Site icon Quicks News Today

“ಟೂತ್‌ಪೇಸ್ಟ್‌ನಲ್ಲಿ ಮಾದಕ ವಸ್ತುಗಳ (ಡ್ರ*ಗ್ಸ್) ಸಾಗಾಟ ಮಡಿಕೇರಿ ಜೈಲಿನಲ್ಲಿ ಕೇರಳದ ಯುವಕನ ಪ್ಲಾನ್ ಫೇಲ್!”

ಮಡಿಕೇರಿ ಗ್ರಾಮಾಂತರ ಪೊಲೀಸರು ಕೇರಳದ ಮೂಲದ 26 ವರ್ಷದ ಯುವಕನನ್ನು ಮಡಿಕೇರಿ ಜಿಲ್ಲಾ ಜೈಲಿನಲ್ಲಿರುವ ಅಂಡರ್‌ಟ್ರಯಲ್ ಕೈದಿಗೆ ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಮಾದಕ ವಸ್ತು (ಡ್ರ*ಗ್ಸ್) ಸಾಗಿಸಲು ಯತ್ನಿಸಿದ್ದಕ್ಕಾಗಿ ಬಂಧಿಸಿದ್ದಾರೆ.

ಆರೋಪಿಯನ್ನು ಕೇರಳದ ಮೂಲದ ಸುರಭಿಲ್ (26) ಎಂದು ಗುರುತಿಸಲಾಗಿದೆ. ಅಂಡರ್‌ಟ್ರಯಲ್ ಕೈದಿ ಸನಮ್‌ನ ಎಂಬಾತ ತನ್ನ ಸೋದರ ಅವನು. ಅವನನ್ನು ನೋಡಲು ದಿನ ನಾಟಕ ಮಾಡಿಕೊಂಡು ಬರುತ್ತಿದ್ದ. ಬರುವಾಗ ಜೈಲಿನಲ್ಲಿ ಅವನಿಗೆ ಟೂತ್‌ಪೇಸ್ಟ್, ಟೂತ್‌ಬ್ರಷ್, ಸಾಬೂನು, ಶಾಂಪು ಮುಂತಾದ ದಿನಬಳಕೆಯ ವಸ್ತುಗಳನ್ನು ಪೂರೈಸುತ್ತಿದ್ದ ಎಂದು ವರದಿಯಾಗಿದೆ.

ಅನುಮಾನ ಬಂದು ವಿಚಾರಿಸಿದಾಗ ಆತನ ನಡುವಳಿಕೆಯಲ್ಲಿ ವಿಚಿತ್ರ ಕಂಡು ಬಂದಿದೆ. ಜೈಲಿನ ಅಧಿಕಾರಿಗಳು ಅವನ ಬ್ಯಾಗ್ ನಲ್ಲಿ ತಂಡಿದ ದಿನಬಳಕೆ ವಸ್ತುಗಳನ್ನು ನೋಡಿ ಪರೀಕ್ಷೆಗೆ ಒಳಪಡಿಸಿದ್ದಾರೆ.

ಜೈಲು ಅಧೀಕ್ಷಕ ಸಂಜಯ್ ಜಟ್ಟಿ ನೀಡಿದ ಪರಿಶೀಲನೆಯಲ್ಲಿ ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಕಪ್ಪು ವಸ್ತುವು ಪತ್ತೆಯಾಗಿದೆ, ಇದು ಮಾದಕ ವಸ್ತುವಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.ಈ ಘಟನೆಯ ನಂತರ ಪೊಲೀಸರು 24 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡು, ಸುರಭಿಲ್ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.

ಈ ಮೂಲಕ ಮಡಿಕೇರಿ ಜೈಲಿಗೆ ಟೂತ್‌ಪೇಸ್ಟ್‌ನಲ್ಲಿ ಮಾದಕ ವಸ್ತುಗಳನ್ನು ಸಪ್ಲೈ ಮಾಡುತ್ತಿದ್ದ ಕೇರಳದ ಈ ಯುವಕನ ಆಟಕೆ ಪೊಲೀಸ್ ಬ್ರೇಕ್!” ನೀಡಿದ್ದಾರೆ.

Key words:

Exit mobile version