ಯೋ ಯೋ ಹನೀ ಸಿಂಗ್ ‘ಮಿಲಿಯನೇರ್ ಇಂಡಿಯಾ ಟೂರ್’(Millionaire India Tour) – ಬೆಂಗಳೂರು ಕಾರ್ಯಕ್ರಮದಲ್ಲಿ KGF ಸ್ಟಾರ್ ಯಶ್ ಭೇಟಿ ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಪಾಪ್ ಮತ್ತು ರಾಪ್ ಮ್ಯೂಸಿಕ್ ಪ್ರೇಮಿಗಳಿಗೆ ಸಿಹಿ ಸುದ್ದಿ! ಯೋ ಯೋ ಹನೀ ಸಿಂಗ್ ಅವರು ತಮ್ಮ ಬಹುನಿರೀಕ್ಷಿತ ‘ಮಿಲಿಯನೇರ್ ಇಂಡಿಯಾ ಟೂರ್’ (Millionaire India Tour) ಕಾರ್ಯಕ್ರಮವನ್ನು ಬೆಂಗಳೂರುನಲ್ಲಿ ಯಶಸ್ವಿಯಾಗಿ ನಡೆಸಿದರು.
ಮಾರ್ಚ್ 22, 2025ರಂದು Terraform Arenaನಲ್ಲಿ ನಡೆದ ಈ ಸಂಭ್ರಮದ ಸಂಗೀತ ಸಂಜೆಯಲ್ಲಿ, “Brown Rang,” “Desi Kalakaar,” “Lungi Dance” ಸೇರಿದಂತೆ ಅವರ ಜನಪ್ರಿಯ ಹಾಡುಗಳು ಕೇಳಿಸಿಕೊಂಡು, ಅಭಿಮಾನಿಗಳನ್ನು ಉತ್ಸಾಹದ ಅಲೆಗಳಲ್ಲಿ ತೇಲಿದರು.
ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳ ಹಾಜರಾತಿ!
ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಸೇರಿಕೊಂಡಿದ್ದು, Bengaluru nightlife lovers ಮತ್ತು music freaks ಇದನ್ನು Year’s Best Concert ಎಂದು ಕರೆದಿದ್ದಾರೆ. Yo Yo Honey Singh ಅವರು ತಮ್ಮ ಸ್ಟೈಲಿಶ್ ಎಂಟ್ರಿಯೊಂದಿಗೆ ವೇದಿಕೆಗೆ ಬಂದು, “Party All Night” ಹಾಡಿನಿಂದ ಪ್ರೇಕ್ಷಕರನ್ನು welcome ಮಾಡಿದರು.
ರಾಕ್‌ಸ್ಟಾರ್ ಮತ್ತು ರಾಪ್‌ಸ್ಟಾರ್ – ಫ್ಯಾನ್ಸ್ ಫುಲ್ ಖುಷಿ!
‘KGF’ ಖ್ಯಾತಿಯ ಯಶ್ ಅವರು ಶೋಗೆ ಸರಪ್ರೈಸ್ ಭೇಟಿ ಕೊಟ್ಟರು, ಹನೀ ಸಿಂಗ್ ಅವರು ವೇದಿಕೆಯಲ್ಲಿ “ಧನ್‌ತೇರಸ್” ಹಾಡುವಾಗ “Yo Yo! ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಕೊಟ್ಟಾಗ ಅಭಿಮಾನಿಗಳು ಮತ್ತಷ್ಟು ಉತ್ಸಾಹಗೊಂಡರು.
ಪ್ರಸಿದ್ಧ ರಾಪರ್ ಯೋ ಯೋ ಹನೀ ಸಿಂಗ್ ತಮ್ಮ ‘ಮಿಲಿಯನೇರ್ ಇಂಡಿಯಾ ಟೂರ್’ ಪ್ರಾಯೋಜಿತ ಕಾರ್ಯಕ್ರಮವನ್ನು Terraform Arena, ಬೆಂಗಳೂರುನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವಾಗ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದದ್ದು KGF ಸ್ಟಾರ್ ಯಶ್ ಅವರ ಸರ್ಪ್ರೈಸ್ ಭೇಟಿ!
ಫ್ಯಾನ್ಸ್‌ಗಾಗಿ ಡಬಲ್ ಸರ್ಪ್ರೈಸ್! ಹನೀ ಸಿಂಗ್ ವೇದಿಕೆಯಲ್ಲಿ ತನ್ನ ಪಾಪುಲರ್ ಹಿಟ್‌ಗಳಿಗೆ ರಾಪ್ ಮಾಡುತ್ತಿದ್ದಾಗ, ಅಚಾನಕ್ ಯಶ್ ಅವರನ್ನು ಪರಿಚಯಿಸಿದರು. “Ladies and Gentlemen, the real ROCKING STAR – YASH!” ಎಂದು ಘೋಷಿಸಿದ ಕ್ಷಣವೇ ಅಲ್ಲಿ ನೆರೆದ ಅಭಿಮಾನಿಗಳ ಜೋಷ್ ಸಿಕ್ಕಾಪಟ್ಟೆ ಹುಚ್ಚರಂತೆ ಕುಣಿದು ಕುಪ್ಪಳಿಸಿದರು.
ಹನೀ ಸಿಂಗ್ ಅವರು ತಮ್ಮ “ಬ್ಲಡ್ ಬ್ರದರ್” ಎಂದು ಯಶ್ ಅವರ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
“ನನ್ನ ಪ್ರಿಯ ಪ್ರಿಯ ಸೋದರ @thenameisyash ಅವರ ಆಗಮನಕ್ಕಾಗಿ ಧನ್ಯವಾದಗಳು. ನೀವು ನನ್ನ ಬೆಂಗಳೂರು ಕಾರ್ಯಕ್ರಮವನ್ನು ಆಶೀರ್ವದಿಸಿದ್ದೀರಿ. ಜೀವನಪೂರ್ಣ ಗೌರವ”. ಎಂದು ಇನ್ಸ್ಟಾಗ್ರಾಮ್ ಕ್ಯಾಪ್ಷನಲ್ಲಿ ಬರೆದುಕೊಂಡಿದ್ದಾರೆ
“ಸ್ನೇಹದ ಹೃದಯಸ್ಪರ್ಶಿ ಕ್ಷಣ ಈ ಕಾರ್ಯಕ್ರಮದಲ್ಲಿ ಹನೀ ಸಿಂಗ್ ತಮ್ಮ ಭಾವನೆ ಹಂಚಿಕೊಳ್ಳುತ್ತಾ ಹೇಳಿದರು:
“ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಸಹೋದರ. ನಾವು ಒಂದೇ ರೀತಿಯ ಪಯಣವನ್ನು ಹಂಚಿಕೊಂಡಿದ್ದೇವೆ. ಈ ಕ್ಷಣ ನನ್ನ ಬದುಕಿನ ಬಹುಮುಖ್ಯ ಕ್ಷಣ. ನಾನು ಕರ್ನಾಟಕದಲ್ಲಿ ನನ್ನ ಸ್ಥಳವನ್ನು ಕಂಡುಕೊಂಡಿದ್ದೇನೆ. ಸೌಹಾರ್ದ ಸಹೋದರರು ಸದಾಕಾಲ!”
ಯೋ ಯೋ ಹನೀ ಸಿಂಗ್ ‘ಮಿಲಿಯನೇರ್ ಇಂಡಿಯಾ ಟೂರ್’(Millionaire India Tour) – ಬೆಂಗಳೂರು ಕಾರ್ಯಕ್ರಮದಲ್ಲಿ KGF ಸ್ಟಾರ್ ಯಶ್ ಭೇಟಿ!
ಇದಕ್ಕೆ ಪ್ರತಿಯಾಗಿ ಯಶ್, ಹನೀ ಸಿಂಗ್ ಅವರ ಪಯಣವನ್ನು ಮೆಚ್ಚಿಕೊಂಡು ಹೇಳಿದರು:
“ಅವರು ತುಂಬಾ ಪ್ರೇರಣಾದಾಯಕ ವ್ಯಕ್ತಿ. ಅವರ ಪಯಣದ ಬಗ್ಗೆ ಮಾತನಾಡುತ್ತಾ, ಅವರು ಎಂತಹ ಹಾದಿ ಮುಕ್ತಾಯಿಸಿದ್ದಾರೆ ಎಂಬುದನ್ನು ತಿಳಿದಾಗ, ನನಗೆ ಸಂತೋಷವಾಯಿತು. ಪ್ರತಿಯೊಬ್ಬರಿಗೂ ಹೋರಾಟವಿರುತ್ತದೆ, ಕೀರ್ತಿಯು ಬರುತ್ತದೆ. ಆದರೆ ಜನರು ನೀಡುವ ಪ್ರೀತಿ ಮತ್ತು ಗೌರವವೇ ಮುಖ್ಯ. ಸದಾಕಾಲ ಹಾರಾಡಿ!”ಎಂದು ಯಶ್ ಹೇಳಿದ್ದಾರೆ.
One thought on “ಯೋ ಯೋ ಹನೀ ಸಿಂಗ್ ‘ಮಿಲಿಯನೇರ್ ಇಂಡಿಯಾ ಟೂರ್’(Millionaire India Tour) – ಬೆಂಗಳೂರು ಕಾರ್ಯಕ್ರಮದಲ್ಲಿ KGF ಸ್ಟಾರ್ ಯಶ್ ಭೇಟಿ!”