Union Bank Recruitment 2025: ಯೂನಿಯನ್ ಬ್ಯಾಂಕ್ 250 ವೆಲ್ತ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 25, ಈಗಲೇ ಅರ್ಜಿ ಸಲ್ಲಿಸಿ! ಹುದ್ದೆಗಳ ವಿವರ, ಅರ್ಜಿ ಸಲ್ಲಿಸಲು ಅರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಸುವ ವಿಧಾನಗಳ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಮಾಹಿತಿಯನ್ನು ಓದಿ.
ಬೆಂಗಳೂರು, ಆಗಸ್ಟ್ 5, 2025: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಆಕಾಂಕ್ಷಿಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಸುವರ್ಣಾವಕಾಶವನ್ನು ನೀಡಿದೆ. ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವೆಲ್ತ್ ಮ್ಯಾನೇಜರ್ (ವಿಶೇಷ ಅಧಿಕಾರಿಗಳು – SO) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 250 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 5, 2025 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 25, 2025 ಆಗಿದೆ.
Union Bank Recruitment 2025: ಹುದ್ದೆಗಳ ವಿವರ:
- ಒಟ್ಟು ಹುದ್ದೆಗಳು: 250
- ಹುದ್ದೆಯ ಹೆಸರು: ವೆಲ್ತ್ ಮ್ಯಾನೇಜರ್ (JMGS-I)
- ವರ್ಗವಾರು ಹುದ್ದೆ ಹಂಚಿಕೆ:
- ಸಾಮಾನ್ಯ (UR): 103
- ಓಬಿಸಿ: 67
- ಎಸ್‌ಸಿ: 37
- ಎಸ್‌ಟಿ: 18
- ಇಡಬ್ಲ್ಯೂಎಸ್: 25
Union Bank Recruitment 2025: ಅರ್ಹತಾ ನಿಯಮಗಳು:
- ವಯೋಮಿತಿ: ಕನಿಷ್ಠ 25 ವರ್ಷದಿಂದ ಗರಿಷ್ಠ 35 ವರ್ಷದವರೆಗೆ
- ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ MBA/PGDM/PGDBA ಮುಂತಾದ ಸ್ನಾತಕೋತ್ತರ ಡಿಗ್ರಿ (ಪೂರ್ಣಕಾಲಿಕ) ಹೊಂದಿರಬೇಕು
- ಅನುಭವ: ಕನಿಷ್ಠ 3 ವರ್ಷಗಳ ವೆಲ್ತ್ ಮ್ಯಾನೇಜ್ಮೆಂಟ್ ಅನುಭವ ಅವಶ್ಯಕ. ಬ್ಯಾಂಕ್, ಬೋಕಿಂಗ್ ಕಂಪನಿಗಳು, ಮ್ಯೂಚುವಲ್ ಫಂಡ್ ಸಂಸ್ಥೆಗಳು ಅಥವಾ AMCs ಗಳಲ್ಲಿ ಅನುಭವ ಹೊಂದಿರಬೇಕು
- ಆದ್ಯತೆ: NISM, AMFI, IRDAI ನಂತಾದ ಪ್ರಮಾಣಪತ್ರಗಳು ಇದ್ದರೆ ಆದ್ಯತೆ
ಅರ್ಜಿ ಶುಲ್ಕ:
- SC/ST/PwBD ಅಭ್ಯರ್ಥಿಗಳು: ₹177 (ಜಿಎಸ್‌ಟಿಯೊಂದಿಗೆ)
- ಇತರೆ ಎಲ್ಲಾ ವರ್ಗಗಳು: ₹1,180 (ಜಿಎಸ್‌ಟಿಯೊಂದಿಗೆ)
ಆಯ್ಕೆ ವಿಧಾನ:
- ಆನ್‌ಲೈನ್ ಪರೀಕ್ಷೆ (ವೃತ್ತಿಪರ ಜ್ಞಾನ, ಅಂಕಗಣಿತ, ಲಾಜಿಕ್, ಇಂಗ್ಲಿಷ್)
- ಗುಂಪು ಚರ್ಚೆ (ಆವಶ್ಯಕತೆ ಇದ್ದರೆ)
- ವೈಯಕ್ತಿಕ ಸಂದರ್ಶನ
- ಇವೆಲ್ಲದ ಆಧಾರದಲ್ಲಿ ಅಂತಿಮ ಆಯ್ಕೆ
Union Bank Wealth Manager Recruitment 2025: ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
- ಮೊದಲಿಗೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ (www.unionbankofindia.co.in) ಭೇಟಿ ನೀಡಿ.
- ವೆಬ್‌ಸೈಟ್‌ನ ಮುಖ್ಯ ಪುಟದಲ್ಲಿರುವ ‘Careers/Recruitment’ ವಿಭಾಗದ ಮೇಲೆ ಕ್ಲಿಕ್ ಮಾಡಿ.
- ನಂತರ ‘Recruitment of Wealth Managers (Specialist Officers)’ ಲಿಂಕ್ ಅನ್ನು ಹುಡುಕಿ, ಅದರ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಲಭ್ಯವಿರುವ “Click here for Apply Online” ಲಿಂಕ್ ಮೂಲಕ ಅರ್ಜಿ ನಮೂನೆ ಪುಟಕ್ಕೆ ತೆರಳಿ.
- ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ, ಅಥವಾ ಈಗಾಗಲೇ ನೋಂದಾಯಿಸಿದ್ದಲ್ಲಿ ಲಾಗಿನ್ ಆಗಿ.
- ಅರ್ಜಿಯಲ್ಲಿ ಕೇಳಲಾಗಿರುವ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವದ ಮಾಹಿತಿಗಳನ್ನು ನಿಖರವಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ.
- ಅಂತಿಮವಾಗಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.
ಈ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಬೇಕಿದ್ದರೆ, ಅರ್ಜಿದಾರರು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಬೇಕು.
Important Links /Dates:
Union Bank Wealth Manager Recruitment 2025 official Website/ ಯೂನಿಯನ್ ಬ್ಯಾಂಕ್ ವೆಲ್ತ್ ಮ್ಯಾನೇಜರ್ ಹುದ್ದೆಗಳ ಅಧಿಕೃತ ವೆಬ್‌ಸೈಟ್ | Official Website: Click Here Click Here Apply On-line |
---|---|
Union Bank Wealth Manager Recruitment 2025 Detailed Advertisement/ ಯೂನಿಯನ್ ಬ್ಯಾಂಕ್ ವೆಲ್ತ್ ಮ್ಯಾನೇಜರ್ ಹುದ್ದೆಗಳ ಅಧಿಸೂಚನೆ | Click Here for Notification PDF |
Last Date | 25/08/2025 |
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
BoB LBO Recruitment : ಬ್ಯಾಂಕ್ ಆಫ್ ಬರೋಡಾದಿಂದ 2500 ಲೋಕಲ್ ಬ್ಯಾಂಕ್ ಆಫೀಸರ್‌ಗಳ ನೇಮಕಾತಿ!
DRDO Apprentice Training 2025: : ಡಿಪ್ಲೊಮಾ, ಐಟಿಐ ಆದವರಿಗೆ ಮೈಸೂರು ಡಿಆರ್‌ಡಿಒದಲ್ಲಿ ಅಪ್ರೆಂಟೀಸ್‌ಶಿಪ್ ಅವಕಾಶ!
IBPS PO SO Recruitment 2025:ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ: IBPS 6215 ಹುದ್ದೆಗಳಿಗೆ ಅರ್ಜಿ!
AFCAT 2025: ಭಾರತೀಯ ವಾಯುಪಡೆಯ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button