WCD Tumkur Anganwadi Recruitment 2025: ತುಮಕೂರು ಜಿಲ್ಲೆಯಲ್ಲಿ 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ. 10ನೇ/12ನೇ ತರಗತಿ ಪಾಸಾದ ಮಹಿಳಾ ಅಭ್ಯರ್ಥಿಗಳು ಜನವರಿ 9, 2026 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಲಿಂಕ್ ಇಲ್ಲಿದೆ
WCD Tumkur Recruitment 2026: ಗೌರವಧನ ಆಧಾರಿತ ಹುದ್ದೆಗಳಿಗೆ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನ – ಅರ್ಜಿ ಸಲ್ಲಿಸಲು ಜನವರಿ 9, 2026 ಕೊನೆಯ ದಿನ.
ತುಮಕೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಜಿಲ್ಲೆಯು (WCD Tumkur) ಜಿಲ್ಲೆಯ 11 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಒಟ್ಟು 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ
ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ:
| ವಿವರ (Particulars) | ದಿನಾಂಕ (Date) |
| ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | 10-12-2025 |
| ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ (ಸಂಜೆ 5.30 ರವರೆಗೆ) | 09-01-2026 |
| ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ | https://karnemakaone.kar.nic.in/abcd/ |
ತಾಲ್ಲೂಕುವಾರು ಹುದ್ದೆಗಳ ವಿವರ ( WCD Tumkur Recruitment 2025 946 Vacancy Details ):
ತುಮಕೂರು ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ 11 ಶಿಶು ಅಭಿವೃದ್ಧಿ ಯೋಜನೆಗಳಡಿಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹೀಗಿದೆ:
ತುಮಕೂರು ಜಿಲ್ಲಾ ಅಂಗನವಾಡಿ ಹುದ್ದೆಗಳ ವಿವರ (ಒಟ್ಟು: 946)
- ಚಿಕ್ಕನಾಯಕನಹಳ್ಳಿ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 10 , ಅಂಗನವಾಡಿ ಸಹಾಯಕಿ (Anganwadi Helper): 61 , ಒಟ್ಟು: 71 ಹುದ್ದೆಗಳು.
- ಗುಬ್ಬಿ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 10 ,ಅಂಗನವಾಡಿ ಸಹಾಯಕಿ (Anganwadi Helper): 118 , ಒಟ್ಟು: 128 ಹುದ್ದೆಗಳು.
- ಕೊರಟಗೆರೆ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 12 , ಅಂಗನವಾಡಿ ಸಹಾಯಕಿ (Anganwadi Helper): 89 , ಒಟ್ಟು: 101 ಹುದ್ದೆಗಳು.
- ಕುಣಿಗಲ್: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 08 , ಅಂಗನವಾಡಿ ಸಹಾಯಕಿ (Anganwadi Helper): 68 , ಒಟ್ಟು: 76 ಹುದ್ದೆಗಳು.
- ಮಧುಗಿರಿ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 12 , ಅಂಗನವಾಡಿ ಸಹಾಯಕಿ (Anganwadi Helper): 79 , ಒಟ್ಟು: 91 ಹುದ್ದೆಗಳು.
- ಪಾವಗಡ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 07 , ಅಂಗನವಾಡಿ ಸಹಾಯಕಿ (Anganwadi Helper): 51 , ಒಟ್ಟು: 58 ಹುದ್ದೆಗಳು.
- ತಿಪಟೂರು:ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 26 , ಅಂಗನವಾಡಿ ಸಹಾಯಕಿ (Anganwadi Helper): 103 , ಒಟ್ಟು: 129 ಹುದ್ದೆಗಳು.
- ತುಮಕೂರು ಗ್ರಾಮಾಂತರ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 10 , ಅಂಗನವಾಡಿ ಸಹಾಯಕಿ (Anganwadi Helper): 54 , ಒಟ್ಟು: 64 ಹುದ್ದೆಗಳು.
- ತುಮಕೂರು ನಗರ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 12 , ಅಂಗನವಾಡಿ ಸಹಾಯಕಿ (Anganwadi Helper): 109 , ಒಟ್ಟು: 121 ಹುದ್ದೆಗಳು.
- ತುರುವೇಕೆರೆ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 05 , ಅಂಗನವಾಡಿ ಸಹಾಯಕಿ (Anganwadi Helper): 22 , ಒಟ್ಟು: 27 ಹುದ್ದೆಗಳು.
- ಒಟ್ಟು ಮೊತ್ತ: ಮುಖ್ಯ ಅಂಗನವಾಡಿ ಕಾರ್ಯಕರ್ತೆ (Anganwadi Worker): 117 , ಅಂಗನವಾಡಿ ಸಹಾಯಕಿ (Anganwadi Helper): 829 , ಒಟ್ಟು ಹುದ್ದೆಗಳು: 946.
ಅರ್ಹತಾ ಮಾನದಂಡಗಳು ಮತ್ತು ಬೋನಸ್ ಅಂಕಗಳು:
1. ವಯೋಮಿತಿ (Age Limit)
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾದ 09-01-2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯು ಕನಿಷ್ಠ 19 ವರ್ಷ ಪೂರ್ಣಗೊಳಿಸಿರಬೇಕು ಹಾಗೂ 35 ವರ್ಷ ಮೀರಿರಬಾರದು. ವಿಕಲಚೇತನರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ.
2. ಶೈಕ್ಷಣಿಕ ಅರ್ಹತೆಗಳು
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ: ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ. ತೇರ್ಗಡೆ ಹೊಂದಿರಬೇಕು9 ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
- ಅಂಗನವಾಡಿ ಸಹಾಯಕಿ ಹುದ್ದೆಗೆ: ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಯಾವುದೇ ಭಾಷಾ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೂ ಕನ್ನಡ ಭಾಷೆಯನ್ನು ಪ್ರಥಮ/ದ್ವಿತೀಯ ಭಾಷೆಯಾಗಿ ವ್ಯಾಸಂಗ ಮಾಡಿರಬೇಕು12.
3. ಬೋನಸ್ ಅಂಕಗಳು (+5 Marks)
ಈ ಕೆಳಗಿನ ಅರ್ಹತೆ ಅಥವಾ ಸ್ಥಿತಿ ಹೊಂದಿದವರಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳಿಗೆ ಹೆಚ್ಚುವರಿಯಾಗಿ +5 ಬೋನಸ್ ಅಂಕಗಳನ್ನು ನೀಡಲಾಗುತ್ತದೆ:
- D.S.E.R.T, ECCE, N.T.T, JOC, ನರ್ಸರಿ/ಪೂರ್ವ ಪ್ರಾಥಮಿಕ ತರಬೇತಿ, ಡಿಪ್ಲೊಮಾ ಇನ್ ನ್ಯೂಟ್ರಿಷಿಯನ್, ಹೋಂ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್ಗಳನ್ನು ಹೊಂದಿರುವವರು.
- ದೈಹಿಕ ಅಂಗವಿಕಲತೆ ಶೇ.40% ಮೀರದಂತೆ ಇರುವವರು.
- ವಿಚ್ಛೇದಿತೆಯರು (ನ್ಯಾಯಾಲಯದಿಂದ ಪಡೆದಿರಬೇಕು)
- ಮಾಜಿ ದೇವದಾಸಿಯರ ಮಕ್ಕಳು.
- ಯೋಜನಾ ನಿರಾಶ್ರಿತರು.
ವಿಧವೆಯರಿಗೆ ವಿಶೇಷ ಆದ್ಯತೆ:
- ವಿಧವೆಯರು ಅರ್ಜಿ ಸಲ್ಲಿಸಿದಾಗ (ಆಸಿಡ್ ದಾಳಿಗೆ ಒಳಗಾದವರು ಮತ್ತು ಇಲಾಖಾ ಸಂಸ್ಥೆಗಳ ನಿವಾಸಿಗಳನ್ನು ಹೊರತುಪಡಿಸಿ) ಮೂರನೇ ಆದ್ಯತೆ ಮೇರೆಗೆ ನೇರವಾಗಿ ಆಯ್ಕೆಗೆ ಪರಿಗಣಿಸಲಾಗುವುದು.
- ವಿಧವೆಯರು ಪತಿಯ ಮರಣ ಪ್ರಮಾಣ ಪತ್ರ ಅಥವಾ ವಿಧವಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
- ವಿಧವೆಯರಲ್ಲಿ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಪ್ರಥಮ ಆದ್ಯತೆ ನೀಡತಕ್ಕದ್ದು.
- ಒಂದೇ ಹುದ್ದೆಗೆ ಇಬ್ಬರು ವಿಧವೆಯರು ಅರ್ಜಿ ಸಲ್ಲಿಸಿದಲ್ಲಿ, ಗರಿಷ್ಠ ಅಂಕ ಪಡೆದವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ದಾಖಲೆಗಳು:
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರವೇ ಅರ್ಜಿಗಳನ್ನು ಸಲ್ಲಿಸಬೇಕು. ಡಿಜಿ ಲಾಕರ್ (Digi Locker) ಬಳಸಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾದ ದಾಖಲೆಗಳು:
- ಅರ್ಜಿ ನಿಗದಿತ ನಮೂನೆಯಲ್ಲಿ.
- ಜನನ ಪ್ರಮಾಣ ಪತ್ರ / ಎಸ್.ಎಸ್.ಎಲ್.ಸಿ. ಅಂಕಪಟ್ಟಿ.
- ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ (ಪಿ.ಯು.ಸಿ./ಎಸ್.ಎಸ್.ಎಲ್.ಸಿ).
- ವಾಸ್ತವ್ಯದ ದೃಢೀಕರಣ ಪತ್ರ: ಅಭ್ಯರ್ಥಿಯು ಅದೇ ಗ್ರಾಮದಲ್ಲಿ (ನಗರ ಪ್ರದೇಶವಾಗಿದ್ದಲ್ಲಿ ಅದೇ ವಾರ್ಡ್ನಲ್ಲಿ) ವಾಸ್ತವ್ಯವಿರುವ ಬಗ್ಗೆ ತಹಶೀಲ್ದಾರರು/ಉಪ ತಹಶೀಲ್ದಾರರಿಂದ ಪಡೆದ ಮೂರು (03) ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ ಕಡ್ಡಾಯ.
- ಸ್ಥಳೀಯರು ಎಂಬುದನ್ನು ದೃಢೀಕರಿಸಲು ಆಧಾರ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿಗಳಂತಹ ಪೂರಕ ದಾಖಲೆಗಳು.
- ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ).
- ಅನ್ವಯವಾಗುವುದಾದರೆ, ವಿಚ್ಛೇದನಾ ಪ್ರಮಾಣಪತ್ರ, ಅಂಗವಿಕಲತೆ ಪ್ರಮಾಣಪತ್ರ, ವಿಧವಾ ಪ್ರಮಾಣಪತ್ರ ಇತ್ಯಾದಿ.
ಪ್ರಮುಖ ಲಿಂಕ್ಗಳು (Important Links)
| ವಿವರ (Detail) | ಲಿಂಕ್ (Link) |
| ತುಮಕೂರು ಜಿಲ್ಲೆಯ WCDಯಿಂದ 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ (WCD Tumkur Anganwadi Recruitment 2025 Official Notification pdf) | Official Notification WCD Tumkur Recruitment 2026 pdf: ಇಲ್ಲಿ ಕ್ಲಿಕ್ ಮಾಡಿ |
| ತುಮಕೂರು ಜಿಲ್ಲೆಯ WCDಯಿಂದ 946 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಆನ್ಲೈನ್ ಅರ್ಜಿ ಸಲ್ಲಿಸಲು (WCD Tumkur Anganwadi Recruitment 2025 Apply Online) | Apply Online: ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | karnemakaone.kar.nic.in |
ಗಮನಿಸಿ: ಅರ್ಹ ಮಹಿಳಾ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕಾಗಿ ಕಾಯದೆ, ಆದಷ್ಟು ಬೇಗ ಅರ್ಜಿ ಸಲ್ಲಿಸಿ ಈ ಮಹತ್ವದ ಸರ್ಕಾರಿ ಉದ್ಯೋಗದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
Read More Jobs News/ ಇನ್ನಷ್ಟು ಜಾಬ್ಸ್ ಸುದ್ದಿ ಓದಿ:
KPCL Recruitment 2025: ಅಕೌಂಟ್ಸ್/ಮೆಡಿಕಲ್ ಆಫೀಸರ್ ಹುದ್ದೆ! ಯಾವುದೇ ಇಂಟರ್ವ್ಯೂ ಇಲ್ಲ, ನೇರ ಆಯ್ಕೆ!
RITES Recruitment 2025: ಇಂಜಿನಿಯರಿಂಗ್ ಪದವೀಧರರಿಗೆ 300+ Assistant Manager ಹುದ್ದೆಗಳು! ₹5 ಲಕ್ಷ ವೇತನ!
ಇಂತಹ ಸರ್ಕಾರಿ ಉದ್ಯೋಗ ನೋಟಿಫಿಕೇಶನ್ಗಳನ್ನು ತಕ್ಷಣವೇ ಪಡೆಯಲು!WhatsApp & Telegram ಗ್ರೂಪ್ಗಳಿಗೆ ಸೇರಿ. Click to Join Below Button