Site icon Quicks News Today

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ '₹' ಚಿಹ್ನೆಗೆ ಬದಲಾಗಿ 'ரு'

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ '₹' ಚಿಹ್ನೆಗೆ ಬದಲಾಗಿ 'ரு'

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್

ಚೆನ್ನೈ: ತಮಿಳುನಾಡು ಸರ್ಕಾರವು 2025-26ನೇ ಸಾಲಿನ ಬಜೆಟ್ ಲಾಂಛನದಲ್ಲಿ ಭಾರತೀಯ ರೂಪಾಯಿ (₹) ಚಿಹ್ನೆಯ ಬದಲಿಗೆ ತಮಿಳು ಲಿಪಿಯ ‘ரு’ (ರು) ಅಕ್ಷರವನ್ನು ಬಳಸಿರುವುದರಿಂದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆ ಮೂಡಿಸಿದೆ. ಈ ನಿರ್ಧಾರವನ್ನು ಕೆಲವರು ಹಿಂದಿ ಹೇರಿಕೆಯ ವಿರುದ್ಧ ತಮಿಳು ಭಾಷಾ ಗುರುತನ್ನು ಕಾಯ್ದುಕೊಳ್ಳುವ ಹೆಜ್ಜೆ ಎಂದು ನೋಡುತ್ತಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರವು ಹಿಂದಿಯ ಅನಗತ್ಯ ಹೇರಿಕೆಯನ್ನು ವಿರೋಧಿಸುವ ನಿಲುವನ್ನು ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದೆ. ಈ ಹಿಂದೆ ಕೇಂದ್ರ ಸರ್ಕಾರದ ಕೆಲವು ಯೋಜನೆಗಳಲ್ಲಿ ಹಿಂದಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಮಿಳುನಾಡು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ದೇವನಾಗರೀ ಲಿಪಿಯ ‘र’ ಮತ್ತು ರೋಮನ್ ಲಿಪಿಯ ‘R’ ಅಕ್ಷರಗಳನ್ನು ಸಮ್ಮಿಳನಗೊಳಿಸಿ, ವಿಶಿಷ್ಟ ಚಿಹ್ನೆ ಇದು. ಹಿಂದಿ ಏರಿಕೆಯ ವಿರುದ್ಧ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರು ಸುದ್ದಿಯಲ್ಲಿರಲು ಈ ರೀತಿ ನಡೆದುಕೊಂಡಿದ್ದಾರೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಸರ್ಕಾರದ ಹೊಸ ನಿರ್ಧಾರ – ಬಜೆಟ್ ಲಾಂಛನದಲ್ಲಿ ‘₹’ ಚಿಹ್ನೆಗೆ ಬದಲಾಗಿ ‘ரு’ ಈ ಹೊಸ ಬದಲಾವಣೆ ಬಗ್ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರೆ, ಇತರರು ಇದನ್ನು ಅನಗತ್ಯ ರಾಜಕೀಯ ಕ್ರಮವೆಂದು ಟೀಕಿಸಿದ್ದಾರೆ. “₹” ಚಿಹ್ನೆಯು ಯಾವುದೇ ಭಾಷೆಯಲ್ಲದಂತೆ ಪ್ರತ್ಯೇಕ ರಾಷ್ಟ್ರೀಯ ಗುರುತು ಹೊಂದಿರುವುದರಿಂದ, ಅದನ್ನು ಬದಲಾಯಿಸುವುದು ಅರ್ಥವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.ಈ ಬದಲಾವಣೆ ಹಿಂದಿನ ವರ್ಷಗಳಲ್ಲಿ ತಮಿಳುನಾಡಿನಲ್ಲಿ ನಡೆದ ಭಾಷಾ ಆಂದೋಲನಗಳ ನೆನಪನ್ನು ಮೂಡಿಸಿದ್ದು, ರಾಜ್ಯದ ಭಾಷಾ ಸ್ವಾಯತ್ತತೆ ಬಗ್ಗೆ ಮತ್ತಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Exit mobile version