Skip to content
QuickNewzToday Home
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets
  • Home
  • Jobs
  • Govt Schemes
  • Agriculture
  • Education
  • Technology
  • Trending
  • Law
  • Science/Health
  • English Blogs
    • Career & Education
    • Health & Fitness
    • Stock Market/Investment News
    • Pilgrimage Tourism & Temples
    • Technology & Gadgets

ವಾಟ್ಸ್‌ಆ್ಯಪ್‌ನಲ್ಲಿ ‘ಹೊಸ RTO ಚಲನ್ ಸ್ಕ್ಯಾಮ್! ‘APK ಫೈಲ್’ ಬಂದರೆ ತಕ್ಷಣ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಖಾಲಿ!

  • Picture of Gundijalu Shwetha By Gundijalu Shwetha
  • Published On: November 8, 2025
ವಾಟ್ಸ್‌ಆ್ಯಪ್‌ನಲ್ಲಿ ‘ಹೊಸ RTO ಚಲನ್ ಸ್ಕ್ಯಾಮ್! 'APK ಫೈಲ್' ಬಂದರೆ ತಕ್ಷಣ ಡಿಲೀಟ್ ಮಾಡಿ, ಇಲ್ಲದಿದ್ದರೆ ಬ್ಯಾಂಕ್ ಖಾತೆ ಖಾಲಿ!

WhatsApp RTO E-Challan Scam: ವಾಟ್ಸ್‌ಆ್ಯಪ್‌ನಲ್ಲಿ ‘ಹೊಸ RTO ಚಲನ್ ಸ್ಕ್ಯಾಮ್! ಹೌದು, ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್‌ನಲ್ಲಿ ನಕಲಿ RTO ಇ-ಚಲನ್ ಸಂದೇಶಗಳ ವಂಚನೆ ವ್ಯಾಪಕವಾಗುತ್ತಿದೆ. ಸೈಬರ್ ಅಪರಾಧಿಗಳು APK ಫೈಲ್‌ಗಳನ್ನು ಕಳುಹಿಸಿ ಬಳಕೆದಾರರ ಬ್ಯಾಂಕ್ ವಿವರಗಳನ್ನು ಕದಿಯುತ್ತಿದ್ದಾರೆ. ಬೆಳಗಾವಿ ಮತ್ತು ಶಿವಮೊಗ್ಗ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಹೊಸ ಸ್ಕ್ಯಾಮ್‌ನಿಂದ ಹೇಗೆ ಸುರಕ್ಷಿತರಾಗಬಹುದು ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ತಿಳಿದುಕೊಳ್ಳಿ.

ಹೊಸ RTO ಚಲನ್ ಸ್ಕ್ಯಾಮ್: ಸೈಬರ್ ಅಪರಾಧಿಗಳು ಈಗ ವಾಟ್ಸ್‌ಆ್ಯಪ್ ಮೂಲಕ ಸಾಮಾನ್ಯ ಜನರನ್ನು ವಂಚಿಸಲು “ಇ-ಚಲನ್” ಹೆಸರಿನ ಹೊಸ ಜಾಲವನ್ನು ಹೆಣೆದಿದ್ದಾರೆ. ಸಾಮಾನ್ಯವಾಗಿ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸಿದಾಗ ಮೊಬೈಲ್‌ಗೆ ಬರುವ ಇ-ಚಲನ್ ಸಂದೇಶಗಳನ್ನೇ ಬಂಡವಾಳ ಮಾಡಿಕೊಂಡಿರುವ ಇವರು, “RTO E-Challan” ಅಥವಾ “ದಂಡ ಬಾಕಿ ಇದೆ” ಎಂಬ ನಕಲಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಈ ಸಂದೇಶಗಳು ನೋಡಲು ಅದೆಷ್ಟು ನೈಜವಾಗಿರುತ್ತವೆ ಎಂದರೆ, ಸಾಧಾರಣವಾಗಿ ಯಾರಿಗಾದರೂ ಇದು ಸರ್ಕಾರದಿಂದಲೇ ಬಂದ ನೋಟಿಫಿಕೇಶನ್ ಎಂಬ ಭ್ರಮೆ ಹುಟ್ಟಿಸುತ್ತದೆ. ಗಾಬರಿಗೊಂಡ ವಾಹನ ಮಾಲೀಕರು ಆ ಸಂದೇಶದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ಸ್ಮಾರ್ಟ್‌ಫೋನ್‌ಗೆ ಹಾನಿಕಾರಕ ಮಾಲ್‌ವೇರ್ ಹರಡುತ್ತದೆ. ಇದರಿಂದ ನಿಮ್ಮ ಬ್ಯಾಂಕ್ ಖಾತೆ ವಿವರಗಳು ಮತ್ತು ವೈಯಕ್ತಿಕ ಮಾಹಿತಿ ಕ್ಷಣಾರ್ಧದಲ್ಲಿ ಹ್ಯಾಕರ್ಸ್‌ಗಳ ಪಾಲಾಗಬಹುದು. ಅಪರಿಚಿತ ನಂಬರ್‌ನಿಂದ ಬರುವ ಇಂತಹ ಯಾವುದೇ ಲಿಂಕ್‌ಗಳ ಬಗ್ಗೆ ಅತೀವ ಜಾಗ್ರತೆ ವಹಿಸುವುದು ಇಂದಿನ ಅನಿವಾರ್ಯತೆಯಾಗಿದೆ.

WhatsApp Channel
Join Now
Telegram Channel
Join Now

APK ಫೈಲ್‌ನ ಅಪಾಯ — ಒಂದು ಕ್ಲಿಕ್‌ನಲ್ಲೇ ಹ್ಯಾಕರ್‌ಗಳ ಕೈಗೆ ನಿಮ್ಮ ಫೋನ್!

ಸೈಬರ್ ಭದ್ರತಾ ತಜ್ಞರಾದ ಅಭಿಷೇಕ್ ಯಾದವ್ (@yabhishekhd) ಸೇರಿದಂತೆ ಹಲವರು ಈ ಹೊಸ ವಂಚನೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಈ ನಕಲಿ ಸಂದೇಶಗಳಲ್ಲಿ ಸಾಮಾನ್ಯವಾಗಿ ಕೆಳಗಿನ ಹೆಸರಿನ APK ಫೈಲ್‌ಗಳು ಲಗತ್ತಿಸಲ್ಪಟ್ಟಿರುತ್ತವೆ —
📁 RTO E Challan.apk
📁 Mparivahan.apk

ಬಳಕೆದಾರರು ಈ ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಿದ ತಕ್ಷಣ, ಅದರಲ್ಲಿ ಅಡಗಿರುವ ಮಾಲ್ವೇರ್ (APK Malware) ಸಕ್ರಿಯವಾಗಿ ಹ್ಯಾಕರ್‌ಗಳಿಗೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪೂರ್ಣ ರಿಮೋಟ್ ಪ್ರವೇಶ ನೀಡುತ್ತದೆ.

ಇದರಿಂದಾಗಿ:
🔸 ನಿಮ್ಮ ವೈಯಕ್ತಿಕ ಮಾಹಿತಿ, ಚಿತ್ರಗಳು ಮತ್ತು ಬ್ಯಾಂಕ್ ಖಾತೆ ವಿವರಗಳು ಕಳುವಾಗಬಹುದು.
🔸 ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅದೇ ಹಗರಣ ಸಂದೇಶವನ್ನು ನಿಮ್ಮ ಸಂಪರ್ಕಗಳಿಗೆ ಕಳುಹಿಸಬಹುದು.
🔸 ಕೆಲವು ಬಳಕೆದಾರರ ವಾಟ್ಸ್‌ಆ್ಯಪ್ ಖಾತೆಗಳು ನಿಷೇಧಿಸಲ್ಪಟ್ಟಿವೆ (Banned) ಎಂಬ ವರದಿಯೂ ಬಂದಿದೆ.

ಕರ್ನಾಟಕದಲ್ಲೂ ಲಕ್ಷಾಂತರ ರೂ. ವಂಚನೆ!

ಈ ಇ-ಚಲನ್ ಮಾಲ್‌ವೇರ್ ದಾಳಿ ಈಗ ಕರ್ನಾಟಕದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಇತ್ತೀಚೆಗೆ ಬೆಳಗಾವಿಯ ಚಾಲಕರೊಬ್ಬರು ವಾಟ್ಸ್‌ಆ್ಯಪ್‌ಗೆ ಬಂದ “RTO Challan.apk” ಎಂಬ ಫೈಲ್ ಅನ್ನು ಅಸಲಿ ಎಂದು ನಂಬಿ ಇನ್‌ಸ್ಟಾಲ್ ಮಾಡಿದ್ದರು. ಆದರೆ, ಕ್ಷಣಾರ್ಧದಲ್ಲೇ ಅವರ ಬ್ಯಾಂಕ್ ಖಾತೆಯಿಂದ ₹40,000 ಹಣ ಮಾಯವಾಗಿತ್ತು. ಇದೇ ರೀತಿಯ ಘಟನೆ ಶಿವಮೊಗ್ಗದಲ್ಲೂ ನಡೆದಿದ್ದು, ಅಲ್ಲಿನ ನಿವಾಸಿಯೊಬ್ಬರು ಅಪ್ಪಿತಪ್ಪಿ ಇಂತಹದ್ದೇ ಲಿಂಕ್ ಕ್ಲಿಕ್ ಮಾಡಿದ ಪರಿಣಾಮ ತಮ್ಮ ಎರಡು ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ ₹1.5 ಲಕ್ಷ ಕಳೆದುಕೊಂಡಿದ್ದಾರೆ.

ಸೈಬರ್ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ವಂಚಕರು ಎಷ್ಟು ಚಾಣಾಕ್ಷರಾಗಿದ್ದಾರೆ ಎಂದರೆ ಅವರು ಕಳುಹಿಸುವ ಸಂದೇಶಗಳಲ್ಲಿ ಅಸಲಿ RTO ಲೋಗೋ ಮತ್ತು ಅಧಿಕೃತ ವಿನ್ಯಾಸವನ್ನೇ ಬಳಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರು ಇದು ಸರ್ಕಾರದ ದಂಡದ ನೋಟಿಫಿಕೇಶನ್ ಇರಬಹುದು ಎಂದು ಸುಲಭವಾಗಿ ನಂಬಿ ಮೋಸಹೋಗುತ್ತಿದ್ದಾರೆ. ಒಮ್ಮೆ ನೀವು ಆ ಫೈಲ್ ಇನ್‌ಸ್ಟಾಲ್ ಮಾಡಿದರೆ, ನಿಮ್ಮ ಫೋನ್‌ನ ಸಂಪೂರ್ಣ ನಿಯಂತ್ರಣ ಹ್ಯಾಕರ್ಸ್‌ಗಳ ಕೈ ಸೇರುತ್ತದೆ. ನಿಮ್ಮ ಒಟಿಪಿ (OTP) ಮತ್ತು ಬ್ಯಾಂಕ್ ಪಾಸ್‌ವರ್ಡ್‌ಗಳನ್ನು ಅವರು ಕದ್ದು ಹಣ ಲೂಟಿ ಮಾಡುತ್ತಾರೆ. ವಾಹನ ಸವಾರರು ಅಪ್ಪಿತಪ್ಪಿಯೂ ವಾಟ್ಸ್‌ಆ್ಯಪ್‌ನಲ್ಲಿ ಬರುವ ಇಂತಹ ಸಂದೇಶಗಳನ್ನು ನಂಬಬಾರದು.

ವಂಚನೆಗಳನ್ನು ತಪ್ಪಿಸಲು ಅನುಸರಿಸಬೇಕಾದ ಕ್ರಮಗಳು (ಸುರಕ್ಷತಾ ಸಲಹೆಗಳು)

  1. ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ:
    ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳಿಂದ ಬಂದ ಸಂದೇಶಗಳಲ್ಲಿ ಇರುವ ಯಾವುದೇ ಲಿಂಕ್ ಅಥವಾ APK ಫೈಲ್‌ನ್ನು ಕ್ಲಿಕ್ ಮಾಡಬೇಡಿ ಹಾಗೂ ಡೌನ್‌ಲೋಡ್ ಮಾಡಬೇಡಿ.
  2. ಅಧಿಕೃತ ಮಾರ್ಗ ಬಳಸಿ:
    ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಥವಾ mParivahan ಅಪ್ಲಿಕೇಶನ್ ಎಂದಿಗೂ ವಾಟ್ಸ್‌ಆ್ಯಪ್ ಅಥವಾ SMS ಮೂಲಕ ಚಲನ್ ಎಚ್ಚರಿಕೆಗಳನ್ನು ಕಳುಹಿಸುವುದಿಲ್ಲ. ಸದಾ ಅಧಿಕೃತ ಮೂಲಗಳನ್ನು ಮಾತ್ರ ಬಳಸಿ.
  3. ಚಲನ್ ಪರಿಶೀಲನೆಗಾಗಿ ಮಾನ್ಯ ಮಾರ್ಗಗಳು:
    • ಅಧಿಕೃತ ಪರಿವಾಹನ್ (Parivahan) ವೆಬ್‌ಸೈಟ್: parivahan.gov.in
    • ನಿಮ್ಮ ರಾಜ್ಯದ RTO ಅಧಿಕೃತ ಪೋರ್ಟಲ್
    • ಅಧಿಕೃತ mParivahan ಮೊಬೈಲ್ ಅಪ್ಲಿಕೇಶನ್
  4. ವರದಿ ಮಾಡಿ ಮತ್ತು ನಿರ್ಬಂಧಿಸಿ:
    ಯಾರಾದರೂ ವಾಟ್ಸ್‌ಆ್ಯಪ್‌ನಲ್ಲಿ ವಂಚನೆಯ ಸಂದೇಶ ಕಳುಹಿಸಿದರೆ ತಕ್ಷಣ (Report) ವರದಿ ಮಾಡಿ ಮತ್ತು ಆ ಸಂಪರ್ಕವನ್ನು ನಿರ್ಬಂಧಿಸಿ (Block).
  5. ವೈಯಕ್ತಿಕ ಮಾಹಿತಿ ಹಂಚಬೇಡಿ:
    ನಿಮ್ಮ ಬ್ಯಾಂಕ್ ವಿವರಗಳು, OTP, ಅಥವಾ UPI ಪಿನ್ ಅನ್ನು ಯಾವುದೇ ವೈಯಕ್ತಿಕ ಮಾಹಿತಿ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿಗಳೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ.
  6. ಸಂದೇಶಗಳ ನೈಜತೆ ಪರಿಶೀಲಿಸಿ:
    ಯಾವುದೇ ಸಂದೇಶ ನೈಜವೋ ಅಥವಾ ನಕಲಿಯೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಸರ್ಕಾರಿ ಮೂಲಗಳನ್ನು ಮಾತ್ರ ಪರಿಶೀಲಿಸಿ.
  7. ಭದ್ರತಾ ಅಪ್ಡೇಟ್‌ಗಳನ್ನು ಇನ್‌ಸ್ಟಾಲ್ ಮಾಡಿ:
    ನಿಮ್ಮ ಮೊಬೈಲ್‌ನಲ್ಲಿ ಇರುವ ಆ್ಯಪ್‌ಗಳು ಮತ್ತು ಆಂಟಿ ವೈರಸ್ ಸಾಫ್ಟ್‌ವೇರ್‌ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿಕೊಳ್ಳಿ.

ಭಾರತದಾದ್ಯಂತ ಈಗ ಸಾವಿರಾರು ಜನರು ವಾಟ್ಸ್‌ಆ್ಯಪ್‌ನಲ್ಲಿ ಬರುತ್ತಿರುವ ಈ ವಂಚನೆಯ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಸೈಬರ್ ಕ್ರಿಮಿನಲ್‌ಗಳು ಕಳುಹಿಸುವ ಒಂದು ಪುಟ್ಟ ಲಿಂಕ್ ಅಥವಾ ಫೈಲ್ ಮೇಲೆ ನೀವು ಮಾಡುವ ಕೇವಲ ಒಂದು ‘ಕ್ಲಿಕ್’, ನಿಮ್ಮ ಜೀವನದ ಉಳಿತಾಯವನ್ನೆಲ್ಲ ಕ್ಷಣಾರ್ಧದಲ್ಲಿ ಖಾಲಿ ಮಾಡಬಲ್ಲದು. ಕೇವಲ ಹಣ ಮಾತ್ರವಲ್ಲದೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವೈಯಕ್ತಿಕ ಫೋಟೋಗಳು, ಸಂಪರ್ಕ ಸಂಖ್ಯೆಗಳು ಮತ್ತು ಬ್ಯಾಂಕಿಂಗ್ ಡೇಟಾ ಕೂಡ ಹ್ಯಾಕರ್ಸ್‌ಗಳ ಪಾಲಾಗುವ ಭೀತಿ ಇದೆ.

ಆದ್ದರಿಂದ, “RTO E-Challan.apk” ಅಥವಾ ಇನ್ಯಾವುದೇ ಹೆಸರಿನಲ್ಲಿ ಬರುವ ಅಪರಿಚಿತ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಸಾಮಾನ್ಯವಾಗಿ ಸರ್ಕಾರಿ ಸಂಸ್ಥೆಗಳು ಎಂದಿಗೂ ವಾಟ್ಸ್‌ಆ್ಯಪ್ ಮೂಲಕ ಇಂತಹ ‘APK’ ಫೈಲ್‌ಗಳನ್ನು ಕಳುಹಿಸುವುದಿಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಡಿಜಿಟಲ್ ಸುರಕ್ಷತೆ ನಿಮ್ಮ ಕೈಯಲ್ಲೇ ಇದೆ; ಅನುಮಾನಾಸ್ಪದ ಸಂದೇಶಗಳನ್ನು ತಕ್ಷಣ ಡಿಲೀಟ್ ಮಾಡಿ ಮತ್ತು ಇತರರಿಗೂ ಈ ಬಗ್ಗೆ ಎಚ್ಚರಿಕೆ ನೀಡಿ.

👉 ಎಚ್ಚರಿಕೆ: ಯಾವುದೇ ಅನಧಿಕೃತ ಮೂಲಗಳಿಂದ ಬಂದ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ. ಅಧಿಕೃತ Google Play Store ಅಥವಾ ಸರ್ಕಾರಿ ಆ್ಯಪ್‌ಗಳ ಮೂಲಕ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ.

Read More Technology News/ ಇನ್ನಷ್ಟು ಟೆಕ್ನೋಲಜಿ ಸುದ್ದಿ ಓದಿ:

ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp, Facebook & Telegram ಗ್ರೂಪ್‌ಗಳಿಗೆ ಸೇರಿ. Click to Join Below Button

WA WhatsApp Channel
Join Now
TG Telegram Channel
Join Now
FB Facebook Page
Follow Now
Picture of Gundijalu Shwetha

Gundijalu Shwetha

ಶ್ವೇತಾ ಗುಂಡಿಜಾಲು ಕಳೆದ ಒಂದು ವರ್ಷದಿಂದ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸುದ್ದಿ ಲೇಖನಗಳನ್ನು ಬರೆಯುತ್ತಿರುವ ಅನುಭವಿಯಾದ ಡಿಜಿಟಲ್ ನ್ಯೂಸ್ ರೈಟರ್ ಮತ್ತು ಬ್ಲಾಗರ್. ಸರ್ಕಾರದ ಯೋಜನೆಗಳು, ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ಉದ್ಯೋಗ ಪ್ರಕಟಣೆಗಳು, ವಿದ್ಯಾರ್ಥಿವೇತನ ಮಾಹಿತಿ ಹಾಗೂ ಶಿಕ್ಷಣದ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ನಿರಂತರವಾಗಿ ಕನ್ನಡ ಮತ್ತು ಇಂಗ್ಲೀಷ್ ಓದುಗರಿಗೆ ತಲುಪಿಸುತ್ತಿದ್ದಾರೆ. ಇವರ ಲೇಖನಗಳಲ್ಲಿ ಕ್ರೀಡೆ, ತಂತ್ರಜ್ಞಾನ, ಮನರಂಜನೆ, ರಾಜಕೀಯ ಮತ್ತು ದಿನನಿತ್ಯದ ಟ್ರೆಂಡಿಂಗ್ ಸುದ್ದಿಗಳಿಗೆ ವಿಶೇಷ ಪ್ರಾಧಾನ್ಯತೆ ಇದೆ. ಸರಳ ಭಾಷೆ, ನಿಖರ ಮಾಹಿತಿ ಮತ್ತು ವಿಶ್ವಾಸಾರ್ಹ ಬರವಣಿಗೆಯ ಮೂಲಕ ಓದುಗರ ಮನಸ್ಸಿನಲ್ಲಿ ನಂಬಿಕೆ ಗಳಿಸಿದ್ದಾರೆ.
All Posts

Latest Post

ಡಿಗ್ರಿ ಆದವರಿಗೆ ಬಂಪರ್ ಆಫರ್! AFCAT 02/2026: ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳು!

ಡಿಗ್ರಿ ಆದವರಿಗೆ ಬಂಪರ್ ಆಫರ್! AFCAT 02/2026: ಭಾರತೀಯ ವಾಯುಪಡೆಯಲ್ಲಿ ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಹುದ್ದೆಗಳು!

KEA Agriculture Officer Recruitment 2026: ಬಿ.ಎಸ್ಸಿ ಅಗ್ರಿ/ ಬಿ.ಟೆಕ್ ಆದವರಿಗೆ ಭರ್ಜರಿ ಗುಡ್ ನ್ಯೂಸ್: KEA ಕಡೆಯಿಂದ ಕೃಷಿ ಇಲಾಖೆಯಲ್ಲಿ 945 AO ಮತ್ತು AAO ಹುದ್ದೆಗಳ ಬೃಹತ್ ನೇಮಕಾತಿ!

ಬಿ.ಎಸ್ಸಿ ಅಗ್ರಿ/ ಬಿ.ಟೆಕ್ ಆದವರಿಗೆ ಭರ್ಜರಿ ಗುಡ್ ನ್ಯೂಸ್: KEA ಕಡೆಯಿಂದ ಕೃಷಿ ಇಲಾಖೆಯಲ್ಲಿ 945 AO ಮತ್ತು AAO ಹುದ್ದೆಗಳ ಬೃಹತ್ ನೇಮಕಾತಿ!

Electric Vehicle : ಎಲೆಕ್ಟ್ರಿಕ್ ಕಾರು ಕೊಳ್ಳುವುದು ಬೆಸ್ಟಾ ಅಥವಾ ಪೆಟ್ರೋಲ್ ಕಾರಾ?: ಪೆಟ್ರೋಲ್ ಕಾರಿಗಿಂತ 16 ಲಕ್ಷ ರೂ. ಉಳಿತಾಯ ಆಗೋದು ಹೇಗೆ?

ಎಲೆಕ್ಟ್ರಿಕ್ ಕಾರು ಕೊಳ್ಳುವುದು ಬೆಸ್ಟಾ ಅಥವಾ ಪೆಟ್ರೋಲ್ ಕಾರಾ?: ಪೆಟ್ರೋಲ್ ಕಾರಿಗಿಂತ 16 ಲಕ್ಷ ರೂ. ಉಳಿತಾಯ ಆಗೋದು ಹೇಗೆ?

Punjab and Sind Bank Recruitment 2026: ಡಿಗ್ರಿ ಆದವರಿಗೆ ಪರೀಕ್ಷೆ ಇಲ್ಲದೆ ಬ್ಯಾಂಕ್ ನೌಕರಿ: ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್‌ನಲ್ಲಿ 635 ಹುದ್ದೆಗಳ ಬಂಪರ್ ಆಫರ್!

ಡಿಗ್ರಿ ಆದವರಿಗೆ ಪರೀಕ್ಷೆ ಇಲ್ಲದೆ ಬ್ಯಾಂಕ್ ನೌಕರಿ: ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್‌ನಲ್ಲಿ 635 ಹುದ್ದೆಗಳ ಬಂಪರ್ ಆಫರ್!

KEA Recruitment 2026: ಇಂಜಿನಿಯರಿಂಗ್ ಆದವರಿಗೆ KEA ಯಿಂದ ಭರ್ಜರಿ ಆಫರ್: 37 AE/AEE ಹುದ್ದೆಗಳಿಗೆ ನೇಮಕಾತಿ! 1.5 ಲಕ್ಷ ರೂ. ವರೆಗೆ ಸಂಬಳದ ಸರ್ಕಾರಿ ನೌಕರಿ!

ಇಂಜಿನಿಯರಿಂಗ್ ಆದವರಿಗೆ KEA ಯಿಂದ ಭರ್ಜರಿ ಆಫರ್: 37 AE/AEE ಹುದ್ದೆಗಳಿಗೆ ನೇಮಕಾತಿ! 1.5 ಲಕ್ಷ ರೂ. ವರೆಗೆ ಸಂಬಳದ ಸರ್ಕಾರಿ ನೌಕರಿ!

PrevPreviousKarnataka Forest Mining Regulations 2025: ಅರಣ್ಯ ಸಂರಕ್ಷಣೆಗಾಗಿ ಅರಣ್ಯ ಭೂಮಿಯಲ್ಲಿ ನಡೆಸುವ ಕಾನೂನುಬಾಹಿರ ಗಣಿಗಾರಿಕೆಗೆ ಬ್ರೇಕ್; ರಾಜ್ಯ ಸರ್ಕಾರದ ಹೊಸ ನಿಯಮ!
Nextಯುರೋಪಿಯನ್ ಯೂನಿಯನ್‌ನ ಡಿಫಾರೆಸ್ಟೇಷನ್ ನಿಯಮದಿಂದ ಕಾಫಿ ರಫ್ತು ತಡೆ ಸಾಧ್ಯತೆ: ಕೊಡಗು ಮತ್ತು ಚಿಕ್ಕಮಗಳೂರಿನ ಕಾಫಿ ಬೆಳೆಗಾರರಿಗೆ ಭಾರೀ ಹೊಡೆತ!Next
RBI New Rules:ಆನ್‌ಲೈನ್ ವಹಿವಾಟಿನಲ್ಲಿ ಬರಲಿದೆ 3 ದೊಡ್ಡ ಬದಲಾವಣೆ: 10 ಸಾವಿರ ರೂ ಟ್ರಾನ್ಸಾಕ್ಷನ್‌ಗೂ ಬಂತು ಹೊಸ ರೂಲ್ಸ್!

ಆನ್‌ಲೈನ್ ವಹಿವಾಟಿನಲ್ಲಿ ಬರಲಿದೆ 3 ದೊಡ್ಡ ಬದಲಾವಣೆ: 10 ಸಾವಿರ ರೂ ಟ್ರಾನ್ಸಾಕ್ಷನ್‌ಗೂ ಬಂತು ಹೊಸ ರೂಲ್ಸ್!

11 April 2026
Read More »
SSLC Hindi Language: ಹಿಂದಿಗೆ ಅಂಕಗಳ ಬದಲು ಗ್ರೇಡ್? ಪ್ರಚಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದವರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್!

ಹಿಂದಿಗೆ ಅಂಕಗಳ ಬದಲು ಗ್ರೇಡ್? ಪ್ರಚಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದವರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್!

11 April 2026
Read More »
Kalpakkam nuclear plant: ಭಾರತಕ್ಕೆ 400 ವರ್ಷ ವಿದ್ಯುತ್ ಟೆನ್ಷನ್ ಇಲ್ಲ! ಕಲ್ಪಾಕ್ಕಂನಲ್ಲಿ ಶುರುವಾಯ್ತು ಹೊಸ ಕ್ರಾಂತಿ!

ಭಾರತಕ್ಕೆ 400 ವರ್ಷ ವಿದ್ಯುತ್ ಟೆನ್ಷನ್ ಇಲ್ಲ! ಕಲ್ಪಾಕ್ಕಂನಲ್ಲಿ ಶುರುವಾಯ್ತು ಹೊಸ ಕ್ರಾಂತಿ!

10 April 2026
Read More »
Page1 … Page13 Page14 Page15 Page16 Page17 … Page137
QuickNewzToday Home

QuickNewzToday provides accurate, unbiased, and timely news in Kannada and English across diverse topics like Govt Jobs, Govt Schemes, Education, Politics, Sports, Technology, Science, Entertainment and more serving Karnataka, India and global audiences.

Facebook Twitter Whatsapp Telegram Instagram

Categories

  • Home
  • Jobs
  • Govt Schemes
  • Education
  • Sports
  • Entertainment
  • Technology
  • English Blogs

Quick LINKS

  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions
  • About Us
  • Contact Us
  • Disclaimer
  • Privacy Policy
  • Copyright Policy
  • Terms & Conditions

Subscribe via RSS

© 2026 quicknewztoday.com | All rights reserved 

JOIN FREE
ಮುಖಪುಟ ಉದ್ಯೋಗ ಶಿಕ್ಷಣ ಸರ್ಕಾರಿ ಯೋಜನೆಗಳು English Blogs