Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ

Vidyasiri Scholarship 2025: ವಿದ್ಯಾಸಿರಿ - ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
Share and Spread the love

Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.

Vidyasiri Scholarship 2025: ವಿದ್ಯಾಸಿರಿ ಯೋಜನೆಯ ಉದ್ದೇಶ:
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಕಾರ್ಯಗತಗೊಳ್ಳುವ ಈ ಯೋಜನೆಯ ಉದ್ದೇಶವೆಂದರೆ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗದ ಗ್ರಾಮೀಣ ವಿದ್ಯಾರ್ಥಿಗಳಿಗೆ, ಸರ್ಕಾರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಲಭ್ಯವಿಲ್ಲದಾಗ, ಮಾಸಿಕ ಊಟ ಮತ್ತು ವಸತಿ ಸಹಾಯಧನ ನೀಡುವುದು.

Follow Us Section

Vidyasiri Scholarship 2025: ವಿದ್ಯಾಸಿರಿ ಯೋಜನೆಯ ಸಹಾಯಧನದ ವಿವರ:

  • ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 1,500 ಸಹಾಯಧನ
  • ಶೈಕ್ಷಣಿಕ ವರ್ಷಕ್ಕೆ (10 ತಿಂಗಳುಗಳ ಕಾಲ) ಒಟ್ಟು ರೂ. 15,000 ಸಹಾಯಧನ
  • ಈ ಮೊತ್ತವನ್ನು ವಿದ್ಯಾರ್ಥಿಯ ಕೋರ್ ಬ್ಯಾಂಕ್ ಖಾತೆಗೆ ಆನ್‌ಲೈನ್ (RTGS) ಮೂಲಕ ಜಮೆ ಮಾಡಲಾಗುತ್ತದೆ

ಗಮನಿಸಿ: ವಿದ್ಯಾರ್ಥಿಗಳು ಕೆಳಗಿನ ಎರಡು ಸೌಲಭ್ಯಗಳಲ್ಲಿ ಯಾವುದೇ ಒಂದನ್ನು ಮಾತ್ರ ಪಡೆಯಬಹುದು:

  • ವಿದ್ಯಾರ್ಥಿ ನಿಲಯ ಪ್ರವೇಶ
  • ಊಟ ಮತ್ತು ವಸತಿ ಸಹಾಯ ಯೋಜನೆ

Vidyasiri Scholarship 2025: ವಿದ್ಯಾಸಿರಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲನೆ ಆನ್‌ಲೈನ್ ಮೂಲಕ ಮಾತ್ರ
  • ಅಧಿಕೃತ ವೆಬ್‌ಸೈಟ್ ಅಥವಾ ಪ್ರಾಧಿಕೃತ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು
  • https://ssp.postmatric.karnataka.gov.in ಗೆ ಭೇಟಿ ನೀಡಿ
  • “Fresh Application” ಆಯ್ಕೆಮಾಡಿ
  • ಅಗತ್ಯವಿರುವ ದಾಖಲೆಗಳನ್ನು ಸಕಾಲದಲ್ಲಿ ಸಕರಾತ್ಮಕವಾಗಿ ಅಪ್‌ಲೋಡ್ ಮಾಡಿ
  • ಅರ್ಜಿ ಸಲ್ಲಿಸಿ, ಅಪ್ಲಿಕೇಶನ್ ಐಡಿಯನ್ನು ಸಂರಕ್ಷಿಸಿ

Vidyasiri Scholarship 2025: ವಿದ್ಯಾಸಿರಿ ಯೋಜನೆಗೆ ಬೇಕಾದ ದಾಖಲೆಗಳು:

ಕೆಳಕಂಡ ದಾಖಲೆಗಳ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು, Vidyasiri ವಿದ್ಯಾರ್ಥಿವೇತನದ ಹಣವನ್ನು ಪಡೆಯಲು ಇದು ಕಡ್ಡಾಯವಾಗಿದೆ.

  • ಜಾತಿ ಪ್ರಮಾಣಪತ್ರ (ಅಂಗೀಕೃತ ಪ್ರಾಧಿಕಾರದಿಂದ ಹೊರಡಿಸಿರಬೇಕು).
  • ಕರ್ನಾಟಕದ ಖಾಯಂ ನಿವಾಸದ ಪ್ರಮಾಣಪತ್ರ.
  • ಹಿಂದಿನ ಶೈಕ್ಷಣಿಕ ಅರ್ಹತಾ ಪರೀಕ್ಷೆಗಳ ಅಂಕಪಟ್ಟಿಗಳ ಪ್ರತಿಗಳು.
  • ಡಿಪ್ಲೊಮಾ ಅಥವಾ ಪದವಿ ಪ್ರಮಾಣಪತ್ರಗಳು.
  • ಅಂಗೀಕೃತ ಸಂಸ್ಥೆಯಲ್ಲಿ ಮೆಟ್ರಿಕ್ ನಂತರದ ಕೋರ್ಸ್‌ಗೆ ದಾಖಲಾದ ದಾಖಲೆ.
  • ತಂದೆ/ತಾಯಿ ಅಥವಾ ಪಾಲಕರ ಆದಾಯ ಪ್ರಮಾಣಪತ್ರ (ತಹಶೀಲ್ದಾರರಿಂದ ಪಡೆದಿರತಕ್ಕದ್ದು).
  • ಬ್ಯಾಂಕ್ ಪಾಸ್ ಬುಕ್‌ನ ಮೊದಲು ಪುಟದ ಪ್ರತಿಯನ್ನು (ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಒಳಗೊಂಡಿರಬೇಕು).
  • ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ.
  • ಕಾಲೇಜು ನೀಡಿದ 75% ಹಾಜರಾತಿ ಪ್ರಮಾಣಪತ್ರ.
  • ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು).
  • ಅಂಗವಿಕಲರಿಗೆ ವೈದ್ಯಕೀಯ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ).
  • ವಿದ್ಯಾರ್ಥಿವೇತನ ಮಾರ್ಗಸೂಚಿಗಳ ಪ್ರಕಾರ ಬೇರೆ ಬೇಕಾದ ದಾಖಲೆಗಳು.
Vidyasiri Scholarship 2025: ವಿದ್ಯಾಸಿರಿ – ಊಟ ಮತ್ತು ವಸತಿ ಸಹಾಯ ಯೋಜನೆ (2025) ಸಂಪೂರ್ಣ ಮಾಹಿತಿ

ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: 2025ರಲ್ಲಿ NSP ಸ್ಕಾಲರ್‌ಶಿಪ್‌ಗಾಗಿ ಹೇಗೆ ಅರ್ಜಿ ಹಾಕುವುದು? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ!


Vidyasiri Scholarship 2025: ವಿದ್ಯಾಸಿರಿ ಯೋಜನೆಯ ಅರ್ಹತಾ ನಿಯಮಗಳು:

  1. ಪೌರತ್ವ ಮತ್ತು ವಾಸಸ್ಥಳ:
    • ಅರ್ಜಿದಾರನು ಭಾರತದ ಪ್ರಜೆ ಆಗಿರಬೇಕು
    • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
  2. ಜಾತಿ:
    • ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿರಬೇಕು (ಪ್ರವರ್ಗ-1, 2A, 3A, 3B)
  3. ವಿದ್ಯಾಭ್ಯಾಸದ ಮಟ್ಟ:
    • ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
    • ಸರ್ಕಾರಿ / ಸ್ಥಳೀಯ ಸಂಸ್ಥೆಗಳ / ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳ ವಿದ್ಯಾರ್ಥಿಗಳಾಗಿರಬೇಕು.
  4. ಆದಾಯ ಮಿತಿ:
    • ಪ್ರವರ್ಗ-1: ರೂ. 2.50 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರಬೇಕು
    • ಪ್ರವರ್ಗ 2A, 3A, 3B: ರೂ. 1.00 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರಬೇಕು
  5. ಭೌಗೋಳಿಕ ಸ್ಥಿತಿ:
    • ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿರಬೇಕು
    • ಕಾಲೇಜು ನಿಕಟದ ಸ್ಥಳದಿಂದ ಕನಿಷ್ಠ 5 ಕಿ.ಮೀ ದೂರವಿರಬೇಕು
    • ನಗರದಲ್ಲಿ ವಾಸವಾಗಿದ್ದರೂ ಬೇರೆ ನಗರದಲ್ಲಿ ವ್ಯಾಸಂಗ ಮಾಡುತ್ತಿರುವವರು ಸಹ ಅರ್ಹರು
  6. ಅಕಾಡೆಮಿಕ್ ಅರ್ಹತೆ (ಹಿಂದಿನ ಶೈಕ್ಷಣಿಕ ವರ್ಷದ ಫಲಿತಾಂಶ):
    • ಪ್ರವರ್ಗ-1: ಕನಿಷ್ಠ 55% ಅಂಕಗಳು
    • ಪ್ರವರ್ಗ 2A, 3A, 3B: ಕನಿಷ್ಠ 65% ಅಂಕಗಳು
  7. ಹೊಂದಾಣಿಕೆ ನಿಯಮಗಳು:
    • ಒಂದಕ್ಕಿಂತ ಹೆಚ್ಚು ಬಾರಿ ಒಂದೇ ರೀತಿಯ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿರುವವರು ಅರ್ಹರಲ್ಲ
    • ಸ್ನಾತಕೋತ್ತರ/ವೈದ್ಯಕೀಯ ಕೋರ್ಸ್‌ನ ವಿದ್ಯಾರ್ಥಿಗಳು ಕೋರ್ಸ್ ಅವಧಿಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರೆ, ಅಂತವರು ಅರ್ಹರಲ್ಲ
    • ಪದವಿ/ಸ್ನಾತಕೋತ್ತರ ಪದವಿಗಳ ನಂತರ ತಾಂತ್ರಿಕ ಅಥವಾ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಪಡೆದವರು ಮಾತ್ರ ಅರ್ಹ ಆಗಿರುತ್ತಾರೆ
  8. ಕುಟುಂಬದ ಮಕ್ಕಳ ಸಂಖ್ಯೆ:
    • ಒಂದೇ ಕುಟುಂಬದಿಂದ ಗಂಡು ಮಕ್ಕಳಲ್ಲಿ 2 ಮಂದಿ ಮಾತ್ರ ಯೋಜನೆಗೆ ಅರ್ಹ ಆಗಿರುತ್ತಾರೆ
    • ಹೆಣ್ಣು ಮಕ್ಕಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ

ಈ ಯೋಜನೆಯ ಸಹಾಯದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿ ವಿಷಯದಲ್ಲಿ ಭದ್ರತೆ ದೊರಕುತ್ತದೆ. ನೀವು ಈ ಅರ್ಹತೆ ಹೊಂದಿದ್ದರೆ, ತಪ್ಪದೆ ಅರ್ಜಿ ಹಾಕಿ.

👉Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ

🔗Free Laptop Yojana 2025 for SSLC Topper: ಕರ್ನಾಟಕ ಸರ್ಕಾರದಿಂದ SSLC ಪ್ರತಿಭಾವಂತರಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆ ಜಾರಿ – ಇಲ್ಲಿದೆ ಸಂಪೂರ್ಣ ಮಾಹಿತಿ!

🔗RTE Free Education 2025–26: ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಕೆ ಆರಂಭ

🔗Siddaganga Mutt Free Education: ತುಮಕೂರಿನ ಸಿದ್ದಗಂಗಾ ಮಠ ಅನಾಥಾಲಯದಲ್ಲಿ ಉಚಿತ ಶಿಕ್ಷಣಕ್ಕೆ ಪ್ರವೇಶ ಆರಂಭ: ಮೇ 2 ರಿಂದ 10ರ ವರೆಗೆ ಅರ್ಜಿ ಆಹ್ವಾನ

🔗DCET 2025: ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಇಂತಹ ಸರ್ಕಾರಿ ಉದ್ಯೋಗ/ ಶಿಕ್ಷಣ ಮಾಹಿತಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇

Follow Us Section
Author Info

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು,...


Share and Spread the love
RSS Subscribe to our RSS Feed
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs