UIDAI: ದೇಶಾದ್ಯಂತ 7 ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಬಯೋಮೆಟ್ರಿಕ್‌ಗಳನ್ನು ನವೀಕರಿಸಿಲ್ಲ ಎಂದು UIDAI ತಿಳಿಸಿದೆ ಹಾಗೂ ಶೀಘ್ರದಲ್ಲೇ ನಿಮ್ಮ ಮಗುವಿನ ಆಧಾರ್ ನಿಷ್ಕ್ರಿಯವಾಗಬಹುದು ಎಂಬ ಭೀತಿ ಇದೆಯೇ? ಭಯ ಬೇಡ UIDAI ಇದೀಗ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ — 5 ವರ್ಷ ತುಂಬಿದ ಮಕ್ಕಳ ಬಯೋಮೆಟ್ರಿಕ್ ನವೀಕರಣವನ್ನು ನೇರವಾಗಿ ಶಾಲೆಗಳಲ್ಲಿಯೇ ಆರಂಭಿಸಲು ಯೋಜನೆ ರೂಪಿಸಿದೆ! ಇಲ್ಲಿದೆ ಅದರ ಸಂಪೂರ್ಣ ಮಾಹಿತಿ ನೋಡಿ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಶೀಘ್ರದಲ್ಲೇ ಶಾಲೆಗಳ ಮೂಲಕ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ದೇಶಾದ್ಯಂತ 7 ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಬಯೋಮೆಟ್ರಿಕ್‌ಗಳನ್ನು ನವೀಕರಿಸಿಲ್ಲ ಎಂದು UIDAI ತಿಳಿಸಿದೆ.
UIDAI ಸಿಇಒ ಭುವನೇಶ್ ಕುಮಾರ್ ಅವರು, ಮುಂದಿನ ಎರಡು ತಿಂಗಳೊಳಗೆ ಈ ಯೋಜನೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಪಿಟಿಐಗೆ ತಿಳಿಸಿದ್ದಾರೆ. “ಪೋಷಕರ ಒಪ್ಪಿಗೆಯೊಂದಿಗೆ ಶಾಲೆಗಳ ಮೂಲಕ ಮಕ್ಕಳ ಬಯೋಮೆಟ್ರಿಕ್ಸ್ ಅನ್ನು ನವೀಕರಿಸಲು ಯುಐಡಿಎಐ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದೆ. ಪ್ರಸ್ತುತ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದ್ದು, ಅದು 45-60 ದಿನಗಳಲ್ಲಿ ಸಿದ್ಧವಾಗಲಿದೆ” ಎಂದು ಕುಮಾರ್ ಮಾಹಿತಿ ನೀಡಿದರು.
ಯಾಕೆ ಈ UIDAI ನವೀಕರಣ ಕಡ್ಡಾಯ?
- ಐದು ವರ್ಷ ವಯಸ್ಸಾದ ಮಕ್ಕಳಿಗೆ ಮೊದಲ ಬಯೋಮೆಟ್ರಿಕ್ ನವೀಕರಣ (MBU) ಅಗತ್ಯ.
- ಎಷ್ಟು ಬೇಗ ನವೀಕರಣ ಮಾಡಿದರೆ, ಅಷ್ಟು ಬೇಗ ಆಧಾರ್ ಸಹಿತ ಎಲ್ಲಾ ಸರ್ಕಾರೀ ಸೇವೆಗಳ ಲಾಭವನ್ನು ನಿರಂತರವಾಗಿ ಪಡೆಯಬಹುದು.
- 7 ವರ್ಷ ತುಂಬಿದ ನಂತರವೂ ನವೀಕರಣ ಮಾಡದಿದ್ದರೆ ಆಧಾರ್ ನಿಷ್ಕ್ರಿಯವಾಗಬಹುದು ಎಂಬ ಎಚ್ಚರಿಕೆಯನ್ನು UIDAI ಈಗಾಗಲೇ ನೀಡಿದೆ.
UIDAI ನವೀಕರಣ ಶುಲ್ಕ ಎಷ್ಟು?
- 5-7 ವರ್ಷ ವಯಸ್ಸಿನ ಮಕ್ಕಳಿಗೆ ನವೀಕರಣ ಉಚಿತ ಇರುತ್ತದೆ.
- ಆದರೆ 7 ವರ್ಷ ಬಳಿಕ ಅಥವಾ ಬಯೋಮೆಟ್ರಿಕ್ ಡೇಟಾ ದೋಷದಿರುವ ಮಕ್ಕಳಿಗೆ ₹100 ನವೀಕರಣ ಶುಲ್ಕ ವಿಧಿಸಲಾಗುತ್ತದೆ.
ಶಾಲೆಗಳಲ್ಲಿ ನೇರವಾಗಿ UIDAI ನವೀಕರಣ ಹೇಗೆ ಮಾಡಲಾಗುತ್ತದೆ?
UIDAI ಈ ಬಾರಿಯ ಹೊಸ ಹೆಜ್ಜೆ ಇಟ್ಟಿದ್ದು ಶಾಲೆಗಳಲ್ಲಿ ನೇರವಾಗಿ UIDAI ನವೀಕರಣ ಹೇಗೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
- ಪೋಷಕರ ಸ್ಪಷ್ಟ ಅನುಮತಿಯೊಂದಿಗೆ ಮಕ್ಕಳ ಬೆರಳಚ್ಚು, ನೇತ್ರ ಸ್ಕ್ಯಾನ್ ಸೇರಿದ ಡೇಟಾ ನವೀಕರಿಸಲಾಗುತ್ತದೆ.
- ನವೀಕರಿತ ಡೇಟಾ UIDAI ಆಧಾರದ ಆಧಾರದ ಮೇಲೆ ನವೀಕರಿಸಲಾಗುತ್ತದೆ.
ಮತ್ತೊಂದು ಮಹತ್ವದ ಹಂತ: 15 ವರ್ಷಕ್ಕೆ ಮತ್ತೊಂದು ಬದಲಾವಣೆ:
UIDAI, ಈಗಾಗಲೇ 15 ವರ್ಷ ತುಂಬಿದ ಮಕ್ಕಳ ಬಯೋಮೆಟ್ರಿಕ್ ನವೀಕರಣದ ಆಯ್ಕೆಗೂ ಸಿದ್ಧತೆ ನಡೆಸುತ್ತಿದೆ. ಇದು ಶಾಲೆ ಮತ್ತು ಕಾಲೇಜುಗಳ ಮೂಲಕ ನಡೆಯಲಿದ್ದು, ಎಲ್ಲಾ ಡಿಜಿಟಲ್ ದಾಖಲೆಗಳ ನಿಖರತೆಯನ್ನು ಖಚಿತಪಡಿಸಲಿದೆ.
ಪೋಷಕರಿಗೆ ಸಲಹೆ:
UIDAI ಮೂಲದ ಪ್ರಕಾರ, ದೇಶದಾದ್ಯಾಂತ 7 ಕೋಟಿಗೂ ಹೆಚ್ಚು ಮಕ್ಕಳ ಬಯೋಮೆಟ್ರಿಕ್ ನವೀಕರಣ ಬಾಕಿಯಿದೆ ಹಾಗಾಗಿ,
- ಮಗುವಿಗೆ 5 ವರ್ಷ ತುಂಬಿದರೆ ಆಧಾರ್ ನವೀಕರಣ ಗಂಭೀರವಾಗಿ ಪರಿಗಣಿಸಿ ಕೂಡಲೇ ನವೀಕರಣ ಮಾಡಿಸಿಕೊಳ್ಳಿ.
- ಶಾಲೆಯ ಮೂಲಕ ಪ್ರಾರಂಭವಾಗುವ ಈ ಯೋಜನೆಯ ಮಾಹಿತಿಗೆ ನಿರಂತರವಾಗಿ ಗಮನ ನೀಡಿ.
- UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ.
Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button