Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ಇರಾನ್ ಮೇಲೆ ಅಮೆರಿಕದ ಫೈನಲ್ ಅಟ್ಯಾಕ್? “ಶಿಲಾಯುಗಕ್ಕೆ ತಳ್ಳುತ್ತೇವೆ” ಎಂದ ಟ್ರಂಪ್! ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಸಾಧ್ಯತೆ!

  • Picture of Gundijalu Shwetha By Gundijalu Shwetha
  • Published On: April 2, 2026
US Iran War: 'ಇರಾನ್‌ನನ್ನು ಶಿಲಾಯುಗಕ್ಕೆ ತಳ್ಳುತ್ತೇವೆ': ಅಮೆರಿಕ ಅಧ್ಯಕ್ಷ ಟ್ರಂಪ್ ಖಡಕ್ ವಾರ್ನಿಂಗ್! ಮುಂದಿನ 3-4 ವಾರಗಳಲ್ಲಿ ಮುಗಿಯುತ್ತೆ ಯುದ್ಧ!

US Iran War: ಇರಾನ್ ವಿರುದ್ಧದ ಯುದ್ಧದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, “ಇರಾನ್ ಅನ್ನು ಶಿಲಾಯುಗಕ್ಕೆ ತಳ್ಳುತ್ತೇವೆ” ಎಂದು ಎಚ್ಚರಿಸಿದ್ದಾರೆ. ‘ಆಪರೇಷನ್ ಎಪಿಕ್ ಫ್ಯೂರಿ’, ತೈಲ ಬೆಲೆ ಏರಿಕೆ (Global Oil Crisis), ಮತ್ತು ಮಿತ್ರ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ವಾರ್ನಿಂಗ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇರಾನ್ ಮೇಲೆ ಟ್ರಂಪ್ ಆಕ್ರೋಶ: “ನಿಮ್ಮನ್ನ ಶಿಲಾಯುಗಕ್ಕೆ ತಳ್ಳುತ್ತೇವೆ” ಎಂದು ಗುಡುಗಿದ ಅಮೆರಿಕ ಅಧ್ಯಕ್ಷ!

ನಮಸ್ಕಾರ ಸ್ನೇಹಿತರೆ. ಮಧ್ಯಪ್ರಾಚ್ಯದಲ್ಲಿ (Middle East) ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗುತ್ತಿದ್ದು, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ನಿರ್ಣಾಯಕ ಹಂತ ತಲುಪಿದೆ. ಇಡೀ ಜಗತ್ತೇ ಆತಂಕದಿಂದ ನೋಡುತ್ತಿರುವ ಈ ಯುದ್ಧದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಇರಾನ್‌ಗೆ ಅತ್ಯಂತ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಇರಾನ್ ಮೇಲಿನ ದಾಳಿ ಮತ್ತಷ್ಟು ತೀವ್ರಗೊಳ್ಳಲಿದೆ, ಅವರನ್ನು ನಾವು ಮತ್ತೆ ಶಿಲಾಯುಗಕ್ಕೆ (Stone Age) ತಳ್ಳುತ್ತೇವೆ” ಎಂದು ಟ್ರಂಪ್ ಗುಡುಗಿದ್ದಾರೆ.

WhatsApp Channel
Join Now
Telegram Channel
Join Now

‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಮುಂದುವರಿಕೆ !

ಟ್ರಂಪ್ ತಮ್ಮ ಭಾಷಣದಲ್ಲಿ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. “ನಮ್ಮ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಯಶಸ್ವಿಯಾಗಿ ಮುಂದುವರಿಯುತ್ತಿದೆ. ಮುಂದಿನ 2 ರಿಂದ 3 ವಾರಗಳಲ್ಲಿ ಅಮೆರಿಕ ಅತ್ಯಂತ ಕಠಿಣ ನಿಲುವನ್ನು ತಳೆಯಲಿದೆ. ಇರಾನ್ ಒಂದು ವೇಳೆ ಮಾತುಕತೆಗೆ ಬರದಿದ್ದರೆ, ಅವರ ದೇಶದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳ (Power Plants) ಮೇಲೆ ನಾವು ಏಕಕಾಲಕ್ಕೆ ಭೀಕರ ದಾಳಿ ನಡೆಸಲಿದ್ದೇವೆ” ಎಂದು ಬೆದರಿಕೆ ಹಾಕಿದ್ದಾರೆ.

ಕಳೆದ ನಾಲ್ಕು ವಾರಗಳಲ್ಲಿ ಅಮೆರಿಕದ ಸೈನ್ಯವು ಯುದ್ಧಭೂಮಿಯಲ್ಲಿ ಹಿಂದೆಂದೂ ಕಾಣದಂತಹ ನಿರ್ಣಾಯಕ ಜಯ ಸಾಧಿಸಿದೆ. ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ಈಗಾಗಲೇ ಸಂಪೂರ್ಣವಾಗಿ ನಾಶವಾಗಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

US Iran War: ‘ಇರಾನ್‌ನನ್ನು ಶಿಲಾಯುಗಕ್ಕೆ ತಳ್ಳುತ್ತೇವೆ’: ಅಮೆರಿಕ ಅಧ್ಯಕ್ಷ ಟ್ರಂಪ್ ಖಡಕ್ ವಾರ್ನಿಂಗ್! ಮುಂದಿನ 3-4 ವಾರಗಳಲ್ಲಿ ಮುಗಿಯುತ್ತೆ ಯುದ್ಧ!

ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಭಾರತದ ಬಿಗ್ ವಿಕ್ಟರಿ: ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಗ್ರೀನ್ ಸಿಗ್ನಲ್ – ಇನ್ಮುಂದೆ ಗ್ಯಾಸ್ ಕೊರತೆ ಇರಲ್ಲ?

ಮಿತ್ರ ರಾಷ್ಟ್ರಗಳಿಗೆ ಟ್ರಂಪ್ ವಾರ್ನಿಂಗ್!

ಕೇವಲ ಇರಾನ್‌ಗೆ ಮಾತ್ರವಲ್ಲ, ಅಮೆರಿಕಕ್ಕೆ ಸಾಥ್ ನೀಡದ ಮಿತ್ರ ರಾಷ್ಟ್ರಗಳ ವಿರುದ್ಧವೂ ಟ್ರಂಪ್ ಕೆಂಡಾಮಂಡಲವಾಗಿದ್ದಾರೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದ ಸಂದರ್ಭದಲ್ಲಿ ಕೆಲವು ಪ್ರಮುಖ ಮಿತ್ರ ರಾಷ್ಟ್ರಗಳು ಹಿಂದೆ ಸರಿದಿದ್ದವು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, “ಒಂದೋ ಅಮೆರಿಕದಿಂದ ತೈಲ ಖರೀದಿಸಿ, ಇಲ್ಲವೇ ಸ್ವಲ್ಪ ಧೈರ್ಯ ಬೆಳೆಸಿಕೊಂಡು ಹಾರ್ಮುಜ್ ಜಲಸಂಧಿಗೆ ಹೋಗಿ ತೈಲವನ್ನು ನೀವೇ ಕಿತ್ತುಕೊಳ್ಳಿ. ತಮಗಾಗಿ ಹೋರಾಡುವುದನ್ನು ಮಿತ್ರ ರಾಷ್ಟ್ರಗಳು ಕಲಿಯಬೇಕು, ನಮಗೆ ಸಹಾಯ ಮಾಡದವರಿಗೆ ನಾವು ಸಹಾಯ ಮಾಡುವುದಿಲ್ಲ” ಎಂದು ನೇರವಾಗಿ ಚಾಟಿ ಬೀಸಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಗೆ ಬಿಗ್ ಆಘಾತ! (Global Oil Crisis)

ಈ ಯುದ್ಧದ ಅತ್ಯಂತ ಭೀಕರ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯ (Oil Market) ಮೇಲೆ ಉಂಟಾಗುತ್ತಿದೆ. ಜಗತ್ತಿನ ಶೇ. 32 ರಷ್ಟು ಕಚ್ಚಾ ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಹಿಡಿತವನ್ನು ಮುಂದುವರಿಸಿದೆ. ಇರಾನ್ ಈ ಮಾರ್ಗವನ್ನು ಬಂದ್ ಮಾಡಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುತ್ತಿದೆ. ಹೋರಾಟ ತೀವ್ರಗೊಂಡರೆ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 150 ಡಾಲರ್ ದಾಟುವ ಸಾಧ್ಯತೆಯಿದೆ. ಇದು ಭಾರತದಂತಹ ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಲು ಕಾರಣವಾಗಬಹುದು. ಟ್ರಂಪ್ ಭಾಷಣದ ನಂತರವೇ ಕಚ್ಛಾ ತೈಲದ ಬೆಲೆ ಬ್ಯಾರೆಲ್‌ಗೆ 103 ಡಾಲರ್ ಮುಟ್ಟಿದೆ!

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಕೊರತೆ ಅಂತ ಭಯಪಡ್ತಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗ್ಯಾಸ್ ಖಾಲಿ ಎಂಬ ವದಂತಿಗಳ ಹಿಂದಿನ ಅಸಲಿ ಸತ್ಯ ಏನು?

ಅಮೆರಿಕದ ಭೂಸೇನಾ ದಾಳಿ? (Ground Invasion)

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಕೇವಲ ವಾಯುದಾಳಿಯಲ್ಲದೆ, ಭೂಸೇನಾ ದಾಳಿ (Ground Invasion) ನಡೆಸಲು ಸಜ್ಜಾಗಿದ್ದಾರೆ ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ. ಈಗಾಗಲೇ 57,000 ಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಈ ಪ್ರಾಂತ್ಯದಲ್ಲಿ ಜಮಾಯಿಸಿದ್ದಾರೆ. ಒಂದು ವೇಳೆ ಅಮೆರಿಕ ಭೂಸೇನಾ ದಾಳಿ ನಡೆಸಿದರೆ, ಇದು ಅಮೆರಿಕಕ್ಕೆ ಆರ್ಥಿಕವಾಗಿ ಮತ್ತು ಮಾನವ ಶಕ್ತಿಯ ದೃಷ್ಟಿಯಿಂದ ಭಾರಿ ನಷ್ಟ ಉಂಟುಮಾಡಲಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಇರಾನ್ ತನ್ನ ‘ಶಾಹೀದ್’ ಡ್ರೋನ್‌ಗಳನ್ನು ಬಳಸಿ ಅಮೆರಿಕಕ್ಕೆ ತಿರುಗೇಟು ನೀಡುವ ಸಾಧ್ಯತೆಯಿದೆ.

ಟ್ರಂಪ್ ಭಾಷಣದ 15 ಪ್ರಮುಖ ಅಂಶಗಳು:

  1. ಯುದ್ಧವು ಕೊನೆಯ ಹಂತದಲ್ಲಿದೆ.
  2. ಇನ್ನು 3-4 ವಾರಗಳಲ್ಲಿ ಅಮೆರಿಕ ಇರಾನ್ ಮೇಲೆ ತೀವ್ರವಾದ ದಾಳಿ ನಡೆಸಲಿದೆ.
  3. ಇರಾನ್‌ನ ನ್ಯೂಕ್ಲಿಯರ್ ಹಾಗೂ ಇತರೆ ಪ್ರಾಬಲ್ಯವನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದು ಅಮೆರಿಕದ ಗುರಿ.
  4. ರಾಜತಾಂತ್ರಿಕತೆ ವಿಫಲವಾಗಿದ್ದರಿಂದ ಯುದ್ಧ ಅನಿವಾರ್ಯವಾಯಿತು.
  5. ಇರಾನ್‌ನ ವಾಯುದಳ, ನೌಕಾದಳ ಸಂಪೂರ್ಣವಾಗಿ ದುರ್ಬಲವಾಗಿದೆ.
  6. ಇವತ್ತಿನ ಜಾಗತಿಕ ಶಕ್ತಿ ಬಿಕ್ಕಟ್ಟಿಗೆ (Energy Crisis) ಇರಾನ್ ಕಾರಣ.
  7. ಇಸ್ರೇಲ್ ಹಾಗೂ ಕೊಲ್ಲಿ ದೇಶಗಳ ಸಹಾಯ ಶ್ಲಾಘನೀಯ.
  8. ಹಾರ್ಮೊಜ್ ಜಲಸಂಧಿಯನ್ನು ತೆರವುಗೊಳಿಸಲು ಉಳಿದ ದೇಶಗಳು ಸಹಾಯ ಮಾಡಬೇಕು.
  9. ಅಮೆರಿಕ ಇನ್ನು ಮುಂದೆ ಇರಾನ್‌ನ ಶಕ್ತಿ ಮೂಲಗಳ ಮೇಲೆ (Power plants) ಪ್ರಹಾರ ನಡೆಸಲಿದೆ.
  10. ಈ ಯುದ್ಧವು ಅಮೆರಿಕದ ಭವಿಷ್ಯದ ಪೀಳಿಗೆಯನ್ನು ರಕ್ಷಿಸಲಿದೆ.
  11. ಅಮೆರಿಕವು ಇರಾನ್‌ ಅನ್ನು ಶಿಲಾಯುಗಕ್ಕೆ ಕಳುಹಿಸಲಿದೆ.
  12. ಭವಿಷ್ಯದಲ್ಲಿ ಅಮೆರಿಕ ಹಾರ್ಮೊಜ್ ಜಲಸಂಧಿಯಿಂದ ಕಚ್ಛಾತೈಲವನ್ನು ಆಮದು ಮಾಡಿಕೊಳ್ಳುವುದಿಲ್ಲ.
  13. ಇರಾನ್‌ನ ಆಂತರಿಕ ದಂಗೆಯಲ್ಲಿ 45,000 ಜನರು ಜೀವ ಕಳೆದುಕೊಂಡಿದ್ದಾರೆ, ಅದಕ್ಕೆ ಅಲ್ಲಿಯ ಸರ್ಕಾರವೇ ಕಾರಣ.
  14. ಸುಲೆಮಾನಿಯನ್ನು ಕೊಂದಿದ್ದು ಮಹತ್ತರ ಹೆಜ್ಜೆ.
  15. ಅಮೆರಿಕದ ಷೇರು ಮಾರುಕಟ್ಟೆ (Stock Market) ಸರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ!

ಒಟ್ಟಾರೆಯಾಗಿ, ಈ ಯುದ್ಧವು ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿದಿಲ್ಲ. ಇದು ಇಡೀ ಜಗತ್ತಿನ ಆರ್ಥಿಕತೆ, ತೈಲ ಬೆಲೆ ಮತ್ತು ಭದ್ರತೆಯ ಮೇಲೆ ಭಾರಿ ಪರಿಣಾಮ ಬೀರಲಿದೆ. ಮುಂದಿನ 3-4 ವಾರಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು! WhatsApp, Facebook & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now

ಸರ್ಕಾರಿ ಉದ್ಯೋಗಗಳ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತ ಹಾಗೂ ಆರೋಗ್ಯ ಮತ್ತು ಹೆಲ್ತ್ ಟಿಪ್ಸ್ ಗಳ ಬಗ್ಗೆ/ಪ್ರಮುಖ ಅಂತಾರಾಷ್ಟ್ರೀಯ ಮತ್ತು ಆರ್ಥಿಕ ಸುದ್ದಿಗಳಿಗಾಗಿ quicknewztoday.com  ಭೇಟಿ ಮಾಡಿ.

Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

NHAI Summer Internship 2026: ವಿದ್ಯಾರ್ಥಿಗಳಿಗೆ NHAI ನಿಂದ ಬಂಪರ್ ಆಫರ್! ತಿಂಗಳಿಗೆ ₹20 ಸಾವಿರ ಸ್ಟೈಪೆಂಡ್! ಇಂದೇ ಅರ್ಜಿ ಹಾಕಿ!

ವಿದ್ಯಾರ್ಥಿಗಳಿಗೆ NHAI ನಿಂದ ಬಂಪರ್ ಆಫರ್! ತಿಂಗಳಿಗೆ ₹20 ಸಾವಿರ ಸ್ಟೈಪೆಂಡ್! ಇಂದೇ ಅರ್ಜಿ ಹಾಕಿ!

US Iran War: 'ಇರಾನ್‌ನನ್ನು ಶಿಲಾಯುಗಕ್ಕೆ ತಳ್ಳುತ್ತೇವೆ': ಅಮೆರಿಕ ಅಧ್ಯಕ್ಷ ಟ್ರಂಪ್ ಖಡಕ್ ವಾರ್ನಿಂಗ್! ಮುಂದಿನ 3-4 ವಾರಗಳಲ್ಲಿ ಮುಗಿಯುತ್ತೆ ಯುದ್ಧ!

ಇರಾನ್ ಮೇಲೆ ಅಮೆರಿಕದ ಫೈನಲ್ ಅಟ್ಯಾಕ್? “ಶಿಲಾಯುಗಕ್ಕೆ ತಳ್ಳುತ್ತೇವೆ” ಎಂದ ಟ್ರಂಪ್! ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಸಾಧ್ಯತೆ!

April 1 Rules: ಏಪ್ರಿಲ್ 1 ರಿಂದ ಜಾರಿಗೆ ಬಂದ 15 ಹೊಸ ನಿಯಮಗಳು! ನಿಮ್ಮ ಜೇಬಿಗೆ ಹೇಗೆ ಕತ್ತರಿ ಬೀಳಲಿದೆ ಗೊತ್ತಾ?

ಏಪ್ರಿಲ್ 1 ರಿಂದ ಜಾರಿಗೆ ಬಂದ 15 ಹೊಸ ನಿಯಮಗಳು! ನಿಮ್ಮ ಜೇಬಿಗೆ ಹೇಗೆ ಕತ್ತರಿ ಬೀಳಲಿದೆ ಗೊತ್ತಾ?

Punjab and Sind Bank Recruitment 2026: ಡಿಗ್ರಿ ಪಾಸ್ ಆಗಿದ್ದೀರಾ? ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್‌ನಲ್ಲಿ ಬಂಪರ್ ಉದ್ಯೋಗ! 1000 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಡಿಗ್ರಿ ಪಾಸ್ ಆಗಿದ್ದೀರಾ? ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್‌ನಲ್ಲಿ ಬಂಪರ್ ಉದ್ಯೋಗ! 1000 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

NITCON Recruitment 2026: ಇಂಜಿನಿಯರಿಂಗ್/ಡಿಪ್ಲೊಮಾ ಓದಿದವರಿಗೆ ಭರ್ಜರಿ ಸರ್ಕಾರಿ ನೌಕರಿ! ನಿಟ್ಕಾನ್ (NITCON)ನಲ್ಲಿ 100 JE ಹುದ್ದೆಗಳಿಗೆ ಅರ್ಜಿ ಆಹ್ವಾನ!

ಇಂಜಿನಿಯರಿಂಗ್/ಡಿಪ್ಲೊಮಾ ಓದಿದವರಿಗೆ ಭರ್ಜರಿ ಸರ್ಕಾರಿ ನೌಕರಿ! ನಿಟ್ಕಾನ್ (NITCON)ನಲ್ಲಿ 100 JE ಹುದ್ದೆಗಳಿಗೆ ಅರ್ಜಿ ಆಹ್ವಾನ!

PrevPreviousಏಪ್ರಿಲ್ 1 ರಿಂದ ಜಾರಿಗೆ ಬಂದ 15 ಹೊಸ ನಿಯಮಗಳು! ನಿಮ್ಮ ಜೇಬಿಗೆ ಹೇಗೆ ಕತ್ತರಿ ಬೀಳಲಿದೆ ಗೊತ್ತಾ?
Nextವಿದ್ಯಾರ್ಥಿಗಳಿಗೆ NHAI ನಿಂದ ಬಂಪರ್ ಆಫರ್! ತಿಂಗಳಿಗೆ ₹20 ಸಾವಿರ ಸ್ಟೈಪೆಂಡ್! ಇಂದೇ ಅರ್ಜಿ ಹಾಕಿ!Next
Heart Health: ಹೃದಯಾಘಾತದ ಪ್ರಕರಣಗಳು ಏಕೆ ಹೆಚ್ಚಾಗುತ್ತಿದೆ? ಬೇಕಿರುವುದು ಆಸ್ಪತ್ರೆಗಳಲ್ಲ, ಶಿಸ್ತಿನ ಬದುಕು!

Heart Health: ಹೃದಯಾಘಾತದ ಪ್ರಕರಣಗಳು ಏಕೆ ಹೆಚ್ಚಾಗುತ್ತಿದೆ? ಬೇಕಿರುವುದು ಆಸ್ಪತ್ರೆಗಳಲ್ಲ, ಶಿಸ್ತಿನ ಬದುಕು!

3 July 2025
Read More »
Garlic Health Benefits: ದಿನಕ್ಕೊಮ್ಮೆ ಬೆಳ್ಳುಳ್ಳಿ ತಿಂದರೆ ಈ 8 ಪ್ರಮುಖ ಆರೋಗ್ಯ ಪ್ರಯೋಜನಗಳು ತಪ್ಪದೇ ತಿಳಿಯಿರಿ!

Garlic Health Benefits: ದಿನಕ್ಕೊಮ್ಮೆ ಬೆಳ್ಳುಳ್ಳಿ ತಿನ್ನಿ ಈ 8 ಪ್ರಮುಖ ಆರೋಗ್ಯ ಪ್ರಯೋಜನಗಳು ತಪ್ಪದೇ ತಿಳಿಯಿರಿ!

2 July 2025
Read More »
Natural Ways to Get Thicker Hair: 7 Major Causes of Hair Thinning and Powerful Home Remedies

Natural Ways to Get Thicker Hair: 7 Major Causes of Hair Thinning and Powerful Home Remedies

22 June 2025
Read More »
Page1 … Page106 Page107 Page108 Page109 Page110
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs