲಿದ್ದಾರೆ ಎಂಬ ನಿರೀಕ್ಷೆ ಇದೆ.
More News/ ಇನ್ನಷ್ಟು ಸುದ್ದಿ ಓದಿ:
ಸ್ಕೂಟರ್‌ನಲ್ಲಿ ತಾಯಿಯ ತೀರ್ಥಯಾತ್ರೆ – 4 ವರ್ಷಗಳಲ್ಲಿ 92,000 ಕಿಮೀ ಸುತ್ತಿದ ಮೈಸೂರಿನ ಮಗ!
ಅಯೋಧ್ಯೆ ರಾಮನವಮಿ ದಿನದಂದೇ ಬಾಲ ರಾಮನಿಗೆ ‘ಸೂರ್ಯ ತಿಲಕ’ ತಂತ್ರಜ್ಞಾನ ಯಶಸ್ವಿ: ಸಿಬಿಆರ್‌ಐ ವಿಜ್ಞಾನಿಗಳಿಂದ ಮಾಹಿತಿ
ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇
2 thoughts on “ತಿರುಪತಿ ವೆಂಕಟೇಶನ ದರ್ಶನದ ಟಿಕೆಟ್‌ಗಾಗಿ ಇನ್ನು ಕ್ಯೂ ಬೇಡ! ವಾಟ್ಸ್ಆ್ಯಪ್‌ನಲ್ಲೇ ದರ್ಶನ ಟಿಕೆಟ್/ ವಸತಿ ಸೇರಿದಂತೆ 15 ಸೇವೆಗಳು ಲಭ್ಯ!”