ಐಸಿಸಿ ಹೊಸ ODI Ranking: ಶುಭ್ಮನ್ ಗಿಲ್ ಮೊಟ್ಟಮೊದಲ ಬಾರಿ ಬ್ಯಾಟಿಂಗ್‌ನಲ್ಲಿ ನಂ.1.

ಇತ್ತೀಚಿನ ಐಸಿಸಿ ಒಡಿಐ ರ್ಯಾಂಕಿಂಗ್‌ಗಳಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸಿವೆ. ಭಾರತದ ಯುವ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರು ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು ಹಿಂದಿಕ್ಕಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ, ಚಾಂಪಿಯನ್ ಟ್ರೊಫಿಯಲ್ಲಿ ಶ್ರೀಲಂಕಾ ತಂಡ ಆಡದೆ ಇದ್ದರು ಮಹೀಶ ತೀಕ್ಷಣ ಅವರು ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
- ಒಡಿಐ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ಗಳು:
- ಶುಭ್ಮನ್ ಗಿಲ್ (ಭಾರತ) – 796 ರೇಟಿಂಗ್ ಪಾಯಿಂಟ್‌ಗಳು
- ಬಾಬರ್ ಅಜಮ್ (ಪಾಕಿಸ್ತಾನ) – 773 ರೇಟಿಂಗ್ ಪಾಯಿಂಟ್‌ಗಳು
- ರೋಹಿತ್ ಶರ್ಮಾ (ಭಾರತ) – 761 ರೇಟಿಂಗ್ ಪಾಯಿಂಟ್‌ಗಳು
- ಹೈನ್ರಿಚ್ ಕ್ಲಾಸೆನ್ (ದಕ್ಷಿಣ ಆಫ್ರಿಕಾ) – 756 ರೇಟಿಂಗ್ ಪಾಯಿಂಟ್‌ಗಳು
- ಡ್ಯಾರಿಲ್ ಮಿಚೆಲ್ (ನ್ಯೂಜಿಲ್ಯಾಂಡ್) – 740 ರೇಟಿಂಗ್ ಪಾಯಿಂಟ್‌ಗಳು
ಶುಭ್ಮನ್ ಗಿಲ್ ಅವರ ಇತ್ತೀಚಿನ ಶತಕ ಮತ್ತು ನಿರಂತರ ಉತ್ತಮ ಪ್ರದರ್ಶನದಿಂದ ಅವರು ಈ ಸಾಧನೆ ಮಾಡಿದ್ದಾರೆ.
ಒಡಿಐ ಬೌಲರ್‌ಗಳ ರ್ಯಾಂಕಿಂಗ್‌ಗಳು:
- ಮಹೀಶ್ ತೀಕ್ಷಣ (ಶ್ರೀಲಂಕಾ) – 680 ರೇಟಿಂಗ್ ಪಾಯಿಂಟ್‌ಗಳು
- ರಶೀದ್ ಖಾನ್ (ಅಫ್ಗಾನಿಸ್ತಾನ) – 669 ರೇಟಿಂಗ್ ಪಾಯಿಂಟ್‌ಗಳು
- ಬರ್ನಾರ್ಡ್ ಶೋಲ್ಟ್ಜ್ (ನಮೀಬಿಯಾ) – 662 ರೇಟಿಂಗ್ ಪಾಯಿಂಟ್‌ಗಳು
- ಕುಲ್ದೀಪ್ ಯಾದವ್ (ಭಾರತ) – 652 ರೇಟಿಂಗ್ ಪಾಯಿಂಟ್‌ಗಳು
- ಶಾಹೀನ್ ಅಫ್ರಿದಿ (ಪಾಕಿಸ್ತಾನ) – 646 ರೇಟಿಂಗ್ ಪಾಯಿಂಟ್‌ಗಳು
ಮಹೀಶ್ ತೀಕ್ಷಣ ಅವರ ಇತ್ತೀಚಿನ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಅವರು ಮೊದಲ ಸ್ಥಾನಕ್ಕೇರಿದ್ದಾರೆ.
ಒಡಿಐ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ಗಳು:
- ಮೊಹಮ್ಮದ್ ನಬಿ (ಅಫ್ಗಾನಿಸ್ತಾನ) – 300 ರೇಟಿಂಗ್ ಪಾಯಿಂಟ್‌ಗಳು
- ಸಿಕಂದರ್ ರಜಾ (ಜಿಂಬಾಬ್ವೆ) – 288 ರೇಟಿಂಗ್ ಪಾಯಿಂಟ್‌ಗಳು
- ಅಜ್ಮತುಲ್ಲಾ ಒಮರ್‌ಜೈ (ಅಫ್ಗಾನಿಸ್ತಾನ) – 268 ರೇಟಿಂಗ್ ಪಾಯಿಂಟ್‌ಗಳು
- ಮೆಹಿದಿ ಹಸನ್ ಮಿರಾಜ್ (ಬಾಂಗ್ಲಾದೇಶ) – 255 ರೇಟಿಂಗ್ ಪಾಯಿಂಟ್‌ಗಳು
- ರಶೀದ್ ಖಾನ್ (ಅಫ್ಗಾನಿಸ್ತಾನ) – 247 ರೇಟಿಂಗ್ ಪಾಯಿಂಟ್‌ಗಳು


