Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಲಾಟರಿ! ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಧನ್ ಸ್ಕಾಲರ್‌ಶಿಪ್ 2026!

  • Picture of Gundijalu Shwetha By Gundijalu Shwetha
  • Published On: June 7, 2026
Vidyadhan Class 11 and 12 Scholarship: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಲಾಟರಿ! ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಧನ್ ಸ್ಕಾಲರ್‌ಶಿಪ್ 2026!

Vidyadhan Class 11 and 12 Scholarship: ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation – SDF) ವತಿಯಿಂದ ಕರ್ನಾಟಕದ 11 ಮತ್ತು 12ನೇ ತರಗತಿಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ವಿದ್ಯಾಧನ್ ಸ್ಕಾಲರ್‌ಶಿಪ್ 2026’ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ಮಕ್ಕಳಿಗೆ ವಾರ್ಷಿಕ ₹10,000 ಸಹಾಯಧನ ಸಿಗಲಿದ್ದು, ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನವಾಗಿದೆ.

📅 Last Date to Apply online 05-July-2026

ಎಸ್‌ಎಸ್‌ಎಲ್‌ಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ: ವಿದ್ಯಾಧನ್ ಸ್ಕಾಲರ್‌ಶಿಪ್ ಜೂನ್-ಜುಲೈ ನೋಂದಣಿ ಆರಂಭ, ವರ್ಷಕ್ಕೆ ಸಿಗಲಿದೆ ₹10,000 ಸಹಾಯಧನ!

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದ ನಂತರ ಹಳ್ಳಿಗಳ ಮತ್ತು ಮಧ್ಯಮ ವರ್ಗದ ಬಡ ಕುಟುಂಬಗಳಲ್ಲಿ ದೊಡ್ಡ ಚಿಂತೆ ಶುರುವಾಗುತ್ತದೆ. ಮಕ್ಕಳು ತುಂಬಾನೇ ಚೆನ್ನಾಗಿ ಓದಿರ್ತಾರೆ, ಒಳ್ಳೆ ಮಾರ್ಕ್ಸ್ ತಗೊಂಡಿರ್ತಾರೆ. ಆದರೆ ಮುಂದೆ ಕಾಲೇಜಿಗೆ ಸೇರಿಸಲು, ಬುಕ್ಸ್ ಕೊಳ್ಳಲು ಹಣ ಎಲ್ಲಿಂದ ತರುವುದು ಎನ್ನುವ ಆರ್ಥಿಕ ಪರಿಸ್ಥಿತಿ ಅನೇಕ ಹೆತ್ತವರ ನಿದ್ದೆಗೆಡಿಸುತ್ತದೆ. ಕೇವಲ ಹಣದ ಕೊರತೆಯಿಂದಾಗಿ ನಮ್ಮ ನಾಡಿನ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಓದು ಅರ್ಧಕ್ಕೆ ನಿಲ್ಲಬಾರದು ಎನ್ನುವ ಸದುದ್ದೇಶದಿಂದ ಖಾಸಗಿ ವಲಯದ ಹೆಸರಾಂತ ಫೌಂಡೇಶನ್ ಒಂದು ಅತ್ಯದ್ಭುತ ಯೋಜನೆ ತಂದಿದೆ.

WhatsApp Channel
Join Now
Telegram Channel
Join Now

ಹೌದು, ಪ್ರತಿಷ್ಠಿತ ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation – SDF) ಪ್ರಸಕ್ತ ಸಾಲಿಗೆ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ವಿದ್ಯಾಧನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2026 (Vidyadhan Class 11 and 12 Scholarship Program) ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಕಾರ್ಯಕ್ರಮದ ಮುಖ್ಯ ಗುರಿ ಆರ್ಥಿಕವಾಗಿ ಹಿಂದುಳಿದಿರುವ, ಆದರೆ ಓದಿನಲ್ಲಿ ಅತ್ಯಂತ ಚುರುಕಾಗಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರ ಮುಂದಿನ ಪಿಯುಸಿ (11 ಮತ್ತು 12ನೇ ತರಗತಿ) ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿದೆ.

ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಪರಿಚಯವಿರುವ ಬಡ ಕುಟುಂಬದ ಮಕ್ಕಳು ಈ ಬಾರಿ 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೆ, ಸರೋಜಿನಿ ದಾಮೋದರನ್ ಫೌಂಡೇಶನ್ ನೀಡುತ್ತಿರುವ ಈ ಗೋಲ್ಡನ್ ಚಾನ್ಸ್ ಅನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಈ ಸ್ಕಾಲರ್‌ಶಿಪ್ ಪಡೆಯಲು ಇರಬೇಕಾದ ಅರ್ಹತೆಗಳು, ಬೇಕಾಗುವ ಮುಖ್ಯ ದಾಖಲೆಗಳು ಮತ್ತು ಮೊಬೈಲ್ ಮೂಲಕವೇ ಆನ್‌ಲೈನ್‌ನಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಈ ಲೇಖನದಲ್ಲಿ ನಿಮ್ಮ ಭಾಷೆಯಲ್ಲೇ ಬಹಳ ಸರಳವಾಗಿ ವಿವರಿಸಲಾಗಿದೆ, ಕೊನೆಯವರೆಗೂ ಪೂರ್ತಿಯಾಗಿ ಓದಿ ಹೆಲ್ಪ್ ಮಾಡಿ.

Vidyadhan Class 11 and 12 Scholarship: SSLC ಪಾಸ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಲಾಟರಿ! ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಧನ್ ಸ್ಕಾಲರ್‌ಶಿಪ್ 2026!
👉Click Here to apply ONLINE for Vidyadhan Class 11 and 12 Scholarship Program, Karnataka 2026

ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು? (Eligibility Criteria for Vidyadhan Class 11 and 12 Scholarship)

ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಫೌಂಡೇಶನ್ ಕೆಲವು ಕಟ್ಟುನಿಟ್ಟಾದ ನಿಯಮಾವಳಿಗಳನ್ನು ನಿಗದಿಪಡಿಸಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು:

  • ಕರ್ನಾಟಕದ ನಿವಾಸಿ: ಅಭ್ಯರ್ಥಿಯು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು (Domiciled in Karnataka).
  • ಪಾಸಾದ ವರ್ಷ: ವಿದ್ಯಾರ್ಥಿಯು ಕರ್ನಾಟಕ ರಾಜ್ಯದಲ್ಲೇ ಪ್ರಸಕ್ತ 2026ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ (SSLC) ಅಥವಾ 10ನೇ ತರಗತಿ ಪರೀಕ್ಷೆಯನ್ನು ಪಾಸ್ ಮಾಡಿರಬೇಕು.
  • ಅಂಕಗಳ ಮಿತಿ: 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಕನಿಷ್ಠ ಶೇಕಡಾ 90% ರಷ್ಟು ಅಂಕಗಳನ್ನು ಗಳಿಸಿರಬೇಕು ಅಥವಾ 9 CGPA ಪಡೆದಿರಬೇಕು.
  • ವಿಕಲಚೇತನರಿಗೆ ವಿನಾಯಿತಿ: ಒಂದು ವೇಳೆ ವಿದ್ಯಾರ್ಥಿಯು ವಿಶೇಷ ಚೇತನರಾಗಿದ್ದರೆ (Abled/Disabled Students), ಅಂತವರಿಗೆ ಕನಿಷ್ಠ ಕಟ್‌ ಆಫ್ ಅಂಕಗಳಲ್ಲಿ ಭಾರಿ ವಿನಾಯಿತಿ ನೀಡಲಾಗಿದ್ದು, ಶೇ. 75% ರಷ್ಟು ಅಂಕ ಗಳಿಸಿದ್ದರೆ ಸಾಕು.
  • ಕುಟುಂಬದ ಆದಾಯ: ಅರ್ಜಿದಾರರ ಕುಟುಂಬದ ಒಟ್ಟು ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ಸೇರಿ ₹2,00,000/- (ಎರಡು ಲಕ್ಷ ರೂಪಾಯಿ) ಗಿಂತ ಕಡಿಮೆ ಇರಬೇಕು.

ವಿದ್ಯಾಧನ್ ಸ್ಕಾಲರ್‌ಶಿಪ್‌ನಿಂದ ಸಿಗುವ ಆರ್ಥಿಕ ಸೌಲಭ್ಯಗಳು (Benefits of Vidyadhan Class 11 and 12 Scholarship)

ಈ ಯೋಜನೆಗೆ ಅರ್ಹತೆಯ ಆಧಾರದ ಮೇಲೆ ಆಯ್ಕೆಯಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ 11ನೇ ತರಗತಿ (First PUC) ಮತ್ತು 12ನೇ ತರಗತಿ (Second PUC) ವಿದ್ಯಾಭ್ಯಾಸವನ್ನು ಯಾವುದೇ ತೊಂದರೆಯಿಲ್ಲದೆ ಪೂರ್ಣಗೊಳಿಸಲು ಪ್ರತಿ ವರ್ಷಕ್ಕೆ ಗರಿಷ್ಠ ₹10,000/- (ಹತ್ತು ಸಾವಿರ ರೂಪಾಯಿ) ಸಹಾಯಧನವನ್ನು ನೇರವಾಗಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು (Important Dates)

ವಿದ್ಯಾರ್ಥಿಗಳು ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಂಡು ಅದರೊಳಗೆ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಬೇಕು:

  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಜುಲೈ 2026
  • ಸ್ಕ್ರೀನಿಂಗ್ ಟೆಸ್ಟ್ ನಡೆಯುವ ದಿನಾಂಕ: 19 ಜುಲೈ 2026
  • ಅಭ್ಯರ್ಥಿಗಳ ಇಂಟರ್ವ್ಯೂ / ಆನ್‌ಲೈನ್ ಟೆಸ್ಟ್ ಅವಧಿ: 08 ಆಗಸ್ಟ್ 2026 ರಿಂದ 30 ಆಗಸ್ಟ್ 2026 ರವರೆಗೆ
📅 Last Date to Apply Online 05-July-2026

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು (Documents Required for Apply Vidyadhan Class 11 and 12 Scholarship)

ಆನ್‌ಲೈನ್ ಫಾರ್ಮ್ ತುಂಬುವ ಮುನ್ನ ಈ ಕೆಳಗಿನ ದಾಖಲೆಗಳ ಸ್ಪಷ್ಟ ಸ್ಕ್ಯಾನ್ ಕಾಪಿಗಳನ್ನು ರೆಡಿ ಮಾಡಿಟ್ಟುಕೊಳ್ಳಿ:

  1. ಅರ್ಜಿದಾರ ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ (Photograph).
  2. 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (Original Marksheet). ಒಂದು ವೇಳೆ ಇನ್ನು ಒರಿಜಿನಲ್ ಮಾರ್ಕ್ ಶೀಟ್ ಕೈಗೆ ಸಿಗದಿದ್ದರೆ, ಮಂಡಳಿಯ ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿದ ಪ್ರಾವಿಷನಲ್/ಆನ್‌ಲೈನ್ ಪ್ರತಿಯನ್ನು ಅಪ್ಲೋಡ್ ಮಾಡಬಹುದು.
  3. ಸಕ್ಷಮ ಪ್ರಾಧಿಕಾರ ಅಥವಾ ತಹಶೀಲ್ದಾರರಿಂದ ಪಡೆದ ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ (Income Certificate karnataka). (ಗಮನಿಸಿ: ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಅನ್ನು ಆದಾಯದ ದಾಖಲೆಯಾಗಿ ಪರಿಗಣಿಸಲಾಗುವುದಿಲ್ಲ).

ಆನ್‌ಲೈನ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸುವ ಹಂತಗಳು (How to Apply for Vidyadhan Class 11 and 12 Scholarship)

ಅರ್ಹ ವಿದ್ಯಾರ್ಥಿಗಳು ಯಾವುದೇ ಶುಲ್ಕವಿಲ್ಲದೆ ವೆಬ್‌ಸೈಟ್ ಮೂಲಕ ನೇರವಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:

👉Click Here to apply ONLINE for Vidyadhan Class 11 and 12 Scholarship Program, Karnataka 2026
  • ಹಂತ 1: ಮೊದಲಿಗೆ ವಿದ್ಯಾಧನ್ ಅಧಿಕೃತ ಅಪ್ಲಿಕೇಶನ್ ಪೋರ್ಟಲ್‌ಗೆ ಭೇಟಿ ನೀಡಿ ‘Apply Now’ ಬಟನ್ ಕ್ಲಿಕ್ ಮಾಡಿ.
  • ಹಂತ 2: ‘Register’ ಬಟನ್ ಒತ್ತಿ, ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ನೀಡಿ ಹೊಸ ಖಾತೆಯನ್ನು ತೆರೆಯಿರಿ.
  • ಹಂತ 3: ನಿಮ್ಮ ಇಮೇಲ್‌ಗೆ ಬರುವ ಕನ್ಫರ್ಮೇಷನ್ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್ ಕನ್ಫರ್ಮ್ ಮಾಡಿ.
  • ಹಂತ 4: ಈಗ ನಿಮ್ಮ ರಿಜಿಸ್ಟರ್ಡ್ ಇಮೇಲ್ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
  • ಹಂತ 5: ಅಕೌಂಟ್‌ನಲ್ಲಿ ಕಾಣಿಸುವ ‘Application’ ಬಟನ್ ಕ್ಲಿಕ್ ಮಾಡಿ ಹೊಸ ಅಪ್ಲಿಕೇಶನ್ ಕ್ರಿಯೇಟ್ ಮಾಡಿ.
  • ಹಂತ 6: ಅಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ವಿವರ ತುಂಬಿ, ಅಗತ್ಯ ದಾಖಲೆಗಳು ಹಾಗೂ ಫೋಟೋವನ್ನು ಸ್ಪಷ್ಟವಾಗಿ ಅಪ್ಲೋಡ್ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಿ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Criteria)

ಸರೋಜಿನಿ ದಾಮೋದರನ್ ಫೌಂಡೇಶನ್ (SDF) ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಮತ್ತು ಅವರ 10ನೇ ತರಗತಿಯ ಮೆರಿಟ್ ಅಂಕಗಳನ್ನು ಆಧರಿಸಿ ಮೊದಲ ಹಂತದ ಶಾರ್ಟ್‌ಲಿಸ್ಟ್ ಸಿದ್ಧಪಡಿಸುತ್ತದೆ. ಶಾರ್ಟ್‌ಲಿಸ್ಟ್ ಆದ ವಿದ್ಯಾರ್ಥಿಗಳಿಗೆ ಸಣ್ಣ ಆನ್‌ಲೈನ್ ಟೆಸ್ಟ್ ಅಥವಾ ಶಾರ್ಟ್ ಇಂಟರ್ವ್ಯೂ ನಡೆಸಿ ಅಂತಿಮವಾಗಿ ಅರ್ಹ ಬಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗುತ್ತದೆ.

ಬಡತನದ ಕಾರಣಕ್ಕೆ ನಮ್ಮ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸುತ್ತಮುತ್ತಲಿರುವ ಪಿಯುಸಿ ಸೇರುವ ಬಡ ಕುಟುಂಬದ ಪ್ರತಿಭಾವಂತ ಮಕ್ಕಳಿಗೆ ತಲುಪಿಸಿ ಅವರ ಭವಿಷ್ಯಕ್ಕೆ ನೆರವಾಗಿ. ಆಲ್ ದ ಬೆಸ್ಟ್!

Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:

  • B.E/Degree ವಿದ್ಯಾರ್ಥಿಗಳಿಗೆ KPTCL ನಲ್ಲಿ 15 ದಿನಗಳಿಂದ 6 ತಿಂಗಳವರೆಗೆ ಇಂಟರ್ನ್‌ಶಿಪ್ ಮಾಡಲು ಭರ್ಜರಿ ಅವಕಾಶ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!
  • ಪಿಯುಸಿ ರಿಸಲ್ಟ್ ಬಂತು! ಮುಂದೇನು? ಲೈಫ್ ಸೆಟ್ ಮಾಡುವ ಬೆಸ್ಟ್ ಕೋರ್ಸ್‌ಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!

ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

Ration Distribution Timings Revised: ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಪ್ಡೇಟ್: ಇನ್ಮುಂದೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಸಿಗಲಿದೆ ಪಡಿತರ! ಆಹಾರ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ!

ರೇಷನ್ ಕಾರ್ಡ್‌ದಾರರಿಗೆ ಬಿಗ್ ಅಪ್ಡೇಟ್: ಇನ್ಮುಂದೆ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಸಿಗಲಿದೆ ಪಡಿತರ! ಆಹಾರ ಇಲಾಖೆಯಿಂದ ಕಟ್ಟುನಿಟ್ಟಿನ ಆದೇಶ!

KFD Forest Watcher Recruitment 2026: SSLC ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಬರೋಬ್ಬರಿ 775 ಅರಣ್ಯ ವೀಕ್ಷಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ! ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ!

SSLC ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಬರೋಬ್ಬರಿ 775 ಅರಣ್ಯ ವೀಕ್ಷಕ ಹುದ್ದೆಗಳಿಗೆ ಭರ್ಜರಿ ನೇಮಕಾತಿ! ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ!

Gruhalakshmi Yojana: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕ್! ಇನ್ಮುಂದೆ ₹2000 ಹಣ ಸಿಗಬೇಕಂದ್ರೆ ಫೇಸ್ ಅಥೆಂಟಿಕೇಷನ್ ಕಡ್ಡಾಯ!

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಾಕ್! ಇನ್ಮುಂದೆ ₹2000 ಹಣ ಸಿಗಬೇಕಂದ್ರೆ ಫೇಸ್ ಅಥೆಂಟಿಕೇಷನ್ ಕಡ್ಡಾಯ!

DHFWS Udupi Recruitment 2026: ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ 18 ಹುದ್ದೆಗಳು ಖಾಲಿ: ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 21 ಕಡೆಯ ದಿನ.

ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ 18 ಹುದ್ದೆಗಳು ಖಾಲಿ: ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 21 ಕಡೆಯ ದಿನ.

SAIL Rourkela Apprentice Recruitment 2026: ಡಿಗ್ರಿ/ಡಿಪ್ಲೊಮಾ/ಐಟಿಐ ಆದವರಿಗೆ ಕೇಂದ್ರ ಸರ್ಕಾರಿ ಬಂಪರ್: SAIL Rourkela Steel Plant ನಲ್ಲಿ 1110 ಹುದ್ದೆಗಳ ನೇರ ನೇಮಕಾತಿ!

ಡಿಗ್ರಿ/ಡಿಪ್ಲೊಮಾ/ಐಟಿಐ ಆದವರಿಗೆ ಕೇಂದ್ರ ಸರ್ಕಾರಿ ಬಂಪರ್: SAIL Rourkela Steel Plant ನಲ್ಲಿ 1110 ಹುದ್ದೆಗಳ ನೇರ ನೇಮಕಾತಿ!

PrevPreviousKEA UGCET 2026 ಫಲಿತಾಂಶ ಔಟ್: ಕೆಇಎ ವೆಬ್‌ಸೈಟ್ ಕ್ರಾಶ್‌; ರಿಸಲ್ಟ್ ನೋಡೋದು ಹೇಗೆ?
Nextಸಿಇಟಿ ಫಲಿತಾಂಶ ಬಂದಿದೆ: ಆದರೆ 83% ಇಂಜಿನಿಯರಿಂಗ್ ಪದವೀಧರರಿಗೆ ಕೆಲಸವೇ ಇಲ್ಲ! ಪೋಷಕರೇ ಈ ಕಹಿ ಸತ್ಯ ತಿಳಿಯಿರಿNext
Big News for Bikers! Yamaha to Launch 10 New Models in India by 2026-End; Highly Anticipated XSR155 Hits the Roads

Big News for Bikers! Yamaha to Launch 10 New Models in India by 2026-End; Highly Anticipated XSR155 Hits the Roads

12 November 2025
Read More »
ಕೊಡಗಿನ 'ಮಿನಿ ವಿಮಾನ ನಿಲ್ದಾಣ' ಕನಸು ಕಮರುವ ಭೀತಿ: ಕುಶಾಲನಗರ ಜಾಗ ರದ್ದು?

ಕೊಡಗಿನ ‘ಮಿನಿ ವಿಮಾನ ನಿಲ್ದಾಣ’ ಕನಸು ಕಮರುವ ಭೀತಿ: ಕುಶಾಲನಗರ ಜಾಗ ರದ್ದು?

12 November 2025
Read More »
Digital Gold Scam Alert: SEBI ಎಚ್ಚರಿಕೆ – ಈ 4 ಆ್ಯಪ್‌ಗಳಲ್ಲಿ ಚಿನ್ನ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳೋದು ಗ್ಯಾರಂಟಿ!

Digital Gold Scam Alert: SEBI ಎಚ್ಚರಿಕೆ – ಈ 4 ಆ್ಯಪ್‌ಗಳಲ್ಲಿ ಚಿನ್ನ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳೋದು ಗ್ಯಾರಂಟಿ!

11 November 2025
Read More »
Page1 … Page142 Page143 Page144 Page145 Page146 … Page161
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs